B Khata: ಅಕ್ರಮ ಬಡಾವಣೆ & ಆಸ್ತಿ ನಿರ್ಮಾಣ ಮಾಡಿಕೊಂಡವರಿಗೆ ಭರ್ಜರಿ ಸುದ್ದಿ: ಮಿಸ್ ಮಾಡದೆ ಈ ಸ್ಟೋರಿ ಓದಿ!
ಸಿದ್ದರಾಮಯ್ಯ ಸರ್ಕಾರ ಈಗ ಅಕ್ರಮ ಬಡಾವಣೆ & ಆಸ್ತಿ ನಿರ್ಮಾಣ ಮಾಡಿಕೊಂಡವರಿಗೆ ಭರ್ಜರಿ ಸುದ್ದಿ ನೀಡಿದೆ. ಅದ್ರಲ್ಲೂ ಸರ್ಕಾರದ ನಿಯಮ ಮೀರಿ ಇಷ್ಟು ದಿನಗಳ ಕಾಲ ಭಾರಿ ಆತಂಕದಲ್ಲೇ ದಿನದೂಡುತ್ತಿದ್ದ ಸೈಟ್, ಬಿಲ್ಡಿಂಗ್ ಮಾಲೀಕರಿಗೆ ಭರ್ಜರಿ ಸುದ್ದಿ ಸಿಕ್ಕಿದೆ. ಆ ಸುದ್ದಿ ಏನಪ್ಪಾ ಅಂದ್ರೆ, ಇನ್ನು ಮುಂದೆ ನಿಮಗೆ ಅಕ್ರಮದ ಬಗ್ಗೆ ಟೆನ್ಷನ್ ಇರೋದೆ ಇಲ್ಲ. ಅರೆ ಅದು ಹೇಗೆ ಅಂದ್ರಾ? ಬಜೆಟ್ ದಿನವೇ ಬಂಪರ್ ಸಿಕ್ಕಿರುವ ಸುದ್ದಿಗಾಗಿ ಮುಂದೆ ಓದಿ.
ಹೌದು, ಕರ್ನಾಟಕ ಭಾರಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ಅದ್ರಲ್ಲೂ ಕಳೆದ 10-15 ವರ್ಷದಲ್ಲಿ ನಮ್ಮ ರಾಜ್ಯದಲ್ಲಿ ಅಭಿವೃದ್ಧಿ ಬಲು ಜೋರಾಗಿದೆ. ಹೀಗಿದ್ದಾಗ ಹಲವು ಬಡಾವಣೆ ಹಾಗೂ ಸಿಕ್ಕ ಸಿಕ್ಕ ಕಡೆ ಬಿಲ್ಡಿಂಗ್ & ಅಪಾರ್ಟ್‌ಮೆಂಟ್ ನಿರ್ಮಾಣ ಆಗಿದೆ. ಹೀಗಿದ್ದಾಗಲೇ, ಅವುಗಳನ್ನ ಉಳಿಸಿಕೊಳ್ಳುವುದು ಜನರಿಗೆ ದೊಡ್ಡ ತಲೆನೋವಾಗಿತ್ತು. ಹಾಗೇ ಅಕ್ರಮ ಆಸ್ತಿ ಸಕ್ರಮಕ್ಕೆ ಭಾರಿ ಸರ್ಕಸ್ ನಡೆಯುತ್ತಿತ್ತು. ಹೀಗೆ ಟೆನ್ಷನ್ ಮಾಡಿಕೊಂಡ ಜನರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಹಾಗಾದ್ರೆ ಕನ್ನಡಿಗರಿಗೆ ಏನದು ಗುಡ್ ನ್ಯೂಸ್? ನಿಮ್ಮ ಅಕ್ರಮ ಆಸ್ತಿ ಈಗ ಸಕ್ರಮ ಆಗುತ್ತಾ? ಸಂಪೂರ್ಣ ಮಾಹಿತಿಗೆ ಮುಂದೆ ಓದಿ.

34 ಲಕ್ಷ ಅಕ್ರಮ ಆಸ್ತಿ!
ಅಷ್ಟಕ್ಕೂ ಬೆಂಗಳೂರು ಮಹಾನಗರ ಪಾಲಿಕೆ ಅಂದ್ರೆ ಬಿಬಿಎಂಪಿ ಹೊರತು ಪಡಿಸಿ ಕರ್ನಾಟಕದ ಉಳಿದ ನಗರ & ಪಟ್ಟಣಗಳ ಕಂದಾಯ ಭೂಮಿಯಲ್ಲಿ ನಿರ್ಮಿಸಿರುವ ಕಟ್ಟಡಗಳಿಗೆ 'ಬಿ' ಖಾತೆ ನೀಡಲು ಸಿದ್ದರಾಮಯ್ಯ ಅವರ ಸರ್ಕಾರ ಇದೀಗ ಮುಂದಾಗಿದೆ. ನಗರ ಸ್ಥಳೀಯ ಸಂಸ್ಥೆಗಳ, ವ್ಯಾಪ್ತಿಗೆ ಬರುವಂತೆ 54.91 ಲಕ್ಷಕ್ಕೂ ಹೆಚ್ಚು ಆಸ್ತಿಗಳಿವೆ. ಆದರೂ ಈ ಪೈಕಿ 34.35 ಲಕ್ಷಕ್ಕೂ ಅಧಿಕ ಅನಧಿಕೃತ ಆಸ್ತಿಗಳು ಇವೆಯಂತೆ. ಈ ಎಲ್ಲಾ ಆಸ್ತಿಗಳನ್ನು ಸಕ್ರಮ ಮಾಡಿಕೊಳ್ಳುವ, ಭರ್ಜರಿ ಅವಕಾಶವನ್ನು ಕರ್ನಾಟಕ ಸರ್ಕಾರ ಈಗ ಒದಗಿಸಿದೆ!
ಅಕ್ರಮ ಬಡಾವಣೆ & ಕಟ್ಟಡ ಯಾವುವು?
ಹೌದು 34.35 ಲಕ್ಷಕ್ಕೂ ಅಧಿಕ ಅನಧಿಕೃತ ಆಸ್ತಿಗಳನ್ನು ಸಕ್ರಮಗೊಳಿಸುವ ಯೋಜನೆಯ ಬಗ್ಗೆ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ತೀರ್ಮಾನ ಕೈಗೊಂಡಿದೆ. ಈ ಮೂಲಕ ಜನರಿಗೆ ಮಾತ್ರವಲ್ಲ, ರಾಜ್ಯ ಸರ್ಕಾರಕ್ಕೆ ಕೂಡ 2 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಹಣ ಸಂಗ್ರಹ ಆಗಲಿದೆಯಂತೆ. ಸದ್ಯ ಈ ಆಸ್ತಿಗಳ ಮಾಲೀಕರು ಸರ್ಕಾರಕ್ಕೆ ತೆರಿಗೆ ಕಟ್ಟದೆ ವಿದ್ಯುತ್ ಸೇರಿದಂತೆ, ಕುಡಿಯುವ ನೀರು ಮತ್ತಿತರ ಸೌಲಭ್ಯವನ್ನ ಪಡೆದುಕೊಳ್ಳುತ್ತಿದ್ದಾರೆ. ಆದರೆ ಇವೆಲ್ಲವೂ ಇನ್ನು ಮುಂದೆ ತೆರಿಗೆ ವ್ಯಾಪ್ತಿಗೆ ಬರಲಿವೆ. ಸಕ್ಷಮ ಪ್ರಾಧಿಕಾರಗಳಿಂದ ನಕ್ಷೆಯ ಮಂಜೂರಾತಿ ಇಲ್ಲದೆ, ನಿರ್ಮಾಣ ಮಾಡಿರುವ ಬಡಾವಣೆ & ಕಟ್ಟಡಗಳನ್ನು ಅನಧಿಕೃತ ಎಂದು ಪರಿಗಣಿಸಲಾಗುತ್ತದೆ.

ಅಕ್ರಮ ಹೇಗೆ ಸಕ್ರಮ ಆಗಬಹುದು?
ಕರ್ನಾಟಕದ 315 ನಗರ ಸ್ಥಳಿಯ ಸಂಸ್ಥೆ ವ್ಯಾಪ್ತಿಯ ಕಂದಾಯ ಭೂಮಿಯಲ್ಲಿ ಅನಧಿಕೃತವಾಗಿ ನಿರ್ವಿುಸಿರುವ ಬಡಾವಣೆ ಮತ್ತು ನಕ್ಷೆ ಮಂಜೂರಾತಿ ಇಲ್ಲದೆ ನಿರ್ವಿುಸಿದ ಕಟ್ಟಡಗಳಿಗೆ ಬಿ-ಖಾತೆ ನೀಡಿ ಕಟ್ಟಡ ತೆರಿಗೆ ವಿಧಿಸಲು ಸಿದ್ದರಾಮಯ್ಯ ಅವರ ಸರ್ಕಾರವು ನಿರ್ಧರಿಸಿದೆ. ಈ ಸಂಬಂಧ ಕಾನೂನು ತಿದ್ದುಪಡಿಗೆ ಕೂಡ ನಿರ್ಧಾರ ಮಾಡಲಾಗಿದೆಯಂತೆ. ಅನಧಿಕೃತ ನಿವೇಶನ ಮತ್ತು ಬಡಾವಣೆ, ಕಟ್ಟಡಕ್ಕೆ ಬಿ-ಖಾತೆ ಮಾನ್ಯತೆ ಪಡೆಯಲು ಕೊನೇ ದಿನಾಂಕ ನಿಗದಿಪಡಿಸಲಾಗುತ್ತೆ.
ಹೀಗೆ ಸಿದ್ದರಾಮಯ್ಯ ಸರ್ಕಾರದಿಂದ ಕೊನೆಯ ದಿನಾಂಕ ನಿಗದಿ ಮಾಡುವುದರ ಒಳಗೆ, ಅಂದರೆ ಅಷ್ಟರ ಒಳಗೆ ದಂಡ ಅಥವಾ ತೆರಿಗೆ ಪಾವತಿಸಿ ಬಿ-ಖಾತೆಯನ್ನು ಪಡೆಯಬೇಕು. ಆದ್ರೆ ನಂತರ ಇ-ಆಸ್ತಿ ಹೊರತುಪಡಿಸಿ ಯಾವುದೆ ಮಾದರಿಯಲ್ಲಿ ನೋಂದಣಿಗೆ ಅವಕಾಶ ಇರುವುದಿಲ್ಲವಂತೆ. ಮತ್ತೊಂದು ಕಡೆ ಅನಧಿಕೃತ ನಿರ್ಮಾಣದಾರರ ವಿರುದ್ಧ ಲಕ್ಷ ರೂ.ವರೆಗೆ ದಂಡ ಮತ್ತು ಜೈಲು ಶಿಕ್ಷೆ ವಿಧಿಸುವ ಅವಕಾಶ ಇರುವ ಬಗ್ಗೆಯೂ ತಿಳಿಸಲಾಗಿದೆ.
ಬಂಪರ್ ಆಫರ್ ಕೊಟ್ಟ ಸರ್ಕಾರ
ಹೀಗೆ ಇಷ್ಟು ದಿನಗಳ ಕಾಲ ಅಕ್ರಮ ಸಕ್ರಮಕ್ಕೆ ಕಾಯುತ್ತಿದ್ದ ಬೆಂಗಳೂರಿನ ಹೊರ ಜಿಲ್ಲೆಯ ಜನರಿಗೂ ಈಗ ಬಂಪರ್ ಸಿಕ್ಕಿದೆ. ಕರ್ನಾಟಕ ಸರ್ಕಾರ ಈ ಮೂಲಕ ತನ್ನ ಆದಾಯವನ್ನೂ ಹೆಚ್ಚಿಸಿಕೊಳ್ಳಲಿದೆ. ಹಾಗೇ ತೆರಿಗೆ ವಂಚನೆ ತಪ್ಪಿಸಲು ಇದರಿಂದ ಸಾಧ್ಯ ಎನ್ನುವ ಲೆಕ್ಕಾಚಾರ ಕೂಡ ಇದರ ಹಿಂದೆ ಇದೆ. ಮತ್ತೊಂದು ಕಡೆ ಸರ್ಕಾರ ಗಡುವು ನೀಡಿದರೆ ಅದರಿಂದ ಭಾರಿ ಜನ ಜಂಗುಳಿ ಉಂಟಾಗುವ ನಿರೀಕ್ಷೆ ಇದ್ದು, ಆದಷ್ಟು ಬೇಗ ಸರ್ಕಾರದ ಈ ನಿಯಮವನ್ನು ಪಾಲಿಸಿದರೆ ಒಳ್ಳೆಯದು. ಇಲ್ಲವಾದರೆ ಭಾರಿ ಪ್ರಮಾಣದ ದಂಡದ ಜೊತೆಗೆ, ಶಿಕ್ಷೆಯನ್ನೂ ನೀಡಲು ಸರ್ಕಾರ ಚಿಂತನೆ ನಡೆಸಿದೆ. ಬಜೆಟ್ ಜೊತೆಯಲ್ಲೇ ಅಕ್ರಮ & ಸಕ್ರಮಕ್ಕೆ ಕೂಡ, ರಾಜ್ಯ ಸರ್ಕಾರ ಈ ಮೂಲಕ ಬಂಪರ್ ಆಫರ್ ಕೊಟ್ಟಂತಾಗಿದೆ.












Click it and Unblock the Notifications