ಸಂತೋಷ್ ಲಾಡ್ ಪದಚ್ಯುತಿಗಾಗಿ ಬಿಜೆಪಿ ಧರಣಿ

ಬೆಂಗಳೂರು, ಸೆ.30: ಅಕ್ರಮ ಗಣಿಗಾರಿಕೆ ಆರೋಪ ಹೊತ್ತಿಕೊಂಡಿರುವ ವಾರ್ತಾ ಸಚಿವ ಸಂತೋಷ್ ಲಾಡ್ ಅವರನ್ನು ಕೂಡಲೇ ಸಚಿವ ಸಂಪುಟದಿಂದ ಕೈ ಬಿಡಬೇಕೆಂದು ಒತ್ತಾಯಿಸಿ ಬಿಜೆಪಿ ಪ್ರಮುಖ ನಾಯಕರು ವಿಧಾನಸೌಧದ ಮುಂಭಾಗದಲ್ಲಿ ಸೋಮವಾರ(ಸೆ.30) ಭಾರಿ ಪ್ರತಿಭಟನೆ ನಡೆಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ ಅವರು ಮಾತನಾಡಿ, ಲೋಕಸಭಾ ಚುನಾವಣೆ ನಂತರ ಸಿದ್ದರಾಮಯ್ಯನವರೇ ನೀವು ಮುಖ್ಯಮಂತ್ರಿಯಾಗಿ ಮುಂದುವರೆಯುವುದಿಲ್ಲ. ನಿಮ್ಮ ಅಧಿಕಾರಾವಧಿ ಮುಗಿಯುತ್ತಾ ಬರುತ್ತಿದೆ. ಆದ್ದರಿಂದ ನೀವು ಒಂದಷ್ಟು ಒಳ್ಳೆ ಕೆಲಸ ಮಾಡಿ ಇತಿಹಾಸ ಸೇರಿ. ಇಲ್ಲದೆ ಹೋದಲ್ಲಿ ಹತ್ತರಲ್ಲಿ ಹನ್ನೊಂದು ಎಂಬ ಕೀರ್ತಿಗೆ ಭಾಜನರಾಗಬೇಡಿ ಎಂದು ಲೇವಡಿ ಮಾಡಿದರು.

ಸಿದ್ದರಾಮಯ್ಯ ಅವರೇ ನೀವು ಮುಖ್ಯಮಂತ್ರಿಯಾಗುವ ಕನಸು ಈಡೇರಿದೆ. ಇನ್ನು ನನಗೇನು ಆಗಬೇಕಿಲ್ಲ ಎಂದರೆ ನಿಮ್ಮ ಹಣೆಬರಹ. ಕೇವಲ ಆರು ತಿಂಗಳ ಅಧಿಕಾರಕಷ್ಟೇ ನೀವು ತೃಪ್ತಿಪಟ್ಟಿಕೊಳ್ಳಬೇಕಾಗುತ್ತದೆ. ಅದಕ್ಕೆ ಬದಲಾಗಿ ಎಷ್ಟು ದಿನ ಅಧಿಕಾರದಲ್ಲಿ ಇದ್ದೆ ಎಂಬುದು ಮುಖ್ಯವಲ್ಲ. ಇದ್ದಾಗ ಏನು ಒಳ್ಳೆ ಕೆಲಸ ಮಾಡಿದ್ದೇನೆ ಎಂಬುದು ಮುಖ್ಯ ಎಂದರು.

ಆಡಳಿತಕ್ಕೆ ಒಳ್ಳೆಯ ಟಾನಿಕ್ ಕೊಟ್ಟು ಆಡಳಿತವನ್ನು ಚುರುಕು ಮಾಡುವುದಾಗಿ ಹೇಳುತ್ತಾ ಬಂದಿರಿ. ಆದರೆ ಯಾವ ಕೆಲಸಗಳೂ ಆಗುತ್ತಿಲ್ಲ. ಟಾನಿಕ್ ಕೊಡಲು ನಿಮ್ಮಿಂದ ಸಾಧ್ಯವಾಗುತ್ತಿಲ್ಲ. ಬೇಗ ಸಂತೋಷ್ ಲಾಡ್ ವಿರುದ್ಧ ಕ್ರಮ ಕೈಗೊಂಡು ಸಚಿವ ಸಂಪುಟದಿಂದ ಕೈ ಬಿಡದೆ ಹೋದರೆ ನಾಳೆ ನಿಮ್ಮ ವಿರುದ್ಧವೇ ಬೀದಿಗಿಳಿದು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪ್ರತಿಭಟನೆ ಸಂದರ್ಭದಲ್ಲಿ ಮಾಜಿ ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ, ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ, ಗೋವಿಂದ ಕಾರಜೋಳ, ಅರವಿಂದ ಲಿಂಬಾವಳಿ ಮುಂತಾದ ನಾಯಕರು ಉಪಸ್ಥಿತರಿದ್ದರು. ಬಿಜೆಪಿ ಮುಖಂಡರ ಹೇಳಿಕೆಗಳ ವಿವರ ಮುಂದಿದೆ ಓದಿ....

ಕೆ.ಎಸ್.ಈಶ್ವರಪ್ಪ ಹೇಳಿಕೆ

ಕೆ.ಎಸ್.ಈಶ್ವರಪ್ಪ ಹೇಳಿಕೆ

ಅಕ್ರಮ ಗಣಿಗಾರಿಕೆ ಧೂಳು ಮೆತ್ತಿಕೊಂಡಿರುವ ಸಂತೋಷ್ ಲಾಡ್ ಅವರನ್ನು ನಿಮ್ಮ(ಸಿದ್ದರಾಮಯ್ಯ) ಪಕ್ಕದಲ್ಲಿ ಕೂರಿಸಿಕೊಂಡಿದ್ದೀರಲ್ಲ, ನಿಮಗೆ ಸಂಕೋಚ, ನಾಚಿಕೆಯಾಗುತ್ತಿಲ್ಲವೇ? ಎಂದು ಲೇವಡಿ ಮಾಡಿದ್ದಾರೆ.

ಬೆಂಗಳೂರಿನಿಂದ ಬಳ್ಳಾರಿ ವರೆಗೆ ಉರಿಬಿಸಿಲಿನಲ್ಲಿ ಪಾದಯಾತ್ರೆ ಮಾಡಿದ್ದು ಯಾವ ಉದ್ದೇಶಕ್ಕೆ ಎಂಬುದು ರಾಜ್ಯದ ಜನತೆಗೆ ಗೊತ್ತಾಗಬೇಕಾದರೆ ಸಂತೋಷ್ ಲಾಡ್ ಅವರನ್ನು ಕೂಡಲೇ ಸಂಪುಟದಿಂದ ಕೈಬಿಡಿ ಎಂದು ಒತ್ತಾಯಿಸಿದರು.

ಡಿ.ವಿ.ಸದಾನಂದಗೌಡ ಹೇಳಿಕೆ

ಡಿ.ವಿ.ಸದಾನಂದಗೌಡ ಹೇಳಿಕೆ

ಸಂತೋಷ್ ಲಾಡ್ ಅವರನ್ನು ಕೈ ಬಿಡದಿದ್ದರೆ ನಿಮ್ಮ(ಸಿದ್ದರಾಮಯ್ಯ) ಪ್ರಾಮಾಣಿಕತೆಯೇ ಸಂಪೂರ್ಣ ಬೆತ್ತಲಾಗುವ ಸಾಧ್ಯತೆ ಇದೆ. ಹಲವು ಹೋರಾಟಗಳನ್ನು ಮಾಡಿಕೊಂಡು ಬಂದ ನೀವು ಪ್ರಾಮಾಣಿಕತೆಗೆ ಬೆಲೆ ಕೊಡುತ್ತೀರಿ ಎಂದು ಜನ ನಂಬಿದ್ದಾರೆ. ಜನರ ನಂಬಿಕೆ, ವಿಶ್ವಾಸ ಕಳೆದುಕೊಳ್ಳುವ ಮುನ್ನವೇ ಸಂತೋಷ್ ಲಾಡ್ ಅವರನ್ನು ಕೈಬಿಟ್ಟು ಪ್ರಾಮಾಣಿಕತೆ ಉಳಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಗೋವಿಂದ ಕಾರಜೋಳ

ಗೋವಿಂದ ಕಾರಜೋಳ

ಅಕ್ರಮ ಗಣಿಗಾರಿಕೆಯಿಂದ ಉಂಟಾದ ನಷ್ಟವನ್ನು ವಸೂಲಿ ಮಾಡುವುದಾಗಿ ಹಾಗೂ ಆರೋಪದಲ್ಲಿ ಭಾಗಿಯಾದವರನ್ನು ಜೈಲಿಗೆ ಕಳುಹಿಸುವುದಾಗಿ ಹೇಳಿದ ನೀವು ದುಡ್ಡು ವಸೂಲು ಮಾಡುವ ಮಾತು ಹಾಗಿರಲಿ, ಆರೋಪ ಹೊತ್ತವರನ್ನು ಸಚಿವ ಸಂಪುಟದಲ್ಲಿ ಏಕೆ ಇಟ್ಟುಕೊಂಡಿದ್ದೀರಾ? ಬೇಗ ಕಿತ್ತು ಹಾಕಿ. ಇಲ್ಲದೆ, ಹೋದಲ್ಲಿ ನಿಮ್ಮನ್ನೇ ಜನ ಸಂಶಯದಿಂದ ನೋಡುತ್ತಾರೆ ಎಂದರು.

ಪ್ರತಿಭಟನೆ ಬಗ್ಗೆ ಬಿಜೆಪಿ ಟ್ವೀಟ್

ಸೋಮವಾರ ನಡೆಸಲಾದ ಪ್ರತಿಭಟನೆ ಬಗ್ಗೆ ಬಿಜೆಪಿ ಟ್ವೀಟ್

ಪ್ರತಿಭಟನೆ ಬಗ್ಗೆ ಬಿಜೆಪಿ

ಸಂತೋಷ್ ಲಾಡ್ ಅವರನ್ನು ಸಚಿವ ಸಂಪುಟದಿಂದ ಕೈಬಿಡುವಂತೆ ಆಗ್ರಹಿಸಿ ಟ್ವೀಟ್

ಸಿಟಿ ರವಿ ಪ್ರಶ್ನೆ

ಸಿಟಿ ರವಿ ಪ್ರಶ್ನೆ

ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಕಳಂಕಿತರಿಗೆ ಸ್ಥಾನವಿಲ್ಲ ಎಂದು ಹೇಳಿ ಡಿಕೆ ಶಿವಕುಮಾರ್ ಅವರನ್ನು ಕೈ ಬಿಟ್ಟ ಸಿದ್ದರಾಮಯ್ಯ ಅವರು ಸಂತೋಷ್ ಲಾಡ್ ಅವರನ್ನು ಸೇರಿಸಿಕೊಂಡಿದ್ದು ಏಕೆ ಎಂದು ಬಿಜೆಪಿ ನಾಯಕ ಮಾಜಿ ಸಚಿವ ಸಿಟಿ ರವಿ ಪ್ರಶ್ನಿಸಿದ್ದಾರೆ.

ಆನಂದ್ ಸಿಂಗ್ ಸೇರಿದಂತೆ ಬಿಜೆಪಿ ಶಾಸಕರು ಸಂಸದರು ಯಾರೇ ಆಗಲಿ ಅಕ್ರಮದಲ್ಲಿ ಪಾಲ್ಗೊಂಡಿದ್ದರೆ ಅವರಿಗೆ ಶಿಕ್ಷೆ ಆಗಲಿ, ಇದಕ್ಕೆ ಬೇಕಾದ ನೆರವು ನೀಡಲು ಬಿಜೆಪಿ ಸಿದ್ಧ ಎಂದು ರವಿ ಹೇಳಿದರು.

ರಾಜ್ಯಪಾಲರಿಗೆ ದೂರು

ರಾಜ್ಯಪಾಲರಿಗೆ ದೂರು

ವಾರ್ತಾ ಮತ್ತು ಮೂಲಭೂತ ಸೌಕರ್ಯ ಸಚಿವ ಸಂತೋಷ್ ಲಾಡ್, ಅಕ್ರಮ ಗಣಿಗಾರಿಕೆ ನಡೆಸಿರುವುದಕ್ಕೆ ಸಾಕ್ಷ್ಯಾಧಾರ ಸಂಗ್ರಹಿಸಿರುವ ಕೇಂದ್ರೀಯ ಉನ್ನತಾಧಿಕಾರ ಸಮಿತಿ ವರದಿ ಸಲ್ಲಿಸಿದೆ

ಹೀಗಾಗಿ ಸಂತೋಷ್ ಲಾಡ್ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ಬಿಜೆಪಿ ನಿಯೋಗ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರಿಗೆ ದೂರು ನೀಡಿತ್ತು

ಅನಂತ್ ಕುಮಾರ್, ಮಾಜಿ ಸಚಿವ ಆರ್.ಅಶೋಕ್, ಸುರೇಶ್ ಕುಮಾರ್, ಗೋವಿಂದ ಕಾರಜೋಳ ಮುಂತಾದವರನ್ನು ಒಳಗೊಂಡ ನಿಯೋಗ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರನ್ನು ಭೇಟಿ ಮಾಡಿ ಸಂತೋಷ್ ಲಾಡ್ ವಿರುದ್ಧ ಇತ್ತೀಚೆಗೆ ದೂರು ಸಲ್ಲಿಸಿದ್ದರು.

ಸಿದ್ದರಾಮಯ್ಯ ಸಮರ್ಥನೆ

ಸಿದ್ದರಾಮಯ್ಯ ಸಮರ್ಥನೆ

ಲೋಕಾಯುಕ್ತ ವರದಿಯಲ್ಲಿ ಸಂತೋಷ್ ಲಾಡ್ ಅವರ ಹೆಸರಿಲ್ಲ. ಇಲ್ಲಿವರೆಗೂ ಅವರ ವಿರುದ್ಧ ಸಾಕ್ಷಿ ಆಧಾರ ಸಿಕ್ಕಿಲ್ಲ. ಆರೋಪ ಕೇಳಿ ಬಂದ ತಕ್ಷಣ ಸಂಪುಟದಿಂದ ಕೈ ಬಿಡಲು ಆಗುವುದಿಲ್ಲ ಎಂದು ಧರ್ಮಸ್ಥಳದಲ್ಲಿ ಭಾನುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮರ್ಥನೆ ನೀಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+