ರಾಜ್ಯದಲ್ಲಿ ಕುಮಾರಸ್ವಾಮಿ ಮತ್ತೊಮ್ಮೆ ಸಿಎಂ ಆಗೋದು ಪಕ್ಕಾ ಎಂದ ದೇವೇಗೌಡರು
ಬೆಂಗಳೂರು, ಅಕ್ಟೋಬರ್ 08: ನನ್ನ ಕಣ್ಣು ಮುಂದೆ ಜೆಡಿಎಸ್ ಪಕ್ಷವು ಅಧಿಕಾರಕ್ಕೆ ಬರುವುದು ನಿಶ್ಚಿತ. ಕುಮಾರಸ್ವಾಮಿ ಮತ್ತೆ ಮುಖ್ಯಮಂತ್ರಿ ಆಗೇ ಆಗುತ್ತಾರೆ, ಇದು ನಡೆದೇ ನಡೆೆಯುತ್ತದೆ ಎಂದು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಮಂತ್ರಿ ಹೆಚ್ ಡಿ ದೇವೇಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಬಸವನಗುಡಿ ಮೈದಾನದಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಅವರು, ನನಗೆ ಇನ್ನು ಹೋರಾಟ ಮಾಡುವ ಶಕ್ತಿಯಿದೆ ಎಂದರು. ಈ ಕಾರ್ಯಕ್ರಮದಲ್ಲಿ ಬಂದು 4 ನಿಮಿಷ ಮಾತನಾಡಿ ಎಂದು ಹೇಳಿದ್ದರು, ಆದರೆ ನಾನು ಸಂಪೂರ್ಣವಾಗಿ ಮಾತನಾಡುತ್ತೇನೆ ಎಂದು ಹೇಳಿದರು.
ಕುಮಾರಸ್ವಾಮಿ ನಮ್ಮ ಪಕ್ಷವನ್ನು ಉಳಿಸಲು 10 ವರ್ಷಗಳಿಂದ ಯಾವ ಕಾರ್ಯಕ್ರಮ ಮಾಡಿದ್ದಾರೆ ಎಂಬುದು ಗೊತ್ತಿದೆ. ಆದರೆ ಈಗ ಹಿಂದಿನ ವಿಚಾರಗಳನ್ನು ಮಾತನಾಡಲು ನಾನು ಇಷ್ಟ ಪಡುವುದಿಲ್ಲ. ನಾನು ಮುಂಬರುವ ಕಾರ್ಯಕಾರಣಿ ಸಭೆಯಲ್ಲೂ ಭಾಗಿಯಾಗುತ್ತೇನೆ ಎಂದರು.

ತಮ್ಮ ಆರೋಗ್ಯದ ಬಗ್ಗೆ ಗೌಡರ ಮಾತು:
ನನ್ನ ಆರೋಗ್ಯ ಇನ್ನೂ ಸ್ವಲ್ಪ ಚೇತರಿಸಿಕೊಳ್ಳಬೇಕು. ನಾನು ಈ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಭೇಟಿ ನೀಡುತ್ತೇನೆ. ನಾವು ನೀವೆಲ್ಲರೂ ಸೇರಿ ಈ ಪಕ್ಷವನ್ನು ಉಳಿಸಬೇಕಿದೆ ದಯವಿಟ್ಟು ಪಕ್ಷಕ್ಕೆ ಶಕ್ತಿ ನೀಡಿರಿ. ಈ ಪಕ್ಷ ಉಳಿಸಿ ಬೆಳಸಿ ಎಂದು ಕೈ ಮುಗಿದು ಮನವಿ ಮಾಡುತ್ತೇನೆ. ನನಗೆ ಇನ್ನೂ ಹೋರಾಟ ಮಾಡುವ ಶಕ್ತಿ ಇದೆ, ಕೊನೆಯವರೆಗೂ ರಾಜ್ಯದ ನೆಲ ಜಲದ ವಿಷಯದಲ್ಲಿ ಅನ್ಯಾಯವಾಗಲು ಬಿಡುವುದಿಲ್ಲ ಎಂದು ದೇವೇಗೌಡರು ಹೇಳಿದರು.
ಯಾವುದೇ ಸಮಾಜಕ್ಕೆ ನೋವಾಗಲು ಬಿಡುವುದಿಲ್ಲ:
ರಾಜ್ಯದಲ್ಲಿ ಯಾವುದೇ ಒಂದು ಸಮಾಜಕ್ಕೆ ನೋವಾಗಲು ಬಿಡುವುದಿಲ್ಲ. ಇದರ ಜೊತೆಗೆ ಹೇಳಿದ ಮೇಲೆ ನಾವು ಕಾರ್ಯಗತ ಮಾಡಲೇಬೇಕು. ಮುಸ್ಲಿಮರಿಗೆ ಮೀಸಲಾತಿ ಅಂತ ಎಂದೂ ಹೇಳಿರಲಿಲ್ಲ, ಆದರೂ ನಮ್ಮ ಸರ್ಕಾರದಲ್ಲಿ ಅದನ್ನು ಮಾಡಿದ್ದೇವೆ. ಮುಸ್ಲಿಂ ಸಮುದಾಯಕ್ಕೆ ಶಕ್ತಿ ತುಂಬಿದ್ದು ಯಾರು ರೆಸಿಡೆನ್ಸಿ ಶಾಲೆ ಕೊಟ್ಟವರು ಯಾರು ಎಂಬುದನ್ನು ಎಲ್ಲರೂ ನೆನಪಿಸಿಕೊಳ್ಳಬೇಕು. ಐದು ರೆಸಿಡೆನ್ಸಿ ಶಾಲೆ ಮಾಡುವ ತೀರ್ಮಾನವನ್ನು ನಾವೇ ಮಾಡಿದ್ದು ಎಂದು ಉಲ್ಲೇಖಿಸಿದರು.

ಇತಿಹಾಸವನ್ನು ನೆೆನಪಿಸಿಕೊಟ್ಟ ದೇವೇಗೌಡರು:
ಕುಮಾರಸ್ವಾಮಿ ಈ ಪಕ್ಷ ಉಳಿಸಲು ಸಾಕಷ್ಟು ಕಾರ್ಯಕ್ರಮ ಮಾಡುತ್ತಿದ್ದಾರೆ. ಮೊದಲನೇ ಬಾರಿ ಬೆಂಗಳೂರು ಹಾಗೂ ಇದರ ಸುತ್ತ ಇರುವ ಅಭಿಮಾನಿಗಳು ಈ ದಿನ ಬಂದಿದ್ದಾರೆ. ಈ ಸಭೆಯನ್ನು ತಾವುಗಳೇ ಸ್ವಯಂ ಪ್ರೇರಣೆಯಿಂದ ಯಶಸ್ವಿ ಮಾಡುತ್ತಿದ್ದಾರೆ. ನಾನು ಸಿಎಂ ಆಗುವಾಗಲೂ ಹೋರಾಟ ಆಯಿತು. ನಾನು 90ರ ದಶಕದಲ್ಲಿ ಏಕಾಂಗಿಯಾಗಿ ಹೋರಾಟ ಮಾಡಿದೆ. ನಾನು
ಸಿಎಂ ಆಗಿದ್ದಾಗ ರಾಜ್ಯದಲ್ಲಿ 16 ಲೋಕಸಭಾ ಸ್ಥಾನ ಬಂತು. ಆಗ ಕೆಲವರು ಕುಮಾರಸ್ವಾಮಿ ಅವರನ್ನು ಹಠ ಮಾಡಿ ನೀವು ಲೋಕಸಭೆಗೆ ಹೋಗಿ ಅಂದರು, ಆಗ ಗೆದ್ದು ಬಂದರು ಎಂದು ನೆನಪಿಸಿಕೊಟ್ಟರು.












Click it and Unblock the Notifications