Darshan Thoogudeepa Case: ನಟ ದರ್ಶನ್‌ಗೆ ಎದುರಾಯ್ತ ಐಟಿ ಸಂಕಷ್ಟ?

Darshan Thoogudeepa Case: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಇನ್ನು ಈ ಪ್ರಕರಣದಲ್ಲಿ ಈಗಾಗಲೇ ಎ2 ಆರೋಪಿ ದರ್ಶನ್‌ ಸೇರಿ ನಾಲ್ಕು ಜನರನ್ನು ಪೊಲೀಸ್‌ ಕಸ್ಟಡಿಗೆ ನೀಡಲಾಗಿದ್ದು, ಎ1 ಆರೋಪಿ ಪವಿತ್ರಾ ಗೌಡ ಸೇರಿ 10 ಜೈಲು ಪಾಲಾಗಿದ್ದಾರೆ. ಮತ್ತೊಂದೆಡೆ ಈ ಸಂಬಂಧ ಹಣ ಸಿಕ್ಕ ಹಿನ್ನೆಲೆ ನಟ ದರ್ಶನ್‌ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಈಗಾಗಲೇ ರೇಣುಕಾಸ್ವಾಮಿ ಕೊಲೆ ಮಾಡಲು ಕೊಟ್ಟಿದ್ದಾರೆ ಎನ್ನಲಾದ 30,00,000 ರೂಪಾಯಿ ಅನ್ನು ಆರೋಪಿಗಳ ಬಳಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಆರ್‌.ಆರ್‌.ನಗರದಲ್ಲಿರುವ ದರ್ಶನ್‌ ಮನೆಯಲ್ಲಿ 37,40,000 ರೂಪಾಯಿ, ವಿಜಯಲಕ್ಷ್ಮಿ ಅಪಾರ್ಟ್‌ಮೆಂಟ್‌ನಲ್ಲಿ 3,00,000 ರೂಪಾಯಿ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಇನ್ನು ಆರೋಪಿಗಳ ಬಳಿ ವಶಪಡಿಸಿಕೊಂಡ ಹಣದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

IT raid Possibility on Actor Darshan Thoogudeepa s house

ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಪೊಲೀಸ್ ಕಸ್ಟಡಿಯಲ್ಲಿರುವ ನಟ ದರ್ಶನ್‌ಗೆ ಒಂದಾದ ಮೇಲೊಂದು ಸಂಕಷ್ಟಗಳು ಎದುರಾಗುತ್ತಲೇ ಇದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಕ್ಕಿರುವ ಹಣದ ಸಂಬಂಧ ಇದೀಗ ನಟನಿಗೆ ಆದಾಯ ತೆರಿಗೆ ಇಲಾಖೆ ಸಂಕಷ್ಟ ಎದುರಾಗುವ ಸಾಧ್ಯತೆಯಿದೆ.

ಈ ಪ್ರಕರಣದಲ್ಲಿ 70,40,000 ರೂಪಾಯಿ ಸಿಕ್ಕಿರುವ ಹಿನ್ನೆಲೆ ಐಟಿ ಇಲಾಖೆಗೆ ಪತ್ರ ಬರೆಯಲು ಪೊಲೀಸರು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ. ಯಾವುದೇ ಪ್ರಕರಣದಲ್ಲಿ 10,00,000 ರೂಪಾಯಿಗಿಂತ ಹೆಚ್ಚಿನ ಹಣ ಸಿಕ್ಕಿರೆ ಐಟಿಗೆ ಮಾಹಿತಿ ನೀಡಬೇಕಾಗುತ್ತದೆ ಎಂಬ ನಿಯಮ ಇದ್ದು, ಆದ್ದರಿಂದ ಐಟಿ ಅಧಿಕಾರಿಗಳಿಗೆ ಮಾಹಿತಿ ನೀಡಲು ಪೊಲೀಸರು ಮುಂದಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ದರ್ಶನ್ ಮನೆಯಲ್ಲಿ 37,40,000 ಲಕ್ಷ ನಗದು ಹಣ ವಶಕ್ಕೆ ಪಡೆಯಲಾಗಿತ್ತು. ಇನ್ನು ಕೊಲೆ ಕೇಸ್‌ನಲ್ಲಿ ಇನ್ನೂ 30,00,000 ರೂಪಾಯಿ ಹಣವನ್ನು ಆರೋಪಿಗಳಿಗೆ ಹಂಚಲಾಗಿತ್ತು ಎನ್ನುವ ಮಾಹಿತಿ ತಿಳಿದುಬಂದಿದೆ.

ಯಾರ್ಯಾರ ಬಳಿ ಎಷ್ಟು ಹಣ ವಶ?: ಆರೋಪಿ ಪವನ್ ನಿವಾಸದಲ್ಲಿ 5,00,000 ರೂಪಾಯಿ ಪತ್ತೆಯಾಗಿದ್ದು, ಕೇಶವಮೂರ್ತಿಗೆ ನೀಡಿದ್ದ 5,00,000 ರೂಪಾಯಿ ಹಣ ಇನ್ನೂ ಪತ್ತೆಯಾಗಿಲ್ಲ. ನಿಖಿಲ್ ನಾಯಕ್‌ಗೆ 5,00,000 ರೂಪಾಯಿ ಹಣ, ಕಾರ್ತಿಕ್ ಅಲಿಯಾಸ್ ಕಪ್ಪೆಗೆ 5,00,000 ಹಣ, ರಾಘವೇಂದ್ರ ನಿವಾಸದಲ್ಲಿ 4,40,000 ನಗದು ಜಪ್ತಿ ಮಾಡಲಾಗಿದ್ದು, ಐದು ಲಕ್ಷ ಹಣ ಪಡೆದಿರುವ ಬಗ್ಗೆ ಮಾಹಿತಿ ಇದೆ, ಇನ್ನು ಪ್ರದೂಶ್ ನಿವಾಸದಲ್ಲಿ 5,00,000 ರೂಪಾಯಿ ಹಣ ವಶಪಡಿಸಿಕೊಳ್ಳಲಾಗಿದೆ.

ಇನ್ನು 70,40,000 ರೂಪಾಯಿ ಹಣ ವಹಿವಾಟು ನಡೆಸಲಾಗಿದ್ದು, ಇನ್ನೂ ಇದುವರೆಗೆ 5 ಲಕ್ಷದ 60 ಸಾವಿರ ಹಣ ಪತ್ತೆಯಾಗಿಲ್ಲ. ಆರೋಪಿ ರಾಘವೇಂದ್ರ 60,000 ರೂಪಾಯಿ ಹಣ ಖರ್ಚು ಮಾಡಿರುವುದಾಗಿ ತನಿಖೆ ವೇಳೆ ತಿಳಿದುಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+