ಆ. 16ಕ್ಕೆ ಶುರುವಾಗುವ ಇಂದಿರಾ ಕ್ಯಾಂಟೀನ್, ಸಿಎಂ ವೀಕ್ಷಣೆ

ಬೆಂಗಳೂರು, ಆಗಸ್ಟ್ 5: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಬೆಂಗಳೂರಿನ ವಿವಿಧ ವಾರ್ಡ್ ಗಳಲ್ಲಿ ನಿರ್ಮಾಣ ಆಗಿರುವ ಇಂದಿರಾ ಕ್ಯಾಂಟೀನ್ ನ ಪರಿಶೀಲನೆ ನಡೆಸಿದರು. ಇದೇ ಸಂದರ್ಭದಲ್ಲಿ ಅಶೋಕ್ ಪಿಲ್ಲರ್ ಬಳಿ ನಿರ್ಮಾಣ ಆಗಿರುವ ಜಯನಗರ ವಾರ್ಡ್ ವ್ಯಾಪ್ತಿಯ ಇಂದಿರಾ ಕ್ಯಾಂಟೀನ್ ನ ವೀಕ್ಷಣೆ ಮಾಡಿದರು.

ಮಾಧ್ಯಮದವರು ಹಾಗೂ ಅಧಿಕಾರಿಗಳ ಜತೆಗೆ ಬಸ್ ನಲ್ಲಿ ಸಿದ್ದರಾಮಯ್ಯ ಅವರು ಬರುವ ವೇಳೆಗೆ ಮಧ್ಯಾಹ್ನ ಎರಡು ಗಂಟೆ ಸಮಯವಾಗಿತ್ತು. ಇಲ್ಲಿಗೆ ಸಿಎಂ ಬರುವ ವಿಷಯ ಗೊತ್ತಾಗಿದ್ದ ಎನ್.ಆರ್.ಕಾಲೋನಿ ಕಾರ್ಪೊರೇಟರ್ ಕಟ್ಟೆ ಸತ್ಯ ಸ್ಥಳಕ್ಕೆ ಬಂದಿದ್ದರು. ಬೆಂಗಳೂರಿನಲ್ಲೇ ಮೊದಲಿಗೆ ಇಂದಿರಾ ಕ್ಯಾಂಟೀನ್ ಪೂರ್ತಿ ಆಗಿದ್ದು ನಮ್ಮ ವಾರ್ಡ್ ನಲ್ಲಿ. ಅಲ್ಲಿಗೆ ಬರಬಹುದಿತ್ತು ಎಂದರು.

Indira canteen starts from August 15, CM inspection

ಅತ್ಯಂತ ಕಡಿಮೆ ಅವಧಿಯಲ್ಲಿ ಮೇಲ್ನೋಟಕ್ಕೆ ಒಳ್ಳೆಯ ರಚನೆ ಒಳಗೊಂಡಂತೆ ಜಯನಗರ ವಾರ್ಡ್ ನಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಿಸಲಾಗಿದೆ. ಒಳ್ಳೆ ಗಾಳಿ-ಬೆಳಕಿನ ವ್ಯವಸ್ಥೆ ಇದೆ. ಆಹಾರ ಪದಾರ್ಥಗಳು ಹಾಗೂ ಅವುಗಳ ಬೆಲೆಯ ವಿವರಗಳು ಕನ್ನಡ-ಇಂಗ್ಲಿಷ್ ನಲ್ಲಿವೆ.

ಏಕಕಾಲಕ್ಕೆ ಮೂವತ್ತರಿಂದ ಐವತ್ತು ಮಂದಿ ನಿಂತು ಊಟ-ತಿಂಡಿ ಮಾಡಬಹುದಾದ ಸ್ಥಳಾವಕಾಶ ಇದ್ದು, ಕ್ಯಾಂಟೀನ್ ಹೊರಗೆ ಇಂದಿರಾಗಾಂಧಿ ಅವರ ಚಿತ್ರ ಕಲಾತ್ಮಕವಾಗಿ ಮೂಡಿಬಂದಿದೆ. ಮೊದಲು ಬಂದವರಿಗೆ ಆದ್ಯತೆ ಎಂಬ ನಿಯಮದಲ್ಲಿ ಏಕಕಾಲಕ್ಕೆ ಮುನ್ನೂರು ಮಂದಿಗೆ ತಿಂಡಿ ಹಾಗೂ ಊಟದ ವ್ಯವಸ್ಥೆ ಮಾಡಲಾಗುವುದು. ಈ ಕ್ಯಾಂಟೀನ್ ಆ. 16ಕ್ಕೆ ಆರಂಭವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+