ಹೊಸಕೋಟೆಯಲ್ಲಿ ಸ್ವಾರ್ಥ ಮತ್ತು ಸ್ವಾಭಿಮಾನದ ಹೋರಾಟ!

ಬೆಂಗಳೂರು, ನವೆಂಬರ್ 12 : 'ಸ್ವಾರ್ಥದ ವಿರುದ್ಧ ಸ್ವಾಭಿಮಾನದ ಹೋರಾಟ' ಎಂಬ ಘೋಷಣೆ ಹೊಸಕೋಟೆ ಕ್ಷೇತ್ರದಲ್ಲಿ ಕೇಳಿ ಬರುತ್ತಿದೆ. ಕ್ಷೇತ್ರದ ಉಪ ಚುನಾವಣೆ ಕಣ ರಂಗೇರಿದ್ದು, ಬಿಜೆಪಿ ಮತ್ತು ಎಂಟಿಬಿ ನಾಗರಾಜ್‌ ಆತಂಕಗೊಂಡಿದ್ದಾರೆ.

ಹೊಸಕೋಟೆ ಕ್ಷೇತ್ರದ ಬಿಜೆಪಿ ಟಿಕೆಟ್ ಹಂಚಿಕೆ ಬಿಕ್ಕಟ್ಟು ಇನ್ನೂ ಬಗೆಹರಿದಿಲ್ಲ. ಮಾಜಿ ಸಚಿವ ಎಂಟಿಬಿ ನಾಗರಾಜ್, ಬಿಜೆಪಿ ನಾಯಕರು ಹೇಳಿಕೆಗಳನ್ನು ನೀಡುತ್ತಲೇ ಇದ್ದಾರೆ. ಶರತ್ ಬಚ್ಚೇಗೌಡ ಎಲ್ಲಾ ನಾಯಕರಿಗೆ ಸೆಡ್ಡು ಹೊಡೆಯುತ್ತಿದ್ದಾರೆ.

'ಸ್ವಾರ್ಥದ ವಿರುದ್ದ ಸ್ವಾಭಿಮಾನದ ಹೋರಾಟ. ನಮ್ಮ ಜನತೆಗಾಗಿ ನಮ್ಮ ಹೆಜ್ಜೆ' ಎಂದು ಶರತ್ ಬಚ್ಚೇಗೌಡ ಘೋಷಣೆ ಮಾಡಿದ್ದಾರೆ. ನವೆಂಬರ್ 14ರ ಗುರುವಾರ ಪಕ್ಷೇತರ ಅಭ್ಯರ್ಥಿಯಾಗಿ ಹೊಸಕೋಟೆ ಕ್ಷೇತ್ರದಿಂದ ನಾಮಪತ್ರ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪ, ಚಿಕ್ಕಬಳ್ಳಾಪುರ ಸಂಸದ ಬಿ. ಎನ್. ಬಚ್ಚೇಗೌಡ, ಮಾಜಿ ಸಚಿವ ಎಂಟಿಬಿ ನಾಗರಾಜ್ ಕ್ಷೇತ್ರದ ಚುನಾವಣೆ ಬಗ್ಗೆ ತಲೆ ಕೆಡಿಸಿಕೊಂಡಿದ್ದಾರೆ. ಕಾಂಗ್ರೆಸ್ ಈಗಾಗಲೇ ಕ್ಷೇತ್ರಕ್ಕೆ ಅಭ್ಯರ್ಥಿ ಅಂತಿಮಗೊಳಿಸಿದ್ದು, ಪ್ರಚಾರ ಕಾರ್ಯ ಬಿರುಸಿನಿಂದ ಸಾಗಿದೆ.

ಶರತ್ ಬಚ್ಚೇಗೌಡ ವಿಡಿಯೋ

ಶರತ್ ಬಚ್ಚೇಗೌಡ ವಿಡಿಯೋ

ಶರತ್ ಬಚ್ಚೇಗೌಡ ತಮ್ಮ ಫೇಸ್ ಬುಕ್ ಪುಟದಲ್ಲಿ ವಿಡಿಯೋವೊಂದನ್ನು ಹಾಕಿದ್ದಾರೆ. ಹೊಸಕೋಟೆ ಕ್ಷೇತ್ರದ ಉಪ ಚುನಾವಣೆ 'ಸ್ವಾರ್ಥದ ವಿರುದ್ಧ ಸ್ವಾಭಿಮಾನದ ಹೋರಾಟ' ಎಂದು ಹೇಳಿದ್ದಾರೆ. ಕ್ಷೇತ್ರದ ಯುವ ಜನತೆ ಉಪ ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸಬೇಕು ಎಂದು ವಿಡಿಯೋ ಮೂಲಕ ಮನವಿ ಮಾಡಿದ್ದಾರೆ. ಎಂಟಿಬಿ ನಾಗರಾಜ್ ಸ್ವಾರ್ಥದ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ಗುರುವಾರ ನಾಮಪತ್ರ ಸಲ್ಲಿಕೆ

ಗುರುವಾರ ನಾಮಪತ್ರ ಸಲ್ಲಿಕೆ

ಡಿಸೆಂಬರ್ 5ರಂದು ನಡೆಯಲಿರುವ ಹೊಸಕೋಟೆ ಕ್ಷೇತ್ರದ ಉಪ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ನವೆಂಬರ್ 14ರ ಗುರುವಾರ ನಾಮಪತ್ರ ಸಲ್ಲಿಸುತ್ತೇನೆ. ಅಭಿಮಾನಿಗಳು ಅಂದು ತಪ್ಪದೇ ಆಗಮಿಸಿ ಬೆಂಬಲಿಸಬೇಕು ಎಂದು ಶರತ್ ಬಚ್ಚೇಗೌಡ ವಿಡಿಯೋ ಮೂಲಕ ಕರೆ ನೀಡಿದ್ದಾರೆ.

ಬಿಜೆಪಿಗೆ ಬಿಸಿ ತುಪ್ಪವಾದ ಯುವಕ

ಬಿಜೆಪಿಗೆ ಬಿಸಿ ತುಪ್ಪವಾದ ಯುವಕ

ಶರತ್ ಬಚ್ಚೇಗೌಡ ನಡೆ ಬಿಜೆಪಿ ನಾಯಕರಿಗೆ ಬಿಸಿತುಪ್ಪವಾಗಿದೆ. ಎಂಟಿಬಿ ನಾಗರಾಜ್ ಕಣಕ್ಕಿಳಿಸಲು ಮುಂದಾಗಿದ್ದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ನಡೆ ಕುತೂಹಲಕ್ಕೆ ಕಾರಣವಾಗಿದೆ. ಅತ್ತ ಎಂಟಿಬಿ ನಾಗರಾಜ್ ಸಹ ಸುಪ್ರೀಂಕೋರ್ಟ್ ತೀರ್ಪು ಬಂದ ಮೇಲೆ ಮುಂದಿನ ನಡೆ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದಾರೆ. ಬುಧವಾರ ತೀರ್ಪು ಪ್ರಕಟವಾಗುತ್ತಿದೆ.

ಎಂಎಲ್‌ಸಿ ಮಾಡಲು ಚಿಂತನೆ

ಎಂಎಲ್‌ಸಿ ಮಾಡಲು ಚಿಂತನೆ

ಹೊಸಕೋಟೆ ಕ್ಷೇತ್ರದ ಟಿಕೆಟ್ ಹಂಚಿಕೆ ಕಗ್ಗಂಟು ಬಿಡಿಸಲು ಬಿಜೆಪಿ ಶತಪ್ರಯತ್ನ ಮಾಡುತ್ತಿದೆ. ಶರತ್ ಬಚ್ಚೇಗೌಡರನ್ನು ಸಮಾಧಾನಪಡಿಸಿ ಎಂಎಲ್‌ಸಿ ಮಾಡುವ ಭರವಸೆಯನ್ನು ನೀಡಲು ಬಿಜೆಪಿ ನಾಯಕರು ಮುಂದಾಗಿದ್ದಾರೆ. ಆದರೆ, ಶರತ್ ಬಚ್ಚೇಗೌಡ ಇದಕ್ಕೆ ಒಪ್ಪಿಗೆ ನೀಡಿಲ್ಲ.

ಕಾಂಗ್ರೆಸ್‌ ಅಭ್ಯರ್ಥಿ ಅಂತಿಮ

ಕಾಂಗ್ರೆಸ್‌ ಅಭ್ಯರ್ಥಿ ಅಂತಿಮ

ಹೊಸಕೋಟೆ ಕ್ಷೇತ್ರಕ್ಕೆ ಪದ್ಮಾವತಿ ಸುರೇಶ್ ಕಾಂಗ್ರೆಸ್ ಅಭ್ಯರ್ಥಿ. ಕ್ಷೇತ್ರದಲ್ಲಿ ಪ್ರಚಾರ ಕಾರ್ಯವನ್ನು ಅವರು ಬಿರುಸಿನಿಂದ ಕೈಗೊಂಡಿದ್ದಾರೆ. ಟಿಕೆಟ್ ಹಂಚಿಕೆ ವಿಚಾರಕ್ಕೆ ಬಿಜೆಪಿ ಇನ್ನೂ ಜಗ್ಗಜಗ್ಗಾಟ ನಡೆಸುತ್ತಿದೆ. ಬಿಜೆಪಿಯ ಜಗಳ ಕಾಂಗ್ರೆಸ್‌ ಕೈ ಹಿಡಿಯಲಿದೆಯೇ? ಕಾದು ನೋಡಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+