ಲೋಕಾಯುಕ್ತರ ಮೇಲೆ ದಾಳಿ ಖಂಡಿಸಿದ ರಾಮಲಿಂಗಾ ರೆಡ್ಡಿ
ಬೆಂಗಳೂರು, ಮಾರ್ಚ್ 07: ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ಅವರ ಮೇಲಿನ ಹಲ್ಲೆಗೆ ಗೃಹಸಚಿವ ರಾಮಲಿಂಗಾ ರೆಡ್ಡಿ ತೀವ್ರವಾಗಿ ಖಂಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹಲ್ಲೆಕೋರನನ್ನು ಈಗಾಗಲೇ ವಶಕ್ಕೆ ಪಡೆದಿದ್ದು, ಆತನ ಹಿನ್ನೆಲೆ ಮತ್ತು ದಾಳಿಯ ಉದ್ದೇಶಗಳ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದರು.
ಆರೋಪಿಯ ಪ್ರಾತಮಿಕ ಮಾಹಿತಿಯಷ್ಟೆ ಲಭ್ಯವಿದ್ದು ತೇಜರಾಜ್ ಶರ್ಮಾ, ರಾಜಸ್ಥಾನ ಮೂಲದ ತೇಜಸ್ ಶರ್ಮಾ ಎಂಬಾತ ಲೋಕಾಯುಕ್ತರಿಗೆ ಇರಿದಿದ್ದು, ಎದೆ ಹಾಗೂ ಹೊಟ್ಟೆಗೆ ಗಾಯವಾಗಿದೆ ಎಂದು ತಿಳಿದು ಬಂದಿದೆ ಎಂದು ಹೇಳಿದರು.

ಮಲ್ಯ ಆಸ್ಪತ್ರೆಯಿಂದ ಬಂದಿರುವ ಮಾಹಿತಿ ಪ್ರಕಾರ ನ್ಯಾಯಮೂರ್ತಿಗಳ ಪ್ರಾಣಕ್ಕೆ ತೊಂದರೆ ಇಲ್ಲ ಎಂಬುದು ಗೊತ್ತಾಗಿದೆ, ಈಗಲೇ ಮಲ್ಯ ಆಸ್ಪತ್ರೆಗೆ ತೆರಳುತ್ತಿದ್ದು, ಪೊಲೀಸ್ ಕಮಿಷನರ್ ಅವರು ಈಗಾಗಲೇ ಮಲ್ಯ ಆಸ್ಪತ್ರೆಯಲ್ಲಿ ಇದ್ದಾರೆ, ಅಲ್ಲಿಗೆ ತೆರಳಿದ ನಂತರ ಇನ್ನಷ್ಟು ಮಾಹಿತಿ ಲಭ್ಯವಾಗಲಿದೆ ಎಂದರು.












Click it and Unblock the Notifications