High Court: ಮನಬಂದಂತೆ ವೀಸಾ ವಿಸ್ತರಣೆ ನಿಲ್ಲಿಸಲು ಹೈಕೋರ್ಟ್ ಆದೇಶ

ಬೆಂಗಳೂರು, ಡಿಸೆಂಬರ್‌ 23: ವಿದೇಶಿಯರ ಪ್ರಾದೇಶಿಕ ನೋಂದಣಿ ಅಧಿಕಾರಿ (ಎಫ್‌ಆರ್‌ಆರ್‌ಒ) ಮನಬಂದಂತೆ ವೀಸಾ ವಿಸ್ತರಣೆ ಮಾಡುವುದನ್ನು ನಿಲ್ಲಿಸಬೇಕು ಎಂದು ಹೈಕೋರ್ಟ್ ಆದೇಶಿಸಿದೆ.ಅಲ್ಲದೆ, ಈ ರೀತಿ ದಾಖಲೆಗಳನ್ನು ಪರಿಶೀಲಿಸದೆ ವೀಸಾಗಳನ್ನು ವಿಸ್ತರಿಸುವ ಕುರಿತು ಆಘಾತವನ್ನು ವ್ಯಕ್ತಪಡಿಸಿದೆ.

ಇನ್ನು ಮುಂದೆ ವೈದ್ಯಕೀಯ ಅಥವಾ ವೈದ್ಯಕೀಯ ಅಟೆಂಡೆಂಟ್ ವೀಸಾ ಕೋರಿ ಸಲ್ಲಿಕೆಯಾಗುವ ಸಂವಹನಗಳನ್ನು ಆಸ್ಪತ್ರೆಗಳು ಹೇಗೆ ನೀಡುತ್ತಿವೆ ಎಂಬುದನ್ನು ಪರಿಶೀಲಿಸುವ ಮೂಲಕ ನೈಜ ಪ್ರಕರಣಗಳಲ್ಲಿ ತೊಂದರೆಯಾಗದಂತೆ ಅಧಿಕಾರಿಗಳು ಕಾಳಜಿ ವಹಿಸಬೇಕು ಎಂದು ನಿರ್ದೇಶಿಸಿದೆ.

High Court Direction FRRO Not To Extend Visa Without Verification

ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ ಈ ಆದೇಶ ನೀಡಿದೆ. ವೀಸಾ ವಿಸ್ತರಣೆಗಾಗಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿರುವ ಎಫ್ ಆರ್ ಆರ್ ಒ ಕ್ರಮ ಪ್ರಶ್ನಿಸಿ ಬೆಂಗಳೂರು ನಗರದಲ್ಲಿ ನೆಲೆಸಿರುವ ಯೆಮೆನ್ ಪ್ರಜೆ ಮೊಹಮ್ಮದ್ ನೋಮನ್ ಅಹ್ಮದ್ ಅಲ್ಮೆರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.

ನಡವಳಿಕೆಗೆ ಕಿಡಿ

ಯಾವುದೇ ಮಾನ್ಯ ದಾಖಲೆಗಳಿಲ್ಲದೆ ವೈದ್ಯಕೀಯ ಅಟೆಂಡೆಂಟ್ ವೀಸಾವನ್ನು ವೈದ್ಯಕೀಯ ವೀಸಾಕ್ಕೆ ಪರಿವರ್ತಿಸಿದ ಎಫ್‌ಆರ್‌ಆರ್‌ಒ ಕಚೇರಿಯ ನಡವಳಿಗೆ ಕಿಡಿಕಾರಿ, ಇದೊಂದು ಗಂಭೀರ ನೂನ್ಯತೆ ಎಂದು ಹೇಳಿದೆ.

ನ್ಯಾಯಾಲಯ "ವೀಸಾಗಳ ವಿಸ್ತರಣೆಗಾಗಿ ಆಸ್ಪತ್ರೆಗಳು ಇತರ ದೇಶಗಳ ನಾಗರಿಕರೊಂದಿಗೆ ಕೈಜೋಡಿಸಲು ಅನುಮತಿಯಿಲ್ಲದ ಕಾರಣ ಆ ಸಂವಹನಗಳಲ್ಲಿ ಸತ್ಯಾಂಶವಿದೆಯೇ ಎಂದು ಪರಿಶೀಲಿಸಬೇಕಾಗುತ್ತದೆ. ವೀಸಾ ಪರಿವರ್ತನೆಯನ್ನು ಕೋರಿ ಆಸ್ಪತ್ರೆಗಳು ನೀಡುವ ಪ್ರಮಾಣ ಪತ್ರಗಳ ಸ್ವರೂಪದ ಬಗ್ಗೆ ಪ್ರಾದೇಶಿಕ ನೋಂದಣಿ ಅಧಿಕಾರಿ (ಎಫ್‌ಆರ್ಆರ್ಒ) ತನಿಖೆ ಮಾಡಬೇಕು" ಎಂದು ಹೇಳಿದೆ.

ಎಫ್‌ಆರ್ಆರ್ಒ ಮೊದಲು ತನ್ನ ವ್ಯವಸ್ಥೆಯನ್ನು ಸರಿಪಡಿಸಿಕೊಳ್ಳಿವ ಅಗತ್ಯವಿದೆ ಮತ್ತು ದಾಖಲೆಗಳ ಪರಿಶೀಲನೆಯಿಲ್ಲದೆ ವೀಸಾಗಳನ್ನು ಪರಿವರ್ತಿಸಬಾರದು. ಅರ್ಜಿದಾರರಿಗೆ ನಗರದ ಜೆಸಿ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಯೊಂದು ನೀಡಿರುವ ಕಾಯಿಲೆಗಳ ಪಟ್ಟಿ ಅಥವಾ ದಾಖಲೆಗಳನ್ನು ನೋಡದೆ ಎಫ್‌ಆರ್‌ಆರ್‌ಒ ವೈದ್ಯಕೀಯ ಅಟೆಂಡೆಂಟ್ ವೀಸಾವನ್ನು ವೈದ್ಯಕೀಯ ವೀಸಾವನ್ನಾಗಿ ಪರಿವರ್ತಿಸಿದ್ದು ಹೇಗೆ ಎಂಬುದು ಆಘಾತಕಾರಿ ಎಂದು ನ್ಯಾಯಾಲಯ ಹೇಳಿದೆ.

ವೈದ್ಯಕೀಯ ದಾಖಲೆಗಳಲ್ಲಿ ಒಂದು ಕ್ಲಿನಿಕಲ್ ಪ್ರಯೋಗಾಲಯದ ವರದಿಯಾಗಿದ್ದು ಅದು ಅರ್ಜಿದಾರರಿಗೆ ಹೆಚ್ಚಿನ ಕೊಬ್ಬು ಮತ್ತು ಮಧುಮೇಹ ಕಾಯಿಲೆ ಹತ್ತಿರದಲ್ಲಿರುವುದನ್ನು ತೋರಿಸುತ್ತದೆ. ಅಧಿಕಾರಿಗಳು ಆ ದಾಖಲೆಗಳನ್ನು ನೋಡದೆ ಅದನ್ನು ಪರಿವರ್ತಿಸಿದ್ದಾರೆ ಎಂದು ತೋರಿಸುತ್ತದೆ. ಅರ್ಜಿದಾರರಿಗೆ ವೈದ್ಯಕೀಯ ವೀಸಾವನ್ನು ಹೇಗೆ ನೀಡಲಾಗಿದೆ ಎಂಬುದು ಮತ್ತಷ್ಟು ಆಶ್ಚರ್ಯಕರವಾಗಿದೆ ಎಂದು ನ್ಯಾಯಾಲಯ ಹೇಳಿದೆ.

ಪ್ರಕರಣದ ಹಿನ್ನೆಲೆ

ಮೊಹಮ್ಮದ್ 39 ವರ್ಷದವರಾಗಿದ್ದಾಗ ಭಾರತಕ್ಕೆ ಬಂದರು ಮತ್ತು 2016 ರಲ್ಲಿ ತಮ್ಮ ದೇಶಕ್ಕೆ ಹಿಂತಿರುಗಿದರು. ವಿದ್ಯಾರ್ಥಿ ವೀಸಾದಲ್ಲಿ ಭಾರತದಲ್ಲಿ ಅವರ ವಾಸ್ತವ್ಯ ಕೊನೆಗೊಂಡಿತ್ತು. ಅವರು ಮತ್ತೆ ವೈದ್ಯಕೀಯ ಅಟೆಂಡೆಂಟ್ ವೀಸಾದಲ್ಲಿ ಭಾರತಕ್ಕೆ ಹಿಂತಿರುಗಿದರು. ಈ ಬಾರಿ ಅವರು ಬೆಂಗಳೂರಿನ ಮಾರ್ಗವನ್ನು ಆಯ್ಕೆ ಮಾಡದೆ ಮುಂಬೈ ಮಾರ್ಗವನ್ನು ಆಯ್ಕೆ ಮಾಡಿಕೊಂಡಿದ್ದರು. ಅವರ ವೀಸಾವು ಆರು ತಿಂಗಳವರೆಗೆ ಮಾನ್ಯವಾಗಿತ್ತು ಮತ್ತು ಅದನ್ನು ವೈದ್ಯಕೀಯ ವೀಸಾವಾಗಿ ಪರಿವರ್ತಿಸಲಾಗಿದೆ.

ಡೆಪ್ಯೂಟಿ ಸಾಲಿಸಿಟರ್ ಜನರಲ್ ಅರ್ಜಿದಾರರು ಎಫ್‌ಆರ್‌ಆರ್‌ಒಗೆ ವಂಚನೆ ಮಾಡಿದ್ದಾರೆಂಬ ದಾಖಲೆಗಳನ್ನು ಒಳಗೊಂಡ ಮುಚ್ಚಿದ ಲಕೋಟೆಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಅವರು 2016ರಲ್ಲಿ ಭಾರತಕ್ಕೆ ಬಂದು ಭಾರತೀಯ ಪ್ರಜೆಯನ್ನು ವಿವಾಹವಾದರು. ಆ ಮೂಲಕ ಭಾರತದ ಪೌರತ್ವವನ್ನು ಪರಿಗಣಿಸಲು ಅರ್ಹತೆ ಪಡೆದಿದ್ದಾರೆ. ಅವರು ವೈದ್ಯಕೀಯ ವೀಸಾ ಪಡೆಯಲು ಯಾವ ಆಸ್ಪತ್ರೆಯಲ್ಲಿಯೂ ಒಳರೋಗಿಯಾಗಿ ದಾಖಲಾಗಿರಲಿಲ್ಲ. ಅವರು ವೈದ್ಯಕೀಯ ಪ್ರವಾಸೋದ್ಯಮ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದಾರೆ ಮತ್ತು ಯೆಮನ್‌ನಿಂದ ನೂರಾರು ಜನರನ್ನು ಕರೆದುಕೊಂಡು ಅವರಿವೆ ನಗರದ ಬಹುತೇಕ ಆಸ್ಪತ್ರೆಗಳಲ್ಲಿ ಉದ್ಯೋಗಕ್ಕೆ ಸೇರಿಸಿದ್ದಾರೆ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+