Rain Alert: 48 ಗಂಟೆಗಳಲ್ಲಿ ಭಾರಿ ಮಳೆ ನಿರೀಕ್ಷೆ, ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ!
ಮಳೆರಾಯ ಮತ್ತೆ ಅಬ್ಬರಿಸುತ್ತಿದ್ದಾನೆ, ವಾತಾವರಣದಲ್ಲಿ ದಿಢೀರ್ ಏರುಪೇರಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ರಾಜಧಾನಿ ಬೆಂಗಳೂರು ಸೇರಿದಂತೆ ಕರ್ನಾಟಕದ ದಕ್ಷಿಣದಲ್ಲಿ ಭಾರಿ ಮಳೆಯ ಮುನ್ಸೂಚನೆ ಸಿಕ್ಕಿದೆ. ಈಗಾಗಲೇ ನೆರೆಯ ರಾಜ್ಯ ತಮಿಳುನಾಡು ಮಳೆಯ ಆರ್ಭಟಕ್ಕೆ ಕೊಚ್ಚಿ ಹೋಗುತ್ತಿದ್ದು, ಕರ್ನಾಟದಲ್ಲೂ ಅದೇ ಸ್ಥಿತಿ ನಿರ್ಮಾಣವಾಗುವ ಬಗ್ಗೆ ಮುನ್ಸೂಚನೆ ಸಿಕ್ಕಿದೆ.
ಹೌದು, ಇನ್ನೇನು ಹಿಂಗಾರು ಮಳೆ ಮುಕ್ತಾಯವಾಗುವ ಹಂತಕ್ಕೆ ಬಂದಿದೆ. ಹೀಗೆ ಮಳೆಯ ಆರ್ಭಟ ಸಂಪೂರ್ಣವಾಗಿ ನಿಲ್ಲುವ ಸಮಯದಲ್ಲಿ ವರುಣನ ಅಬ್ಬರ ಬಲು ಜೋರಾಗಿದ್ದು, ಎಲ್ಲೆಲ್ಲೂ ಸಂಚಲನ ಸೃಷ್ಟಿಯಾಗಿದೆ. ಮುಂದಿನ 4 ದಿನ ಕಾಲ ತಮಿಳುನಾಡು, ಪುದುಚೇರಿ, ಕಾರೈಕಾಲ್ ಮತ್ತು ಕೇರಳ ಸೇರಿ ಇನ್ನ ಕೆಲ ರಾಜ್ಯಗಳ ವಿವಿಧ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆ ನಿರೀಕ್ಷೆ ಇದೆ. ನವೆಂಬರ್ 30 ರಿಂದ ಡಿಸೆಂಬರ್ 1ರವರೆಗೆ ತಮಿಳುನಾಡು, ಪುದುಚೇರಿ, ಕಾರೈಕಲ್ ಹಾಗೂ ನವೆಂಬರ್ 30 & ಡಿಸೆಂಬರ್ 1ಕ್ಕೆ ಕೇರಳದಲ್ಲೂ ವಿವಿಧೆಡೆ ಭಾರಿ ಮಳೆಯ ಮುನ್ಸೂಚನೆಯ ನೀಡಲಾಗಿದೆ. ಬೆಂಗಳೂರಿನಲ್ಲೂ ಮಳೆಯ ಸಾಧ್ಯತೆ ದಟ್ಟವಾಗಿದೆ.

ಬೆಂಗಳೂರಲ್ಲಿ ಬತ್ತಿ ಹೋಗುತ್ತಿದ್ದ ಕೆರೆಗಳು!
ಇದರ ಜೊತೆ ಕರ್ನಾಟಕದ ರಾಜಧಾನಿ ಬೆಂಗಳೂರು ಸೇರಿ ಕರ್ನಾಟಕದ ವಿವಿಧ ಭಾಗದಲ್ಲಿ ಭಾರಿ ಮಳೆಯಾಗುವ ಸೂಚನೆ ಸಿಕ್ಕಿದೆ. ಮುಂದಿನ 48 ಗಂಟೆಗಳಲ್ಲಿ, ಭಾರಿ ಮಳೆ ನಿರೀಕ್ಷೆ ಇದೆ. ಈಗಾಗಲೇ ಬೆಂಗಳೂರಿನ ಸುತ್ತಮುತ್ತಲ ಜಿಲ್ಲೆಗಳಲ್ಲೂ ಮೋಡ ಕವಿದ ವಾತಾವರಣ ಇದೆ. ಹೀಗಾಗಿ ಕಾವೇರಿ ಕೊಳ್ಳದಲ್ಲೂ ಮಳೆಯ ನಿರೀಕ್ಷೆ ಮಾಡಲಾಗುತ್ತಿದೆ. ಬೆಂಗಳೂರಿನ ಸುತ್ತಮುತ್ತ ಒಣಗಿ ಹೋದ ಕೆರೆ ಕುಂಟೆಗೆ ವರ್ಷದ ಕೊನೆಯಲ್ಲಿ ಮಳೆಯ ಸಿಂಚನವಾಗುವ ನಿರೀಕ್ಷೆ ಇದೆ.
ಬೆಂಗಳೂರಿಗರೇ ಎಚ್ಚರ.. ಎಚ್ಚರ..!
ಮೊದಲೇ ಹೇಳಿದಂತೆ ನೆರೆ ರಾಜ್ಯ ತಮಿಳುನಾಡಿನಲ್ಲಿ ಭಾರಿ ಮಳೆ ಸುರಿಯುತ್ತಿದೆ. ಹೀಗಾಗಿ ಚೆನ್ನೈ ಮಳೆ ನೀರಲ್ಲಿ ತೇಲಿ ಹೋಗಿದ್ದು, ಶಾಲಾ & ಕಾಲೇಜುಗಳಿಗೆ ರಜೆ ಕೂಡ ಘೋಷಣೆ ಆಗಿದೆ. ಹೀಗಾಗಿ ತಮಿಳುನಾಡಿನ ಜೊತೆಗೆ ಗಡಿ ಹಂಚಿಕೊಂಡಿರುವ ಬೆಂಗಳೂರಿನಲ್ಲಿ ಕೂಡ ಭಾರಿ ಮಳೆ ಬೀಳುವ ಮುನ್ಸೂಚನೆ ಸಿಕ್ಕಿದೆ. ಇಂದಿನಿಂದ ಭಾನುವಾರದ ತನಕವೂ ಮೋಡ ಕವಿದ ವಾತಾವರಣ ಅಥವಾ ತುಂತುರು ಮಳೆ ಬೀಳುವ ಸಾಧ್ಯತೆ ಇದ್ದರೆ. ಸೋಮವಾರಕ್ಕೆ ನಮ್ಮ ಬೆಂಗಳೂರಿನಲ್ಲಿ ಗುಡುಗು ಸಹಿತ ಭಾರಿ ಮಳೆ ಬೀಳುವ ಸಾಧ್ಯತೆ ಇದೆ.
ಬಂಗಾಳ ಕೊಲ್ಲಿಯಲ್ಲಿ ಭಯಾನಕ ಪರಿಸ್ಥಿತಿ
ಅಂದಹಾಗೆ ಇಷ್ಟೆಲ್ಲ ಮಳೆ ಆರ್ಭಟಕ್ಕೆ ಕಾರಣ ಆಗುತ್ತಿರುವುದೇ ಬಂಗಾಳ ಕೊಲ್ಲಿ ಪರಿಸ್ಥಿತಿ. ದಕ್ಷಿಣ ಅಂಡಮಾನ್ ಸಮುದ್ರ & ಪಕ್ಕದ ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ಸುಳಿಗಾಳಿ ಎದ್ದಿದೆ. ಹಾಗೇ ಚಂಡಮಾರುತವಾಗಿ ಈ ಸುಳಿಗಾಳಿ ಬದಲಾಗುತ್ತಿದೆ. ಈ ಚಂಡಮಾರುತದ ತೀವ್ರತೆಯು ಹೆಚ್ಚಾಗಲಿದೆ ಅಂತ ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಇಷ್ಟೆಲ್ಲದರ ಮಧ್ಯೆ ತಮಿಳುನಾಡಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು ಕರ್ನಾಟಕದಲ್ಲೂ ಇದೇ ಸ್ಥಿತಿ ನಿರ್ಮಾಣ ಆಗಬಹುದು ಅಂತಾ ಹೇಳಲಾಗುತ್ತಿದೆ.

ಬೆಂಗಳೂರಿಗರೇ ಫುಲ್ ಅಲರ್ಟ್ ಆಗಿರಿ!
ದಕ್ಷಿಣ ಭಾರತದಲ್ಲಿ ಹಿಂಗಾರು ಮಳೆ ಫುಲ್ ಅಲರ್ಟ್ ಆಗಿ, ಹಲವು ರಾಜ್ಯಗಳಲ್ಲಿ ಮಳೆ ಆರ್ಭಟ ಜೋರಾಗಿದೆ. ಅದರಲ್ಲೂ ತಮಿಳುನಾಡು ಮತ್ತು ಕೇರಳ ರಾಜ್ಯದಲ್ಲಿ ಮುಂಗಾರು ಮಳೆಯನ್ನೇ ಮೀರಿಸಿ ಹಿಂಗಾರು ಮಳೆ ಬೀಳ್ತಿದೆ. ಹೀಗಾಗಿ ಬೆಂಗಳೂರಿನಲ್ಲಿ ಯಾವ ಸಮಯದಲ್ಲೂ ಭಾರಿ ಮಳೆ ಬೀಳುವ ಸೂಚನೆ ಇದ್ದು, ಅಲರ್ಟ್ ಆಗಿ ಇದ್ದರೆ ಉತ್ತಮ. ಅದರಲ್ಲೂ ಹೊರಗಡೆ ಹೋಗುವವರು ಕೈಯಲ್ಲಿ ಕೊಡೆ ಇಟ್ಕೊಂಡು ಹೋದ್ರೆ ಉತ್ತಮ, ಇಲ್ಲವಾದರೆ ಮಳೆಯಲ್ಲಿ ಅನಗತ್ಯ ಸ್ನಾನ ಗ್ಯಾರಂಟಿ!
ರೈತರಿಗೆ ಗಾಯದ ಮೇಲೆ ಬರೆ?
ಒಂದು ಕಡೆ ಇಷ್ಟು ದಿನ ಮುಂಗಾರು ಮಳೆಯೇ ಬಾರದೆ ರೈತರು ಕಂಗಾಲಾಗಿ ಹೋಗಿದ್ರು. ಆದ್ರೆ ಈಗ ಹಿಂಗಾರು ಮಳೆ ಭಾರಿ ಪ್ರಮಾಣದಲ್ಲಿ ಬೀಳುತ್ತಿರುವ ಹಿನ್ನೆಲೆ ಮತ್ತೊಂದು ರೀತಿ ಚಿಂತೆ ಶುರುವಾಗಿದೆ. ಈಗಾಗಲೇ ಕೈಗೆ ಬಂದಿರುವ ಬೆಳೆ, ಬಾಯಿಗೆ ಬಾರದ ಪರಿಸ್ಥಿತಿ ಈಗ ನಿರ್ಮಾಣವಾಗಿದೆ. ಇನ್ನೂ ಕೆಲವು ದಿನಗಳ ಕಾಲ ಇದೇ ರೀತಿಯ ವಾತಾವರಣ ಇರಲಿದ್ದು ರೈತರಿಗೆ ಇನ್ನಷ್ಟು ಚಿಂತೆ ಶುರುವಾಗಿದೆ.












Click it and Unblock the Notifications