Get Updates
Get notified of breaking news, exclusive insights, and must-see stories!

ರಾಜ್ಯದಲ್ಲಿ ಅನಗತ್ಯ ಸ್ಕ್ಯಾನಿಂಗ್‌ಗೆ ಸರ್ಕಾರ ಬ್ರೇಕ್, ಜನರ 200 ಕೋಟಿ ರೂ. ಉಳಿಕೆ: ಆರೋಗ್ಯ ಸಚಿವ

ಬೆಂಗಳೂರು: ಕರ್ನಾಟಕದಲ್ಲಿ ಆರೋಗ್ಯ ಚಿಕಿತ್ಸೆ ಹೆಸರಿನಲ್ಲಿ ನಡೆಯುತ್ತಿದ್ದ ಅನಗತ್ಯ ಸ್ಕ್ಯಾನಿಂಗ್‌ಗಳಿಗೆ ರಾಜ್ಯ ಸರ್ಕಾರ ಬ್ರೇಕ್ ಹಾಕಿದೆ. ಸರ್ಕಾರ ಜಾರಿಗೆ ತಂದ ನಿಯಮದಿಂದ ಅಗತ್ಯವಿರುವವರಿಗೆ ಸಿಟಿ ಮತ್ತು ಎಂಆರ್‌ಐ ಸ್ಕ್ಯಾನಿಂಗ್ ಸೇವೆಗೆ ಸಿಗುತ್ತಿದೆ. ಅನಗತ್ಯವಾಗಿ ಮಾಡಿಸುತ್ತಿದ್ದ ಸ್ಕ್ಯಾನಿಂಗ್‌ ದುರ್ಬಳಕೆ ತಡೆಯಲಾಗಿದೆ. ಇದರಿಂದ ಸರ್ಕಾರಕ್ಕೆ ಬರೋಬ್ಬರಿ 200 ಕೋಟಿ ರೂಪಾಯಿ ಉಳಿದಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಅಂಕಿ ಸಂಖ್ಯೆ ಸಮೇತ ವಿವರಿಸಿದ್ದಾರೆ.

ಸುದ್ದಿಗಾರರ ಜೊತೆ ಶುಕ್ರವಾರ ಮಾತನಾಡಿದ ಅವರು, ಈ ಬಗ್ಗೆ ಎಕ್ಸ್ ಪೋಸ್ಟ್ ಹಂಚಿಕೊಂಡಿದ್ದಾರೆ. ಸರ್ಕಾರದ ಹಣದ ಸರಿಯಾದ ಸದ್ಬಳಕೆ ಹಾಗೂ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವುದು ಸರ್ಕಾರದ ಬದ್ಧತೆಯಾಗಿದೆ. CT ಮತ್ತು MRI ಸ್ಕ್ಯಾನಿಂಗ್ ಸೇವೆ ಪಡೆಯಲು ಜನರಿಗೆ ಯಾವುದೇ ಅಡಚಣೆ ಆಗಬಾರದು ಎಂಬ ಉದ್ದೇಶದಿಂದ ಪರ್ಯಾಯ ವ್ಯವಸ್ಥೆಗಳನ್ನು ರೂಪಿಸಲಾಗಿದೆ.

Health Dept

ಸಿಟಿ ಮತ್ತು ಎಂಆರ್‌ಐ ಸೇವೆ ನೀಡುತ್ತಿದ್ದ Krsnaa Diagnostics Ltd ಸಂಸ್ಥೆ ಸರಿಯಾದ ದಾಖಲೆ ಹಾಗೂ ದೃಢೀಕರಣ ಪದ್ಧತಿಗಳನ್ನು ಪಾಲಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ನಮ್ಮ ಸರ್ಕಾರ ಸ್ಕ್ಯಾನಿಂಗ್ ಪ್ರಕ್ರಿಯೆಗೆ ವ್ಯವಸ್ಥಿತ ನಿಯಮಾವಳಿ ಮತ್ತು ಪರಿಶೀಲನಾ ಕ್ರಮಗಳನ್ನು 2024ರ ಆಗಸ್ಟ್ 30 ರಂದು ಜಾರಿಗೆ ತಂದಿತು.

ಇದರ ಪರಿಣಾಮವಾಗಿ 2024ರ ಏಪ್ರಿಲ್‌ನಿಂದ 2025ರ ಡಿಸೆಂಬರ್ ತನಕ ಅಗತ್ಯವಿರುವಷ್ಟೇ ಸಿಟಿ ಸ್ಕ್ಯಾನಿಂಗ್ ನಡೆಯಿತು. ಏಪ್ರಿಲ್‌ 2024 ರಿಂದ ಜುಲೈ 2024ರ ಅವಧಿಯಲ್ಲಿ ಒಟ್ಟು 98,311 ಸ್ಕ್ಯಾನಿಂಗ್ ನಡೆಸಲಾಗಿದೆ. ಅದಕ್ಕೆ 15.24 ಕೋಟಿ ರೂಪಾಯಿ ವೆಚ್ಚವಾಗಿತ್ತು. ಆಗಸ್ಟ್ 2024ರಿಂದ ನವೆಂಬರ್ 2024ರ ಅವಧಿಯಲ್ಲಿ ಈ ಪ್ರಮಾಣ 76,217ಕ್ಕೆ ಇಳಿದು 11.81 ಕೋಟಿ ರೂ. ವೆಚ್ಚವಾಯಿತು ಎಂದು ಸಚಿವರು ಲೆಕ್ಕ ನೀಡಿದ್ದಾರೆ.

ಸಾರ್ವಜನಿಕರ 200 ಕೋಟಿ ರೂ.ಉಳಿಕೆ

ಮುಂದೆ ಡಿಸೆಂಬರ್ 2024 ಮಾರ್ಚ್ ನಿಂದ 2025ರ ಅವಧಿಯಲ್ಲಿ ಗಣನೀಯ ಸ್ಕ್ಯಾನಿಂಗ್ ಮಾಡುವ ಪ್ರಮಾಣ ತಗ್ಗಿದೆ. ಆ ಅವಧಿಯಲ್ಲಿ 23,426 ಸ್ಕ್ಯಾನಿಂಗ್ ನಡೆದು ಕೇವಲ 3.36 ಕೋಟಿ ರೂಪಾಯಿ ವೆಚ್ಚವಾಯಿತು. ನಮ್ಮ ಪಾರದರ್ಶಕ ನಿಯಮಾವಳಿ ಸರ್ಕಾರಕ್ಕೆ ಆಗುತ್ತಿದ್ದ ಅನಗತ್ಯ ನಷ್ಟವನ್ನು ತಡೆಯಲಾಯಿತು. ಒಟ್ಟು ಸಿಟಿ ಸ್ಕ್ಯಾನಿಂಗ್ ಪ್ರಮಾಣದಲ್ಲಿ 76.18ರಷ್ಟು ಹಾಗೂ ಎಂಆರ್‌ಐನಲ್ಲಿ 64.32ರಷ್ಟು ಇಳಿಕೆ ಆಯಿತು. ಅನಗತ್ಯ ಸ್ಕ್ಯಾನಿಂಗ್‌ಗಳಿಗೆ ಕಡಿವಾಣ ಹಾಕುವ ಮೂಲಕ ಕಳೆದ ಒಂದೂವರೆ ವರ್ಷದಲ್ಲಿ ಸುಮಾರು 200 ಕೋಟಿ ರೂಪಾಯಿ ಸಾರ್ವಜನಿಕ ಹಣವನ್ನು ಉಳಿಸಲಾಗಿದೆ ಎಂದರು.

ಸಿಟಿ ಸ್ಕ್ಯಾನ್ ಯಂತ್ರ ಅಳವಡಿಕೆಗೆ ಟೆಂಡರ್

ಕೇಂದ್ರ ಸರ್ಕಾರದಿಂದ ಬರಬೇಕಾದ ರಾಷ್ಟ್ರೀಯ ಆರೋಗ್ಯ ಅಭಿಯಾನ (NHM) ಅನುದಾನ ವಿಳಂಬವಾದರೂ, ಆರೋಗ್ಯ ಸೇವೆಗಳಲ್ಲಿ ಯಾವುದೇ ರಾಜಿ ಮಾಡಿಕೊಳ್ಳಲಾಗಿಲ್ಲ. ಈಗಾಗಲೇ ಏಳು ಸರ್ಕಾರಿ ಆಸ್ಪತ್ರೆಗಳಲ್ಲಿ ಎಂಆರ್ಐ ಮತ್ತು ಮೂರು ಆಸ್ಪತ್ರೆಗಳಲ್ಲಿ ಸಿಟಿ ಸ್ಕ್ಯಾನ್ ಯಂತ್ರಗಳನ್ನು ಅಳವಡಿಸಲು ಟೆಂಡರ್ ಕರೆಯಲಾಗಿದೆ. ಶೀಘ್ರದಲ್ಲೇ ಇಲಾಖೆಯ ವತಿಯಿಂದ ಸುಧಾರಿತ ಯಂತ್ರಗಳನ್ನು ಪೂರೈಸಲಾಗುತ್ತದೆ ಎಂದು ಅವರು ಹೇಳಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+