Get Updates
Get notified of breaking news, exclusive insights, and must-see stories!

Bengaluru Tunnel Road: ಅವೈಜ್ಞಾನಿಕ ಟನಲ್ ರಸ್ತೆ ಯೋಜನೆಯಿಂದ ಸಾರಿಗೆ ವ್ಯವಸ್ಥೆ ನಾಶ: ತೇಜಸ್ವಿ ಸೂರ್ಯ

ಬೆಂಗಳೂರು, ಜೂನ್ 23: ಬ್ರ್ಯಾಂಡ್ ಬೆಂಗಳೂರು ಉಪಕ್ರಮದಡಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಮಹತ್ವಾಕಾಂಕ್ಷೆಯ 18 ಕಿ.ಮೀ. ಉದ್ದದ ಟನಲ್ ರಸ್ತೆ ಕಾಮಗಾರಿ ಯೋಜನೆಗೆ ಶೀಘ್ರವೇ ಟೆಂಡರ್ ಕರೆಯಲು ಪ್ಲಾನ್ ಮಾಡಿಕೊಳ್ಳಲಾಗಿದೆ. ಇತ್ತ ಯೋಜನೆ ವಿರುದ್ಧ ಆಕ್ಷೇಪಗಳು ಹೆಚ್ಚಾಗುತ್ತಿವೆ. ಸಾರ್ವಜನಿಕ ಸಮಸ್ಯೆ ಮತ್ತು ಸಾರ್ವಜನಿಕ ಸಾರಿಗೆ ನಿರ್ಲಕ್ಷಿಸುವತ್ತಿರುವ ಡಿ.ಕೆ ಶಿವಕುಮಾರ್ ಅವರಿಗೆ ಸಂಸದ ತೇಜಸ್ವಿ ಸೂರ್ಯ ಅವರು ಧನ್ಯವಾದ ತಿಳಿಸಿದ್ದಾರೆ.

ಬೆಂಗಳೂರು ಮೊದಲ ಅತಿ ಉದ್ದದ ಬೃಹತ್ ಟನಲ್ ರಸ್ತೆ ಯೋಜನೆಗೆ (ಹೆಬ್ಬಾಳ ಎಸ್ಟಿಮ್ ಮಾಲ್-ಸಿಲ್ಕ್ ಬೋರ್ಡ್) ಇತ್ತೀಚೆಗೆ ತಜ್ಞರೇ ಎಚ್ಚರಿಸಿದ್ದರು. ಅದರ ಬೆನ್ನಲ್ಲೆ ಸಂಸದ ತೇಜಸ್ವಿ ಸೂರ್ಯ ಅವರು ನಾಗರಿಕ ಸಮಸ್ಯೆಗಳನ್ನು ವಿವರಿಸಿದ್ದಾರೆ. ಯೋಜನೆ ಡಿಪಿಆರ್ ರಚನೆ ವೇಳೆಯಲ್ಲೂ ಅವರು ಯೋಜನೆಯನ್ನು ವಿರೋಧಿಸಿದ್ದರು. ಇದೀಗ ಸುರಂಗ ಮಾರ್ಗದ ಪ್ರಯೋಜನ ತಿಳಿಸಿದ ಡಿಕೆ ಶಿವಕುಮಾರ್ ವಿವರಣೆಯನ್ನು ಸಂಸದರು ಒಪ್ಪಿಲ್ಲ.

Govt is Destroying Public Transport system Through Unscientific Tunnel project MP Tejasvi Surya

ರಸ್ತೆ ಗುಂಡಿಗಳನ್ನು ಮುಚ್ಚದೇ ಸಮಸ್ಯೆ ಮುಂದುವರಿದಿದೆ. ಸಾರ್ವಜನಿಕ ಸಾರಿಗೆಗೆ ಹಣದ ಕೊರತೆ ಇದೆ. ನಮ್ಮ ಮೆಟ್ರೋ ಯೋಜನೆಗಳು ಸಕಾಲದಲ್ಲಿ ಮುಗಿಯದೇ ವಿಳಂಬವಾಗಿವೆ. ದರ ನಿಗದಿ ಸಮಿತಿ ವರದಿಗಳನ್ನು ತಡೆಹಿಡಿಯಲಾಗಿದೆ. ಅವೈಜ್ಞಾನಿಕ ಯೋಜನೆಯನ್ನು ಮುಂದುವರೆಸಲಾಗಿದೆ. ಇದೆಲ್ಲ ಪರಿಹರಿಸಬೇಕಾದ ಸರ್ಕಾರ ನಾಗರಿಕ ಸಮಸ್ಯೆಗಳನ್ನು ನಿರ್ಲಕ್ಷಿಸಿದೆ ಎಂದು ತೇಜಸ್ವಿ ಸೂರ್ಯ ಅವರು ಎಕ್ಸ್ ಪೋಸ್ಟ್ ಮೂಲಕ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಾಲ್ಕು ಚಕ್ರದ ವಾಹನಗಳಿಗೆ ₹600 ಟೋಲ್ ಸುಂಕ..

ರಾಜ್ಯ ಸರ್ಕಾರವು ಬೆಂಗಳೂರಿನಲ್ಲಿ ಸಾರ್ವಜನಿಕ ಸಾರಿಗೆಯನ್ನು ವ್ಯವಸ್ಥಿತವಾಗಿ ನಾಶಪಡಿಸುತ್ತಿದೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ. ಹೆಬ್ಬಾಳ-ಸಿಲ್ಕ್‌ಬೋರ್ಡ್ ಸುರಂಗ ಯೋಜನೆ ಸಂಪೂರ್ಣ ಸಮಸ್ಯೆಗಳಿಂದ ಕೂಡಿದೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಸುರಂಗ ರಸ್ತೆ ನಿರ್ಮಾಣವಾದರೆ, ಅದು ಕೇವಲ ನಾಲ್ಕು ಚಕ್ರದ ವಾಹನಗಳಿಗೆ ಮಾತ್ರ ಲಭ್ಯವಾಗುತ್ತದೆ. ಅಲ್ಲಿನ ಟೋಲ್ ಶುಲ್ಕ ಪ್ರತಿ ರಿಟರ್ನ್ ಟ್ರಿಪ್‌ಗೆ ₹600 ಟೋಲ್ ಸುಂಕ ವಿಧಿಸಲಾಗುತ್ತದೆ.

Govt is Destroying Public Transport system Through Unscientific Tunnel project MP Tejasvi Surya

ಸುರಂಗ ಯೋಜನೆಗೆ ಈ ಹಿಂದೆ ಬೇರೆ ಯೋಜನೆಗಳಡಿ ಸಲಹೆಗಾರರಾಗಿದ್ದು, ಕಪ್ಪುಪಟ್ಟಿಗೆ ಸೇರಿಸಲ್ಪಟ್ಟವರಿಂದ ಸಲಹೆ ಪಡೆದು ಸಮಗ್ರ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲಾಗಿದೆ. 9.5 ಕೋಟಿ ರೂ. ವೆಚ್ಚದ ಈ ಡಿಪಿಆರ್ ನಲ್ಲಿ ಬೇರೆ ಯೋಜನೆಗಳ ಡಿಪಿಆರ್ ಅಂಶಗಳನ್ನು ನಕಲಿ ಮಾಡಲಾಗಿದೆ ಎಂದು ಡಿಪಿಆರ್ ಸಮರ್ಪಕವಾಗಿಲ್ಲ ಎಂದು ದೂರಿದರು.

ಹೆಚ್ಚುವರಿ ₹7,200 ಕೋಟಿ ಹಣ..

ಸುರಂಗ ರಸ್ತೆ ಯೋಜನೆಯು ಬೆಂಗಳೂರಿನ ಸಾರಿಗೆ ಸಮಸ್ಯೆಗಳಿಗೆ ವೈಜ್ಞಾನಿ ಪರಿಹಾರವಲ್ಲ. ಇದು ಅವೈಜ್ಞಾನಿಕ. ತೆರಿಗೆದಾರರ ಹಣದಲ್ಲಿ ₹18,000 ಕೋಟಿ ಹಣ ಬಳಕೆಗೆ ಸರ್ಕಾರ ಮುಂದಾಗಿದೆ. ಶೇಕಡಾ ⁠40% ಕಾರ್ಯಸಾಧ್ಯತಾ ಅಂತರ ನಿಧಿ ಭರಿಸಲು ಮುಂದಾಗಿದೆ. ಅಂದರೆ ಕಾರ್ಯಸಾಧ್ಯವಲ್ಲದ ಯೋಜನೆಯ ಆದಾಯ ಮತ್ತು ವೆಚ್ಚದ ಮಧ್ಯದ ಅಂತರವನ್ನು ಸರಿದೂಗಿಸಲು ರಾಜ್ಯ ಸರ್ಕಾರವು ಹೆಚ್ಚುವರಿಯಾಗಿ ₹7,200 ಕೋಟಿಯನ್ನು ಭರಿಸಲಿದೆ ಎಂದು ತಿಳಿಸಿದರು. ಅಷ್ಟಲ್ಲದೇ ಹಾಲಿ ಸಾರ್ವಜನಿಕ ಸಾರಿಗೆ ಸಮಸ್ಯೆಗಳನ್ನು ನಿರ್ಲಕ್ಷಿಸಿ ಅವೈಜ್ಞಾನಿಕ ಯೋಜನೆ ಕೈಗೆತ್ತಿಕೊಂಡಿದ್ದಕ್ಕಾಗಿ ಡಿಕೆ ಶಿವಕುಮಾರ್ ಅವರಿಗೆ ಸಂಸದರು ಧನ್ಯವಾದ ತಿಳಿಸುವ ಮೂಲಕ ಡಿಸಿಎಂ ಅವರ ದೂರದೃಷ್ಟಿಗೆ ವ್ಯಂಗ್ಯವಾಡಿದರು.

ಯೋಜನೆಗೆ ತಜ್ಞರು ಸಹ ಕಳವಳ

ಇತ್ತೀಚೆಗೆ ತಜ್ಞರು ಈ ಸುರಂಗ ರಸ್ತೆ ಯೋಜನೆಗೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಯೋಜನೆಯಿಂದ ಸಾಕಷ್ಟು ಸಾರಿಗೆ ಸಮಸ್ಯೆ ಆಗಲಿವೆ. ಸಾಲು ಸಾಲು ಸಮಸ್ಯೆ ಉಂಟಾಗುತ್ತದೆ. ಅಂತಜರ್ಲಕ್ಕೆ, ಮೆಟ್ರೋ ಕಾರಿಡಾರ್‌ಗಳಿಗೆ, ಮಾರ್ಗಗಳಿಗೆ ತೊಂದರೆ ಆಗಲಿದೆ. ಒಂದು ವೇಳೆ ಸುರಂಗ ನಿರ್ಮಿಸಿದರೂ ಅದರಿಂದ ಸಂಚಾರ ಸಮಸ್ಯೆ ಉಂಟಾಗಲಿದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ವಿಪಕ್ಷಗಳು ಯೋಜನೆಗೆ ಆಕ್ಷೇಪ ವ್ಯಕ್ತಪಡಿಸಿವೆ. ಜನರ ತೆರಿಗೆ ಹಣ ದುಂದು ವೆಚ್ಚ ಮಾಡದಂತೆ ಆಗ್ರಹಿಸಿವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+