ಕನ್ನಡ ರಾಜ್ಯೋತ್ಸವ: 800ಕ್ಕೂ ಅಧಿಕ ಕಲಾವಿದರಿಂದ ಕನ್ನಡ ಭಾಷೆ, ಸಂಸ್ಕೃತಿ ಅನಾವರಣ

ಬೆಂಗಳೂರು, ನವೆಂಬರ್ 01: ಕರ್ನಾಟಕದಾದ್ಯಂತ ಒಂದು ಕಡೆ ದೀಪಾವಳಿ ಸಂಭ್ರಮವಾದರೆ ಮತ್ತೊಂದು ಕಡೆ ಕನ್ನಡ ಹಬ್ಬ, ಕರ್ನಾಟಕ ರಾಜ್ಯೋತ್ಸವ ಆಚರಣೆ ಜೋರಾಗಿತ್ತು. ಸರ್ಕಾರಿ ಕಚೇರಿ, ಆವರಣ, ಪ್ರಮುಖ ವೃತ್ತಗಳು, ಆಟೋ ಸ್ಟ್ಯಾಂಡ್ ಇನ್ನಿತರ ಸಾರ್ವಜನಿಕ ಸ್ಥಳಗಳಲ್ಲಿ ಕನ್ನಡ ಭಾವುಟಗಳು ರಾರಾಜಿಸಿದವು. ಈ ಹಬ್ಬಕ್ಕೆ ಮೆರುಗು ತರುವಂತೆ ಬೆಂಗಳೂರು ಚಾಮರಾಜಪೇಟೆಯಲ್ಲಿ ನಾಡಹಬ್ಬ ಕನ್ನಡ ರಾಜ್ಯೋತ್ಸವ ಸಮಿತಿಯಿಂದ 69ನೇ ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು.

ಸಾಮಾಜ ಸೇವಕರು, ಮಾಜಿ ಪಾಲಿಕೆ ಸದಸ್ಯರಾದ ಚಂದ್ರಶೇಖರ್ ಅಪ್ಪೋಡು ನೇತೃತ್ವದಲ್ಲಿ ಕನ್ನಡದ ಕಹಳೆ ಮೊಳಗಿತು. ಕೋಕಿಲಾ ಚಂದ್ರಶೇಖರ್ ಧ್ವಜಾರೋಹಣ ಮಾಡಿದರು. ಬೆಂಗಳೂರು ಕೇಂದ್ರ ಯುವ ಕಾಂಗ್ರೆಸ್ ಘಟಕದ ಪ್ರಧಾನ ಕಾರ್ಯದರ್ಶಿ ಸಿ. ರಾಜೀವ್ ನೇತೃತ್ವದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು.

Glorious Kannada Rajyotsava at Chamarajpet Parade by 800 artistes Kannada Sanskrit unveiling

ವಿಶೇಷವೆಂದರೆ ಇಲ್ಲಿ ನಾಗಮಂಗಲ ಮಹದೇವಪ್ಪನವರ ನೇತೃತ್ವದಲ್ಲಿ ವೀರಗಾಸೆ, ಪೂಜಾ ಕುಣಿತ, ಪಟದ ಕುಣಿತ, ಡೊಳ್ಳು ಕುಣಿತ, ದಕ್ಷಿಣ ಕನ್ನಡದ ಬಂಟ್ವಾಳದ ಚಿಲಿಪಿಲಿ ತಂಡ, ಹುಲಿವೇಷ ಹಾಗೂ ವಿವಿಧ ಜಾನಪದ ಪ್ರಕಾರಗಳ 800 ಮಂದಿ ಕಲಾವಿದರು ಚಾಮರಾಜಪೇಟೆಯಲ್ಲಿ ಕನ್ನಡ ಕಲೆ, ಸಂಸ್ಕೃತಿಯನ್ನು ಅನಾವರಣಗೊಳಿಸಿದರು.

ಕನ್ನಡ ಭಾಷೆ, ಸೊಗಡು, ಸಂಸ್ಕೃತಿ ಅನಾವರಣ

ನೆರೆದಿದ್ದ ಕನ್ನಡಿಗರು ಈ ಕಲಾ ತಂಡಗಳ ಮೆರವಣಿಗೆ ಕುಣಿತ ಕಣ್ತುಂಬಿಕೊಂಡರು. ಈ ಕಲಾವಿದರು ಮೆರವಣಿಗೆ ಮೂಲಕ ಕನ್ನಡ ಭಾಷೆ, ಸಂಸ್ಕೃತಿಯನ್ನು ಅನಾವರಣಗೊಳಿಸಿದರು. ಚಾಮರಾಜಪೇಟೆಯಲ್ಲಿ ಪಂಪ ಮಹಾಕವಿ ರಸ್ತೆ ಇದೆ. ಇಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಇದ್ದು, ಅಲ್ಲಿ ಸಹ ವಿಜೃಂಭಣೆಯಿಂದ ಕನ್ನಡ ದಿನವನ್ನು ಆಚರಿಸಲಾಯಿತು.

ಈ ಭಾಗದ ಸುತ್ತಮುತ್ತ ಕನ್ನಡ, ಸಾಹಿತ್ಯ ಕಂಪಿನ ಅನುಭವವಾಗುತ್ತದೆ. ಕನ್ನಡಕ್ಕಾಗಿ ಶ್ರಮಿಸಿದವರ ಸ್ಮರಣಾರ್ಥ ವಿವಿಧ ಕಾರ್ಯಕ್ರಮಗಳು, ಸಾಹಿತ್ಯ ಸಾಧಕರಿಗೆ ಸನ್ಮಾನ, ಪುಸ್ತಕ ಬಿಡುಗಡೆಯಂತಹ ಕನ್ನಡ ಭಾಷೆ, ನೆಲ ಕುರಿತು ಸಾಕಷ್ಟು ಚುವಟಿಕೆಗಳು ವರ್ಷಪೂರ್ತಿ ನಡೆಯುತ್ತಲೇ ಇರುತ್ತವೆ. ಇದೆಲ್ಲದರ ಸೊಬಗಿಗೆ, ಚಾಮರಾಜಪೇಟೆಯ ಇಂದಿನ ಕನ್ನಡದ ಹಬ್ಬ ಕಳಶವಿಟ್ಟಂತಿತ್ತು.

69 ಮಂದಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ

69 ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ವಿವಿಧ ರಂಗದಲ್ಲಿ ಸಾಧನೆ ಮಾಡಿದವರಿಗೆ ರಾಜ್ಯ ಸರ್ಕಾರ, ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆವತಿಯಿಂದ 69 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಮಾಡಿತು. ಕರ್ನಾಟಕ ಸುವರ್ಣ ಮಹೋತ್ಸವ ಪ್ರಯುಕ್ತ 50 ಮಂದಿ ಪುರಷ ಸಾಧಕರು, 50 ಮಂದಿ ಮಹಿಳಾ ಸಾಧಕಿಯರು ಸೇರಿದಂತೆ ಒಟ್ಟು 100 ಮಂದಿಗೆ ಈ ಸುವರ್ಣ ಮಹೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+