ಹೆಬ್ಬಾಳದಲ್ಲಿ ವಾಲಿದ 4 ಅಂತಸ್ತಿನ ಕಟ್ಟಡ: ಆತಂಕದಲ್ಲಿ ಜನ
ಬೆಂಗಳೂರು, ಫೆಬ್ರವರಿ 5: ನಗರದ ಹೆಬ್ಬಾಳದಲ್ಲಿ 4 ಅಂತಸ್ತಿನ ಕಟ್ಟಡವೊಂದು ವಾಲಿದ್ದು ಸ್ಥಳಕ್ಕ ಅಗ್ನಿಶಾಮಕ ಸಿಬ್ಬಂದಿಗಳು ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.
ಹೆಬ್ಬಾಳದ ಕೆಂಪಾಪುರ ಮುಖ್ಯರಸ್ತೆಯಲ್ಲಿ ಸಮ್ಸ್ ಶಾಲೆ ಬಳಿ ಇರುವ ಕಟ್ಟಡ ಇದಾಗಿದೆ. ನಾಲ್ಕು ಅಂತಸ್ಥಿನ ಕಟ್ಟಡ ವಾಲಿರುವ ಕಾರಣ ತಕ್ಷಣವೇ ಜನರನ್ನು ಹೊರಕ್ಕೆ ಕಳುಹಿಸಲಾಗಿದೆ.

ಕಟ್ಟಡ ವಾಲುವುದಕ್ಕೆ ಕಳಪೆ ಕಾಮಗಾರಿಯೇ ಕಾರಣ ಎನ್ನಲಾಗುತ್ತಿದ್ದು, ಇನ್ನೇನು ಸತ್ಯ ಹೊರಬರಬೇಕಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಆ ಕಟ್ಟಡದಲ್ಲಿ ಪಿಜಿ ನಡೆಸುತ್ತದ್ದರು, ಪಾಯ ತೆಗೆದಿದ್ದರಿಂದ ಈ ಅನಾಹುತ ಸಂಭವಿಸಿದೆ ಎನ್ನಲಾಗುತ್ತಿದೆ.












Click it and Unblock the Notifications