Bengaluru Rain: ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್ ಮೇಲೆ ತಮ್ಮ ಕಾರು ಬಿಟ್ಟು ಮನೆಗೆ ತೆರಳಿದ ಜನ- ವಿಡಿಯೊ ನೋಡಿ
ಬೆಂಗಳೂರು ಅಂದ್ರೆ 20 ರಿಂದ 25 ವರ್ಷಗಳ ಹಿಂದೆ ಸ್ವರ್ಗದಂತೆ ಕಾಣ್ತಾ ಇತ್ತು. ಆದರೆ ಯಾವಾಗ ಈ ನಮ್ಮ ಸ್ವರ್ಗ ಬೆಂಗಳೂರು ನಗರಕ್ಕೆ ಬೇರೆ ಬೇರೆ ರಾಜ್ಯಗಳಿಂದ ಜನರು ಬಂದರೋ, ಅಲ್ಲಿಂದ ಸಮಸ್ಯೆ ಜೋರಾಗಿ ನರಳಾಟ ಶುರುವಾಯಿತು ಎಂಬ ಆರೋಪ ಇದೆ. ಈ ಆರೋಪಕ್ಕೆ ಪುಷ್ಠಿ ನೀಡುವಂತೆಯೇ ನಮ್ಮ ಮೆಚ್ಚಿನ ಬೆಂಗಳೂರಿನಲ್ಲಿ ಟ್ರಾಫಿಕ್ ಕಾಟ ಸಿಕ್ಕಾಪಟ್ಟೆ ಜೋರಾಗಿದ್ದು, ಬೆಂಗಳೂರಿಗರು ಹೀಗೆ ಟ್ರಾಫಿಕ್ ಬಲೆಯಲ್ಲಿ ಸಿಲುಕಿ ನರಳುವಂತೆ ಆಗಿದೆ. ಅದರಲ್ಲೂ ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಮೇಲೆ ಇದೆಯಂತೆ ನಿಜವಾದ ನರಕ!
ಮಳೆ, ಮಳೆ, ಮಳೆ... ಬೆಂಗಳೂರು ಸೇರಿದಂತೆ ಕರ್ನಾಟಕದ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಮಳೆರಾಯನ ಅಬ್ಬರ ಮಿತಿ ಮೀರಿ ಹೋಗಿದೆ. ಅದರಲ್ಲೂ ಕನ್ನಡಿಗರ ರಾಜಧಾನಿ ಬೆಂಗಳೂರು ನಗರದಲ್ಲಿ ನಿನ್ನೆ ಇಡೀ ದಿನ ಮಳೆ ಸುರಿದು ಜನ ಬೆಚ್ಚಿಬಿದ್ದಿದ್ದಾರೆ. ಜೊತೆಗೆ ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆಯು ಮಿತಿಮೀರಿ ಹೋಗಿದ್ದು ಜನ ಪರದಾಡುತ್ತಿದ್ದಾರೆ. ಈ ರೀತಿ ನಿನ್ನೆ ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಮೇಲೆ ಏನಾಯ್ತು ಗೊತ್ತಾ? ಬನ್ನಿ ತಿಳಿಯೋಣ.

ಟ್ರಾಫಿಕ್ ನರಕದಲ್ಲಿ ತೀವ್ರ ನರಳಾಟ
ಎಲ್ಲಿ ನೋಡಿದ್ರೂ ಬರೀ ಮಳೆ ರಗಳೆ ಶುರುವಾಗಿದೆ. ಬಂಗಾಳ ಕೊಲ್ಲಿಯಲ್ಲಿ ಸೈಕ್ಲೋನ್ ಸೃಷ್ಟಿಯಾಗಿದ್ದು ಪರಿಸ್ಥಿತಿ ಕೈಮೀರಿ ಹೋಗುತ್ತಿದೆ. ಹೀಗಾಗಿ ತೀವ್ರವಾಗಿ ಸುರಿಯುತ್ತಿದೆ ಮಳೆ ಎಂಬ ವಿವರಣೆ ಸಿಕ್ಕಿದೆ. ಕಳೆದ 15 ದಿನಗಳಿಂದ ಬೆಂಗಳೂರು ಭಾರಿ ಮಳೆಗೆ ತೊಯ್ದು ಹೋಗಿದೆ. ಹೀಗಿದ್ದಾಗ, ನಿನ್ನೆ ಕೂಡ ಇದೇ ರೀತಿ ಭಾರಿ ಮಳೆ ಸುರಿದಿತ್ತು. ಅಲ್ಲದೆ ಬೆಂಗಳೂರಿನ ಹೊಸೂರು ರಸ್ತೆಯಲ್ಲಿ ಮಳೆಯನ ಅಬ್ಬರ ಜೋರಾಗಿದ್ದ ಹಿನ್ನೆಲೆ ಸಾಕಷ್ಟು ಪ್ರದೇಶದಲ್ಲಿ ನೀರು ತುಂಬಿ ಹೋಗಿತ್ತು. ಅದೇ ರೀತಿ ಎಲೆಕ್ಟ್ರಾನಿಕ್ ಸಿಟಿ ಭಾಗದಲ್ಲಿ ಕೂಡ ಮಳೆ ಅಬ್ಬರ ಜೋರಾಗಿ ನೀರು ತುಂಬಿ ಹೋಗಿತ್ತು.
Completely Jammed from past 1.5 hrs in the #electroniccity flyover. I must have reached my home now which is 30kms away. Logged out at 5:20 and we are still stuck! We can see most of the employees of various companies frustrated and starting to walk. @madivalatrfps pic.twitter.com/wqvXuIArN6
— KpopStan🤍 (@PratikfamHouse) October 23, 2024
ನೀರು ತುಂಬಿಹೋದ ಕಾರಣ ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಮೇಲೆ ಕೂಡ ದೊಡ್ಡ ಪ್ರಮಾಣದಲ್ಲೇ ಟ್ರಾಫಿಕ್ ಜಾಮ್ ಉಂಟಾಗಿತ್ತು. ಕಿಲೋ ಮೀಟರ್ ಉದ್ದಕ್ಕೂ ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಮೇಲೆ ಟ್ರಾಫಿಕ್ ಉಂಟಾಗಿತ್ತು. ಸುಮಾರು 5 ಗಂಟೆಗಳ ಕಾಲ ಇದೇ ರೀತಿ ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್‌ನ ಮೇಲೆ ಟ್ರಾಫಿಕ್ ಉಂಟಾಗಿತ್ತು. ಕೊನೆಗೆ ಕಾದು ಕಾದು ಜನರು ಏನು ಮಾಡಿದ್ರು ಅಂದ್ರೆ ಫ್ಲೈಓವರ್ ಮೇಲಿಂದ ಕಾರು & ವಾಹನಗಳಿಂದ ಇಳಿದು ನಡೆದುಕೊಂಡು ಹೋದರು. ಹಾಗೇ ಆಕ್ರೋಶ ಹೊರ ಹಾಕಿದ್ದಾರೆ. ಈ ವಿಡಿಯೋಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
The entire 10 km Electronic City is jammed with people on it stranded from more than 2 hrs during the heavy rains , Silk Board is flooded , buses stopped tress have fallen , I pray for those on the flyover to reach home today , pic.twitter.com/ZDMxEsPLba
— Samzy (@samay_bv) October 23, 2024
ಮಳೆ ಆರ್ಭಟ ಕಡಿಮೆ ಆಗಲ್ಲ!
ಮಳೆರಾಯ ಇಲ್ಲಿಗೆ ಸೈಲೆಂಟ್ ಆಗುವ ಮುನ್ಸೂಚನೆ ಇಲ್ಲ. ಯಾಕಂದ್ರೆ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಭಾರಿ ಮಳೆ ಆಗುವ ಎಚ್ಚರಿಕೆಯನ್ನ ನೀಡಲಾಗಿದೆ. ಚಿಕ್ಕಬಳ್ಳಾಪುರ, ಚಿತ್ರದುರ್ಗ, ಹಾಸನ, ಕೋಲಾರ, ಶಿವಮೊಗ್ಗ & ಬಳ್ಳಾರಿ, ತುಮಕೂರು ಜಿಲ್ಲೆಗಳಲ್ಲಿ ಭಾರಿ ಮಳೆ ಬೀಳುವ ಎಚ್ಚರಿಕೆ ನೀಡಲಾಗಿದೆ. ದಾವಣಗೆರೆ, ಬಳ್ಳಾರಿ ಜಿಲ್ಲೆಗಳಲ್ಲೂ ಮಳೆಯು ಗ್ಯಾರಂಟಿ. ಇನ್ನು ಬೆಂಗಳೂರಿನ ದಕ್ಷಿಣ ವಲಯ, ಬೊಮ್ಮನಹಳ್ಳಿ ವಲಯ, ಮಹದೇವಪುರ, ಆರ್.ಆರ್. ನಗರ, ದಾಸರಹಳ್ಳಿ, ಉತ್ತರ ವಲಯ ಭಾಗದಲ್ಲಿ ಭಾರಿ ಮಳೆ ಬೀಳಲಿದೆ ಎಂಬ ಮುನ್ಸೂಚನೆ ಇದ್ದು, ಹೀಗಾಗಿ ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗಿದೆ.
-
ನೌಕರಿ ಬಿಟ್ಟು ಸ್ವಂತ ಉದ್ಯಮ: ಹುಣಸೆ ಸಿಹಿತಿಂಡಿಗೆ ಪೇಟೆಂಟ್ ಪಡೆದ ಬೈಲಹೊಂಗಲದ ಟೆಕ್ಕಿ; 17 ದೇಶಗಳಿಗೆ ರಫ್ತು -
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Karnataka Weather: ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಅಕಾಲಿಕ ಮಳೆ, ಬೆಂಗಳೂರಿನಲ್ಲಿ ಹೇಗಿರಲಿದೆ ವಾತಾವರಣ? -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು












Click it and Unblock the Notifications