ಮಹಿಳಾ ಆಯೋಗದಿಂದ ನಟ ದುನಿಯಾ ವಿಜಯ್ಗೆ ನೋಟಿಸ್
Recommended Video

ಮಹಿಳಾ ಆಯೋಗದಿಂದ ನಟ ದುನಿಯಾ ವಿಜಯ್ಗೆ ನೋಟಿಸ್ | FILMIBEAT KANNADA
ಬೆಂಗಳೂರು, ಡಿಸೆಂಬರ್ 07: ನಟ ದುನಿಯಾ ವಿಜಯ್ ಅವರಿಗೆ ಮತ್ತೆ ಕಂಟಕ ಶುರುವಾಗಿದೆ. ಕೌಟುಂಬಿಕ ಕಲಹದ ಹಿನ್ನೆಲೆ ರಾಜ್ಯ ಮಹಿಳಾ ಆಯೋಗದಿಂದ ವಿಜಯ್ಗೆ ನೋಟಿಸ್ ಜಾರಿಯಾಗಿದೆ.
ವಿಜಯ್ ಅವರ ಪತ್ನಿ ನಾಗರತ್ನಾ ಅವರು ಕಳೆದ ವಾರದಲ್ಲಿ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಬಾಯಿ ಅವರನ್ನು ಭೇಟಿ ಮಾಡಿ ತಮ್ಮ ನೋವು ತೋಡಿಕೊಂಡಿದ್ದರು. ತಮ್ಮ ಪತಿಯಿಂದ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಆದರೆ, ನಾನು ಅದಕ್ಕೆ ಒಪ್ಪಿಗೆ ನೀಡಿಲ್ಲ, ನನ್ನ ಕುಟುಂಬ ನಿರ್ವಹಣೆಗೆ ವಿಜಯ್ ಅವರಿಂದ ಸಿಗುತ್ತಿದ್ದ ಹಣ ಈಗ ನಿಂತಿದೆ. ನಾವಿರುವ ಮನೆ ಬಗ್ಗೆ ಕೂಡಾ ಸರಿಯಾದ ಖಾತ್ರಿಯಿಲ್ಲ. ನಾನು ನನ್ನ ಮಕ್ಕಳು ಕಣ್ಣೀರಿನಲ್ಲಿ ಕೈತೊಳಿಯುತ್ತಿದ್ದೇವೆ, ನಮಗೆ ಸೂಕ್ತ ನ್ಯಾಯ ಒದಗಿಸುವಂತೆ ಮನವಿ ಮಾಡಿಕೊಂಡಿದ್ದರು.
ನಾಗರತ್ನಾಳ ಮನವಿಯಂತೆ ಮಹಿಳಾ ಆಯೋಗವು ವಿಜಯ್ ನೋಟಿಸ್ ನೀಡಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ವಿಜಯ್ ಅವರು ಸದ್ಯದಲ್ಲೇ ಮಹಿಳಾ ಆಯೋಗದ ಕಚೇರಿ ಭೇಟಿ ನೀಡಿ ಉತ್ತರ ನೀಡುತ್ತೇನೆ, ಯಾರಿಗೂ ಅನ್ಯಾಯ ಮಾಡುವುದು ನನ್ನ ಉದ್ದೇಶವಲ್ಲ ಎಂದಿದ್ದಾರೆ.












Click it and Unblock the Notifications