ನಟ ದರ್ಶನ್ ನಿಜವಾಗ್ಲೂ ಬದಲಾಗಿದ್ದಾರಾ? 2011ರ ಘಟನೆ ನೆನಪಿಸಿಕೊಂಡು ಜೈಲಧಿಕಾರಿ ಹೇಳಿದ್ದೇನು ಗೊತ್ತಾ?
Actor Darshan: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ & ಗ್ಯಾಂಗ್ ಜೈಲು ಸೇರಿದ್ದಾರೆ. ಇನ್ನು ಇದುವರೆಗೂ ದರ್ಶನ್‌ನನ್ನು ಭೇಟಿಯಾದವರೆಲ್ಲ ಅವರು ಬದಲಾಗಿದ್ದಾರೆ. ತುಂಬಾ ಪಶ್ಚತಾಪ ಪಡಡುತ್ತಿದ್ದಾರೆ ಎಂದು ಹೇಳಿದ್ದಾರೆ. ಆದರೆ ಅದೇ ಜೈಲಿನ ನಿವೃತ್ತ ಜೈಲಾಧಿಕಾರಿಯೊಬ್ಬರು ಇದರ ವಿರುದ್ಧವಾದ ಹೇಳಿಕೆಯನ್ನು ನೀಡಿದ್ದಾರೆ. ಅವರು ಯಾಕೆ ಹೀಗೆ ಹೇಳಿದರು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್‌ನನ್ನು ಹೊರತರಲು ಅವರ ಪತ್ನಿ ವಿಜಯಲಕ್ಷ್ಮಿ ಹಾಗೂ ಕುಟುಂಬಸ್ಥರು ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಮತ್ತೊಂದೆಡೆ ಪೊಲೀಸ್ ಅಧಿಕಾರಿಗಳು ವಿಚಾರಣೆಯನ್ನು ತೀವ್ರಗೊಳಿಸಿದ್ದು, ಈ ಮೂಲಕ ಮಹತ್ವದ ಸಾಕ್ಷ್ಯಗಳನ್ನು ಸಂಗ್ರಹ ಮಾಡಲು ಮುಂದಾಗಿದ್ದಾರೆ. ಈಗಾಗಲೇ ದರ್ಶನ್ ಅವರನ್ನು ಪತ್ನಿ ವಿಜಯಲಕ್ಷ್ಮಿ ಐದು ಬಾರಿ ಭೇಟಿಯಾಗಿದ್ದಾರೆ.

ಇನ್ನು ಇದುವರೆಗೂ ದರ್ಶನ್‌ನನ್ನು ಭೇಟಿ ಮಾಡಿದವರೆಲ್ಲ ಅವರು ತುಂಬಾ ಪಶ್ಚತಾಪ ಪಡುತ್ತಿದ್ದಾರೆ. ಈ ಘಟನೆ ನಡೆದಿರುವ ಬಗ್ಗೆ ಅವರಿಗೆ ಬೇಸರವಿದೆ ಅಂತೆಲ್ಲ ಹೇಳುತ್ತಿದ್ದಾರೆ. ಆದರೆ ದರ್ಶನ್ ಅನ್ನು ಈ ಹಿಂದೆ ಅದೇ ಜೈಲಿನಲ್ಲಿ ನೋಡಿದ್ದ ಅಧಿಕಾರಿಯೊಬ್ಬರು ಇದರ ವಿರುದ್ಧವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಯಾಕೆಂದರೆ ಅವರು ಈ ಹಿಂದೆಯೂ ದರ್ಶನ್ ಬಂಧನವಾಗಿ ಇದೇ ಜೈಲು ಸೇರಿದಾಗ ಅವರ ವರ್ತನೆಗಳನ್ನು ಹತ್ತಿರದಿಂದ ಗಮನಿಸಿದವರಾಗಿದ್ದಾರೆ.
"ಈ ಹಿಂದೆಯೂ ಸಹ ದರ್ಶನ್ ತಪ್ಪು ಮಾಡಿ ಜೈಲು ಸೇರಿದ್ದರು, ಆಗ ಪಶ್ಚಾತ್ತಾಪ ಪಡುತ್ತಿರುವುದಾಗಿಯೂ ಹೇಳಿದ್ದರು. ಆದರೆ ಅವರ ವರ್ತನೆಯಲ್ಲಿ, ವ್ಯಕ್ತಿತ್ವದಲ್ಲಿ ಯಾವ ಬದಲಾವಣೆಯೂ ಆಗಿಲ್ಲ," ಎಂದಿದ್ದಾರೆ.
ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿರುವುದು ಇದು ಎರಡನೇ ಬಾರಿಯಾಗಿದ್ದು, 2011ರಲ್ಲಿ ಪತ್ನಿ ವಿಜಯಲಕ್ಷ್ಮಿ ಮೇಲೆ ಹಲ್ಲೆ ನಡೆಸಿ ಜೈಲು ಇದೇ ಜೈಲುವಾಸದಲ್ಲಿದ್ದರು. ಆಗ ಸುಮಾರು ಒಂದು ತಿಂಗಳುಗಳ ಕಾಲ ದರ್ಶನ್ ಪರಪ್ಪನ ಅಗ್ರಹಾರದಲ್ಲುದ್ದರು. ಆಗ ಜೈಲಧಿಕಾರಿಯಾಗಿದ್ದ ಸತೀಶ್ ಅವರ ಬಳಿ ಮಾತನಾಡಿದ್ದ ದರ್ಶನ್, ಆಗ ಹೆಂಡತಿ ಬಳಿ ಕ್ಷಮೆ ಕೇಳುತ್ತೇನೆ, ಮತ್ತೆ ಯಾವಾಗಲೂ ಇಂತಹ ತಪ್ಪು ಮಾಡುವುದಿಲ್ಲ ಎಂದಿದ್ದರಂತೆ. ಆದರೆ ದರ್ಶನ್ ವರ್ತನೆಯಲ್ಲಿ ಯಾವ ಬದಲಾವಣೆಯೂ ಆಗಿಲ್ಲವೆಂದು ನಿವೃತ್ತ ಜೈಲಧಿಕಾರಿ ಸತೀಶ್ ಹೇಳಿದ್ದಾರೆ.
ದರ್ಶನ್ ಮನೆಯೂಟ ಬೇಕೆಂದು ಬೇಡಿಕೆ ಇಟ್ಟಿರುವ ಬಗ್ಗೆ ಮಾತನಾಡಿರುವ ನಿವೃತ್ತ ಅಧಿಕಾರಿ ಸತೀಶ್, "ಅವರಿಗೆ ಆ ಸೌಲಭ್ಯವನ್ನು ಕೊಡದೇ ಇರುವುದು ಒಳಿತು, ಆ ಸೌಲಭ್ಯ ಸಿಗುವುದಿಲ್ಲ ಎಂದೇ ನಾನು ಭಾವಿಸಿದ್ದೇನೆ. ಒಂದು ವೇಳೆ ದರ್ಶನ್ಗೆ ಆಹಾರ ಕೊಟ್ಟರೆ, ಜೈಲಿನಲ್ಲಿರುವ ಎಲ್ಲರೂ ಮನೆ ಊಟವನ್ನೇ ಕೇಳುತ್ತಾರೆ," ಎಂದಿದ್ದಾರೆ. ಇನ್ನು "ತಪ್ಪು ಮಾಡಿದರೆ, ಶಿಕ್ಷೆ ಅನುಭವಿಸಲೇಬೇಕು," ಅಂತಲೂ ಹೇಳಿದ್ದಾರೆ.












Click it and Unblock the Notifications