ಭಕ್ತರ ಸಂಕಷ್ಟ ಪರಿಹರಿಸುವ ಬೆಂಗಳೂರಿನ ಪ್ರಸಿದ್ಧ ನರಸಿಂಹ ದೇವಸ್ಥಾನ
ಬೆಂಗಳೂರು: ಭಕ್ತಿ ಪರಂಪರೆ ಮತ್ತು ಇತಿಹಾಸವುಳ್ಳ ಈ ದೇವಾಲಯದ ದರ್ಶನ ಭಕ್ತರಿಗೆ ವಿಶಿಷ್ಟ ಅನುಭವ ನೀಡುತ್ತದೆ. ಬೆಂಗಳೂರಿನಲ್ಲಿ ಅನೇಕ ಪುರಾತನ ದೇವಾಲಯಗಳಿದ್ದು ಅವುಗಳಲ್ಲಿ ಮಹಿಮೆಯುಳ್ಳ ಶಕ್ತಿ ಕೇಂದ್ರವಾಗಿ ಪ್ರಸಿದ್ಧಿ ಪಡೆದಿರುವ ಶ್ರೀ ಅಭಯ ಲಷ್ಮಿ ನರಸಿಂಹ ದೇವಸ್ಥಾನ. ಈ ಕೇತ್ರವನ್ನು ಪಟ್ಟಾಭಿರಾಮ ಕ್ಷೇತ್ರ ಮತ್ತು ವಜ್ರಕ್ಷೇತ್ರ ಎಂಬ ಹೆಸರುಗಳಿಂದ ಕರೆಯಲಾಗುತ್ತದೆ.
ದೇವಾಲಯದ ಇತಿಹಾಸ
ಈ ದೇವಸ್ಥಾನವು ಸುಮಾರು 180 ರಿಂದ 250 ವರ್ಷಗಳ ಪುರತನವಾಗಿದ್ದು ಎಂದು ಹೇಳಲಾಗುತ್ತಿದೆ. ಕ್ಷೇತ್ರದ ಪ್ರಧಾನ ಅರ್ಚಕರಾದ ಎಸ್.ಆರ್.ವಾದಿರಾಜ್ ಆಚಾರ್ಯ ಅವರ ಹೇಳುವ ಪ್ರಕಾರ ಇಲ್ಲಿನ ವಿಗ್ರಹಗಳು ಮತ್ತು ದೇವಸ್ಥಾನದ ಶಕ್ತಿ ಹಲವು ತಲೆಮಾರುಗಳಿಂದ ಭಕ್ತರನ್ನು ಕಾಪಾಡುತ್ತಾ ಬಂದಿದೆ. ದೇವಸ್ಥಾನಕ್ಕೆ ಕಾಲಿಟ್ಟ ಕೊಡಲೇ ಭಕ್ತರಿಗೆ ಒಂದು ರೀತಿಯ ಸಕಾರಾತ್ಮಕ ಅನುಭವವಾಗುತ್ತದೆ ಎಂಬುದು ಭಕ್ತರ ನಂಬಿಕೆ.

ಪ್ರಮುಖ ಸನ್ನಿಧಾನಗಳು:
ಪುರಾತನ ಗಣಪತಿ, ಅರಳಿಮರದ ಉದ್ಭವ ಗಣಪತಿ, ಅಶ್ವತ್ಥ ಕುಬೇರ ನರಸಿಂಹ, ಅಭಯ ಲಕ್ಷೀ ನರಸಿಂಹ, ಪಟ್ಟಾಭಿರಾಮ ಸನ್ನಿಧಿ.
ನರಸಿಂಹ ಸ್ತಂಭದ ಮಹಿಮೆ
ಈ ಕ್ಷೇತ್ರದ ಪ್ರಮುಖ ಆಕರ್ಷಣೆ ಎಂದರೆ ನರಸಿಂಹ ಸ್ತಂಭವಾಗಿದೆ, ಭಕ್ತರು ಈ ಕಂಬದ ಬಳಿ ನಿಂತು ಪ್ರಾರ್ಥನೆ ಸಲ್ಲಿಸಿದರೆ ದೃಷ್ಟಿದೋಷ, ಆರೋಗ್ಯ ಸಮಸ್ಯ, ದಾಟು, ಹಾಗು ಆಹಾರದಿಂದ ಉಂಟಾಗುವ ದೋಷಗಳು ಕೂಡ ನಿವಾರಣೆಯಾತ್ತದೆ ಎಂದು ನಂಬಿಕೆಯಿದೆ. ದೇವಾಲಯದಲ್ಲಿ ಸುಮಾರು 12 ಸಾಲಿಗ್ರಾಮಗಳು ಹಾಗೂ ಆಯುರ್ವೇದ ಮೂಲಿಕೆಗಳನ್ನು ಸ್ಥಾಪಿಸಲಾಗಿದೆ ಇವು ಭಕ್ತರಿಗೆ ಆಧ್ಯಾತ್ಮಿಕ ಶಕ್ತಿಯನ್ನು ನೀಡುತ್ತವೆ ಎಂಬ ಇತಿಹಾಸವಿದೆ.
ವಿಶೇಷ ಪೊಜೆಗಳು ಮತ್ತು ಉತ್ಸವಗಳು
ಪ್ರತಿ ಮಂಗಳವಾರದಂದು ರಾಹುಕಾಲದ ಸಮಯದಲ್ಲಿ ವಿಶೇಷ ಪೊಜೆಯನ್ನು (3:00 ರಿಂದ 4:30) ಹಾಗೂ ಮನ್ಯು ಸೂಕ್ತ ಹೋಮ ನಡೆಯುತ್ತದೆ ಇದು ಕುಜದೋಷ ಮತ್ತು ರಾಹುದೋಷ ನಿವಾರಣೆಗೆ ಅನುಕೂಲಕರ ಎಂದು ನಂಬಲಾಗಿದೆ.
ಸ್ವಾತಿ ನಕ್ಷತ್ರ ಅಭಿಷೇಕ
ಪ್ರತಿ ತಿಂಗಳು ಸ್ವಾತಿ ನಕ್ಷತ್ರದಂದು ನರಸಿಂಹ ದೇವರಿಗೆ 108 ಲೀಟರ್ ಹಾಲಿನ ಅಭಿಷೇಕ ನಡೆಯುತ್ತದೆ. ಪ್ರಮುಖ ಹಬ್ಬಗಳಾದ ರಾಮನವಮಿ ರಥೋತ್ಸವ, ನರಸಿಂಹ ಜಯಂತಿ, ನವರಾತ್ರಿ ಉತ್ಸವ, ರಾಘವೇಂದ್ರ ಸ್ವಾಮಿಗಳ ಆರಾಧನೆ, ಈ ಎಲ್ಲ ಹಬ್ಬಗಳನ್ನು ಇಲ್ಲಿ ಭಕ್ತಿಭಾವದಿಂದ ಆಚರಿಸಲಾಗುತ್ತದೆ.
ವಿಳಾಸ:ಶ್ರೀ ಅಭಯ ಲಕ್ಷ್ಮಿ ನರಸಿಂಹ ದೇವಸ್ಥಾನ, ಬೆಂಗಳೂರು.
ಸೂಚನೆ: ಈ ಲೇಖನವು ಧಾರ್ಮಿಕ ಮಾಹಿತಿಯನ್ನು ಆಧರಿಸಿದೆ.












Click it and Unblock the Notifications