Get Updates
Get notified of breaking news, exclusive insights, and must-see stories!

ಪರಿಶಿಷ್ಠರ 11,000 ಕೋಟಿ ಗ್ಯಾರೆಂಟಿ ಯೋಜನೆಗಳಿಗೆ ವರ್ಗಾವಣೆ: ಸಿಪಿಐ(ಎಂ) ಖಂಡನೆ

ಬೆಂಗಳೂರು, ಆಗಸ್ಟ್. 04: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಪರಿಶಿಷ್ಟ ಜಾತಿ ಉಪ ಯೋಜನೆ (ಎಸ್‌ಸಿಎಸ್‌ಪಿ) ಮತ್ತು ಬುಡಕಟ್ಟು ಉಪ ಯೋಜನೆ (ಟಿಎಸ್‌ಪಿ) ಗಾಗಿ ಮೀಸಲಿಟ್ಟ 11,000 ಕೋಟಿ ರೂ.ಗಳನ್ನು ಗ್ಯಾರೆಂಟಿ ಯೋಜನೆಗಳಿಗೆ ಬಳಸುವುದನ್ನು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಖಂಡಿಸಿದೆ. ಈ ಬಗ್ಗೆ ಮಾಧ್ಯ ಪ್ರಕಟಣೆ ಹೊರಡಿಸಿದೆ.

ಈಚೆಗೆ ರಾಜ್ಯ ಸರಕಾರ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಠ ಪಂಗಡಗಳ ವಿಶೇಷ ಘಟಕ ಕಾಯ್ದೆಗೆ ತಿದ್ದುಪಡಿ ಮಾಡಿ, ಇವರಿಗೆ ಮೀಸಲಿದ್ದ ಅನುದಾನ ಸೋರಿಕೆಯಾಗಿ ಬೇರೆ ಕಾರ್ಯಕ್ರಮಗಳಿಗೆ ಉಪಯೋಗ ಮಾಡುತ್ತಿದ್ದ ವಂಚನೆಯ ಕ್ರಮವನ್ನು ಸರಿಪಡಿಸಿತು. ಅದಕ್ಕಾಗಿ, ಸದರಿ ಕಾಯ್ದೆಯ ಅಂತಹ 7 (d) ಅಂಶವನ್ನು ವಾಪಾಸು ಪಡೆಯಿತು. ಪರಿಶಿಷ್ಠರಿಗೆ ಮೀಸಲಿಡಲಾಗಿದ್ದ ಅನುದಾನವನ್ನು ಬಳಸದಂತೆ ತಡೆಯುವ ಈ ನಡೆ ಸ್ವಾಗತಾರ್ಹವಾಗಿತ್ತು ಎಂದಿದೆ.

CPI(M) condemns diverting Rs 11,000 crore sc-st fund to guarantee schemes

ಆದರೆ, ಆ ರೀತಿಯಲ್ಲಿ ಸೋರಿಕೆ ತಡೆಯಲು ಕಾಯ್ದೆಗೆ ತಿದ್ದುಪಡಿ ಮಾಡಿದ ಒಂದೆರೆಡು ದಿನಗಳಲ್ಲಿ 2023-24 ನೆ ವರ್ಷಕ್ಕೆ ನಿಗದಿಸಲಾಗಿದ್ದ ಪರಿಶಿಷ್ಠ ಜಾತಿ ಹಾಗೂ ಪಂಗಡಗಳ 34,000 ಕೋಟಿ ರೂ.ಗಳ ಅನುದಾನದಲ್ಲಿ 11,000 ಕೋಟಿ ರೂ.ಗಳನ್ನು ಬೇರೆ ಯೋಜನೆಗಳಿಗೆ ವರ್ಗಾಯಿಸಿರುವ ಸರಕಾರದ ನಡೆ ಅಕ್ಷಮ್ಯವಾಗಿದೆ. ಈ ತಕ್ಷಣವೇ ಸದರಿ ಮೊತ್ತವನ್ನು ವಾಪಾಸು ನೀಡಬೇಕು ಎಂದು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದೆ.

ಸಾಮಾಜಿಕ ತಾರತಮ್ಯದ ಹಿನ್ನೆಲೆಯಲ್ಲಿ ಪರಿಶಿಷ್ಠರ ಅಭಿವೃದ್ದಿಗಾಗಿ ಜನತೆಯ ಬಲವಾದ ಒತ್ತಡದ ಹಿನ್ನೆಲೆಯಲ್ಲಿ, ಈ ಪರಿಶಿಷ್ಟರ ಉಪಯೋಜನೆಯ ಕಾಯ್ದೆಯನ್ನು ಈ ಹಿಂದೆ, ಇದೇ ಸಿದ್ದರಾಮಯ್ಯರವರ ನೇತೃತ್ವದ ಸರಕಾರ ರೂಪಿಸಿತ್ತು. ಆದರೇ ಅದರಲ್ಲಿ 7(d) ಯಂತಹ ಕಾಯ್ದೆಯನ್ನಿಟ್ಟುಕೊಂಡು ಅವರ ಹಣವನ್ನು ದುರ್ಬಳಕೆ ಮಾಡಲು ಅನುವಾಗುವ ಅಂಶವನ್ನು ಅದು ಒಳಗೊಳಿಸಿತ್ತು. ಸಿಪಿಐ(ಎಂ) ಕಾಯ್ದೆಯನ್ನು ಸ್ವಾಗತಿಸುತ್ತಲೇ 7 (d) ಯನ್ನು ಆಗಲೇ ತಗೆದು ಹಾಕುವಂತೆ ಒತ್ತಾಯಿಸಿತ್ತು. ಆದರೇ ಆಗ ಇದ್ದ ಸಿದ್ದರಾಮಯ್ಯನವರ ಸರಕಾರ ಅದನ್ನು ತೆಗೆಯದೇ ಹಾಗೆಯೆ ಉಳಿಸಿತ್ತು ಎಂಬುದನ್ನು ಉಲ್ಲೇಖಿಸಿದೆ.

ಈ ಕಾಯ್ದೆಯ ಜಾರಿಯ ನಂತರ ಪ್ರತಿವರ್ಷವು ಪರಿಶಿಷ್ಟ ಸಮುದಾಯಗಳಿಗೆ 30,000 ಕೋಟಿ ರೂ.ಗಳಿಗೂ ಅಧಿಕ ಮೊತ್ತವನ್ನು ನಿಗದಿಸಿದೆಯೆಂದು ಹೇಳಲಾಗುತ್ತಿತ್ತು ಮತ್ತು ದಲಿತರನ್ನು, ರಾಜ್ಯದ ಜನತೆಯನ್ನು ನಂಬಿಸಲಾಗುತ್ತಿತ್ತು. ಅದೇ ಸಂದರ್ಭದಲ್ಲಿ, ಬಿಜೆಪಿಯದ್ದು ಸೇರಿದಂತೆ ಎಲ್ಲ ಸರಕಾರಗಳು ಈ ಕಾಯಿದೆ ಮೂಲಕ ಹಲವು ಸಾವಿರ ಕೋಟಿ ರೂ.ಗಳನ್ನು ವಾಪಾಸು ಪಡೆಯುವ ಹಾಗೂ ಬೇರೆ ಕೆಲಸಗಳಿಗೆ ಬಳಸುವ ಮೂಲಕ ಪರಿಶಿಷ್ಠರನ್ನು ವಂಚಿಸುತ್ತಿದ್ದವು ಎಂದಿದೆ.

CPI(M) condemns diverting Rs 11,000 crore sc-st fund to guarantee schemes

ಇದೀಗ ಈ ಸರಕಾರ ಜನತೆಯ ಒತ್ತಾಯಕ್ಕೆ ಮಣಿದು ಆ ಕಾಯ್ದೆ 7 (d)ಯನ್ನು ಈಗ ತೆಗೆದು ಹಾಕಿದೆ. ಆ ಮೂಲಕ ಒಂದು ಕಡೆ ದುರ್ಬಳಕೆಯಾಗದಂತೆ ಮಾಡಿದ ಇದೇ ಸರಕಾರ, ಈ ಕಾಯ್ದೆಯನ್ನು ಉಲ್ಲಂಘಿಸಿ ದೊಡ್ಡ ಮೊತ್ತದ ಹಣ ಪಡೆದು ಬೇರೊಂದು ಯೋಜನೆಗೆ ಬಳಸುತ್ತಿರುವುದು ಕಾಯ್ದೆಯ ವಿರುದ್ಧವಾದ ಮತ್ತು ದಲಿತರ ಅಭಿವೃದ್ಧಿಯ ವಿರುದ್ಧವಾದ ದ್ವಂದ್ವ ನಡೆಯಾಯಾಗಿದೆಯೆಂದು ಸಿಪಿಐ(ಎಂ) ಟೀಕಿಸಿದೆ.

ಭೂ ಬ್ಯಾಂಕ್‌ಗೆ ನಿರ್ಧಾರಕ್ಕೆ-ಸಿಪಿಐ(ಎಂ) ಖಂಡನೆ

ರಾಜ್ಯದಾದ್ಯಂತ ನಗರ ಹಾಗೂ ಪಟ್ಟಣ ಪ್ರದೇಶಗಳ ಬಗರ್ ಹುಕುಂ ಲಕ್ಷಾಂತರ ಬಡ ಸಾಗುವಳಿದಾರರಿಗೆ ಹಕ್ಕು ಪತ್ರ ನೀಡಲು ನಿರಾಕರಿಸಲಾಗಿದೆ ಮತ್ತು ಅವರ ಜಮೀನುಗಳನ್ನು ಭೂ ಬ್ಯಾಂಕ್ ಗೆ ಸೇರ್ಪಡೆ ಮಾಡಲು ಮುಂದಾಗುವುದಾಗಿ ಹೇಳಿದೆ. ಇದು ಬಡ ಸಾಗುವಳಿದಾರರ ವಿರೋಧಿ ನಿಲುಮೆಯಾಗಿದೆ. ಇದರಿಂದ ಈ ಬಡ ಸಾಗುವಳಿದಾರರು, ಹಲವು ದಶಕಗಳಿಂದ ತಾವು ಹಾಗೂ ಅವರ ಇಡೀ ಕುಟುಂಬ ಸಾಲ ಶೂಲ ಮಾಡಿ ಶ್ರಮ ಹಾಕಿ ಬರಡು ಜಮೀನುಗಳನ್ನು ಫಲವತ್ತತೆಯಿಂದ ಕೂಡಿದ ಜಮೀನುಗಳನ್ನಾಗಿ ಬದಲಾಯಿಸಿದ್ದಾರೆ. ಅದಾಗಲೇ ಸರಕಾರದ ಸೂಚನೆಯಂತೆ ಹಕ್ಕುಪತ್ರಕ್ಕಾಗಿ ಫಾರಂ-50, 53, ಹಾಗೂ 57 ಅರ್ಜಿ ಸಲ್ಲಿಸಿದ್ದಾರೆ. ಅವುಗಳ ವಿಲೇವಾರಿಯಾಗಬೇಕಿದೆ ಎಂದಿದೆ.

ಇದೀಗ ಬೃಹತ್ ಬೆಂಗಳೂರು ನಗರ ಸೇರಿದಂತೆ ರಾಜ್ಯದಾದ್ಯಂತ ಬಡ ರೈತರು, ಅಭಿವೃದ್ಧಿ ಪಡಿಸಿದ ತಮ್ಮ ಜಮೀನುಗಳಿಂದ ಯಾವುದೇ ಪರಿಹಾರವಿಲ್ಲದೇ ಒಕ್ಕಲೆಬ್ಬಿಸಲ್ಪಡುತ್ತಿದ್ದಾರೆ. ಈ ರೀತಿ ಬಡ ಸಾಗುವಳಿದಾರರಿಗೆ ಪರಿಹಾರವನ್ನು ನೀಡದೇ ಸದರಿ ಜಮೀನುಗಳನ್ನು ಕೈಗಾರಿಕಾ ಮಾಲೀಕರಿಗೆ ಭೂ ಬ್ಯಾಂಕ್‌ಗಳ ಮೂಲಕ ನೀಡಲು ಮುಂದಾಗುವ ಸರಕಾರದ ನಡೆ ಖಂಡನೀಯವಾಗಿದೆ. ಆದ್ದರಿಂದ ಸದರಿ ಜಮೀನುಗಳ ವಿಚಾರದಲ್ಲಿ ಬಡ ಸಾಗುವಳಿದಾರರಿಗೆ ರಾಜ್ಯ ಸರಕಾರ ಮದ್ಯ ಪ್ರವೇಶಿಸಿ ನ್ಯಾಯ ಒದಗಿಸಲು ಸಿಪಿಐ(ಎಂ) ಒತ್ತಾಯಿಸಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+