ಮಹಾರಾಣಿ ಕಾಲೇಜು ಎದುರು ವಿಪತ್ತು ನಿರ್ವಹಣೆ ಕೇಂದ್ರ

ಬೆಂಗಳೂರು, ಜೂನ್ 4: ರಾಜ್ಯದಲ್ಲಿ ಅತ್ಯಾಧುನಿಕ ಮಾದರಿಯ ವಿಪತ್ತು ನಿಗ್ರಹ ಕೇಂದ್ರವನ್ನು ಪ್ಯಾಲೆಸ್ ರಸ್ತೆಯಲ್ಲಿ ಮಹಾರಾಣಿ ಕಾಲೇಜು ಎದುರು ಹಳೆಯ ಜೈಲಿನಲ್ಲಿ ಸ್ಥಾಪಿಸಲಾಗುವುದು ಎಂದು ಗೃಹ ಸಚಿವ ಕೆಜೆ ಜಾರ್ಜ್ ಅವರು ತಿಳಿಸಿದ್ದಾರೆ. ನಗರದ ಕೂಡ್ಲು ಬಳಿಯ ಆಂತರಿಕ ಭದ್ರತೆ ವಿಭಾಗದ ಭಯೋತ್ಪಾದನೆ ನಿಗ್ರಹ ಘಟಕಕ್ಕೆ ಮಂಗಳವಾರ ಚಾಲನೆ ನೀಡುತ್ತಾ ಗೃಹ ಸಚಿವ ಕೆಜೆ ಜಾರ್ಜ್ ಅವರು ಈ ವಿಷಯ ತಿಳಿಸಿದರು.

ಈಗ 24/7 ಯುಗ. ಹಾಗಾಗಿ ದಿನದ ಇಪ್ಪತ್ನಾಲ್ಕು ಗಂಟೆಯೂ ಎಚ್ಚರವಿರುವಂತಹ ವಿಪತ್ತು ನಿಗ್ರಹ ಕೇಂದ್ರದ ಅಗತ್ಯವಿದ್ದು, ನೈಸರ್ಗಿಕ ವಿಕೋಪ ಅಥವಾ ಭಯೋತ್ಪಾದನೆ ಮತ್ತಿತರ ಅತಿರೇಕದ ಸಂದರ್ಭಗಳಲ್ಲಿ ಎದುರಾಗಬಹುದಾದ ವಿಪತ್ತುಗಳನ್ನು ನಿಗ್ರಹಿಸಲು ಈ ಕೇಂದ್ರದ ಅಗತ್ಯವಿದೆ ಎಂದು ಸಚಿವ ಜಾರ್ಜ್ ಹೇಳಿದ್ದಾರೆ.

counter-terrorism-commando-teams-at-all-districts-home-minister-kj-george

ಎಲ್ಲ ಜಿಲ್ಲೆಗಳಲ್ಲೂ ಭಯೋತ್ಪಾದನೆ ನಿಗ್ರಹ ಘಟಕ District Special Weapons and Tactical Team (D-SWAT) ಸ್ಥಾಪಿಸಲಾಗುವುದು. ರಾಜ್ಯದ ಯಾವುದೇ ಭಾಗದಲ್ಲಿ ಸಮಸ್ಯೆ ಎದುರಾದಾಗ ಜಿಲ್ಲಾ D-SWAT ಕೇಂದ್ರಗಳಿಂದ ಮಾಹಿತಿ ಸಂಗ್ರಹಿಸಲಾಗುವುದು. ವಿಪತ್ತು ಸ್ಥಳದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಯಾವ ರೀತಿ ಕಾರ್ಯನಿರ್ವಹಿಸಬೇಕು ಎಂಬುದರ ಬಗ್ಗೆ 24/7 ಕೇಂದ್ರದಲ್ಲಿ ಕುಳಿತ ತಜ್ಞರು, ಅಧಿಕಾರಿಗಳು ಮಾಹಿತಿ ರವಾನಿಸಲಿದ್ದಾರೆ. ಇದರಿಂದ ಸಂಕಷ್ಟಕ್ಕೆ ಸಿಲುಕಿದ ಜನರು ಮತ್ತು ಆಸ್ತಿ-ಪಾಸ್ತಿ ರಕ್ಷಣೆ ಮಾಡುವುದರತ್ತ ಗಮನಹರಿಸಲು ಸಾಧ್ಯವಾಗಲಿವೆ. ಮುಖ್ಯಮಂತ್ರಿ, ಗೃಹ ಸಚಿವರು ಸೇರಿದಂತೆ ಸಂಬಂಧಪಟ್ಟ ಇಲಾಖೆಯ ಮುಖ್ಯಸ್ಥರು ಈ ಕೇಂದ್ರದಲ್ಲಿ ಕುಳಿತು ಕಾರ್ಯತಂತ್ರ ರೂಪಿಸಲಿದ್ದಾರೆ ಎಂದು ಸಚಿವ ಜಾರ್ಜ್ ವಿವರಿಸಿದರು.

ಕೂಡ್ಲು ಬಳಿಯ ಆಂತರಿಕ ಭದ್ರತೆ ವಿಭಾಗದ ಭಯೋತ್ಪಾದನೆ ನಿಗ್ರಹ ಘಟಕ 'ಗರುಡ'ದಲ್ಲಿ (Centre for Counter-Terrorism -CCT) ಈಗಾಗಲೇ ಸುಮಾರು 200 ಮಂದಿ ಅಧಿಕಾರಿಗಳು ವಿಶೇಷ ತರಬೇತಿ ಪಡೆಯುತ್ತಿದ್ದಾರೆ. 3 ತಿಂಗಳ ಈ ವಿಶೇಷ ತರಬೇತಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಕೆಲವರನ್ನು 'ಗರುಡ' ಪಡೆಗೆ ನಿಯೋಜಿಸಲಾಗುತ್ತದೆ.

 Home Minister KJ George
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+