ಶಾಸಕರ ವಿರುದ್ಧ ದೂರು: ಪೇದೆಗಳ ಎತ್ತಂಗಡಿ

ಕಿರಣ್‌ಕುಮಾರ್ ಹೆಬ್ಬಾಳ ಸಂಚಾರ ಠಾಣೆ ಮತ್ತು ಪ್ರಶಾಂತ್ ನಾಯಕ್ ವೈಯಾಲಿಕಾವಲ್ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿದ್ದಾರೆ.[ಸಿಸಿಬಿ ಪೊಲೀಸರ ಮುಂದೆ ಕಾಶಪ್ಪನವರ್ ಹೇಳಿದ್ದೇನು?]
ಇತ್ತೀಚೆಗೆ ಪೊಲೀಸ್ ಇಲಾಖೆ ಮಟ್ಟದಲ್ಲಿ ನಡೆದ ಸಾಮೂಹಿಕ ವರ್ಗಾವಣೆ ವೇಳೆ ಕಬ್ಬನ್ ಪಾರ್ಕ್ ಠಾಣೆಯಿಂದ ಕಿರಣ್ ಕುಮಾರ್ ಹಾಗೂ ಪ್ರಶಾಂತ್ ನಾಯಕ್ ಬೇರೆ ಠಾಣೆ ವರ್ಗಾವಣೆಗೊಂಡಿದ್ದರು. ಆದರೆ ಠಾಣೆಯಲ್ಲಿ ಕಾರ್ಯದೊತ್ತಡ ಇದೆ ಎಂಬ ಕಾರಣಕ್ಕೆ ಕಬ್ಬನ್‌ಪಾರ್ಕ್ ಠಾಣೆಯಿಂದ ಕಳುಹಿಸಿಕೊಟ್ಟಿರಲಿಲ್ಲ. ಇದೀಗ ವಿಚಾರಣೆ ನಡೆಯುತ್ತಿರುವ ವೇಳೆಗೆ ಇಬ್ಬರನ್ನೂ ರಿಲೀವ್ ಮಾಡಲಾಗಿದೆ ಎಂದು ಪೊಲೀಸ್ ಇಲಾಖೆ ಹೇಳಿಕೊಂಡಿದೆ.
ಈ ನಡುವೆ ಸ್ಕೈಬಾರ್ ಗಲಾಟೆ ನಡೆದಿದ್ದು, ಇಬ್ಬರ ಹೇಳಿಕೆಯನ್ನು ದಾಖಲಿಸಿ ಕಬ್ಬನ್ ಪಾರ್ಕ್ ಠಾಣೆಯಿಂದ ಅವರನ್ನು ರಿಲೀವ್ ಮಾಡಲಾಗಿದೆ. ಶಾಸಕರ ಹಲ್ಲೆ ಪ್ರಕರಣಕ್ಕೂ ವರ್ಗಾವಣೆಗೂ ಸಂಬಂಧವಿಲ್ಲ ಎಂದು ಇಲಾಖೆ ಹೇಳಿದೆ.[ಕೂಡಲ ಸಂಗಮನ ಆಣೆ ತಪ್ಪೇ ಮಾಡಿಲ್ಲ:ಕಾಶಪ್ಪನವರ್]
ಶಾಸಕರ ಮೇಲೆ ಹಲ್ಲೆ ನಡೆಸಿದ್ದ ಕಾರಣಕ್ಕೆ ವರ್ಗಾವಣೆಯಾಗಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ನಗರ ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್ಕರ್ "ಇದು ಅಸಂಬದ್ಧ ಸುದ್ದಿ. ನಾನು ಯಾವುದೇ ಕಾರಣಕ್ಕೂ ವರ್ಗಾವಣೆ ಆದೇಶ ನೀಡಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.












Click it and Unblock the Notifications