Jagadish Shettar: ಬಿಜೆಪಿಯಲ್ಲಿ ಲಿಂಗಾಯತ ನಾಯಕತ್ವ ನಾಶ ಮಾಡುತ್ತಿದ್ದಾರೆ: ಕಾಂಗ್ರೆಸ್
ಬೆಂಗಳೂರು: ಒಂದು ಕಡೆ ಬಿಜೆಪಿ ಪಕ್ಷದಲ್ಲಿ ಶಾಸಕರು ಹಾಗೂ ನಾಯಕರು ಬಂಡಾಯ ಎದ್ದಿದ್ದರೆ, ಮತ್ತೊಂದು ಕಡೆ ಬಿಜೆಪಿ ನಾಯಕರಿಗೆ ಇದೇ ವಿಚಾರ ಇಟ್ಟುಕೊಂಡು ತಿರುಗೇಟು ನೀಡುತ್ತಿದೆ ಕಾಂಗ್ರೆಸ್. ಅದರಲ್ಲೂ 'ಬಿಜೆಪಿಯಲ್ಲಿನ ಸಂಪೂರ್ಣ ಲಿಂಗಾಯತ ನಾಯಕತ್ವವನ್ನೇ ನಾಶ ಮಾಡುವುದು ಈ ಜೋಡಿಗಳ ಏಕೈಕ ಅಜೆಂಡಾ.' ಎಂದು ಟ್ವೀಟ್ ಮೂಲಕ ಸಂಚಲನ ಸೃಷ್ಟಿಸಿದ್ದಾರೆ ಕಾಂಗ್ರೆಸ್ ನಾಯಕರು.
ಮೊ-ಶಾ ಜೋಡಿ ಹಾಗೂ ಜೋ-ಸ ಜೋಡಿ ಕೇವಲ @BSYBJP ಅವರನ್ನು ಮಾತ್ರ ಮುಗಿಸಿದೆ ಎಂದುಕೊಂಡಿದ್ದರೆ ಅದು ತಪ್ಪು.
— Karnataka Congress (@INCKarnataka) April 16, 2023
ಬಿಜೆಪಿಯಲ್ಲಿನ ಸಂಪೂರ್ಣ ಲಿಂಗಾಯತ ನಾಯಕತ್ವವನ್ನೇ ನಾಶ ಮಾಡುವುದು ಈ ಜೋಡಿಗಳ ಏಕೈಕ ಅಜೆಂಡಾ.
BSY
ಸವದಿ
ಶೆಟ್ಟರ್
ಸೇರಿದಂತೆ ನಾಯಕತ್ವ ಹೊಂದಿದವರೆಲ್ಲರನ್ನೂ ಬಿಜೆಪಿ ಎತ್ತಿ ಬಿಸಾಡಿದೆ.
'ಮೊ-ಶಾ ಜೋಡಿ ಹಾಗೂ ಜೋ-ಸ ಜೋಡಿ ಕೇವಲ @BSYBJP ಅವರನ್ನು ಮಾತ್ರ ಮುಗಿಸಿದೆ ಎಂದುಕೊಂಡಿದ್ದರೆ ಅದು ತಪ್ಪು. ಬಿಜೆಪಿಯಲ್ಲಿನ ಸಂಪೂರ್ಣ ಲಿಂಗಾಯತ ನಾಯಕತ್ವವನ್ನೇ ನಾಶ ಮಾಡುವುದು ಈ ಜೋಡಿಗಳ ಏಕೈಕ ಅಜೆಂಡಾ. BSY, ಸವದಿ, ಶೆಟ್ಟರ್ ಸೇರಿದಂತೆ ನಾಯಕತ್ವ ಹೊಂದಿದವರೆಲ್ಲರನ್ನೂ ಬಿಜೆಪಿ ಎತ್ತಿ ಬಿಸಾಡಿದೆ.' ಎಂದು ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮಾಡಿ ಆರೋಪಿಸಿದೆ. ಈ ಮೂಲಕ ಬಿಜೆಪಿಯಲ್ಲಿ ಲಿಂಗಾಯತ ನಾಯಕರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂಬ ಅಸ್ತ್ರವನ್ನು ಮತ್ತೊಮ್ಮೆ ಪ್ರಯೋಗಿಸಿದ್ದಾರೆ ಕಾಂಗ್ರೆಸ್ ನಾಯಕರು.

ಹಿಂದೂ ಲಿಂಗಾಯತ ಅಸ್ತ್ರ ಪ್ರಯೋಗ!
ಈ ಹಿಂದೆ ಕೂಡ ಕಾಂಗ್ರೆಸ್ ನಾಯಕರು ಹಲವು ಬಾರಿ ಲಿಂಗಾಯತ ಅಸ್ತ್ರ ಪ್ರಯೋಗಿಸಿದ್ದಾರೆ. ಈಗಲೂ ಅದೇ ಅಸ್ತ್ರದ ಮೂಲಕ ಬಿಜೆಪಿ ಹೈಕಮಾಂಡ್ ಮತ್ತು ಬಿಜೆಪಿ ರಾಜ್ಯ ನಾಯಕರಿಗೆ ತಿರುಗೇಟು ನೀಡುತ್ತಿದ್ದಾರೆ. ಕರ್ನಾಟಕ ವಿಧಾನಸಭೆ ಚುನಾವಣೆ ಹತ್ತಿರ ಆಗುತ್ತಿದ್ದಂತೆಯೇ ಕಾಂಗ್ರೆಸ್ ನಾಯಕರಿಗೆ ಮತ್ತಷ್ಟು ಅಸ್ತ್ರ ಸಿಗುತ್ತಿದೆ. ಅದ್ರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಿ ಇದೇ ವಿಚಾರ ಮುಂದಿಟ್ಟುಕೊಂಡು, ಚುನಾವಣೆ ಎದುರಿಸಲು ಕಾಂಗ್ರೆಸ್ ನಾಯಕರು ಸಜ್ಜಾಗಿದ್ದಾರೆ. ಇದನ್ನು ಟ್ವೀಟ್ ಮೂಲಕ ಸ್ಯಾಂಪಲ್ ಆಗಿ ತೋರಿಸಿದಂತಿದೆ ಕಾಂಗ್ರೆಸ್.
ಕಾಂಗ್ರೆಸ್ ಸೇರಲು ಶೆಟ್ಟರ್ ಸಿದ್ಧತೆ?
ಈಗಾಗಲೇ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಿಜೆಪಿಗೆ ಗುಡ್‌ಬೈ ಹೇಳುವ ಮೂಲಕ ಕಾಂಗ್ರೆಸ್ ಕೈ ಹಿಡಿದಿದ್ದಾರೆ. ಇದೀಗ ಮತ್ತೊಬ್ಬ ಪ್ರಭಾವಿ ಲಿಂಗಾಯತ ಸಮುದಾಯದ ನಾಯಕ ಜಗದೀಶ್ ಶೆಟ್ಟರ್ ಕೂಡ ಇದೇ ನಿರ್ಧಾರ ಕೈಗೊಳ್ಳುತ್ತಾರೆ ಎನ್ನಲಾಗುತ್ತಿದೆ. ಜಗದೀಶ್ ಶೆಟ್ಟರ್ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಆಗಿದೆ, ಸಂಜೆ ವೇಳೆಗೆ ಕಾಂಗ್ರೆಸ್ ಸೇರಲಿದ್ದಾರೆ ಎಂಬ ಮಾತು ಬಿಜೆಪಿ ನಾಯಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಉತ್ತರ ಕರ್ನಾಕಟದಲ್ಲಿ ಬಿಜೆಪಿಗೆ ಇದು ದೊಡ್ಡ ಹೊಡೆತ ನೀಡಲಿದೆ ಎಂಬುದು ರಾಜಕೀಯ ಪರಿಣತರ ಲೆಕ್ಕಾಚಾರ.

ರೌಡಿ ಶೀಟರ್ ಅಥವಾ ಕ್ರಿಮಿನಲ್ ಅಲ್ಲ!
ಜಗದೀಶ್ ಶೆಟ್ಟರ್ ಬಿಜೆಪಿ ಬಿಡುವುದು ಬಹುತೇಕ ಗ್ಯಾರಂಟಿ. ಇದೇ ಕಾರಣಕ್ಕೆ ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದಿದ್ದಾರೆ ಜಗದೀಶ್ ಶೆಟ್ಟರ್. ನನಗೆ ಟಿಕೆಟ್ ನಿರಾಕರಿಸಲು ಕಾರಣವೇನು? ಜನಸೇವೆ ಮಾಡಿಕೊಂಡು ಇದ್ದವನು ನಾನು. ಸಚಿವ ಸ್ಥಾನ ಇಲ್ಲದಿದ್ದರೂ ನನ್ನ ಕೆಲಸ ಮಾಡಿದ್ದೇನೆ. ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಾ, ಜನಪರವಾಗಿದ್ದೇನೆ. ನಾನು ರೌಡಿ ಶೀಟರ್ ಅಥವಾ ಕ್ರಿಮಿನಲ್ ಅಲ್ಲ. ಮುಂದಿನ ನಡೆ ಬಗ್ಗೆ ಶೀಘ್ರದಲ್ಲೇ ತಿಳಿಯಲಿದೆ ಎನ್ನುವ ಮೂಲಕ ಕುತೂಹಲ ಕೆರಳಿಸಿದ್ದಾರೆ ಮಾಜಿ ಸಿಎಂ ಜಗದೀಶ್ ಶೆಟ್ಟರ್.

ಅಮಿತ್ ಶಾ ಮಾತು ವರ್ಕ್ ಆಗಲಿಲ್ವಾ?
ಬಿಜೆಪಿಯ ಪವರ್ ಫುಲ್ ಮ್ಯಾನ್ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಖುದ್ದು ಜಗದೀಶ್ ಶೆಟ್ಟರ್ ಅವರ ಜೊತೆ ಮಾತನಾಡಿದ್ದಾರಂತೆ. ಈ ಮೂಲಕ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡದಂತೆ ಆದೇಶಿಸಿದ್ದರು ಎನ್ನಲಾಗಿತ್ತು. ಇಷ್ಟೆಲ್ಲಾ ಆದರೂ ನಿರ್ಧಾರ ಬದಲಿಸಿಕೊಂಡಿಲ್ಲ. ಈ ಮೂಲಕ ಪಕ್ಷ ತೊರೆದು, ವರಿಷ್ಠರ ವಿರುದ್ಧ ಗುಡುಗಿದ್ದಾರೆ. ಜೊತೆಗೆ ತಮಗೆ ಉದ್ದೇಶಪೂರ್ವಕವಾಗಿ ಟಿಕೆಟ್ ತಪ್ಪಿಸಲಾಗಿದೆ ಎಂದಿದ್ದಾರೆ. ಇದು ವಿಧಾನಸಭೆ ಚುನಾವಣಾ ಅಖಾಡವನ್ನ ರಂಗಾಗಿಸಿದೆ. ಮತ್ತೊಂದ್ಕಡೆ ಉತ್ತರ ಕರ್ನಾಟಕದಲ್ಲಿ ಬಿಜೆಪಿಗೆ ಹಿನ್ನಡೆ ಭೀತಿ ಸೃಷ್ಟಿಯಾಗಿದೆ.












Click it and Unblock the Notifications