ಫುಡ್ ಡೆಲಿವರಿ ಏಜೆಂಟ್ ಜೊತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಕತ್ ಬೈಕ್‍ ರೈಡ್‌!

ಬೆಂಗಳೂರು, ಮೇ. 07: ಕರ್ನಾಟಕ ಚುನಾವಣೆಗೆ ಮುನ್ನ ಪಕ್ಷದ ಪ್ರಚಾರದ ವೇಳೆ ಹಿರಿಯ ನಾಯಕ ರಾಹುಲ್ ಗಾಂಧಿ ಅವರು ಡೆಲಿವರಿ ಏಜೆಂಟ್‌ ಸ್ಕೂಟರ್ ಅನ್ನು ಹತ್ತಿಕೊಂಡು ಹೋಟೆಲ್ ತಲುಪಿದ್ದಾರೆ. ಇದು ಬೆಂಗಳೂರಿನ ಕಾಂಗ್ರೆಸ್ ಬೆಂಬಲಿಗರನ್ನು ಆಶ್ಚರ್ಯಚಕಿತರನ್ನಾಗಿದೆ. ಭಾನುವಾರ ರಾಜಧಾನಿಯಲ್ಲಿ ರಾಹುಲ್ ಗಾಂಧಿ ಪ್ರಚಾರ ನಡೆಸಿದ್ದರು.

52 ವರ್ಷದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ರಾಜಧಾನಿಯಲ್ಲಿ ಡೆಲಿವರಿ ಕಾರ್ಮಿಕರ ಗುಂಪನ್ನು ಭೇಟಿಯಾಗಿದ್ದಾರೆ. ಬಳಿಕ ಡೆಲಿವರಿ ಏಜೆಂಟ್‌ ಅವರ ಸ್ಕೂಟರ್‌ನಲ್ಲಿ ಸವಾರಿ ಮಾಡುತ್ತಿರುವ ವಿಡಿಯೋವನ್ನು ಕಾಂಗ್ರೆಸ್ ಟ್ವಿಟರ್‌ನಲ್ಲಿ ಹಂಚಿಕೊಂಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಕಾಂಗ್ರೆಸ್ ನಾಯಕ ಸ್ಕೂಟರ್ ಮೇಲೆ ಸವಾರಿ ಮಾಡುತ್ತಿರುವುದು ಕಂಡುಬಂದಿದೆ.

Congress leader Rahul Gandhi rides scooter with a delivery agent

ಇನ್ನು, ರಾಹುಲ್ ಗಾಂಧಿ ಅವರತ್ತ ಕೈ ಬೀಸಿದಾಗ ಬೆಂಬಲಿಗರ ಗುಂಪು ಅವರನ್ನು ಸುತ್ತುವರೆದಿತ್ತು. ಜನಸಂದಣಿಯಲ್ಲಿ ಅಳುತ್ತಿದ್ದ ಬಾಲಕನನ್ನು ಸಾಂತ್ವನ ರಾಹುಲ್ ಮಾಡುತ್ತಿರುವುದು ಕೂಡ ಕಂಡುಬಂತು. ಬಳಿಕ ತರಾತುರಿಯಲ್ಲಿ ಹೆಲ್ಮೆಟ್ ಧರಿಸಿ ಡೆಲಿವರಿ ಏಜೆಂಟ್ ಹಿಂದೆ ಕುಳಿತುಕೊಂಡರು. ಇಬ್ಬರು ಹರ್ಷೋದ್ಗಾರದ ನಡುವೆಯೇ ಗುಂಪಿನಿಂದ ದೂರ ಹೋಗಿದ್ದಾರೆ. ವರದಿಗಳ ಪ್ರಕಾರ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತನ್ನ ಹೋಟೆಲ್ ತಲುಪಲು ಸುಮಾರು 2 ಕಿಲೋಮೀಟರ್ ತನ್ನ ಸ್ಕೂಟರ್ ಸವಾರಿ ಮಾಡಿದ್ದಾರೆ.

ಇನ್ನು, ರಾಹುಲ್ ಗಾಂಧಿಯವರ ಚಿತ್ರಗಳನ್ನು ಹಂಚಿಕೊಂಡಿರುವ ಕರ್ನಾಟಕ ಕಾಂಗ್ರೆಸ್, "ಕಾಂಗ್ರೆಸ್ ರಾಷ್ಟ್ರೀಯ ನಾಯಕರಾದ ರಾಹುಲ್ ಗಾಂಧಿ ಅವರು ಇಂದು ಬೆಂಗಳೂರಿನ ಐಕಾನಿಕ್ ಏರ್‌ಲೈನ್ಸ್ ಹೋಟೆಲ್‌ನಲ್ಲಿ ಅಸಂಘಟಿತ ಡೆಲಿವರಿ ಕಾರ್ಮಿಕರು ಮತ್ತು ಡಂಜೊ, ಸ್ವಿಗ್ಗಿ, ಜೊಮಾಟೊ, ಬ್ಲಿಂಕಿಟ್ ಡೆಲಿವರಿ‌ ಕೆಲಸಗಾರರೊಂದಿಗೆ ಸಂವಾದ ನಡೆಸಿದರು" ಎಂದಿದೆ.

"ಬೆಂಗಳೂರಿನಲ್ಲಿ 2,00,000 ಕ್ಕೂ ಹೆಚ್ಚು ಜನ ಡೆಲಿವರಿ ಕೆಲಸದಲ್ಲಿ ತೊಡಗಿದ್ದು, ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಅವರಿಗಾಗಿಯೇ ಡೆಲಿವರಿ ಕಾರ್ಮಿಕರ ಕಲ್ಯಾಣ ಮಂಡಳಿ ಸ್ಥಾಪನೆ ಹಾಗೂ ಡೆಲಿವರಿ ಕಾರ್ಮಿಕರು ಮತ್ತು ಅಸಂಘಟಿತ ವಲಯದ ಇತರ ಕಾರ್ಮಿಕರಿಗೆ ಕನಿಷ್ಠ ಗಂಟೆಯ ವೇತನ ಖಚಿತತೆಯ ಭರವಸೆ ನೀಡಿದೆ" ಎಂದು ಹೇಳಿದೆ.

ಭಾರತ್ ಜೋಡೋ ಯಾತ್ರೆಯನ್ನು ಪ್ರಾರಂಭಿಸಿದಾಗಿನಿಂದ, ರಾಹುಲ್ ಗಾಂಧಿ ವೈಯಕ್ತಿಕವಾಗಿ ಜನಸಾಮಾನ್ಯರನ್ನು ತಲುಪಲು ಮತ್ತು ಸಾಮಾನ್ಯವಾಗಿ ಸ್ವಯಂಪ್ರೇರಿತ ಭೇಟಿ ಮಾಡುವುದು, ಸಾರ್ವಜನಿಕ ಸಭೆಗಳ ಮೂಲಕ ಸಾಮಾನ್ಯ ಜನರೊಂದಿಗೆ ಸಂವಹನ ನಡೆಸಲು ತನ್ನ ಪ್ರಯತ್ನಗಳನ್ನು ತೀವ್ರಗೊಳಿಸಿದ್ದಾರೆ.

Congress leader Rahul Gandhi rides scooter with a delivery agent

ಕಳೆದ ತಿಂಗಳು, ಮಾಜಿ ಕಾಂಗ್ರೆಸ್ ಮುಖ್ಯಸ್ಥ ರಾಹುಲ್ ಹಳೆಯ ದೆಹಲಿ ಮಾರುಕಟ್ಟೆಗೆ ಭೇಟಿ ನೀಡಿದ್ದರು. ರಂಜಾನ್ ಸಮಯದಲ್ಲಿ ಪ್ರದೇಶದ ಜನಪ್ರಿಯ ತಿನಿಸುಗಳ ರುಚಿ ನೋಡಿದ್ದರು. ಶುಕ್ರವಾರ, ಕಾಂಗ್ರೆಸ್ ನಾಯಕರು ದೆಹಲಿ ವಿಶ್ವವಿದ್ಯಾಲಯದ ಯುವಕರ ಹಾಸ್ಟೆಲ್‌ಗೆ ಭೇಟಿ ನೀಡಿ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮಾತನಾಡಿ, ಅಲ್ಲಿಯೇ ಊಟ ಮಾಡಿದ್ದರು.

ಕರ್ನಾಟಕ ಚುನಾವಣೆಗೆ ಕೇವಲ ಮೂರು ದಿನಗಳು ಬಾಕಿ ಉಳಿದಿದ್ದು, ಮತದಾರರನ್ನು ಸೆಳೆಯಲು ಎಲ್ಲಾ ಪಕ್ಷಗಳು ರಾಜ್ಯದಲ್ಲಿ ಪ್ರಚಾರವನ್ನು ಹೆಚ್ಚಿಸಿವೆ. ರಾಹುಲ್ ಗಾಂಧಿ ಅವರು ಭಾನುವಾರ ಮತ್ತು ಸೋಮವಾರ ಬೆಂಗಳೂರಿನಾದ್ಯಂತ ಸಾರ್ವಜನಿಕ ಸಭೆಗಳನ್ನು ನಡೆಸಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+