Get Updates
Get notified of breaking news, exclusive insights, and must-see stories!

Industry: ಬೆಂಗಳೂರಲ್ಲಿ ವೈಮಾಂತರಿಕ್ಷ ಸಾಮಗ್ರಿ ಪೂರೈಕೆ 'ಕಾಲಿನ್ಸ್ ಏರೋಸ್ಪೇಸ್ ಪರೀಕ್ಷಾ ಕೇಂದ್ರ'

ಬೆಂಗಳೂರು, ಮಾರ್ಚ್ 06: ವೈಮಾಂತರಿಕ್ಷ ಮತ್ತು ರಕ್ಷಣಾ ವಲಯಕ್ಕೆ ಬೇಕಾಗುವ ಸಾಧನಗಳ ತಯಾರಿಕೆಯಲ್ಲಿ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿರುವ ಕಂಪನಿಯು ಬೆಂಗಳೂರಿನಲ್ಲಿ ತನ್ನ ಕೇಂದ್ರ ಸ್ಥಾಪಿಸಿದೆ. ಕಾಲಿನ್ಸ್ ಏರೋಸ್ಪೇಸ್ ಎಂಜಿನಿಯರಿಂಗ್ ಕಂಪನಿ ಯಲಹಂಕ ಸಮೀಪದ ವೆಂಕಟಾಲ ಗ್ರಾಮದಲ್ಲಿ ನಿರ್ಮಿಸಿದ ಅತ್ಯಾಧುನಿಕ ಪರೀಕ್ಷಾ ಕೇಂದ್ರಕ್ಕೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಬುಧವಾರ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಸಚಿವರು, ಕಾಲಿನ್ಸ್ ಏರೋಸ್ಪೇಸ್ ಕಂಪನಿಯು 'ಪವರ್ಡ್ ಬೈ ಕಾಲಿನ್ಸ್' ತರಹದ ಉಪಕ್ರಮಗಳ ಮೂಲಕ ನಮ್ಮಲ್ಲಿನ ಸಣ್ಣ ಮತ್ತು ಮಧ್ಯಮ ಸ್ತರದ ಉದ್ಯಮಗಳೊಂದಿಗೆ ಸಹಭಾಗಿತ್ವಕ್ಕೆ ಮುಂದಾಗಿದೆ. ಇದರಿಂದ ನಾವೀನ್ಯತೆ ಮತ್ತು ಅತ್ಯಾಧುನಿಕ ತಂತ್ರಜ್ಞಾನಗಳಿಗೆ ಸ್ಥಳೀಯವಾಗಿ ಉತ್ತೇಜನ ಸಿಗಲಿದೆ. ವಿಮಾನಗಳ ಕುರ್ಚಿ, ವಿಂಡ್ ಶೀಲ್ಡ್ ಸೇರಿದಂತೆ ಹಲವು ಬಿಡಿಭಾಗಗಳನ್ನು ಇಲ್ಲಿ ನಾನಾ ಪರೀಕ್ಷೆಗಳಿಗೆ ಒಳಪಡಿಸಿ, ನಂತರ ಬಳಕೆಗೆ ಅನುಮತಿ ಕೊಡಲಾಗುವುದು ಎಂದರು.

Collins Aerospace Launches Engineering Test Facility in Yalahanka Bengaluru Defence Innovation

ಈ ಹೊಸ ಕೇಂದ್ರದಲ್ಲಿ ಆಧುನಿಕ ವಿಮಾನಗಳ ಪರೀಕ್ಷೆ, ಪ್ರಮಾಣೀಕರಣ ಮತ್ತು ಸೇರ್ಪಡೆ ಮುಂತಾದ ಪ್ರಕ್ರಿಯೆಗಳು ನಡೆಯಲಿವೆ. ಹೀಗಾಗಿ, ಈ ಪರೀಕ್ಷಾ ಕೇಂದ್ರವು ಏರೋಸ್ಪೇಸ್ ವಲಯದಲ್ಲಿನ ಜಾಗತಿಕ ಪೂರೈಕೆ ಸರಪಳಿಯಲ್ಲಿ ಮಹತ್ವದ ಪಾತ್ರ ವಹಿಸಲಿದೆ.

ಭಾರತದ ವೈಮಾಂತರಿಕ್ಷ ವಲಯವು ಪರಿವರ್ತನೆಯ ಹಾದಿಯಲ್ಲಿದ್ದು, 2033ರ ಹೊತ್ತಿಗೆ ಈ ಕ್ಷೇತ್ರದಲ್ಲಿ ವರ್ಷಕ್ಕೆ 54 ಬಿಲಿಯನ್ ಡಾಲರ್ ಗಿಂತಲೂ ಹೆಚ್ಚಿನ ವಹಿವಾಟು ನಡೆಯಲಿದೆ. ಈ ಕೇಂದ್ರವನ್ನು ಆರಂಭಿಸುವ ಮೂಲಕ ಕಾಲಿನ್ಸ್ ಏರೋಸ್ಪೇಸ್, 'ಮೇಕ್ ಇನ್ ಇಂಡಿಯಾ' ಉಪಕ್ರಮಕ್ಕೆ ಶಕ್ತಿ ತುಂಬಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Collins Aerospace Launches Engineering Test Facility in Yalahanka Bengaluru Defence Innovation

60 ಸಾವಿರ ಉದ್ಯೋಗ ಸೃಷ್ಟಿ

ಕರ್ನಾಟಕವು ಪ್ರತ್ಯೇಕ ಏರೋಸ್ಪೇಸ್ ಮತ್ತು ರಕ್ಷಣಾ ನೀತಿಯನ್ನು ಹೊಂದಿರುವ ಮೊಟ್ಟಮೊದಲ ರಾಜ್ಯವಾಗಿದೆ. ಈ ವಲಯಕ್ಕೆ 45 ಸಾವಿರ ಕೋಟಿ ರೂ. ಹೂಡಿಕೆ ಆಕರ್ಷಿಸುವ ಮತ್ತು 60 ಸಾವಿರ ಉದ್ಯೋಗಗಳನ್ನು ಸೃಷ್ಟಿಸುವ ಗುರಿ ಇಟ್ಟುಕೊಳ್ಳಲಾಗಿದೆ. ದೇಶದ ವೈಮಾಂತರಿಕ್ಷ ಮತ್ತು ರಕ್ಷಣಾ ವಲಯದ ರಫ್ತು ವಹಿವಾಟಿಗೆ ರಾಜ್ಯವು ಶೇ.70ರಷ್ಟು ಕೊಡುಗೆ ರಾಜ್ಯದಿಂದ ಹೋಗುತ್ತಿದೆ. ಈ ವಲಯದಲ್ಲಿ 2 ಸಾವಿರಕ್ಕೂ ಹೆಚ್ಚು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಸಕ್ರಿಯವಾಗಿವೆ ಎಂದು ಪಾಟೀಲ ವಿವರಿಸಿದರು.

ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, 'ಕರ್ನಾಟಕವು ಪ್ರತಿಭಾವಂತ ಮಾನವ ಸಂಪನ್ಮೂಲವನ್ನು ಹೊಂದಿದೆ. ಆದ್ದರಿಂದ ಕಾಲಿನ್ಸ್ ಏರೋಸ್ಪೇಸ್ ಕಂಪನಿಯು ನಮ್ಮ ಯುವಜನರಿಗೆ ಕೌಶಲ್ಯಾಭಿವೃದ್ಧಿ ತರಬೇತಿ ಕೊಡುವ ವ್ಯವಸ್ಥೆ ಮಾಡಬೇಕು. ಇದಕ್ಕೆ ಸರಕಾರದ ಕಡೆಯಿಂದ ಎಲ್ಲ ನೆರವು ನೀಡಲಾಗುವುದು. ಇದರಿಂದಾಗಿ ಮಾನವ ಸಂಪನ್ಮೂಲವನ್ನು ಸನ್ನದ್ಧ ಸ್ಥಿತಿಯಲ್ಲಿ ಸಿಕ್ಕಿ, ಮಾರುಕಟ್ಟೆ ಸೃಷ್ಟಿಯೂ ಸುಲಭವಾಗಲಿದೆ' ಎಂದು ಹೇಳಿದರು.

ರಾಜ್ಯದಲ್ಲಿ ಈಗಾಗಲೇ ಎನ್.ಡಿ.ಟಿ ಪರೀಕ್ಷಾ ಸೌಲಭ್ಯವಿದೆ. ಬೆಂಗಳೂರಿನಲ್ಲಿ ಅತ್ಯುತ್ತಮ ಪ್ರಯೋಗಾಲಯಗಳನ್ನು ಹೊಂದಿದೆ. ಟ್ರಿನಿಟಿ ಎನ್.ಡಿ.ಟಿ ಪ್ರಯೋಗಾಲಯದಲ್ಲಿ ರೇಡಿಯೋಗ್ರಫಿ, ಅಲ್ಟ್ರಾಸೋನಿಕ್ ಮತ್ತು ಎಡ್ಡಿ ಕರೆಂಟ್ ಟೆಸ್ಟಿಂಗ್ ಅನುಕೂಲಗಳಿವೆ. ಪಲ್ಲಕ್ಕಿ ಎನ್.ಡಿ.ಟಿ ಉತ್ಕೃಷ್ಟತಾ ಕೇಂದ್ರದಲ್ಲೂ ಜಾಗತಿಕ ಮಟ್ಟದ ಸೌಲಭ್ಯಗಳಿವೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಸಚಿವರಿಬ್ಬರೂ ಕಾಲಿನ್ಸ್ ವಿಮಾನ ಯಂತ್ರ ಮತ್ತು ಬಿಡಿಭಾಗಗಳ ಪ್ರದರ್ಶನವನ್ನು ವೀಕ್ಷಿಸಿ, ಅವುಗಳ ಮಾಹಿತಿ, ವೈಶಿಷ್ಟ್ಯ ಮತ್ತು ಸ್ವಾರಸ್ಯಗಳ ಬಗ್ಗೆ ತಿಳಿದುಕೊಂಡರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+