ಬೆಂಗಳೂರು ವಿದ್ಯಾರ್ಥಿ‌ನಿಗೆ ಕಿರುಕುಳ: ಓರ್ವ‌ನ ಬಂಧನ

ಬೆಂಗಳೂರು, ಜು.15: ಪುಲಿಕೇಶಿ ನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಕಾಲೇಜು ವಿದ್ಯಾರ್ಥಿ‌ನಿಯನ್ನು ನಾಲ್ವರು ಯುವಕರು ಬಲವಂತವಾಗಿ ಸ್ಕೋಡಾಕಾರಿನಲ್ಲಿ ಕುಳ್ಳಿರಿಸಿ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಘಟನೆಗೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಸೈಯದ್‌ ನಜೀರ್‌ ಬಂಧಿತ ಆರೋಪಿಯಾಗಿದ್ದು, ನಾಪತ್ತೆಯಾಗಿರುವ ಮೂವರ ಬಂಧನಕ್ಕೆ ಪೊಲೀಸರು ಪತ್ತೆ ಕಾರ್ಯ ಆರಂಭಿಸಿದ್ದಾರೆ.

Bangalore molested

ಘಟನೆಯ ವಿವರ: ನಗರದ ಖಾಸಗಿ ಕಾಲೇಜಿನ ವಿದ್ಯಾರ್ಥಿ‌ನಿ ಮತ್ತು ಆಕೆಯ ಪ್ರಿಯಕರ ಜು.11 ಶುಕ್ರವಾರ ರಾತ್ರಿ ಸ್ನೇಹಿತರು ಆಯೋಜಿಸಿದ ಪಾರ್ಟಿಗಾಗಿ ಪುಲಿಕೇಶಿ ನಗರದ ರೆಸ್ಟೋರೆಂಟ್‌ಗೆ ಬಂದಿದ್ದಾರೆ. ರೆಸ್ಟೋರೆಂಟ್‌ನಲ್ಲಿ ಪಾರ್ಟಿ‌ ಮುಗಿಸಿ ಮಧ್ಯರಾತ್ರಿ 11.45ರ ವೇಳೆಗೆ ಹೊರಗಡೆ ಅವರ ಕಾರಿನಲ್ಲಿ ತೆರಳಲು ಮುಂದಾದಾಗ, ಒಂದು ಸ್ಕೋಡಾ ಕಾರು ಇವರ ಸಮೀಪ ಬಂದು ನಿಂತಿದೆ. ಕಾರಿನಲ್ಲಿದ್ದ ಯುವಕರು ಇಬ್ಬರಿಗೆ ಚಾಕು ತೋರಿಸಿ ಕಾರಿನ ಒಳಗೆ ಬರುವಂತೆ ಬೆದರಿಸಿದ್ದಾರೆ.[ಇಬ್ಬರು ನಿರ್ಭಯಾ ಅತ್ಯಾಚಾರಿಗಳ ಗಲ್ಲು ಶಿಕ್ಷೆ ತಡೆ]

ಪ್ರಿಯಕರನನ್ನು ಕಾರಿನ ಮುಂಭಾಗದಲ್ಲಿ ಕುಳಿತುಕೊಳ್ಳುವಂತೆ ಹೇಳಿ, ವಿದ್ಯಾರ್ಥಿ‌ನಿಯನ್ನು ಹಿಂಭಾಗದಲ್ಲಿ ಕುಳ್ಳಿರಿಸಿದ್ದಾರೆ. ಬಳಿಕ ರಾತ್ರಿಯಿಡಿ ನಗರದಲ್ಲಿ ಕಾರಿನಲ್ಲಿ ಸುತ್ತಾಡಿ ವಿದ್ಯಾರ್ಥಿ‌ನಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಬಳಿಕ ಇಬ್ಬರನ್ನು ಕಾಕ್ಸ್​ ಟೌನ್​ನ ರೇಲ್ವೇ ಹಳಿ ಪಕ್ಕ ಬಿಟ್ಟು ಪರಾರಿಯಾಗಿದ್ದಾರೆ.

ಘಟನೆಯಿಂದ ಹೆದರಿ ಆರಂಭದಲ್ಲಿ ದೂರು ನೀಡದ ವಿದ್ಯಾರ್ಥಿ‌ನಿ ಮತ್ತು ಪ್ರಿಯಕರ ಇದೀಗ ಪುಲಿಕೇಶಿ ನಗರ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರಿನಲ್ಲಿ ಸ್ಕೋಡಾ ಕಾರ್‌ ನಂಬರ್‌ ದಾಖಲಿಸಿದ್ದು, ಈ ನಂಬರ್‌ ಆಧಾರದ ಮೇಲೆ ಪೊಲೀಸರು ಕಾರಿನ ಮಾಲೀಕ ಸೈಯದ್‌ ನಜೀರ್‌ನನ್ನು ಬಂಧಿಸಿ, ಸ್ಕೋಡಾ ಕಾರನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತನ ವಿಚಾರಣೆ ನಡೆಯುತ್ತಿದ್ದು, ನಾಪತ್ತೆಯಾಗಿರುವ ಯುವಕರ ಬಂಧನಕ್ಕೆ ಪೊಲೀಸರು ಶೋಧ ಕಾರ್ಯ‌ ಆರಂಭಿಸಿದ್ದಾರೆ

.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+