40,00,000 ಲಕ್ಷ ರೂಪಾಯಿ ಪರಿಹಾರ: RCB ಕಾಲ್ತುಳಿತ ಪ್ರಕರಣ ಮೃತರಿಗೆ ಪರಿಹಾರ ಹೆಚ್ಚಳ: ಸಿಎಂ
ಬೆಂಗಳೂರು, ಜೂನ್ 08: ಬೆಂಗಳೂರಲ್ಲಿ ಕಳೆದ ಜೂನ್ 04ರಂದು ಬುಧವಾರ IPL 2025 ಕಪ್ ಗೆದ್ದು ಸಂಭ್ರಮಾಚರಣೆಗೆ ಬಂದಿದ್ದ RCB ತಂಡ ನೋಡಲು ಮುಗಿಬಿದ್ದ ವೇಳೆ ನಡೆದ ಕಾಲ್ತುಳಿತದಲ್ಲಿ ಮೃತಪಟ್ಟವರಿಗೆ ಘೋಷಿಸಿದ್ದ ಪರಿಹಾರ ಮೊತ್ತವನ್ನು ಸರ್ಕಾರ ಹೆಚ್ಚಿಸಿದೆ. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪರಿಹಾರ ಹಣ ಹೆಚ್ಚಿಸುವಂತೆ ಮುಖ್ಯಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ.
ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣ ಬಳಿಕ ಸಂಭವಿಸಿದ ದುರಂತದಲ್ಲಿ ಮೃತರಾದ 11 ಮಂದಿಗೆ ಸರ್ಕಾರ ತಲಾ 10,00,000 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿತ್ತು. ಅದನ್ನೀಗ 25,00,000 ಲಕ್ಷ ರೂಪಾಯಿಗಳಿಗೆ ಹೆಚ್ಚಿಸುವಂತೆ ಶನಿವಾರ ಮುಖ್ಯಮಂತ್ರಿಗಳು ಆದೇಶಿಸಿದ್ದಾರೆ. ಮೃತ ಕುಟುಂಬಸ್ಥರಿಗೆ ಆರ್ಥಿಕವಾಗಿ ನೆರವಾಗುವ ಉದ್ದೇಶದಿಂದ ಈ ನಿರ್ಧಾರಕ್ಕೆ ಬರಲಾಗಿದೆ.

ಘಟನೆ ಕಾರಣ ಎಂದು ಆರೋಪ ಎದುರಿಸುತ್ತಿರುವ RCB ಪ್ರಾಂಚೈಸಿ ಸಹ ಮೃತರಿಗೆ ತಲಾ 10,00,000 ರೂಪಾಯಿ ಪರಿಹಾರ ಈಗಾಗಲೇ ಘೋಷಿಸಿದೆ. ಇದರೊಂದಿಗೆ ಕರ್ನಾಟಕ ರಾಜ್ಯ ಕ್ರಿಕೇಟ್ ಅಸೋಸಿಯೇಷನ್ (KSCA) ಅವರು ಸಹ ಮೃತರಿಗೆ ಸಂತಾಪ ಸೂಚಿಸಿ ತಲಾ 5,00,000 ರೂಪಾಯಿ ನೀಡುವುದಾಗಿ ಈಗಾಗಲೇ ತಿಳಿಸಿದೆ.
ಒಟ್ಟು 40,00,000 ಲಕ್ಷ ರೂ. ಪರಿಹಾರ
ಈ ಮೂಲಕ ಮೃತರಿಗೆ ಸರ್ಕಾರ, ರಾಯಲ್ ಚಾಲೆಂಸರ್ಜ್ ಬೆಂಗಳೂರು (RCB) ಪ್ರಾಂಚೈಸಿ ಹಾಗೂ ಕರ್ನಾಟಕ ರಾಜ್ಯ ಕ್ರಿಕೇಟ್ ಅಸೋಸಿಯೇಷನ್ (KSCA) ಘೋಷಿಸಿದ ಎಲ್ಲ ಪರಿಹಾರ ಮೊತ್ತ ಸೇರಿ ಒಟ್ಟು 40,00,000 ಲಕ್ಷ ರೂಪಾಯಿ ಆಗುತ್ತದೆ.
ಪರಿಹಾರ ಹೆಚ್ಚಳ ಬಗ್ಗೆ ಮಾತನಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಈ ದುರಂತ ಸಂಭವಿಸುತ್ತದೆ ಎಂಬುದು ನಿರೀಕ್ಷಿಸಿರಲಿಲ್ಲ. ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿದ್ದರಿಂದ ಹೀಗಾಗಿದೆ. ಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥರಿಗೆ ಸರ್ಕಾರ ಸಾಂತ್ವನ ಹೇಳಬಹುದು. ಸರ್ಕಾರ ನಿಮ್ಮೊಂದಿಗೆ ಇರುತ್ತದೆ ಅನ್ನಬಹುದು. ಆದರೆ ನಿಮಗಾದ ಮಾನಸಿಕ ನೋವು, ಕುಟುಂಬಸ್ಥರು ಕಳೆದುಕೊಂಡದ್ದನ್ನು ಮರಳಿ ನೀಡಲಾಗುವುದಿಲ್ಲ. ಬದಲಾಗಿ ಭವಿಷ್ಯದ ದೃಷ್ಟಿಯಿಂದ ಸಹಾಯವಾಗುವ ದೃಷ್ಟಿಯಿಂದ ಸರ್ಕಾರ ಪರಿಹಾರ ಮೊತ್ತ ಹೆಚ್ಚಿಸಿದೆ ಎಂದಿದ್ದಾರೆ.












Click it and Unblock the Notifications