ಮಕ್ಕಳು-ಯುವಕರನ್ನು ಹಾದಿ ತಪ್ಪಿಸುವ ಜಾಹೀರಾತು ಕೈ ಬಿಡುವಂತೆ BMTC-KSRTC ಗೆ ಮನವಿ
ಬೆಂಗಳೂರು, ಮೇ 04: ಬೆಂಗಳೂರಿನ ಬಿಎಂಟಿಸಿ ಬಸ್‌ಗಳ ಹಿಂಭಾಗದಲ್ಲಿ ಆರೋಗ್ಯಕ್ಕೆ ಹಾನಿಕಾರವೆಂದು ನಿಷೇಧಿಸಲ್ಪಟ್ಟ ವಿಮಲ್ ಸೇರಿದಂತೆ ಇನ್ನಿತರ ಪಾನ್ ಮಸಾಲ (ತಂಬಾಕು ಉತ್ಪನ್ನ) ಜಾಹೀರಾತು ತೆರವಿಗೆ ಆಗ್ರಹ ಕೇಳಿ ಬಂದಿದೆ.
ಈ ಸಂಬಂಧ ಆಕ್ಷೇಪಿಸಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC)ಗೆ ಆರೋಗ್ಯ ಸೇವಾ ಸಂಘಗಳ ಒಕ್ಕೂಟವಾದ ತಂಬಾಕು ಮುಕ್ತ ಕರ್ನಾಟಕ (CFTFK) ಒಕ್ಕೂಟವು ಪತ್ರ ಬರೆದು ಮನವಿ ಮಾಡಿದೆ. ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಬಸ್‌ಗಳ ಹಿಂಭಾಗದಲ್ಲಿ ವಿಮಲ್, ಸ್ಟಾರ್, ಆರ್ ಎಂಡಿ, ಎಲೈಚಿ' ಜಾಹೀರಾತನ್ನು ಹಾಕುವುದಕ್ಕೆ ಸಂಘ ವಿರೋಧಿಸಿದೆ. ಇಂತಹ ಜಾಹೀರಾತುಗಳನ್ನು ಕೈ ಬಿಡಬೇಕು ಎಂದು ನಿಗದಮ ಅಧ್ಯಕ್ಷರಿಗೆ ಸಂಘ ಒತ್ತಾಯಿಸಿದೆ.

ಭಾರತದಲ್ಲಿ ತಂಬಾಕು ಮತ್ತು ಆಲ್ಕೋಹಾಲ್ ಉತ್ಪನ್ನಗಳ ನೇರ ಜಾಹೀರಾತು ಮಾಡುವುದನ್ನು ನಿಷೇಧಿಸಲಾಗಿದೆ. ಆದ್ದರಿಂದ ತಯಾರಕರು ಬದಲಿ ಉತ್ಪನ್ನಗಳಂತಹ ಜಾಹೀರಾತುಗಳ ಪ್ರದರ್ಶನಕ್ಕೆ ಸೃಜನಶೀಲ ವಿಧಾನಗಳನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು CFTFK ಸಂಚಾಲಕ ಎಸ್.ಜೆ.ಚಂದರ್ ತಿಳಿಸಿದ್ದಾರೆ ಎಂದು ಕನ್ನಡಪ್ರಭ ವರದಿ ಮಾಡಿದೆ.
ಇನ್ನು ಆರೋಗ್ಯಕ್ಕೆ ಕುತ್ತರು ತರುವ, ಕ್ಯಾನ್ಸರ್ ಕಾಯಿಲೆಗೆ ನೂಕುವ ತಂಬಾಕು ಉತ್ಪನ್ನಗಳಾದ ವಿಮಲ್ ಪಾನ್ ಮಸಾಲಾ, ರಜನಿಗಂಧ, ಮಧ್ಯವಾದ ಇಂಪೀರಿಯಲ್ ಬ್ಲೂ (ಐಬಿ) ಮತ್ತು ಸ್ಟೆರ್ಲಿಂಗ್ ರಿಸರ್ವ್ ಸೇರಿದಂತೆ ಇನ್ನಿತರ ಆಲ್ಕೋಹಾಲ್ ಪಾನೀಯಗಳನ್ನು ಮಾರಾಟ ಮಾಡುವ ಕಂಪನಿಗಳಿಗೆ ಅಂತಹ ಜಾಹೀರಾತುಗಳ ವಿರುದ್ಧ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರವು ನೋಟಿಸ್ ನೀಡಿದೆ ಎಂದರು.

ಆರೋಗ್ಯ ಮಾರಕ: ಜಾಹೀರಾತು ಪ್ರದರ್ಶನ ಕೈಬಿಡಿ
ಬೆಂಗಳೂರು ಒಂದರಲ್ಲಿ ನಿತ್ಯ ಲಕ್ಷಾಂತರ ಮಂದಿ ಬಿಎಂಟಿಸಿ ಬಸ್‌ಗಳು ಬಳಸುತ್ತಾರೆ. ಈ ಬಸ್‌ಗಳು ರಸ್ತೆಯಲ್ಲಿ ಸಂಚರಿಸುವಾಗ ಹೆಣ್ಣುಮಕ್ಕಳು, ನಾಗರಿಕರು, ವಿಶೇಷವಾಗಿ ಮಕ್ಕಳು ಜಾಹೀರಾತುಳನ್ನು ನೋಡಿ ಒಡ್ಡಿಕೊಳ್ಳುವ ಸಾಧ್ಯತೆ ಇರುತ್ತದೆ. ಬಸ್ ಹಿಂದೆ ನೀಡಲಾಗಿರುವ ಜಾಹಿರಾತುಗಳು ಆರೋಗ್ಯಕ್ಕೆ ಮಾರಕವಾಗಿದೆ. ಇದೆಲ್ಲ ಪರಿಗಣಿಸಿ ನಿಗಮ ಅವುಗಳನ್ನು ಕೈ ಬಿಡಬೇಕು ಎಂದು ಒತ್ತಾಯಿಸಿದರು.
ಸಾರ್ವಜನಿಕ ಸಾರಿಗೆ ನಿಗಮಗಳು ಇಂತಹ ಜಾಹೀರಾತುಗಳಿಂದ ದೂರವಿರಬೇಕು. ಇಂತಿಷ್ಟು ಹಣಕ್ಕಾಗಿ ಜಾಹೀರಾತು ಕುರಿತು ಪಾನ್ ಮಸಾಲ ಕಂಪನಿಗಳ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದರೆ ದಯವಿಟ್ಟು ಅದನ್ನು ಈ ಕೂಡಲೇ ರದ್ದು ಮಾಡಿಕೊಳ್ಳಬೇಕು. ಕೇವಲ ಬಿಎಂಟಿಸಿಯಲ್ಲಿ ಮಾತ್ರವಲ್ಲದೇ ಕೆಎಸ್‌ಆರ್‌ಟಿಸಿ ಬಸ್ ಹಿಂಭಾಗವು ಇಂತದ್ದೆ ಜಾಹೀರಾತುಗಳು ಕಂಡು ಬಂದಿವೆ ಎಂದು ಅವರು ಹೇಳಿದರು.
ಈ ಜಾಹೀರಾತು ನಿಷೇಧಿಸಲಾಗಿದೆ
'ಎಲೈಚಿ' (ಏಲಕ್ಕಿ) ನೆಪದಲ್ಲಿ ವಿಮಲ್ ಜಗಿಯುವ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವ ಉದ್ದೇಶದಿಂದ ಈ ಜಾಹೀರಾತು ನೀಡಲಾಗುತ್ತದೆ. ಕೇವಲ ಪಾನ್ ಮಸಾಲ ಮಾತ್ರವಲ್ಲದೇ ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳ ನೇರ ಮತ್ತು ಪರೋಕ್ಷ ಜಾಹೀರಾತು ನೀಡುವುದನ್ನು ನಿಷೇಧಿಸಲಾಗಿದೆ ಎಂದು ವಿವರಿಸಿದರು. ಈ ಸಂಬಂಧ ಬಿಎಂಟಿಸಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಸತ್ಯವತಿ ಹಾಗೂ ಮತ್ತು ಕೆಎಸ್‌ಆರ್‌ಟಿಸಿ ಎಂಡಿ ಅನ್ಬುಕುಮಾರ್ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿಲ್ಲ.
ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆ ಸ್ಟಾಪ್ ಟೊಬ್ಯಾಕೊ ಅಪ್ಲಿಕೇಶನ್ (Stop Tobacco app) ಬಿಗುಡೆಗೊಳಿಸಿದೆ. ಅದರಿಂದ ಜನರು ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವ ಬಗ್ಗೆ ದೂರು ನೀಡಬಹುದು. ಇದು ತಂಬಾಕು ಮುಕ್ತೊಗಳಿಸಲು ಸಹಾಯಕವಾಗಿದೆ. ಬಸ್ ನಿಗಮಗಳು ಇಂತಹ ಜಾಹೀರಾತು ಪ್ರದರ್ಶನ ನಿಲ್ಲಿಸಬೇಕು ಎಂದು ರಾಜ್ಯ ಆರೋಗ್ಯ ಆಯುಕ್ತ ಡಿ ರಂದೀಪ್ ಕೋರಿದ್ದಾರೆ ಎಂದು ತಿಳಿದು ಬಂದಿದೆ.












Click it and Unblock the Notifications