BTM Layout Constituency : ಕ್ಷೇತ್ರದಲ್ಲಿ ಹೇಗಿದೆ ವಿಧಾನಸಭೆ ಚುನಾವಣಾ ಕಾವು?: ವರದಿ, ವಿಶ್ಲೇಷಣೆ ಇಲ್ಲಿದೆ
ಬಿಟಿಎಂ ಲೇಔಟ್ ಕ್ಷೇತ್ರದಲ್ಲಿ ಕೈ ನಾಯಕ ರಾಮಲಿಂಗಾ ರೆಡ್ಡಿ ಮೂರು ಬಾರಿ ಚುನಾಯಿತರಾಗಿದ್ದಾರೆ.2023ರ ವಿಧಾನಸಭಾ ಚುನಾವಣೆಯಲ್ಲಿ ಅವರಿಗೆ ಹಿನ್ನೆಡೆ ಉಂಟು ಮಾಡಲು ಜೆಡಿಎಸ್, ಬಿಜೆಪಿ ಸಜ್ಜಾಗಿವೆ.
ಬೆಂಗಳೂರು, ಫೆಬ್ರವರಿ 21: ರಾಷ್ಟ್ರಕವಿ ಕುವೆಂಪು ಅವರ ಹೆಸರು ನಾಮಕರಣ ಮಾಡಿದರೂ ಸಹಿತ ಸಿಲಿಕಾನ್ ಸಿಟಿ ಬೆಂಗಳೂರಿನ ದಕ್ಷಿಣದ ಒಂದು ಪ್ರದೇಶವು 'ಬಿಟಿಎಂ ಲೇಔಟ್' ಎಂದೇ ಪ್ರಸಿದ್ಧಿ ಪಡೆದಿದೆ. ಕರ್ನಾಟಕ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಟಿಎಂ ಲೇಔಟ್ ಸಹ ಒಂದಾಗಿದೆ.
ಭೌಗೋಳಿಕವಾಗಿ ಈ ಬಿಟಿಎಂ ಬಡಾವಣೆ ವಿಸ್ತಾರವಾಗಿದೆ. ಸಮೃದ್ಧವಾದ ತಾವರೆಕೆರೆ, ಮಡಿವಾಳ ಭೈರಸಂದ್ರವನ್ನು ಕ್ಷೇತ್ರ ಒಳಗೊಂಡಿದೆ. ನಗರದ ಹೊರ ವರ್ತುಲ ರಸ್ತೆ (ORR)ಯು ಈ ಲೇಔಟ್ ಅನ್ನು ಮೊದಲನೇ ಹಂತ ಮತ್ತು ಎರಡನೇ ಹಂತವಾಗಿ ಬೇರ್ಪಡಿಸುತ್ತದೆ. ಈ ಪ್ರದೇಶಕ್ಕೆ ಅಂಟಿಕೊಂಡಿರುವ ತಾವರೆಕೆರೆಗೆ ದೇಶ, ವಿದೇಶಗಳಿಂದ ಹಕ್ಕಿಗಳು ವಲಸೆ ಬರುತ್ತವೆ. ಕೋರಮಂಗಲ, HSR ಬಡಾವಣೆ, ಬನ್ನೇರುಘಟ್ಟ ರಸ್ತೆ, ಜೆಪಿನಗರ, ಮಡಿವಾಳ ಹಾಗೂ ಜಯನಗರ ಬಿಟಿಎಂ ಲೇಔಟ್ ಕ್ಷೇತ್ರದ ವ್ಯಾಪ್ತಿಗೆ ಬರುತ್ತವೆ. ವಾಸಸ್ಥಾನಕ್ಕೆ ನಗರದ ಹಲವು ಪ್ರದೇಶಗಳ ಪೈಕಿ ಇದು ಸಹ ಅನುಕೂಲಕರ ಪರಿಸರ ಹೊಂದಿದೆ.
ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರದಿಂದ ಹತ್ತು ಕಿಲೋಮೀಟರ್ ದೂರದಲ್ಲಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ (ಅಭಯಾರಣ್ಯ) ಇದೆ. ಈ ಕ್ಷೇತ್ರವು ಮೊದಲು ಉತ್ತರಹಳ್ಳಿ ವಿಧಾನಸಭಾ ಕ್ಷೇತ್ರದ ಭಾಗವಾಗಿತ್ತು. ಕ್ಷೇತ್ರಗಳ ವಿಂಗಡಣೆ ಬಳಿಕ ಸ್ವತಂತ್ರ ವಿಧಾನಸಭಾ ಕ್ಷೇತ್ರವಾಯಿತು. ಇಲ್ಲಿಂದ ಕಾಂಗ್ರೆಸ್‌ನ ನಾಯಕ ರಾಮಲಿಂಗಾ ರೆಡ್ಡಿ ಅವರು ಸತತವಾಗಿ ಮೂರು ಬಾರಿ ಗೆದ್ದು ಬೀಗಿದ್ದಾರೆ. ಇದೀಗ ಅವರು ನಾಲ್ಕನೇ ಬಾರಿ ಗೆಲುವಿನ ನಿರೀಕ್ಷೆಯಲ್ಲಿ 2023ನೇ ವಿಧಾನಸಭಾ ಚುನಾವಣೆ ಎದುರು ನೋಡುತ್ತಿದ್ದಾರೆ.

ಬಿಟಿಎಂ ಲೇಔಟ್ ಕ್ಷೇತ್ರದ ರಾಜಕೀಯ ಹಿನ್ನೆಲೆ
ಬಿಟಿಎಂ ಲೇಔಟ್ ಕ್ಷೇತ್ರದ ಇತಿಹಾಸ ನೋಡುವುದಾದರೆ ಸದ್ಯ ರಾಜ್ಯದ ಅಧಿಕಾರ ವಹಿಸಿಕೊಂಡಿರುವ ಬಿಜೆಪಿ ಇಲ್ಲಿ ಒಂದಕ್ಕು ಹೆಚ್ಚು ಭಾರಿ ಗೆದ್ದಿಲ್ಲ. ಹಿಂದಿನಿಂದಲೂ ಈ ಕ್ಷೇತ್ರವು ಕಾಂಗ್ರೆಸ್ ಭದ್ರಕೋಟೆಯೇ ಆಗಿದೆ. 1967ರ ಎಸ್.ನಿಜಲಿಂಗಪ್ಪ ಅವರ ಕಾಲದಿಂದಲೂ ಇಲ್ಲಿ ಕಾಂಗ್ರೆಸ್ಸೇ ಸಾರ್ವಭೌಮ. 2008 ರಿಂದ ರಾಮಲಿಂಗಾರೆಡ್ಡಿ ಅವರು ಮೂರು ಬಾರಿ ಚುನಾಯಿತರಾಗಿದ್ದಾರೆ, ಶಾಸಕರಾಗಿದ್ದಾರೆ. 2004ರಲ್ಲಿ ಒಮ್ಮೆ ಮಾತ್ರವೇ ಬಿಜೆಪಿಯ ಗಂಗಾಧರ್ ನಾಗೇಶ್ ಭಟ್ ಅವರು ಗೆದ್ದಿದ್ದಾರೆ. ಇದರ ಹೊರತು ಕಾಂಗ್ರೆಸ್ ಮಣಿಸುವಲ್ಲಿ ಸಾಕಷ್ಟು ಭಾರಿ ಜೆಡಿಎಸ್ ಮತ್ತು ಬಿಜೆಪಿ ವಿಫಲವಾಗಿವೆ.

ಬಿಟಿಎಂ ಲೇಔಟ್: ರಾಮಲಿಂಗಾ ರೆಡ್ಡಿ ಗೆಲುವಿನ ನಿರೀಕ್ಷೆ
2023ರ ವಿಧಾನಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ನಾಯಕ, ಶಾಸಕ ರಾಮಲಿಂಗಾರೆಡ್ಡಿ ಅವರು ನಾಲ್ಕನೇ ಬಾರಿಗೆ ಜಯದ ನಿರೀಕ್ಷೆಯಲ್ಲಿದ್ದಾರೆ. ಅವರಿಗೆ ಶಾಸಕರಾಗಿ, ಸಚಿವರಾಗಿಯೂ ಅನುಭವ ಇದೆ. ಜನರ ಸಮಸ್ಯೆ ಆಲಿಸುವ, ಸಾರ್ವಜನಿಕ ಕೈಗೆ ಸಿಗುವ ಜನನಾಯಕರ ಪೈಕಿ ಇವರು ಹೌದು. ಎಲ್ಲರೊಟ್ಟಿಗೆಯು ಸಮಾನರಾಗಿದ್ದು, ಅಪಾರ ಗೌರವ ಸಂಪಾದಿಸಿದ್ದಾರೆ. ಅವರು ತಮ್ಮ ಕಾರ್ಯಗಳಿಂದಲೇ ಹೆಚ್ಚು ಪ್ರಾಬಲ್ಯ ಹೊಂದಿದ್ದಾರೆ. ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಕ್ರಮ ಮಾಡುವ ಮೂಲಕವೇ ಹೆಸರುವಾಸಿಯಾಗಿದ್ದಾರೆ. ಹೀಗಾಗಿ ಈ ಕ್ಷೇತ್ರ ಪಡೆದುಕೊಳ್ಳುವುದು ಬಿಜೆಪಿ ಮತ್ತು ಜೆಡಿಎಸ್‌ಗೆ ಅಷ್ಟು ಸುಲಭವಲ್ಲ ಎಂದು ರಾಜಕೀಯ ಪಂಡಿತರು ಅಭಿಪ್ರಾಯಪಟ್ಟಿದ್ದಾರೆ.

2023ರ ಚುನಾವಣೆಯಲ್ಲಿ ಬಿಜೆಪಿಯಿಂದ ಪ್ರಬಲ ಪೈಪೋಟಿ
ಇನ್ನೇನು ಚುನಾವಣೆ ಹತ್ತಿರವಾಗುತ್ತಿದೆ. ಈ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆಯಾದರೂ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ವಲಸಿಗರೇ ಹೆಚ್ಚಿರುವ ಈ ಕ್ಷೇತ್ರದಲ್ಲಿ ಸತತವಾಗಿ ಕೈ ನಾಯಕರು ಗೆಲುವಿನ ನಗೆ ಬೀರುತ್ತಿದ್ದಾರೆ. ಹೀಗಿರುವಾಗ ಬಿಜೆಪಿಗೆ ಈ ಕ್ಷೇತ್ರ ಧಕ್ಕಿಸಿಕೊಳ್ಳುವುದು ಕಷ್ಟಸಾಧ್ಯವಾಗಬಹುದು. ರಾಮಲಿಂಗಾರೆಡ್ಡಿ ಅವರನ್ನು ಮಣಿಸಲು ಬಿಜೆಪಿಯಲ್ಲಿ ನಾ ಮುಂದು, ತಾ ಮುಂದು ಎಂದು ಟಿಕೆಟ್ ಆಕಾಂಕ್ಷಿಗಳು ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಜೆಡಿಎಸ್ ಸಹ ಕಳೆದ 2018ರ ಚುನಾವಣೆಯಲ್ಲಿ ತೀವ್ರ ಹಣಾಹಣಿ ಮಧ್ಯೆ 20,000 ಮತಗಳ ಅಂತರದಿಂದ ಸೋಲುಂಡಿತ್ತು. ಈ ಸಲ ಬಿಜೆಪಿ ಹಾಗೂ ಜೆಡಿಎಸ್ ಎರಡು ಕಾಂಗ್ರೆಸ್‌ಗೆ ಪ್ರಬಲ ಪೈಪೋಟಿ ನೀಡಲಿವೆ.

ಬಿಟಿಎಂ ಲೇಔಟ್ ಕ್ಷೇತ್ರ: ಟಿಕೆಟ್ ಆಕಾಂಕ್ಷಿಗಳು ಯಾರು?
ಬರಲಿರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ರಾಮಲಿಂಗಾರೆಡ್ಡಿಯವರಿಗೇ ಟಿಕೆಟ್ ಎಂಬುದರಲ್ಲಿ ಎರಡು ಮಾತಿಲ್ಲ. ಬಹುತೇಕ ಅವರೇ ಪೈನಲ್ ಆಗಿದ್ದಾರೆ. ಇನ್ನೂ ಬಿಜೆಪಿಯಿಂದ ವಿವೇಕ್ ರೆಡ್ಡಿ ಸೇರಿದಂತೆ ಮತ್ತಿಬ್ಬರು ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಆದರೆ ಈ ಬಗ್ಗೆ ಸ್ಪಷ್ಟ ನಿಲುವು ತೋರದ ಬಿಜೆಪಿ ಬೇರೊಬ್ಬ ಪ್ರಭಾವಿ ನಾಯಕರನ್ನು ತಂದು ನಿಲ್ಲಿಸುವ ಸಾಧ್ಯತೆ ಇದೆ. ಇನ್ನೂ ಜೆಡಿಎಸ್‌ನಿಂದ ಕಳೆದ ಬಾರಿ ಸೋತ ದೇವದಾಸ್ ಅವರನ್ನು ಅಥವಾ ಹೊಸ ಮುಖ ಪರಿಚಯಿಸಬಹುದು. ಟಿಕೆಟ್ ಹಂಚಿಕೆ ವಿಚಾರದಲ್ಲಿ ಕಾಂಗ್ರೆಸ್ ಬಿಟ್ಟು ಉಳಿದ ಪಕ್ಷಗಳಿಂದ ಅಧಿಕೃತ ಮಾಹಿತಿ ಬಿಡುಗಡೆಯಾಗಿಲ್ಲ.
ಮತದಾರರ ಸಂಖ್ಯೆ
ವಾರ್ಡ್ -176
ಒಟ್ಟು ಮತದಾರರು- 2,83,000
ಒಕ್ಕಲಿಗರು- 55,000
ಲಿಂಗಾಯತ - 5,000
ಬ್ರಾಹ್ಮಣರು- 23,000
ಒಬಿಸಿ- 28,000
ಎಸ್‌ಸಿ-ಎಸ್‌ಟಿ - 52,000
ಮುಸ್ಲಿಂ - 12,000
ಇತರೆ-1,08,000
-
SWR: ಏಪ್ರಿಲ್ 2-5 ಬೆಂಗಳೂರು, ಹುಬ್ಬಳ್ಳಿಯಿಂದ ವಿಶೇಷ ಎಕ್ಸ್ಪ್ರೆಸ್ ರೈಲು ಕಾರ್ಯಾಚರಣೆ, ವೇಳಾಪಟ್ಟಿ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Hindi Language: ಹಿಂದಿ ಭಾಷೆ ರದ್ದು, ಎಸ್ಎಸ್ಎಲ್ಸಿ ಮಕ್ಕಳ ಬದುಕಿಗೆ ಕಲ್ಲು:ಆರ್ ಅಶೋಕ್ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ












Click it and Unblock the Notifications