Bomb Scare: ಬೇರೆ ಶಾಲೆಯ ವಿದ್ಯಾರ್ಥಿಯಿಂದ ಬಸವೇಶ್ವರ ನಗರ ಶಾಲೆಗೆ ಬಾಂಬ್ ಬೆದರಿಕೆ: ಪೊಲೀಸ್
ಬೆಂಗಳೂರು ಜನವರಿ 08: ಪೂರ್ವ ಬೆಂಗಳೂರಿನ ಅಂತಾರಾಷ್ಟ್ರೀಯ ಶಾಲೆಯೊಂದರ ಎಂಟನೇ ತರಗತಿಯ ವಿದ್ಯಾರ್ಥಿಯೊಬ್ಬ ಗುರುವಾರ ರಾತ್ರಿ ಬಸವೇಶ್ವರನಗರದ ನ್ಯಾಷನಲ್ ಅಕಾಡೆಮಿ ಫಾರ್ ಲರ್ನಿಂಗ್ ಶಾಲೆಗೆ ಹುಸಿ ಬಾಂಬ್ ಕುರಿತು ಇಮೇಲ್ ಕಳುಹಿಸಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.
ಎಂಟನೇ ತರಗತಿಯ ಬಾಲಕ ಹೆಬ್ಬಾಳದ ಸಮೀಪ ತನ್ನ ತಾಯಿ ಮತ್ತು ಅಜ್ಜಿಯೊಂದಿಗೆ ವಾಸಿಸುತ್ತಿದ್ದಾನೆ. ಆತ ದುರುದ್ದೇಶದಿಂದ ಈ ರೀತಿ ಮಾಡದೇ ಕೇವಲ ಸಂತೋಷಕ್ಕಾಗಿ ಶಾಲೆ ಬಾಂಬ್ ಬೆದರಿಕೆಯ ಮೇಲ್ ಮಾಡಿದ್ದಾನೆ. ಈ ರೀತಿ ಬಾಂಬ್ ಕುರಿತು ಒಂದು ಶಾಲೆಗೆ ಬೆದರಿಕೆ ಸಂದೇಶ ರವಾನಿಸಿದರರೆ ಅದರ ಮುಂದಿನ ಪರಿಣಾಮ ಬಗ್ಗೆ ಆತ ಯೋಚನೆ ಮಾಡಿಲ್ಲ ಎಂದು ತನಿಖೆ ಕೈಗೊಂಡಿರುವ ಪೊಲೀಸ್ ಅಧಿಕಾರಿಗಳಿಗೆ ಬಾಲಕ ತಿಳಿಸಿದ್ದಾನೆ.
ಬಾಲಕನ ತಾಯಿ ಪತಿಯಿಂದ ವಿಚ್ಛೇದನ ಪಡೆದಿದ್ದು, ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಇಮೇಲ್ ಕಳುಹಿಸಲು ಬಾಲಕ ತನ್ನ ತಾಯಿಯ ಐಪ್ಯಾಡ್ ಅನ್ನು ಬಳಸಿರುವುದಾಗಿ ತಿಳಿದು ಬಂದಿದೆ.

ಬಾಲಕನ ಕೆಲವು ಸ್ನೇಹಿತರು ಬಸವೇಶ್ವರದ ನಗರದಲ್ಲಿರುವ ಈ ನ್ಯಾಷನಲ್ ಅಕಾಡೆಮಿ ಫಾರ್ ಲರ್ನಿಂಗ್ ಶಾಲೆನಲ್ಲಿ ಓದುತ್ತಿದ್ದಾರೆ. ತಾನು ತಮಾಷೆಗಾಗಿ ಈ ರೀತಿ ಮೇಲ್ ಮಾಡಿರುವುದಾಗಿ ಹಾಗೂ ಯಾರನ್ನು ಗುರಿಯಾಗಿಸಿಕೊಂಡು ಕೆಟ್ಟ ಯೋಚನೆಯಿಂದ ಈ ರೀತಿ ಮಾಡಿಲ್ಲ ಎಂದು ಬಾಲಕ ವಿಚಾರಣೆ ವೇಳೆ ಹೇಳಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ಹಿನ್ನೆಲೆ
'ನನ್ನ ಬಳಿ ಡೈನಮೈಟ್ ನಾಲ್ಕು ಸ್ಟಿಕ್‌ಗಳಿವೆ ಮತ್ತು ನಾಳೆ ಮಧ್ಯಾಹ್ನ ಊಟದ ಸಮಯದಲ್ಲಿ ನಾನು ಅವುಗಳನ್ನು ಸ್ಫೋಟಿಸುತ್ತೇನೆ- ನಿಮ್ಮ ನೆಚ್ಚಿನ ವಿದ್ಯಾರ್ಥಿ" ಎಂದು ಆ ಬಾಲಕ ತನ್ನ ತಾಯಿಯ ಐಪ್ಯಾಡ್‌ಬಳಸಿ [email protected] ನಿಂದ ನ್ಯಾಷನಲ್ ಅಕಾಡೆಮಿ ಫಾರ್ ಲರ್ನಿಂಗ್ ಶಾಲೆ (NAFL)ಗೆ ಗುರುವಾರ ರಾತ್ರಿ ಎರಡು-ಸಾಲಿನ ಕಳುಹಿಸಿದ್ದಾರೆ.
ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರ ತಂಡ ಕೂಡಲೇ ಸ್ಥಳಕ್ಕೆ ಧಾವಿಸಿತು. ಬಾಂಬ್ ನಿಷ್ಕ್ರೀಯ ದಳವು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿತು. ಈ ವೇಳೆ ಪೋಷಕರು, ಮಕ್ಕಳು ಹಾಗು ಶಾಲಾ ಸಿಬ್ಬಂದಿ ಆತಂಕ್ಕೆ ಒಳಗಾಗಿದ್ದರು. ಬಸವೇಶ್ವರ ನಗರ ವ್ಯಾಪ್ತಿಯಲ್ಲಿನ ಈ ರಾಜಾಜಿನಗರ ಶಾಲೆಗೆ ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಭೇಟಿ ನೀಡಿ ಪರಿಶೀಲಿಸಿದರು. ಪ್ರಾಂಶುಪಾಲರು ಮತ್ತು ಶಿಕ್ಷಕರ ಜೊತೆ ಚರ್ಚಿಸಿ, ಯಾರಿಂದ ಮೇಲ್ ಬಂದಿದೆ, ಅದರ ಉದ್ದೇಶ ಎಲ್ಲವು ತನಿಖೆ ನಡೆಸುವಂತೆ ಸೂಚಿಸಿದ್ದರು.

ಸದ್ಯ ಹುಸಿ ಬಾಂಬ್ ಸಂದೇಶದ ಸತ್ಯ ಬಯಲಾಗಿದೆ. ಪೊಲೀಸರು ಪ್ರಕರಣದ ಚಾರ್ಜ್ ಶೀಟ್ ಸಲ್ಲಿಸುತ್ತಾರೆ. ಪೊಲೀಸರ ಚಾರ್ಜ್ ಶೀಟ್ ವರದಿ ಸ್ವೀಕರಿಸುವ ರಾಜ್ಯ ಬಾಲಾಪರಾಧಿ ಮಂಡಳಿಯು ಬಾಲಕ ಮತ್ತವರ ಕಟುಂಬಕ್ಕೆ ಸಮನ್ಸ್ ಜಾರಿ ಮಾಡುತ್ತದೆ ಎನ್ನಲಾಗಿದೆ.












Click it and Unblock the Notifications