Audio Viral: ಆರ್‌ಆರ್ ನಗರ ಬಿಜೆಪಿ ಶಾಸಕ ಮುನಿರತ್ನ ಕಚೇರಿ ಸಿಬ್ಬಂದಿಯ ಸ್ಫೋಟಕ ಆಡಿಯೋ ವೈರಲ್
BJP MLA Munirathna: ಗುತ್ತಿಗೆದಾರನಿಗೆ ಜೀವ ಬೆದರಿಕೆ ಹಾಗೂ ಜಾತಿ ನಿಂದನೆ ಪ್ರಕರಣದಲ್ಲಿ ಆರ್‌ಆರ್ ನಗರ ಬಿಜೆಪಿ ಶಾಸಕ ಮುನಿರತ್ನಗೆ ಕೋರ್ಟ್ ಷರತ್ತುಬದ್ಧ ಜಾಮೀನು ನೀಡಿತ್ತು. ಇದರ ಬೆನ್ನಲ್ಲೇ ಅತ್ಯಾಚಾರ ಪ್ರಕರಣದಲ್ಲಿ ಪರಪ್ಪನ ಅಗ್ರಹಾರದಲ್ಲೇ ಅವರನ್ನು ಬಂಧಿಸಲಾಯಿತು. ಇದೀಗ ಅವರ ಕಚೇರಿ ಸಿಬ್ಬಂದಿಗಳಿಂದ ಸ್ಫೋಟಕ ಆಡಿಯೋ ವೈರಲ್ ಆಗುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಗುತ್ತಿಗೆದಾರನಿಗೆ ಜೀವ ಬೆದರಿಕೆ ಹಾಗೂ ಜಾತಿ ನಿಂದನೆ ಪ್ರಕರಣದಲ್ಲಿ ಬಿಜೆಪಿ ಶಾಸಕ ಮುನಿರತ್ನಗೆ ಅಗ್ರಹಾರ ಜೈಲು ಸೇರಿ, ಬಳಿಕ ಜಾಮೀನಿನ ಮೇಲೆ ಹೊರಬಂದಿದ್ದರು. ಅದಾದ ಬಳಿಕ ಮಹಿಳೆ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ರಾಮನಗರ ಪೊಲೀಸರು ಬಂಧಿಸಿದ್ದರು.

ಇದೀಗ ಶಾಸಕ ಮುನಿರತ್ನ ಅವರ ಕಚೇರಿ ಸಿಬ್ಬಂದಿಯಿಂದ ಸ್ಪೋಟಕ ಆಡಿಯೋ ಇದೀಗ ವೈರಲ್ ಆಗಿದೆ. ದೇವರಾಜ ಅರಸು ನಿಗಮದ ಸಾರಥಿ ಯೋಜನೆಯಡಿಯಲ್ಲಿ ಫಲಾನುಭಾವಿಗಳಿಗೆ ವಾಹನ ವಿತರಿಸಲು, ಬಿಜೆಪಿ ಶಾಸಕ ಮುನಿರತ್ನ ಅವರ ಕಚೇರಿಯ ಸಿಬ್ಬಂದಿ ಫಲಾನುಭವಿಗಳ ಬಳಿ 1,00,000 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎನ್ನುವಂತಹ ಆಡಿಯೋ ಇದೀಗ ವೈರಲ್ ಆಗಿದೆ.
ವಾಹನ ನೀಡಲು 1 ಲಕ್ಷ ರೂಪಾಯಿ ಲಂಚ ನೀಡುವಂತೆ ಶಾಸಕ ಮುನಿರತ್ನ ಕಚೇರಿ ಸಿಬ್ಬಂದಿ ಉಷಾ ಕೇಳಿದ್ದಾರೆ ಎಂದು ಫಲಾನುಭವಿಯೊಬ್ಬರು ಅಳಲು ತೋಡಿಕೊಂಡಿದ್ದಾರೆ. 3 ಲಕ್ಷ ರೂಪಾಯಿ ಮೌಲ್ಯದ ವಾಹನ ನೀಡಲು 1 ಲಕ್ಷ ರೂಪಾಯಿ ಲಂಚ ಕೊಡಿ ಎಂದು ಬೇಡಿಕೆ ಇಟ್ಟಿದ್ದಾರೆ.
ಈಗಾಲೇ 20 ಸಾವಿರ ರೂಪಾಯಿ ಕೊಟ್ಟಿದ್ದೇನೆ. ವಾಹನ ಕೊಡಬೇಕೆಂದರೆ ಇನ್ನೂ 80,000 ರೂಪಾಯಿ ಕೊಡಿ ಎಂದು ಮುನಿರತ್ನ ಕಚೇರಿ ಸಿಬ್ಬಂದಿ ಬೇಡಿಕೆ ಇಟ್ಟಿದ್ದಾರೆ ಎಂದು ಫಲಾನುಭವಿ ಮತ್ತು ಕಾಂಗ್ರೆಸ್ ಮುಖಂಡ ಮಾತನಾಡಿರುವ ಆಡಿಯೋ ವೈರಲ್ ಆಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ ಅಂತಾ ಕನ್ನಡ ನ್ಯೂಸ್ ವರದಿ ಮಾಡಿದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.
ಮುನಿರತ್ನ ಶಾಕಿಂಗ್ ಹೇಳಿಕೆ: ಪ್ರಕರಣದ ಬಗ್ಗೆ ವಿಚಾರಣೆ ನಡೆಸಿದ ಕಗ್ಗಲೀಪುರ ಪೊಲೀಸರ ಮುಂದೆ ಮುನಿರತ್ನ ಅವರು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಹಾಗಾದರೆ ಅವರು ಹೇಳಿದ್ದಾದ್ರೂ ಏನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಬಿಬಿಎಂಎಪಿ ಗುತ್ತಿಗೆದಾರನಿಗೆ ಬೇದರಿಕೆ & ಜಾತಿ ನಿಂದನೆ ಪ್ರಕರಣದಲ್ಲಿ ಬಿಜೆಪಿ ಶಾಸಕ ಮಿನಿರತ್ನ ಅವರಿಗೆ ಕೋರ್ಟ್ ಷರತ್ತುಬದ್ಧ ಜಾಮೀನು ನೀಡಿತ್ತು. ಇದರ ಬೆನ್ನಲ್ಲೇ ಅತ್ಯಾಚಾರ ಪ್ರಕರಣದಲ್ಲಿ ಮುನಿರತ್ನ ಅವರನ್ನು ಪರಪ್ಪನ ಅಗ್ರಹಾರದಲ್ಲೇ ಅರೆಸ್ಟ್ ಮಾಡಿ ಕಗ್ಗಲೀಪುರ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿತ್ತು. ಇನ್ನು ಈ ಪ್ರಕರಣ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಲಿದ್ದು, ಸ್ಫೋಟಕ ಮಾಹಿತಿಗಳನ್ನು ಹೊರಬೀಳುತ್ತಲೇ ಇವೆ.
ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರೆಯ ಹನಿಟ್ರಾಪ್ ಆರೋಪದ ಬಗ್ಗೆ ಶಾಸಕ ಮುನಿರತ್ನ ಪೊಲೀಸರ ಮುಂದೆ ಸ್ಫೋಟಕ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ. "ದೂರುದಾರೆ ನನಗೆ ತುಂಬಾ ಪರಿಚಯ, ಆಕೆಯ ವೃತ್ತಿಯ ಹನಿಟ್ರ್ಯಾಪ್ ಮಾಡುವುದಾಗಿದೆ. ನಿಮಗೆ ಯಾರ ವಿಡಿಯೋ ಬೇಕು ಹೇಳಿ, ನಿಮಗೆ ದುಷ್ಮನ್ ಯಾರಿದ್ದಾರೆ ಹೇಳಿ. ಅಂತಹವರ ವಿಡಿಯೋ ಮಾಡಿಕೊಡುತ್ತೇನೆ ಎಂದು ಆಫರ್ ಕೊಟ್ಟಿದ್ದಳು. ಇದಕ್ಕೆ ನಾನು ಒಪ್ಪಿರಲಿಲ್ಲ," ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.
"ಆಕೆಯೆ ಅಂದರೆ ದೂರುದಾರೆಯೇ ಹನಿಟ್ರ್ಯಾಪ್ ಮಾಡುವ ಕೆಲವವನ್ನು ಮಾಡುತ್ತಿದ್ದರು. ಅಷ್ಟೇ ಅಲ್ಲದೆ ಆ ವಿಡಿಯೋಗಳನ್ನು ನನಗೆ ತಂದು ತೋರಿಸುತ್ತಿದ್ದವು. ಆದರೆ ನಾನು ಆಕೆಯ ಕಡೆಯಿಂದ ಯಾವುದೇ ಹನಿಟ್ರ್ಯಾಪ್ ವಿಡಿಯೋಗಳನ್ನು ಮಾಡಿಸಿಲ್ಲ," ಎಂದು ಹೇಳಿಕೆ ನೀಡಿದ್ದಾರೆ.












Click it and Unblock the Notifications