Bengaluru Traffic: ಹಾಡಗಲೇ ನಗರದಲ್ಲಿ ವೀಲ್ಹಿಂಗ್ ಪುಂಡರ್ ಹಾವಳಿ: ವಿಡಿಯೋ ವೈರಲ್
ಬೆಂಗಳೂರು, ಮಾರ್ಚ್ 06: ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಸಮಸ್ಯೆ ಜೊತೆಗೆ ಸಂಚಾರ ನಿಯಮ ಉಲ್ಲಂಘಿಸುವವರ ಸಂಖ್ಯೆಯು ಕಡಿಮೆ ಏನು ಇಲ್ಲ. ನಗರ ಸಂಚಾರಿ ಪೊಲೀಸರು ಎಷ್ಟೇ ಕಠಿಣ ಕ್ರಮ, ನಿಯಮ ಜಾರಿಗೆ ತಂದರೂ ವ್ಹೀಲಿಂಗ್ ಪುಂಡರ್ ಹಾವಳಿ ಮಾತ್ರ ಕಡಿಮೆ ಆಗಿಲ್ಲ. ನಗರದ ನೈಸ್ ರಸ್ತೆ, ಔಟರ್ ರಿಂಗ್ ರಸ್ತೆ ಹಾಗೂ ಹೊರ ವಲಯದ ರಸ್ತೆಯಲ್ಲಿ ಕಾಣಿಸುತ್ತಿದ್ದ ವೀಲ್ಹಿಂಗ್ ಪುಂಡರ್ ಗುಂಪು ಇದೀಗ ನಗರದ ಹೃದಯ ಭಾಗಕ್ಕೂ ಕಾಲಿಟ್ಟಿದೆ.
ಬೈಕ್ ಏರಿ ವೀಲ್ಹಿಂಗ್ ಮಾಡಿದರೆ ಸಾರ್ವಜನಿಕರಿಗೆ ತೊಂದರೆ ಆಗುತ್ತದೆ ಎಂಬ ಸಾಮಾನ್ಯ ಕಾಳಜಿ ಇಲ್ಲದೇ ನಡುರಸ್ತೆಯಲ್ಲಿ ಪುಂಡಾಟಿಕೆ ಮೆರೆದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವೀಲ್ಹಿಂಗ್ ನಿಷೇಧವಿದ್ದರೂ ಸಹಿತ ಹಾಡಹಗಲೇ ಮೂರು ದ್ವಿಚಕ್ರ ವಾಹನಗಳಲ್ಲಿ (ಮೊಪೆಡ್) ಬಂದ ಕಿಡಿಗೇಡಿಗಳು ನಡುರಸ್ತೆಯಲ್ಲಿ ವ್ಹೀಲಿಂಗ್ ಮಾಡಿದ್ದಾರೆ. ಈ ಘಟನೆ ಬೆಂಗಳೂರು ಜಯನಗರದ 3ನೇ ಬ್ಲಾಕ್‌ನಲ್ಲಿ ನಡೆದಿದೆ.

ಬೆಂಗಳೂರು ಸಂಚಾರಿ ಪೊಲೀಸರ ಭಯ ಇವರಿಗೆ ಇದ್ದಂತೆ ಕಾಣುತ್ತಿಲ್ಲ. ಏಕೆಂದರೆ ಇವರು ಮೂರು ದ್ವಿಚಕ್ರ ವಾಹನಗಳ (ಮೊಪೆಡ್) ನಂಬರ್ ಪ್ಲೇಟ್ ತೆಗೆದು ಹಾಕಿದ್ದಾರೆ. ಹೀಗಾಗಿಯೇ ಏನು ಮಾಡಿದರೂ ನಡೆಯುತ್ತದೆ ಎಂಬ ಯೋಚನೆ ಇವರು ಹೊಂದಿದಂತಿದೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ 'ಥರ್ಡ್ ಐ' ಖಾತೆಯಿಂದ ವಿಡಿಯೋ ಹಂಚಿಕೊಂಡಿದೆ. ಸವಾರರು ವೀಲ್ಹಿಂಗ್ ವೇಳೆ ನಂಬರ್ ಪ್ಲೇಟ್ ತೆಗೆದಿರುವುದು ವಿಡಿಯೋದಲ್ಲಿ ದೃಢವಾಗಿದೆ.
Group of people performing wheelie at Jayanagar 3rd block road and they do this everyday @blrcitytraffic @JnagarTr pic.twitter.com/pAWDyX5Wyn
— ThirdEye (@3rdEyeDude) March 6, 2025
ಟ್ರಾಫಿಕ್ ಪೊಲೀಸರ ಸ್ಪಂದನೆ, ತನಿಖೆ ಪ್ರಗತಿ
ಪೋಸ್ಟ್‌ನಲ್ಲಿ ಬೆಂಗಳೂರು ಸಂಚಾರಿ ಪೊಲೀಸರಿಗೆ ಮತ್ತು ಜಯನಗರ ಪೊಲೀಸರಿಗೆ ವಿಡಿಯೋ ಟ್ಯಾಗ್ ಮಾಡಲಾಗಿದೆ. ಈ ಪ್ರಕರಣ ಕುರಿತು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಟ್ರಾಫಿಕ್ ಪೊಲೀಸರು ತಿಳಿಸಿದ್ದಾರೆ. ನಂಬರ್ ಪ್ಲೇಟ್ ಇಲ್ಲದ ಹಿನ್ನೆಲೆಯ ತನಿಖೆ, ವೀಲ್ಹಿಂಗ್ ಕಿಡಿಗೇಡಿಗಳು ಪತ್ತೆ ಕಾರ್ಯ ಪ್ರಗತಿಯಲ್ಲಿದೆ. ಶೀಘ್ರವೇ ಪತ್ತೆ ಆಗುವ ವಿಶ್ವಾಸ ಪೊಲೀಸರು ವ್ಯಕ್ತಪಡಿಸಿದ್ದಾರೆ.

ನಡುರಸ್ತೆ ಹೀಗೆ ವೀಲ್ಹಿಂಗ್ ಮಾಡುವ ದೃಶ್ಯ ನೀವು ವಿಡಿಯೋದಲ್ಲಿ ನೋಡಬಹುದು. ಇದರಿಂದ ಪಾದಾಚಾರಿಗಳಿಗೆ, ಸಹ ವಾಹನ ಸವಾರರಿಗೆ ತೊಂದರೆ ಆಗುತ್ತದೆ. ರಸ್ತೆ ಅಪಘಾತಗಳ ಹೆಚ್ಚಳ ಕಾರಣವಾಬಹುದು. ಅಲ್ಲದೇ ಈ ಕಿಡಿಗೇಡಿಗಳಿಗೆ ಸ್ವತಃ ಅವರ ಜೀವಕ್ಕೆ ಕುತ್ತು ಬರುವ ಸಾಧ್ಯತೆ ಇರುತ್ತದೆ. ಈ ಕಾರಣದಿಂದಲೇ ವೀಲ್ಹಿಂಗ್ ಮಾಡುವುದನ್ನು ನಿಷೇಧಿಸಲಾಗಿದೆ. ಒಂದು ವೇಳೆ ನಿಯಮ ಉಲ್ಲಂಘಿಸಿದರೆ, ಅಂತವರ ವಿರುದ್ಧ ದಂಡ, ಜೈಲು ಹಾಗೂ ಬೈಕ್ ವಶಕ್ಕೆ ಪಡೆಯುವ ಜೊತೆಗೆ ಪರವಾನಿಗೆ ರದ್ದುಗೊಳಿಸಬಹುದು.












Click it and Unblock the Notifications