ನಾನು 'ಜಯಾ' ಮಗಳು, ಡಿಎನ್ ಎ ಪರೀಕ್ಷೆ ಮಾಡಿ ಎಂದ ಬೆಂಗಳೂರಿನ ಅಮೃತಾ
ಬೆಂಗಳೂರು, ನವೆಂಬರ್ 27: ತಮಿಳುನಾಡಿನ ದಿವಂಗತ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ವಾರಸುದಾರಿಕೆಗೆ ಸಂಬಂಧಿಸಿದಂತೆ ಹೊಸ ಪ್ರಶ್ನೆಯೊಂದು ಉದ್ಭವಿಸಿದೆ. ಬೆಂಗಳೂರಿನಲ್ಲಿರುವ ಅಮೃತಾ ಎಂಬುವವರು ತಾವು ಜಯಾರ ಉತ್ತರಾಧಿಕಾರಿ ಎಂದು ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.
ಈ ವಿಚಾರವಾಗಿ ಡಿಎನ್ ಎ ಪರೀಕ್ಷೆಗೆ ಒಳಪಡಲು ಸಹ ತಾನು ಸಿದ್ಧ ಎಂದು ಕೂಡ ಹೇಳಿಕೊಂಡಿದ್ದಾರೆ. ಇದರ ಜತೆಗೆ ಜಯಲಲಿತಾರ ದೇಹದ ಅಂತ್ಯಸಂಸ್ಕಾರ ಹಿಂದೂ ಅಯ್ಯಂಗಾರ್ ವಿಧಿ ವಿಧಾನದ ಪ್ರಕಾರ ನಡೆಯಬೇಕು ಎಂದು ಕೂಡ ಮನವಿ ಮಾಡಿಕೊಂಡಿದ್ದಾರೆ.

ಆದರೆ, ಅಮೃತಾರ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಜಯಲಲಿತಾರ ಆಸ್ತಿ ವಿಚಾರವಾಗಿ ಅವರ ಸೋದರರ ಮಕ್ಕಳಾದ ದೀಪಕ್ ಹಾಗೂ ದೀಪಾ, ಅದು ತಮ್ಮ ಹಕ್ಕು ಎಂದು ಪ್ರತಿಪಾದಿಸಿದ್ದರು. ಪೋಯಸ್ ಗಾರ್ಡನ್ ಬಂಗಲೆಯ ಹಕ್ಕು ತಮ್ಮದೇ ಎಂದು ಸಾರ್ವಜನಿಕವಾಗಿ ಹೇಳಿಕೊಂಡಿದ್ದರು. ಇದೀಗ ಅಮೃತಾ ತಾವು ಉತ್ತರಾಧಿಕಾರಿ ಎಂದು ಹೇಳಿಕೊಂಡಿದ್ದಾರೆ.
ಅಮೃತಾ ಅವರ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಅವರು ಮುಂದೆ ಏನು ಮಾಡಬಹುದು ಎಂದು ಕಾದುನೋಡಬೇಕಿದೆ.












Click it and Unblock the Notifications