Bengaluru weather update: ಬೆಂಗಳೂರನ್ನು ಕಾಡುತ್ತಿದೆ ಸುಡು ಬಿಸಿಲು, ಮಳೆ ಮುನ್ಸೂಚನೆ ಕೊಟ್ಟ ಹವಾಮಾನ ಇಲಾಖೆ
ಬೆಂಗಳೂರು, ಏಪ್ರಿಲ್. 30: ರಾಜ್ಯ ರಾಜಧಾನಿ ಬೆಂಗಳೂರು ಬಿಸಿಲಿನಿಂದ ಬೆಂದು ಹೋಗಿದೆ. ಕನಿಷ್ಠ ಇನ್ನೊಂದು ವಾರದವರೆಗೆ ತಾಪಮಾನ ಏರಿಕೆಯಾಗಲಿದೆ. ಬಿಸಿಲು ಜನರನ್ನು ಕಾಡಲಿದೆ ಎಂದು ಹವಾಮಾನ ಇಲಾಖೆಗಳು ತಿಳಿಸಿವೆ. ಮುಂದಿನ 48 ಗಂಟೆಗಳಲ್ಲಿ ಬೆಂಗಳೂರು ನಗರದಲ್ಲಿ ಗರಿಷ್ಠ ತಾಪಮಾನವು ಸುಮಾರು 37 ಡಿಗ್ರಿ ಸೆಲ್ಸಿಯಸ್‌ಗೆ ತಲುಪುವ ಸಾಧ್ಯತೆಯಿದೆ.
ಏಪ್ರಿಲ್ 30 ರಿಂದ ಮೇ 5 ರವರೆಗೆ ರಾಜ್ಯದಲ್ಲಿ ಒಣ ಹವಾಮಾನವು ಚಾಲ್ತಿಯಲ್ಲಿರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೇಳಿದೆ. ರಾಯಚೂರು ಜಿಲ್ಲೆಯೂ ರಾಜ್ಯದಲ್ಲಿಯೇ ಗರಿಷ್ಠ 43.0 ಡಿಗ್ರಿ ಸೆಲ್ಸಿಯಸ್ ತಾಪಮಾನವನ್ನು ದಾಖಲಿಸಿದೆ ಎಂದು ಹವಾಮಾನ ಇಲಾಖೆ ತನ್ನ ದೈನಂದಿನ ಹವಾಮಾನ ಬುಲೆಟಿನ್‌ನಲ್ಲಿ ತಿಳಿಸಿದೆ.

ಮೇ 3 ರವರೆಗೆ ಬಿಸಿಗಾಳಿ ಸಂಕಷ್ಟ
ಬೀದರ್, ಕಲಬುರ್ಗಿ, ವಿಜಯಪುರ, ಯಾದಗಿರಿ, ರಾಯಚೂರು, ಬಾಗಲಕೋಟೆ, ಬೆಳಗಾವಿ, ಗದಗ, ಹಾವೇರಿ, ಕೊಪ್ಪಳ, ವಿಜಯನಗರ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಕೋಲಾರ, ಮಂಡ್ಯ, ಬಳ್ಳಾರಿ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಮೇ 3 ರವರೆಗೆ ಬಿಸಿಗಾಳಿ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ.
ಬಿಸಿಲಿನಿಂದ ಬಳಲಿರುವ ರಾಜ್ಯದಲ್ಲಿ ಮೇ 6 ರಂದು ಮಳೆಯು ಕಾಣಿಸಿಕೊಳ್ಳಬಹುದು ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಮೇ 6 ರಂದು ಮಂಡ್ಯ, ಕೊಡಗು, ಹಾಸನ, ಮೈಸೂರು, ಚಾಮರಾಜನಗರ, ರಾಮನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದಿದೆ.

ವಿಜಯನಗರ, ತುಮಕೂರು, ಮಂಡ್ಯ, ಕೋಲಾರ, ದಾವಣಗೆರೆ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಬಳ್ಳಾರಿ, ಯಾದಗಿರಿ, ವಿಜಯಪುರ, ರಾಯಚೂರು, ಕೊಪ್ಪಳ, ಕಲಬುರ್ಗಿ, ಹಾವೇರಿ, ಗದಗ, ಬೀದರ್, ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಐಎಂಡಿ 'ಆರೆಂಜ್' ಅಲರ್ಟ್ ಘೋಷಿಸಿದೆ.
ಬೆಂಗಳೂರು ನಗರವು ಇತ್ತೀಚೆಗೆ ಹಲವಾರು ಹವಾಮಾನ ಅಂಕಿ ಅಂಶಗಳಲ್ಲಿ ದಾಖಲೆಗಳನ್ನು ಮಾಡಿದೆ. ಕಳೆದ ಐದು ದಶಕಗಳಲ್ಲಿ ಎರಡನೇ ಅತಿ ಹೆಚ್ಚು ತಾಪಮಾನವನ್ನು ದಾಖಲಿಸಿದೆ. ರಾಜಧಾನಿಯಲ್ಲಿ ಭಾನುವಾರ 38.5 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದ್ದು, 50 ವರ್ಷಗಳಲ್ಲೇ ಎರಡನೇ ಅತಿ ಹೆಚ್ಚು ಉಷ್ಣಾಂಶ ಇದಾಗಿದೆ.












Click it and Unblock the Notifications