Bengaluru Flood: 22 ವಿಲ್ಲಾಗಳಿಗೆ ನುಗ್ಗಿದ ಮಳೆ ನೀರು, ಪ್ರವಾಹ: ಬೃಹತ್ ಪೈಪ್ ಅಳವಡಿಕೆ ಸಿದ್ಧತೆ
ಬೆಂಗಳೂರು, ಮೇ 20: ರಾಜಧಾನಿ ಬೆಂಗಳೂರಿನಲ್ಲಿ ಮುಂಗಾರು ಆರಂಭದ ಮೊದಲೇ ಸುರಿಯುತ್ತಿರುವ ಮಳೆಗೆ ನಲುಗಿದೆ. ಒಂದು ವರ್ಷದ ಹಿಂದೆ ಉಂಟಾದ ಪ್ರವಾಹವನ್ನು ಮತ್ತೆ ನೆನಪಿಸುವಂತೆ ಘಟನೆ ಜರುಗಿದೆ. ಶನಿವಾರ ಸುರಿದ ಜೋರು ಮಳೆಗೆ ಯಲಹಂಕದಲ್ಲಿ ಸುಮಾರು 22 ವಿಲ್ಲಾಗಳಿಗೆ ನೀರು ನುಗ್ಗಿ ಸಮಸ್ಯೆ ಆಗಿದೆ. ಈ ಪ್ರದೇಶದಲ್ಲಿ ಇನ್ನೂ ಪ್ರವಾಹದ ಸ್ಥಿತಿ ಇದೆ.
ಕಳೆದ ಎರಡು ದಿನಗಳಿಂದ ವಿಲ್ಲಾಗಳಿಗೆ ನುಗ್ಗಿರುವ ನೀರು ಹೊರ ತೆಗೆಯುವ ಕಾರ್ಯ ಮತ್ತು ಮಳೆಗಾಲದಲ್ಲಿ ಮತ್ತೆ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳುವ ಕೆಲಸಗಳು ನಡೆದಿವೆ. ಈ ನಿಟ್ಟಿನಲ್ಲಿ ಸೋಮವಾರ ಅರಣ್ಯ ಇಲಾಖೆ ಮತ್ತು ಬಿಬಿಎಂಪಿ ಅಧಿಕಾರಿಗಳು ಪ್ರವಾಹ ಸ್ಥಳಕ್ಕೆ ಭೇಟಿ ನೀಡಿ ಜಂಟಿ ಪರಿಶೀಲನೆ ನಡೆಸಿದ್ದಾರೆ.

ಬೃಹತ್ ಪೈಪ್ ಅಳವಡಿಕೆ ಕಾರ್ಯ
ನಗರದ ರಮಣಶ್ರೀ ಗಾರ್ಡೇನಿಯಾ ಲೇಔಟ್ ಹಾಗೂ ನಾರ್ತ್ ಹುಡ್ ವಿಲ್ಲಾ ಪ್ರದೇಶದಲ್ಲಿ ಮಳೆ ನೀರು ನಿಲ್ಲದಂತೆ ಶೀಘ್ರ ಪರ್ಯಾಯವಾಗಿ 520 ಮೀಟರ್ ಉದ್ದದ 1.600 ಎಂ.ಎಂ ಪೈಪ್ ಅಳವಡಿಸಲು ಕ್ರಮವಹಿಸಲಾಗುತ್ತಿದೆ. ಈ ಕುರಿತು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಇದೇ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ತುಷಾರ್ ಗಿರಿನಾಥ್ ಅವರು, ಬಿಬಿಎಂಪಿ ವತಿಯಿಂದ ರಾಜಕಾಲುವೆ ಕಾಮಗಾರಿ ಪ್ರಗತಿಯಲ್ಲಿದೆ. ಪುಟ್ಟೇನಹಳ್ಳಿ ಕರೆಯು ಅರಣ್ಯ ಇಲಾಖೆಗೆ ಬರಲಿದೆ. ಕೆರೆಯ ಪಕ್ಕದ ಪ್ರದೇಶದಲ್ಲಿ ವಿಲ್ಲಾ ಹಾಗೂ ಅಪಾರ್ಟ್ಮೆಂಟ್ಸ್ ಗಳು ನಿರ್ಮಾಣವಾಗಿವೆ.

ಪ್ರವಾಹದ ಸ್ಥಳದಲ್ಲಿ ವಾಸ್ತವ ಹೇಗಿದೆ?
ಇನ್ನೂ ಇಲ್ಲಿ ಸೀವೇಜ್ ವ್ಯವಸ್ಥೆ ಸರಿಯಾಗಿಲ್ಲದ ಕಾರಣ ರಾಜಕಾಲುವೆ ನಿರ್ಮಾಣ ಮಾಡಿ ಕೆರೆಗೆ ನೀರನ್ನು ಬಿಡಲು ಅರಣ್ಯ ಇಲಾಖೆಯ ವನ್ಯಜೀವಿ ಮಂಡಳಿಯಿಂದ ಅನುಮತಿ ಸಿಕ್ಕಿರುವುದಿಲ್ಲ ಎಂದು ಸ್ಥಳದಲ್ಲಿನ ವಾಸ್ತವ ಸಂಗತಿಯನ್ನು ಅವರು ವಿವರಿಸಿದರು.
ಸದ್ಯ ಇಲ್ಲಿ ಪರ್ಯಾಯವಾಗಿ 520 ಮೀಟರ್ ಉದ್ದದ 1.600 ಎಂ.ಎಂ ಪೈಪ್ ಲೈನ್ ಅನ್ನು ಕೆರೆಯ ವಾಯು ವಿಹಾರ ಮಾರ್ಗದ ಪಕ್ಕದಲ್ಲಿ ಮಾಡಿಕೊಂಡು ಮುಂದೆ ಬರುವ ರಾಜಕಾಲುವೆಗೆ ಸಂಪರ್ಕ ಕಲ್ಪಿಸಲಾಗುವುದು. ಈ ಪೈಕಿ ತ್ವರಿತವಾಗಿ ಕೆಲಸ ಪ್ರಾರಂಭಿಸಿ ಶೀಘ್ರ ಪೂರ್ಣಗೊಳಿಸಲು ಸೂಚನೆ ನೀಡಿದ್ದೇನೆ ಎಂದರು.
ಪಂಪ್ ವ್ಯವಸ್ಥೆ ಮೂಲಕ ಮಳೆ ನೀರು ತೆರವು
ರಮಣಶ್ರೀ ಲೇಔಟ್ ಪ್ರದೇಶದಲ್ಲಿ ಕಳೆದ ಒಂದೂವರೆ ವರ್ಷದ ಹಿಂದೆ ಯಾವುದೇ ಮನೆಗಳು ಇಲ್ಲದ ಕಾರಣ ಅಲ್ಲಿ ಯಾವುದೇ ಸಮಸ್ಯೆ ಕಂಡು ಬಂದಿರಲಿಲ್ಲ. ಇದೀಗ ಸದರಿ ಸ್ಥಳದಲ್ಲಿ ವಿಲ್ಲಾ ಹಾಗೂ ಅಪಾರ್ಟ್ಮ್ಂಟ್ ಗಳು ನಿರ್ಮಾಣವಾಗಿರುವ ಕಾರಣ ಮಳೆ ನೀರು ನಿಲ್ಲುವಂತಾಗಿದೆ. ಸದರಿ ಸ್ಥಳದಲ್ಲಿ ತಾತ್ಕಾಲಿಕವಾಗಿ ಪಂಪ್ ವ್ಯವಸ್ಥೆ ಮಾಡಿಕೊಂಡು ನೀರನ್ನು ಬೇರೆಡೆ ಬಿಡಲಾಗುತ್ತಿದೆ ಎಂದು ಹೇಳಿದರು.
ಕಳೆದ ಶನಿವಾರ ರಮಣಶ್ರೀ ಗಾರ್ಡೇನಿಯಾ ಲೇಔಟ್ ನಲ್ಲಿ ನಿಂತಿದ್ದ ನೀರನ್ನು ಸಂಪೂರ್ಣವಾಗಿ ತೆರವುಗೊಳಿಸಲಾಗಿದ್ದು, ಸದ್ಯ ಯಾವುದೇ ಸಮಸ್ಯೆ ಇರುವುದಿಲ್ಲ. ಮುನ್ನೆಚ್ಚರಿಕಾ ಕ್ರಮವಾಗಿ ನಿಂತ ನೀರನ್ನು ತೆರವುಗೊಳಿಸುವ ಸಲುವಾಗಿ ಪಂಪ್ ಅನ್ನು ಅಲ್ಲಿಯೇ ಇಡಲಾಗುವುದು ಎಂದು ತಿಳಿಸಿದರು.
ಅರಣ್ಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯಾದ ಎನ್. ಮಂಜುನಾಥ್ ಪ್ರಸಾದ್ ಮಾತನಾಡಿ, ಯಲಹಂಕದ ರಮಣಶ್ರೀ ಗಾರ್ಡೇನಿಯಾ ಬಡಾವಣೆಯಲ್ಲಿ ನೀರು ನಿಲ್ಲದಂತೆ ಕ್ರಮ ವಹಿಸಲು ಪಾಲಿಕೆಗೆ ಅರಣ್ಯ ಇಲಾಖೆ ವತಿಯಿಂದ ಅಗತ್ಯ ಸಹಕಾರ ನೀಡಲಾಗುವುದು ಎಂದು ಹೇಳಿದರು.
ಕಳೆದ ವರ್ಷದಂತೆ ಈ ಬಾರಿ ಪ್ರವಾಹದ ಆತಂಕದಲ್ಲಿ ಜನ
ಕಳೆದ ವರ್ಷ ಮಳೆಗಾಲದಲ್ಲಿ ಮಹಾದೇವಪುರ, ಯಲಹಂಕ ಸೇರಿದಂತೆ ಪ್ರಮುಖ ಐಟಿ ಪ್ರದೇಶಗಳು ಭಾರೀ ಮಳೆಗೆ ಜಲಾವೃತಗೊಂಡಿದ್ದವು. ಕೆಲವೆಡೆ ವಸತಿ ಸಮುಚ್ಚಯ, ವಿಲ್ಲಾಗಳಲ್ಲಿ ದಿನಗಟ್ಟಲೇ ನೀರು ನಿಂತು ಜನಜೀವನ ಅಸ್ತವೆಸ್ತವಾಗಿತ್ತು. ಈ ಭಾರಿಯೂ ಅಂತದ್ದೆ ವಾತಾವರಣ ನಿರ್ಮಾಣವಾಗುವ ಆತಂಕ ಬೆಂಗಳೂರು ಜನರನ್ನು ಕಾಡುತ್ತಿದೆ.
ಜಂಟಿ ಪರಿಶೀಲನೆ ವೇಳೆ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯಾದ ಕುಮಾರ್ ಪುಷ್ಕರ್, ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಅರಣ್ಯಪಡೆ ಮುಖ್ಯಸ್ಥರಾದ ಬ್ರಿಜೇಶ್ ಕುಮಾರ್ ದೀಕ್ಷಿತ್, ವಲಯ ಆಯುಕ್ತರಾದ ಕರೀ ಗೌಡ, ಜಂಟಿ ಆಯುಕ್ತರಾರ ನಯೀಮ್ ಮೊಹ್ಮದ್ ಮೊಮಿನ್, ಕಾರ್ಯಪಾಲಕ ಅಭಿಯಂತರರಾದ ಸುಧಾಕರ್, ಸವಿತಾ, ಜಲಮಡಳಿ, ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಐಪಿಎಲ್ 2026 ಅಂಕಪಟ್ಟಿ: ರಾಜಸ್ಥಾನ್ ರಾಯಲ್ಸ್ ನಂಬರ್ 1, ಎರಡನೇ ಸ್ಥಾನದಲ್ಲಿ ಅಬ್ಬರಿಸುತ್ತಿರುವ ಆರ್ಸಿಬಿ! -
Krunal Pandya: ವಿರಾಟ್ ಕೊಹ್ಲಿ - 2026ರ ಆರ್ಸಿಬಿ ತಂಡದ ಬಗ್ಗೆ ಸ್ಟಾರ್ ಆಟಗಾರ ಕೃನಾಲ್ ಪಾಂಡ್ಯರಿಂದ ಮಹತ್ವ ವಿಷಯ ರಿವೀಲ್ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ












Click it and Unblock the Notifications