Bengaluru Traffic Alert: ನಗರದ ಪ್ರಮುಖ ಈ ರಸ್ತೆಗಳ ವಾಹನ ಸವಾರರಿಗೆ ಸಂಚಾರ ಎಚ್ಚರಿಕೆ!
ಬೆಂಗಳೂರು, ಮಾರ್ಚ್ 24: ಬೆಂಗಳೂರು ನಗರ ವ್ಯಾಪ್ತಿಯಲ್ಲಿ ನಿತ್ಯ ಒಂದಲ್ಲ ಒಂದು ಕಡೆ ಸಂಚಾರ ಸಮಸ್ಯೆ ಇದ್ದೆ ಇರುತ್ತದೆ. ಬಸ್ ಕೆಟ್ಟು ನಿಂತಿರುತ್ತದೆ, ಸರಕು ಸೇವೆಯ ಬೃಹತ್ ಲಾರಿ ಅಥವಾ ನಮ್ಮ ಮೆಟ್ರೋ ನಿರ್ಮಾಣ ಕಾಮಗಾರಿಗಳಿಂದಾಗಿ ವಾಹನ ಸವಾರರು ತೊಂದರೆ ಅನುಭವಿಸುತ್ತಾರೆ. ಹತ್ತಾರು ನಿಮಿಷಗಳ ಕಾಲ ಸಿಗ್ನಲ್, ಟ್ರಾಫಿಕ್‌ನಲ್ಲಿ ಸಿಲುಕುತ್ತಾರೆ. ಹೀಗಾಗದಂತೆ ತಡೆಯಲು ಬೆಂಗಳೂರು ನಗರ ಸಂಚಾರಿ ಪೊಲೀಸರು ಪ್ರಮುಖ ರಸ್ತೆಗಳಲ್ಲಿ ಉಂಟಾಗಿರುವ ನಿಧಾನಗತಿ ಸಂಚಾರ ಕುರಿತು ಮೊದಲೇ ಮಾಹಿತಿ ನೀಡಿದ್ದಾರೆ. ಈ ಸುದ್ದಿಯಲ್ಲಿನ ಮಾಹಿತಿ ಸಂಚಾರ ಅಚರಣೆ, ಟ್ರಾಫಿಕ್ ತಿಳಿದು ಬೇರೆ ಮಾರ್ಗದಲ್ಲಿ ಸಂಚರಿಸುವಂತೆ ಕೋರಲಾಗಿದೆ.
ಬೆಂಗಳೂರು ಜಲಮಂಡಳಿ ಕಾಮಗಾರಿ, ಬಿಬಿಎಂಪಿ ರಸ್ತೆ ಅಗಲೀಕರಣದಂತಹ ಕಾರ್ಯಗಳಿಂದಾಗಿ ನಗರದ ಅನೇಕ ಪಮುಖ ರಸ್ತೆಗಳಲ್ಲಿಯೇ ಸಂಚಾರ ನಿಧಾನಗತಿಯಲ್ಲಿ ಸಾಗಿದೆ ಎಂದು ಬೆಂಗಳೂರು ಸಂಚಾರ ಪೊಲೀಸರು ಮಾಹಿತಿ ನೀಡಿದ್ದಾರೆ. ಸುಗಮ ಸಂಚಾರಕ್ಕಾಗಿ ಈ ಕೆಳಗಿನ ಮಾರ್ಗ ನೋಡಿಕೊಂಡು ವಾಹನ ಸವಾರರು ಓಡಾಡಬೇಕಿದೆ.

ಟ್ರಾಫಿಕ್ ಹೆಚ್ಚಿರುವ ನಿಧಾನಗತಿಯ ರಸ್ತೆಗಳ ಪಟ್ಟಿ
* ನಗರದ ಕಾಡುಬಿಸನಹಳ್ಳಿ ಬಳಿ ವಾಹನ ಕೆಟ್ಟು ನಿಂತಿರುವುದರಿಂದ ಆದೀಶ್ವರ ಶೋ ರೂಂ ಕಾರ್ತಿಕ್ ನಗರದ ಕಡೆಗೆ ನಿಧಾನಗತಿಯ ಸಂಚಾರ ಇರುತ್ತದೆ. ಇದು ಸೋಮವಾರಕ್ಕೆ ಸೀಮಿತವಾಗಿ ಇರುತ್ತದೆ.
* 80 ಅಡಿ ರಸ್ತೆಯ 4ನೇ ಕೋರಮಂಗಲ ಬಳಿ ಬಿಬಿಎಂಪಿ ಪ್ರಮುಖ ಕಾಮಗಾರಿ ಕೈಗೆತ್ತಿಕೊಂಡಿದೆ. ಹೀಗಾಗಿ ಇಲ್ಲಿನ ಸೋನಿ ವರ್ಲ್ಡ್ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ. ಎರಡು ಮೂರು ದಿನಗಳ ಕಾಲ ಇದೇ ರೀತಿ ಇರಬಹುದು. ಸಾರ್ವಜನಿಕರು, ವಾಹನ ಸವಾರರು ಸಹಕರಿಸುವಂತೆ ಸಂಚಾರಿ ಪೊಲೀಸರು ಕೋರಿದ್ದಾರೆ.
* ಸರ್ಜಾಪುರ ರಸ್ತೆಯಲ್ಲಿರುವ ಅಗರದ ಕೆಲ ಬಳಿ ವಾಹನವೊಂದು ಕೆಟ್ಟು ನಿಂತಿದೆ. ಇದರಿಂದ ಇಬ್ಬಲೂರು ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ.

* ಬೆಳ್ಳಂದೂರು ಜಂಕ್ಷನ್ ಬಳಿ ಬೆಂಗಳೂರು ನಮ್ಮ ಮೆಟ್ರೋ ಕಾಮಗಾರಿ ನೆಡೆಯುತ್ತಿದೆ. ಹೀಗಾಗಿ ಕಾಡುಬೀಸನಹಳ್ಳಿ, ಮಾತ್ತಹಳ್ಳಿ ಕಡೆಗೆ ತೆರಳುವವರಿಗೆ ನಿಧಾನಗತಿಯ ಸಂಚಾರವಿರುತ್ತದ. ಸಾರ್ವಜನಿಕರು ಸಹಕರಿಸುವಂತೆ ಕೋರಲಾಗಿದೆ. ಈ ಮಾರ್ಗ ನಿರ್ಮಾಣ ಕೆಲಸ ಪೂರ್ಣಗೊಳ್ಳುವವರೆಗೆ ಟ್ರಾಫಿಕ್ ಸಮಸ್ಯೆ ಮುಂದುವರಿಯಬಹುದು ಎನ್ನಲಾಗುತ್ತಿದೆ.
* ಬೃಂದಾವನ ಬಸ್ ನಿಲ್ದಾಣದ ಬಳಿ ವಾಹನ ಕೆಟ್ಟು ನಿಂತಿದೆ. ರಸ್ತೆಯಲ್ಲಿ ವಾಹನ ಕೆಟ್ಟು ನಿಂತ ಪರಿಣಾಮ ಎನ್‌ಟಿಟಿಎಫ್ ವೃತ್ತದ ಕಡೆಗೆ ನಿಧಾನಗತಿಯ ಸಂಚಾರ ಇದೆ. ಸಾರ್ವಜನಿಕರು ಅಗತ್ಯ ಎಚ್ಚರಿಕೆ ವಹಿಸಿ ಓಡಾಸಬೇಕಿದೆ.
* ಹೆಣ್ಣೂರು ಅಂಡರ್ ಪಾಸ್ ಕಡೆಯಿಂದ, ಕೆ.ಆರ್ ಪುರ ಕಡೆಗೆ ಹೋಗುವ ಮಾರ್ಗದಲ್ಲಿ ವಾಹನ ಕೆಟ್ಟು ನಿಂತಿರುವುದರಿಂದ ನಿಧಾನಗತಿಯ ಸಂಚಾರ ಇದೆ.
* ಟ್ಯಾನರಿ ರಸ್ತೆಯ ಬಳಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಕಾಮಗಾರಿ ನೆಡೆಯುತ್ತಿರುವುದರಿಂದ ನಾಗವಾರ ಜಂಕ್ಷನ್ ಕಡೆಗೆ ನಿಧಾನಗತಿಯ ಸಂಚಾರ ಕಂಡು ಬಂದಿಎಎ. ಈ ಕಾಮಗಾರಿ ಪೂರ್ಣವಾಗುವವರೆಗೂ ಸಾರ್ವಜನಿಕರು ಈ ರಸ್ತೆಯಲ್ಲಿ ಓಡಾಡುವಾಗಿ ಅಗತ್ಯ ಜಾಗ್ರತೆ ವಹಿಸಬೇಕು.
* ವೈಟಫಿಲ್ಡ್ ಕಡೆಯಿಂದ ಆರ್.ಹೆಚ್.ಬಿ ಕಾಲೋನಿ ಬಿ.ನಾರಾಯಣಪುರ ಮುಖ್ಯರಸ್ತೆ ಕಡೆಗೆ ತೀವ್ರ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಈ ಮಾರ್ಗದಲ್ಲಿ ಓಡಾಡುವವರು ಗಮನಿಸಬೇಕು.
* ಕಲಾಮಂದಿರ ಬಳಿ ನಮ್ಮ ಮೆಟ್ರೋ ಮಾರ್ಗದ ನಿರ್ಮಾಣ ಕಾಮಗಾರಿ ಭರದಿಂದ ಸಾಗಿದೆ. ಈ ಕಾರಣದಿಂದಾಗಿ ಈ ಭಾಗದಿಂದ ಮಾರತಹಳ್ಳಿ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ ಎಂದು ಫೋಟೋ ಸಮೇತ ವಾಹನದಟ್ಟಣೆ, ನಿಧಾನಗತಿಯ ಸಂಚಾರ ಕುರಿತು ಟ್ರಾಪಿಕ್ ಪೊಲೀಸರು ಮಾಹಿತಿ ಹಂಚಿಕೊಂಡಿದ್ದಾರೆ.
* ನಗರದ ಗಾಳಿ ಆಂಜನೇಯ ದೇವಸ್ಥಾನದ ಬಳಿ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಬೆಸ್ಕಾಂ) ಕಾಮಗಾರಿಯಿಂದಾಗಿ ನೆಡೆಯುತ್ತಿರುವುದರಿಂದ ಬಿ,ಹೆಚ್,ಇ,ಎಲ್ ಕಡೆಗೆ ನಿಧಾನಗತಿಯ ಸಂಚಾರ ಕಂಡು ಬಂದಿದೆ.
* ಇನ್ನೂ ಎಚ್‌ಎಸ್‌ಆರ್ ಬಡಾವಣೆಯ 27ನೇ ಮುಖ್ಯರಸ್ತೆಯಿಂದ ದೇವರಬಿಸನಹಳ್ಳಿ ಕಡೆಗೆ ಹೋಗುವ ರಸ್ತೆಯಲ್ಲಿ ತೀವ್ರ ಸಂಚಾರ ದಟ್ಟಣೆ ಉಂಟಾಗಿದೆ. ಆದಷ್ಟು ಶೀಘ್ರವೇ ಈ ದಟ್ಟಣೆ ನಿವಾರಿಸಲಾಗುವುದು. ಸೋಮವಾರ ಬೆಳಗ್ಗೆ ಮತ್ತು ಸಂಜೆ ಹೆಚ್ಚಿನ ದಟ್ಟಣೆ ಉಂಟಾಲಿದೆ. ಸವಾರರು, ಪ್ರಯಾಣಿಕರು ಸಹಕರಿಸುವಂತೆ ಕೊರಲಾಗಿದೆ.
* ರೂಬಿ 1 ಕಡೆಯಿಂದ ಬಿಳೇಕಹಳ್ಳಿ ಕಡೆಗೆ ಹೋಗುವ ಮಾರ್ಗದಲ್ಲಿ ವಾಹನ ಕೆಟ್ಟು ನಿಂತಿದೆ. ಇದರಿಂದಾಗಿ ಈ ಭಾಗದಲ್ಲಿ ವಾಹನಗಳ ಸಂಚಾರ ನಿಧಾನಗತಿಯಲ್ಲಿದೆ.
* ನಾಗವಾರ ಜಂಕ್ಷನ್ ನಿಂದ ಹೆಣ್ಣೂರು ಜಂಕ್ಷನ್ ಕಡೆಗೆ ಬೆಂಗಳೂರು ನಮ್ಮ ಮೆಟ್ರೋ ಕಾಮಗಾರಿ ನಡೆಯುತ್ತಿದೆ. ಹೀಗಾಗಿ ಸಂಚಾರ ನಿಧಾನಗತಿಯಲ್ಲಿದೆ. ಮೆಟ್ರೋ ನಿರ್ಮಾಣ, ಪಿಲ್ಲರ್ ಅಕ್ಕಪಕ್ಕ ರಸ್ತೆಗಳಲ್ಲಿ ಓಡಾಡುವವರು ಎಚ್ಚರಿಕೆಯಿಂದ ಓಡಾಡುವಂತೆ ಟ್ರಾಫಿಕ್ ಪೊಲೀಸರು ತಿಳಿಸಿದ್ದಾರೆ..
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications