Get Updates
Get notified of breaking news, exclusive insights, and must-see stories!

Bengaluru suburban rail: ಹೀಲಲಿಗೆ-ರಾಜಾನುಕುಂಟೆ ಕಾರಿಡಾರ್ ಆರಂಭದ ಅಪ್ಡೇಟ್

ಬೆಂಗಳೂರು, ಡಿಸೆಂಬರ್ 12: ಬೆಂಗಳೂರಿನ ಮಟ್ಟಿಗೆ ಉಪನಗರ ರೈಲು ಯೋಜನೆ ಒಂದು ವರದಾನ ಎನ್ನಬಹುದು. ಈಗಾಗಲೇ ನಾಲ್ಕು ಹಂತಗಳಲ್ಲಿ ಈ ಯೋಜನೆ ನಡೆಯುತ್ತಿದೆ. ಭೂಮಿ ಸ್ವಾಧೀನ ವಿಚಾರವಾಗಿ ದಕ್ಷಿಣ ಪಶ್ಚಿಮ ರೈಲ್ವೆ (SWR) ಮತ್ತು ರೈಲ್ ಇನ್‌ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಕಂಪನಿ ಲಿಮಿಟೆಡ್-ಕರ್ನಾಟಕ (KRIDE) ಜಗಳ ಇದೀಗ ರೈಲ್ವೆ ಅಭಿವೃದ್ಧಿ ಯೋಜನೆ ಮೇಲೆ ದುಷ್ಪರಿಣಾಮ ಬೀರುತ್ತಿದೆ.

ಬೆಂಗಳೂರು ಉಪನಗರ ರೈಲು ಯೋಜನೆ ನಾಲ್ಕನೇ ಕಾರಿಡಾರ್ (ಹೀಲಲಿಗೆ-ರಾಜನಕುಂಟೆ) ಭೂಸ್ವಾಧೀನ ವಿಚಾರವಾಗಿ ಎಸ್‌ಡಬ್ಲು ಆರ್ ಮತ್ತು ಕೆರೈಡ್ ಮತ್ತೆ ಎಲ್ಲವು ಸರಿ ಹೊಂದುತ್ತಿಲ್ಲ ಎನ್ನಲಾಗಿದೆ. ಯೋಜನೆಗಾಗಿ ಕಳೆದ ಜನವರಿಯಲ್ಲಿ 46km ಹೀಲಲಿಗೆ-ರಾಜನಕುಂಟೆ ಕಾರಿಡಾರ್ (ಕನಕಲೈನ್) ನಿರ್ಮಾಣಕ್ಕಾಗಿ ಕೆರೈಡ್ ಟೆಂಡರ್ ಕರೆದಿತ್ತು..

Bengaluru Suburban Rail: SWR-KRIDE Land Tussle That Impact on Corridor 4 of Project

ಆದರೆ ಕೆರೈಡ್ ಅಧಿಕಾರಿಗಳು ದಕ್ಷಿಣ ಪಶ್ಚಿಮ ರೈಲ್ವೆ (SWR)ಯಿಂದ ಇನ್ನೂ ಭೂಮಿಯನ್ನು ಪಡೆಯದ ಕಾರಣ ಗುತ್ತಿಗೆ ನೀಡುವ ಸ್ಥಿತಿಯಲ್ಲಿಲ್ಲ ಎಂದು TOI ವರದಿ ಮಾಡಿದೆ.

ಈ ಕಾರಿಡಾರ್ ಯೋಜನೆಯಲ್ಲೇ ಅತಿ ಉದ್ದದ ಜಾಲ

ಉಪನಗರ ರೈಲು ಯೋಜನೆಯ ಕಾರಿಡಾರ್ 4, ಇದು ಯೋಜನೆ ಎಲ್ಲ ಕಾರಿಡಾರ್‌ಗಳಲ್ಲಿಯೇ ಅತೀ ಉದ್ದದ ಮಾರ್ಗವಾಗಿದೆ. ಇದರ ನಿರ್ಮಾಣಕ್ಕೆ ಆರಂಭದಲ್ಲಿಯೇ ವಿಘ್ನಗಳು ಎದುರಾಗಿವೆ. ಇದು ನಗರದ ಆಗ್ನೇಯ ಭಾಗವಾದ ಹೀಲಲಿಗೆ ಉತ್ತರದ ರಾಜನಕುಂಟೆಗೆ ಸಂಪರ್ಕಿಸುತ್ತದೆ.

Bengaluru Suburban Rail: SWR-KRIDE Land Tussle That Impact on Corridor 4 of Project

ಈ ನಾಲ್ಕನೇ ಕಾರಿಡಾರ್ ಜಾಲ ಸಂಪೂರ್ಣವಾಗಿ ಪೂರ್ಣಗೊಂಡರೆ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶ, ಎಲೆಕ್ಟ್ರಾನಿಕ್ಸ್ ಸಿಟಿ ಮತ್ತು ಇತರ ಪ್ರದೇಶಗಳಲ್ಲಿ ಕೆಲಸ ಮಾಡುವ ಸಾವಿರಾರು ಜನರಿಗೆ ಬಹಳ ಉಪಯುಕ್ತವಾಗಲಿದೆ ಎಂದು ಈ ಹಿಂದೆ ರೈಲ್ವೆ ಅಧಿಕಾರಿಗಳು ತಿಳಿಸಿದ್ದರು.

ಶೇ.80ರಷ್ಟು ಭೂಮಿ ಲಭ್ಯವಿರಬೇಕು

ಕೆ-ರೈಡ್ ಅಧಿಕಾರಿಯೊಬ್ಬರು ನೀಡಿರುವ ಮಾಹಿತಿ ನೋಡುವುದಾದರೆ ಯೋಜನೆಗೆ ಗುತ್ತಿಗೆ ನೀಡಲು ಗುರುತಿಸಲಾದ ಶೇಕಡಾ 80ರಷ್ಟು ಭೂಮಿ ನಮ್ಮ ಬಳಿ ಲಭ್ಯವಿರಬೇಕು. ಹಿಂದಿನ ಮಂಡಳಿಯ ಸಭೆಯಲ್ಲಿ, ಕೆ-ರೈಡ್ ರೈಲು ಪಡೆದ ನಂತರ ಗುತ್ತಿಗೆ ನೀಡಲು ನಿರ್ಧರಿಸಲಾಗಿತ್ತು. ಆದರೆ ದಕ್ಷಿಣ ಪಶ್ಚಿಮ ರೈಲು (SWR) ಭೂಮಿ ನೀಡಿಲ್ಲ. ನಾವು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದು, ಆದಷ್ಟು ಬೇಗ ಗುತ್ತಿಗೆಗೆ ನೀಡಲಿದ್ದೇವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಮೂಲಗಳ ಪ್ರಕಾರ, ಯೋಜನೆ ಸಮಗ್ರ ವರದಿ (DPR) 148 ಕಿಮೀ ಸಂಪೂರ್ಣ ಉಪನಗರ ರೈಲು ಜಾಲವನ್ನು ಕಾರ್ಯಗತಗೊಳಿಸಲು 326 ಎಕರೆಗಳ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ. ಆದರೆ ಪ್ರಸ್ತುತದಲ್ಲಿ ಯೋಜನೆ ಪೂರ್ಣಕ್ಕೆ ಒಟ್ಟು 351 ಎಕರೆಗಳಿಗೆ ಹೆಚ್ಚಿಸಲಾಗಿದೆ.

ಬೈಯಪ್ಪನಹಳ್ಳಿ-ಚಿಕ್ಕಬಾಣಾವರ ಕಾರಿಡಾರ್

ಇನ್ನೂ ನಿರ್ಮಾಣ ಹಂತದಲ್ಲಿರುವ ಬೈಯಪ್ಪನಹಳ್ಳಿ-ಚಿಕ್ಕಬಾಣಾವರ ಕಾರಿಡಾರ್‌ಗೆ ಕಾರ್ಯಗತಗೊಳ್ಳಲು 53 ಎಕರೆ ಭೂಮಿ ಬೇಕಾಗುತ್ತದೆ ಎಂದು ಹೇಳಲಾಗಿತ್ತು. ಆದರೆ ಪರಿಷ್ಕೃತ ಅಂಕಿಅಂಶಗಳ ಆಧಾರದ ಮೇಲೆ SWR 157 ಎಕರೆ ಭೂಮಿಯನ್ನು ನೀಡಿದೆ.

ಹೀಲಳಿಗೆ-ರಾಜನಕುಂಟೆ ಕಾರಿಡಾರ್ ನಿರ್ಮಾಣಕ್ಕೆ ಈ ಹಿಂದೆ 115 ಎಕರೆ ಅಂದಾಜು ಮಾಡಲಾಗಿತ್ತು. ಆದರೆ ಈಗ ಅಗತ್ಯತೆ ಹೆಚ್ಚಾಗಿದ್ದು 194 ಎಕರೆ ಬೇಕೆನ್ನಲಾಗಿದೆ. ಈ ಬೆಳವಣಿಗೆಗಳನ್ನು ಪರಿಗಣಿಸಿ ಬೆಂಗಳೂರು ದಕ್ಷಿಣ ಪಶ್ಚಿಮ ರೈಲ್ವೆಯು ಭೂಮಿ ವರ್ಗಾವಣೆಗೆ ನಿರ್ದೇಶನಗಳನ್ನು ಕೋರಿ ಕೇಂದ್ರ ರೈಲ್ವೇ ಸಚಿವಾಲಯಕ್ಕೆ ಪತ್ರ ಬರೆದು ಮನವಿ ಮಾಡಿಕೊಂಡಿದೆ ಎಂದು ರೈಲ್ವೆ ಮೂಲಗಳು ಮಾಹಿತಿ ನೀಡಿವೆ. ಸದ್ಯ ಸಚಿವಾಲಯ ಪ್ರತ್ಯುತ್ತರ ನೀಡು ನಿರೀಕ್ಷೆ ಇದೆ.

ಅಗತ್ಯ ಭೂಮಿ ಶೀಘ್ರವೇ ಸಿಕ್ಕು ಹೀಲಳಿಗೆ-ರಾಜನಕುಂಟೆ ಕಾರಿಡಾರ್ ನಿರ್ಮಾಣದ ಕೆಲಸವು ಶೀಘ್ರವೇ ಆರಂಭಗೊಳ್ಳಲಿದೆ ಎಂದು ಕೆ-ರೈಡ್ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+