ಶಾಂತಿ ನಗರ ಬಿಎಂಟಿಸಿ ನೌಕರರ ಧರಣಿ: ಬಸ್ ಸಂಚಾರ ಸ್ಥಗಿತ

ಬೆಂಗಳೂರು, ಸೆಪ್ಟೆಂಬರ್ 19: ಶಾಂತಿ ನಗರದ ಬಿಎಂಟಿಸಿ ಡಿಪೋ 2ರಲ್ಲಿ ಮಧು ಎಂಬ ಬಿಎಂಟಿಸಿ ಚಾಲಕನೊಬ್ಬ ಸೋಮವಾರ (ಸೆ. 18) ಮಧ್ಯರಾತ್ರಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಹಿನ್ನೆಲೆಯಲ್ಲಿ, ಮಂಗಳವಾರ (ಸೆ. 19) ಡಿಢೀರ್ ಧರಣಿ ಕುಳಿತಿರುವ ಹಿನ್ನೆಲೆಯಲ್ಲಿ ಶಾಂತಿ ನಗರ ಬಿಎಂಟಿಸಿ ಡಿಪೋ 2ರಿಂದ ಹೊರಡಬೇಕಿದ್ದ ಎಲ್ಲಾ ಬಸ್ ಗಳ ಸಂಚಾರ ಸ್ಥಗಿತಗೊಂಡಿದೆ.

ಡಿಪೋ 2ರ ಬಸ್ ನ ಚಾಲಕರಾಗಿರುವ ಮಧು ಎಂಬುವರು ಸೋಮವಾರ ಮಧ್ಯರಾತ್ರಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಡಿಪೋ ಮ್ಯಾನೇಜರ್ ಅವರಿಂದ ಮಾನಸಿಕ ಕಿರುಕುಳ ಉಂಟಾಗಿರುವ ಹಿನ್ನೆಲೆಯಲ್ಲಿ ಅವರು ವಿಷ ಸೇವಿಸಿದ್ದರೆಂದು ಹೇಳಲಾಗಿದೆ.

Bengaluru: Shantinagar BMTC depo staff protest against their manager

ಅಸ್ವಸ್ಥಗೊಂಡಿದ್ದ ಚಾಲಕನನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಹ ಸಿಬ್ಬಂದಿ ವಿಷ ಸೇವಿಸಿರುವ ವಿಚಾರ ತಿಳಿದು ಸಿಡಿದೆದ್ದಿರುವ ಈ ಡಿಪೋದ ನೌಕಕರು, ಮ್ಯಾನೇಜರ್ ವಿರುದ್ಧ ಧರಣಿಗೆ ಇಳಿದಿದ್ದಾರೆ.

ಸ್ಥಳಕ್ಕೆ ಆಗಮಿಸಿರುವ ಬಿಎಂಟಿಸಿಯ ಹಿರಿಯ ಅಧಿಕಾರಿಗಳೊಂದಿಗೆ ಬಿಎಂಟಿಸಿ ನೌಕರರು ಮಾತಿನ ಚಕಮಕಿ ನಡೆಸಿದ್ದು, ಮ್ಯಾನೇಜರ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವವರೆಗೂ ಧರಣಿ ಕೈಬಿಡುವುದಿಲ್ಲವೆಂದು ಹಠ ಹಿಡಿದಿದ್ದಾರೆ. ಮ್ಯಾನೇಜರ್ ಅವರಿಂದ ಕಿರುಕುಳವಾಗುತ್ತಿದೆ ಎಂದು ಆರೋಪಿಸಿರುವ ಬಿಎಂಟಿಸಿ ನೌಕರರು ಆರೋಪಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+