Benglauru Rainfall: ಮಳೆ ನಿಂತರೂ ನಿಲ್ಲದ ಜನರ ಪರದಾಟ, ನೀರು ನಿಂತ ಕಡೆಗಳಲ್ಲಿ ಸಾಂಕ್ರಾಮಿಕ ರೋಗ...

ಬೆಂಗಳೂರು, ಅಕ್ಟೋಬರ್ 24: ಬೆಂಗಳೂರಿನಲ್ಲಿ ಕಳೆದೊಂದು ವಾರದಿಂದ ಬಿಟ್ಟು ಬಿಡದೇ ಮಳೆ ಸುರಿಯುತ್ತಿದೆ. ಹಿಂಗಾರು ಮಳೆ ನಗರದಲ್ಲಿ ಸಕ್ರಿಯಗೊಂಡ ಪರಿಣಾಮ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ವಿಶೇಷವೆಂದರೆ ಕಳೆದ ಎರಡು ದಿನಗಳಿಂದ ಒಂದಷ್ಟು ಕಡೆ ಮಳೆ ವಿರಾಮ ಕೊಟ್ಟರೂ ಸಹಿತ ಜನಜೀವನ ಸಹಜ ಸ್ಥಿತಿಗೆ ಬಂದಿಲ್ಲ. ಈ ಮಧ್ಯೆ ಪ್ರವಾಹ ಪ್ರದೇಶಗಳ ನಿವಾಸಿಗಳಿಗೆ ಆರೋಗ್ಯದ ಆತಂಕ ಕಾಡುತ್ತಿದೆ.

ಯಲಹಂಕ, ಮಹದೇವಪುರ, ದಾಸರಹಳ್ಳಿ, ಆರ್‌ಆರ್‌ನಗರ ವಲಯ ವ್ಯಾಪ್ತಿಯಲ್ಲಿ ಸುಮಾರು ಎಂಟತ್ತು ದಿನಗಳಿಂದ ಮಳೆ ಆಗುತ್ತಿದೆ. ಬಿಬಿಎಂಪಿ ಮಾಹಿತಿ ಪ್ರಕರಾರ, ಕಳೆದ ಸೋಮವಾರದ ಮಳೆಗೆ 1500 ಮನೆಗಳಿಗೆ ನೀರು ನುಗ್ಗಿದೆ. ಯಲಹಂಕ, ಮಹಾದೇವಪುರ ಕೆರೆಗಳು ಉಕ್ಕಿ ಹರಿದಿದ್ದರಿಂದ ಅಪಾರ್ಟ್‌ಮೆಂಟ್‌ಗಳಲ್ಲಿ ನೀರು ನುಗ್ಗಿದೆ. ಇಲ್ಲೆಲ್ಲ ಮಳೆ ತುಸು ಕಡಿಮೆ ಆದರೂ ಸಹಿತ ಪ್ರವಾಹ ಸ್ಥಿತಿ ಮುಂದುವರಿದಿದೆ.

Bengaluru Rainfall Flood Areas Residents Worried About Health Issues and infectious disease

ಬಡಾವಣೆಗಳಲ್ಲಿ ಎಲ್ಲ ಕಡೆಗಳಲ್ಲಿ ಮಳೆ ನೀರು ನಿಂತ ಪರಿಣಾಮ, ಡೆಂಗ್ಯೂ, ಮಲೇರಿಯಾ, ಕಾಲರಾ, ಹಂದಿಜ್ವರ, ಚಿಕೂನ್ ಗುನ್ಯ, ತೀವ್ರ ಜ್ವರ ಇನ್ನಿತರ ಆರೋಗ್ಯ ಸಮಸ್ಯೆ ಎದುರಾಗಬಹುದು. ಈ ಪ್ರದೇಶಗಳಲ್ಲಿ ಸಾಂಕ್ರಾಮಿಕ ರೋಗಗಳು ಹೆಚ್ಚಾಗಬಹುದು ಎಂಬ ಚಿಂತೆ ಜನರನ್ನು ಕಾಡುತ್ತಿದೆ.

ಕೆಲವೆಡೆ ಮನೆಯಿಂದ ನೀರು ಹೊರ ಹಾಕುವುದು, ಬಟ್ಟೆ ಬರೆ, ದಿನಸಿ ಒಣಸುವ ಕಾರ್ಯದಲ್ಲಿ ತೊಡಗಿದ್ದಾರೆ. ಇನ್ನೂ ಕೆಲವೆಡೆ ಬಿಬಿಎಂಪಿ ಪಂಪಿಂಗ್ ಯಂತ್ರದಿಂದ ನೀರು ಹೊರ ಹಾಕುವ ಕಾರ್ಯ ಮುಂದುವರಿದಿದೆ.

Bengaluru Rainfall Flood Areas Residents Worried About Health Issues and infectious disease

ಕೊಳಚೆ ನೀರು ಕುಡಿಯುವ ನೀರಿನ ತೊಟ್ಟಿಗಳಲ್ಲಿ ತುಂಬಿಕೊಂಡಿದೆ. ಒಳಚರಂಡಿಯಲ್ಲಿ ನೀರು ತುಂಬಿಕೊಂಡ ಪರಿಣಾಮ ಕೊಳಚೆ, ತ್ಯಾಜ್ಯ ನೀರು ಹರಿದು ಹೋಗದೇ ಕೆಲವೆಡೆ ದುರ್ವಾಸನೆ ಬೀರುತ್ತಿದೆ. ಇಂತಹ ವಾತಾವರಣದಲ್ಲಿ ಮಕ್ಕಳು, ವೃದ್ಧರು, ಮಹಿಳೆಯರಿಗೆ ವಾಸಿಸುವುದು ಹೇಗೆ, ಬಿಸಲು ಬೀಳುತ್ತಿಲ್ಲ. ತಂಪು ಮತ್ತು ದುರ್ವಾಸನೆಯ ವಾತಾವರಣದಲ್ಲಿ ಇದ್ದು ನಮ್ಮ ಆರೋಗ್ಯ ಹದಗೆಟ್ಟರೆ ಮುಂದೆ ಏನು ಎಂಬ ಚಿಂತೆ ನಿವಾಸಿಗಳಲ್ಲಿ ಕಾಡುತ್ತಿದೆ.

ಈ ಸಂಬಂಧ ಬಿಬಿಎಂಪಿಯು ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗಿದೆ. ಕುಡಿಯುವ ನೀರು ಪರೀಕ್ಷಿಸುವ ಜೊತೆಗೆ ರೋಗಗಳು ಬರದಂತೆ ತಡೆಯಲು ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳಬೇಕು. ಪ್ರವಾಸ ಸ್ಥಳಗಳಲ್ಲಿ ಅಗತ್ಯವಿರುವ ಔಷಧಿಗಳನ್ನು ಒದಗಿಸಬೇಕು. ತಾತ್ಕಾಲಿಕ ಆರೋಗ್ಯ ಶಿಬಿರಗಳ ಮೂಲಕ ಜನರ ಕಷ್ಟಕ್ಕೆ ಸ್ಪಂದಿಸುವಂತೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಸೂಚಿಸಿದ್ದಾರೆ.

ಬೆಂಗಳೂರಿಗೆ ಇಂದಿನಿಂದ ಮೂರು ದಿನ ಭಾರಿ ಮಳೆ ಮುನ್ಸೂಚನೆ

ಮಳೆಯಿಂದಾಗಿ ಇನ್ನೂ ಕೆಲವು ಬಡಾವಣೆಗಳಲ್ಲಿ ಸಂಚಾರ ಕಡಿತಗೊಂಡಿದೆ. ರಸ್ತೆ ಮೇಲೆಲ್ಲ ನೀರು ನಿಂತುಕೊಂಡಿದೆ. ಇದರ ಬೆನ್ನಲ್ಲೆ ಇಂದು ಗುರುವಾರ (ಅಕ್ಟೋಬರ್ 24) ರಂದು ಸಹ ವ್ಯಾಪಕ ಮಳೆ ಆಗಲಿದೆ. ಇಂದಿನಿಂದ ಮುಂದಿನ ಮೂರು ದಿನಗಳ ಕಾಲ ಧಾರಾಕಾರ ಮಳೆ ಸುರಿಯಲಿದೆ. ಸಂಜೆ ನಂತರ ಕಚೇರಿಯಿಂದ ತೆರಳುವವರು ಇಂದು ಬೇಗನೆ ಮನೆಗೆ ತೆರಳಿದರೆ ಒಳಿತಾಗಬಹುದು. ನಗರದಲ್ಲಿ ಹಗುರ ಮಳೆ, ಇನ್ನೂ ಕೆಲವೆಡೆ ಧಾರಾಕಾರ ಮಳೆ ಆಗುವ ಲಕ್ಷಣ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+