Bengaluru Rains: ಸಂಕ್ರಾಂತಿಗೆ ನಗರದಲ್ಲಿ ತಂಪೆರೆದ ವರುಣ, ಮಳೆ ಆರ್ಭಟ ಎಚ್ಚರಿಕೆ
ಬೆಂಗಳೂರು, ಜನವರಿ 14: ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ವಾಯುಭಾರ ಕುಸಿತದಿಂದಾಗಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು ಬೆಳಗ್ಗೆಯಿಂದಲೇ ಮಳೆ ಆರ್ಭಟ ಶುರುವಾಗಿದೆ. ಮಬ್ಬು ವಾತಾವರಣ ಜೊತೆಗೆ ನಗರಾದ್ಯಂತ ಜಿಟಿ ಜಿಟಿ ಮಳೆ ಆಗುತ್ತಿದೆ..ಮಂಗಳವಾರ ಜನವರಿ 14ರಂದು ಮಕರ ಸಂಕ್ರಾಂತಿ ಹಬ್ಬದಾಚರಣೆ ಜೋರಾಗಿದೆ. ಹಬ್ಬದಂದು ಮಳೆ ನಗರಕ್ಕೆ ತಂಪೆರೆದಿದ್ದಾರೆ. ಒಣಹವೆಯಿಂದ ಬಿಸಿಯಾಗಿದ್ದ ನೆಲ ಮಳೆಗೆ ಕೊಂಚ ತಂಪಾಗಿದೆ.
ಬೆಂಗೂರಿನಲ್ಲಿ ಕಳೆದ ಕೆಲವು ವಾರಗಳ ಹಿಂದೆ ಮಳೆ ಅಬ್ಬರಿಸಿತ್ತು. ಅದಾದ ಬಳಿಕ ಚಳಿಯಲ್ಲಿ ನಿರಂತರ ಏರಿಕೆ ಆಗಿತ್ತು. ನೋಡು ನೋಡುತ್ತಿದ್ದಂತೆ ವ್ಯಾಪಕ ಚಳಿ ಉಂಟಾಗಿ ಕ್ರಮೇಣ ಇಳಿಕೆ ಆಯಿತು. ಒಣಹವೆ ಮುಂದುವರಿದು, ಬೆಳಗ್ಗೆ ರಾತ್ರಿ ಕೆಲವೆಡೆ ಮತ್ರ ಚಳಿ ಕಂಡು ಬಂದಿತ್ತು. ಕನಿಷ್ಠ ತಾಪಮಾನ 13 ಡಿಗ್ರಿ ಸೆಲ್ಸಿಯಸ್ ವರೆಗೆ ಕುಸಿದಿತ್ತು.

ಅದಾಗಿ ಎರಡು ದಿನಗಳಲ್ಲಿ ತಾಪಮಾನ ಸಹಜ ಸ್ಥಿತಿಗೆ ಬಂದು ಒಣಹವೆ ವಾತವರಣ ನಿರ್ಮಾನವಾಗಿತ್ತು. ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ವರೆಗೆ ದಾಖಲಾಗಿದ್ದು, ಇದೀಗ ನಗರದಲ್ಲಿ ಸುರಿದ ತುಂತುರು ಮಳೆಯಿಂದಾಗಿ ಸೆಕೆ ವಾತಾವರಣ ಕೊಂಚ ಇಳಿಕೆ ಆಗಿದೆ.
ನಗರದಲ್ಲಿ ಮುಂದಿನ ಎರಡು ದಿನ ಇದೇ ರೀತಿ ಆಗಾಗ ತುಂತುರು ಮಳೆ ಆಗುವ ಮುನ್ಸೂಚನೆ ಇದೆ. ಮಬ್ಬು ವಾತಾವರಣ ನಿರ್ಮಾಣವಾಗಲಿದೆ. ಇದಕ್ಕೆಲ್ಲ ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ವಾಯುಭಾರ ಕುಸಿತವು ಕಾರಣ ಎನ್ನಲಾಗಿದೆ. ಸಮುದ್ರಮಟ್ಟದಲ್ಲಿ ಕಳೆದ ಕೆಲವು ದಿನಗಳಲ್ಲಿ ಸ್ಟ್ರಪ್, ಸುಳಿಗಾಳಿ ಎದ್ದಿದೆ. ಇದು ತೀವ್ರಗೊಂಡ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಸೇರಿದಂತೆ ರಾಜ್ಯದ ವಿವಿಧ ಕಡೆಗಳಲ್ಲಿ ವ್ಯಾಪಕ ಮಳೆ ಮುನ್ಸೂಚನೆ ನೀಡಲಾಗಿದೆ.
ಹಾಮಾನದಲ್ಲಿನ ಬದಲಾವಣೆಯಿಂದಾಗಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಸೇರಿದಂತೆ ಸುಮಾರು 15 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಆಗಲಿದೆ. ಸದ್ಯ ರಾಜ್ಯದಲ್ಲಿ ಚಳಿ ಪ್ರಮಾಣ ಇಲಾಖೆ ಆಗಿದೆ. ಮಳೆಯು, ಬೇಸಿಗೆ ಒಟ್ಟೊಟ್ಟಿಗೆ ಅನುಭವ ನೀಡುತ್ತಿದೆ.
ಎರಡು ದಿನ ಮಳೆ ಅಬ್ಬರ
ತುಮಕೂರು, ಚಿಕ್ಕಮಗಳೂರು, ಚಾಮರಾಜನಗರ, ಉಡುಪಿ, ಉತ್ತರ ಕನ್ನಡ, ಹಾಸನ, ಮಂಡ್ಯ, ಮೈಸೂರು, ಹಾಸನ, ಕೊಡಗು ಜಿಲ್ಲೆಗಳಲ್ಲಿ ಮುಂದಿನ 48 ಗಂಟೆಗಳ ಕಾಲ ಮಳೆ ಅಬ್ಬರಿಸುವ ಮುನ್ಸೂಚನೆ ಇದೆ. ಈ ಜಿಲ್ಲೆಗಳನ್ನು ಹೊರತುಪಡಿಸಿ ಬೇರೆ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ ದಾಖಲಾಗಲಿದೆ.
ಇನ್ನೂ ಉತ್ತರ ಒಳನಾಡಿನ ವಿಜಯಪುರ, ಬೆಳಗಾವಿ, ಬಾಗಲಕೋಟೆ, ಗದಗ, ಹಾವೇರಿ, ಕೊಪ್ಪಳ, ಧಾರವಾಡ ಭಾಗದಲ್ಲಿ ಕನಿಷ್ಠ ತಾಪಮಾನ ದಾಖಲಾಗಿದೆ.












Click it and Unblock the Notifications