Bengaluru Rain: ಮಂಗಳೂರು, ಧಾರವಾಡ, ಬೆಳಗಾವಿ, ಚಿಕ್ಕಮಗಳೂರಿನಲ್ಲಿ ಮಳೆ ಆಯ್ತು ಬೆಂಗಳೂರಿನಲ್ಲಿ ಯಾವಾಗ?

ಬೆಂಗಳೂರು ಮಾರ್ಚ್‌ 24: ರಾಜ್ಯದ ಹಲವೆಡೆ ಮಳೆರಾಯ ಧರೆಗಿಳಿದು ತಂಪೆರೆದಿದ್ದಾನೆ. ಹಲವು ಜಿಲ್ಲೆಗಳು ಬಿರು ಬಿಸಿಲಿಗೆ ಮಳೆರಾಯ ಕೃಪೆಯಿಂದ ಕೊಂಚ ತಣ್ಣಗಾಗಿವೆ. ಆದರೆ ಅದ್ಯಾಕೋ ಬೆಂಗಳೂರೀಗರ ಮೇಲೆ ವರುಣ ಮುನಿಸಿಕೊಂಡಂತೆ ಕಾಣಿಸುತ್ತಿದೆ. ಬೆಂಗಳೂರಿನಲ್ಲಿ ನಿರೀಕ್ಷಿಸಿದಂತೆ ಈ ತಿಂಗಳು ಮಳೆಯೇ ಆಗಿಲ್ಲ.

ಹೌದು.. ಹವಾಮಾನ ಇಲಾಖೆ ಮಾರ್ಚ್‌ ತಿಂಗಳಲ್ಲಿ ಹಲವು ಬಾರಿ ಬೆಂಗಳೂರಿನಲ್ಲಿ ಮಳೆಯನ್ನು ನಿರೀಕ್ಷಿಸಿತ್ತು. ಆದರೆ ನಿರೀಕ್ಷೆಯಂತೆ ಒಂದೇ ಒಂದು ಭಾಗದಲ್ಲಿ ನಗರ ಮಳೆಯನ್ನು ಕಂಡಿಲ್ಲ. ನೀರಿನ ಬಿಕ್ಕಟ್ಟಿನ ನಡುವೆ ಮಳೆರಾಯನ ಮುನಿಸು ಸಿಲಿಕಾನ್‌ ಸಿಟಿ ಮಂದಿಗೆ ಆತಂಕ ಹೆಚ್ಚಿಸಿದೆ.

Bengaluru Rain Heavy Rainfall Strikes Several Districts in Karnataka

ಜನವರಿಯಿಂದ ನಗರದಲ್ಲಿ ತಾಪಮಾನ ಹೆಚ್ಚಾಗಿದೆ. ಎರಡು ತಿಂಗಳಲ್ಲಿ ಉದ್ಯಾನ ನಗರಿ ಬಿಸಿಲಿಗೆ ಬಸವಳಿದು ಹೋಗಿದೆ. ಹೀಗಾಗಿ ಮಾರ್ಚ್‌ ತಿಂಗಳಲ್ಲಿ ವರ್ಷದ ಮೊದಲ ಮಳೆಯಾಗುವ ನಿರೀಕ್ಷೆ ಇತ್ತು. ಆದರೆ ಮಾರ್ಚ್ ತಿಂಗಳ ಅಂತ್ಯದಲ್ಲಿರುವಾಗಲೂ ಮಳೆಯಾಗುವ ಯಾವ ಲಕ್ಷಗಳು ಕಾಣಿಸುತ್ತಿಲ್ಲ.

ಕಳೆದ ಒಂದು ವಾರದಿಂದ ಮಂಗಳೂರು, ಧಾರವಾಡ, ಬೆಳಗಾವಿ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳು ಭರ್ಜರಿ ಮಳೆಯನ್ನು ಕಂಡಿವೆ. ಆದರೆ ಬೆಂಗಳೂರು ಮಾತ್ರ ಕುಡಿಯುವ ನೀರಿನ ಬಿಕ್ಕಟ್ಟಿನ ನಡುವೆ ಮಳೆಯ ಅಭಾವವನ್ನೂ ಎದುರಿಸುತ್ತಿದೆ. ಮಾರ್ಚ್ ಪೂರ್ಣಗೊಳ್ಳಲು ಒಂದು ವಾರವಷ್ಟೇ ಬಾಕಿ ಇದ್ದು, ಈ ವಾರವಾದರೂ ಮಳೆ ಬರುತ್ತಾ ಅಂತ ಜನ ಕಾತುರದಿಂದ ಕಾಯುತ್ತಿದ್ದಾರೆ.

ಜೊತೆಗೆ ಮಾರ್ಚ್ ಕೊನೆ ವಾರದಲ್ಲಿ ಹೋಳಿ ಹಬ್ಬವನ್ನೂ ಆಚರಿಸಲಾಗುತ್ತದೆ. ಇದಕ್ಕೆ ನೀರಿನ ಬಿಕ್ಕಟ್ಟು ಎದುರಾಗಿದ್ದು ವರುಣ ಕೃಪೆ ತೋರುವ ನಂಬಿಕೆಯಿಂದ ಹೋಳಿ ಆಡಲು ಜನ ಸಜ್ಜಾಗಿದ್ದಾರೆ. ಹಾಗಾದರೆ ಬೆಂಗಳೂರಿನಲ್ಲಿ ಮಳೆ ಯಾವಾಗ ಬರುತ್ತದೆ? ಹವಾಮಾನ ಇಲಾಖೆ ಹೇಳುವುದೇನು? ದೇಶದ ಯಾವ ಭಾಗದಲ್ಲಿ ಮಳೆಯಾಗಲಿದೆ ಎಂದು ಈಗ ತಿಳಿಯೋಣ.

Bengaluru Rain Heavy Rainfall Strikes Several Districts in Karnataka

ದೇಶದ ಯಾವ ಭಾಗದಲ್ಲಿ ಮಳೆ

ಮಾರ್ಚ್ 24 ರಿಂದ 29 ರವರೆಗೆ, ಅರುಣಾಚಲ ಪ್ರದೇಶ, ಅಸ್ಸಾಂ ಮತ್ತು ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರಾದ ಪ್ರತ್ಯೇಕ ಸ್ಥಳಗಳಲ್ಲಿ ಲಘುವಾಗಿ ಸಾಧಾರಣ ಮಳೆ ಮತ್ತು ಮಿಂಚು ಸಹ ಸಂಭವಿಸಬಹುದು ಎಂದು ಭಾರತೀಯ ಹವಾಮಾನ ಇಲಾಖೆ (IMD)ಯಿಂದ ತಿಳಿದು ಬಂದಿ. ಮಾರ್ಚ್ 25 ಮತ್ತು 26 ರ ನಡುವೆ ಅರುಣಾಚಲ ಪ್ರದೇಶದ ಪ್ರತ್ಯೇಕ ಸ್ಥಳಗಳಲ್ಲಿ, ಪಶ್ಚಿಮ ಬಂಗಾಳ, ಸಿಕ್ಕಿಂ, ಅಸ್ಸಾಂ, ಬಿಹಾರ, ಜಾರ್ಖಂಡ್‌ ಮತ್ತು ಮೇಘಾಲಯದ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯಾಗಬಹುದು.

ಬೆಂಗಳೂರಿನಲ್ಲಿ ಮಳೆ ಯಾವಾಗ?

ಮಾರ್ಚ್ 26ರವರೆಗೂ ರಾಜ್ಯದ ಹಲವೆಡೆ ಮಳೆಯಾಗುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಅದರಲ್ಲೂ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ, ಹಾಸನ, ತುಮಕೂರಲ್ಲಿ ಮಳೆಯಾಗಲಿದೆ ಎಂದು ಸೂಚನೆ ನೀಡಿದೆ. ಕೆಲ ಜಿಲ್ಲೆಗಳಲ್ಲಿ ಈಗಾಗಲೇ ಮಳೆಯಾಗುತ್ತಿದ್ದು ಮೂರು ದಿನಗಳ ಕಾಲ ರಾಜ್ಯದ 12ಕ್ಕೂ ಅಧಿಕ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+