Bengaluru Police Forget Humanity: ಜನ ಸಾಮಾನ್ಯರಿಗೆ ಒಂದು ನ್ಯಾಯ.. ನಿಮಗೊಂದು ನ್ಯಾಯಾ ಏನ್‌ರಿ.. ಜೀವಕ್ಕೆ ಬೆಲೆನೇ ಇಲ್ವಾ!
ಬೆಂಗಳೂರು ಜುಲೈ 19: ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಕಳವಳಕಾರಿ ದೃಶ್ಯವೊಂದು ನೋಡುಗರನ್ನು ಬೆಚ್ಚಿಬೀಳಿಸಿದೆ. ರಾತ್ರಿ ವೇಳೆ ಅಪಘಾತಕ್ಕೊಳಗಾದ ವ್ಯಕ್ತಿಯ ಕಿವಿಯಲ್ಲಿ ರಸ್ತೆ ಸುರಿಯುತ್ತಿದ್ದರೆ ಪೊಲೀಸರು ತಮ್ಮ ಬಳಿ ವಾಹನವಿದ್ದರೂ ಅದನ್ನು ಬಳಸದೆ ಬೇರೆ ವಾಹನಗಳನ್ನು ನಿಲ್ಲಿಸುತ್ತಿರುವ ದೃಶ್ಯ ಕಂಡು ಬಂದಿದೆ.
ಹೌದು... ಬೆಂಗಳೂರಿನಲ್ಲಿ ನಡೆದ ಘಟನೆ ಎಂದು ಹೇಳಲಾದ ಈ ದೃಶ್ಯದಲ್ಲಿ ರಸ್ತೆ ಮೇಲೆ ಒಬ್ಬ ವ್ಯಕ್ತಿ ಬಿದ್ದಿದ್ದಾನೆ. ಆತನ ಕಿವಿಯಿಂದ ರಕ್ತಸ್ರಾವವಾಗುತ್ತಿದೆ. ಆದರೆ ಪೊಲೀಸರು ಮಾತ್ರ ತಮ್ಮ 112 ವಾಹನವನ್ನು ರಸ್ತೆ ಬದಿ ಹಾಕಿ ಬೇರೆ ವಾಹನಗಳನ್ನು ನಿಲ್ಲಿಸುತ್ತಿದ್ದಾರೆ. ತಮ್ಮ ವಾಹನದಲ್ಲಿ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಬಹುದು. ಆದರೆ ಮಾನವೀಯತೆ ಮರೆತ ಪೊಲೀಸರು ಬೇರೆ ವಾಹನಕ್ಕಾಗಿ ಕಾಯುತ್ತಾ ವಿನಾಕಾರಣ ತಡ ಮಾಡುತ್ತಿರುವ ದೃಶ್ಯ ಕಂಡು ಬಂದಿದೆ.

ಈ ದೃಶ್ಯವನ್ನು ಕಾರು ಚಾಲಕನೊಬ್ಬರು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಕಾಫಿ ಕುಡ್ಕ (Coffee Kudka) ಎಂಬ ಹೆಸರಿನ ಖಾತೆ ಮೂಲಕ ಈ ವಿಡಿಯೋವನ್ನು ಶೇರ್ ಮಾಡಲಾಗಿದೆ. ಈ ದೃಶ್ಯವನ್ನು ಕಂಡು ಪೊಲೀಸರ ವಿರುದ್ಧ ಜನ ಹಿಡಿ ಶಾಪ ಹಾಕುತ್ತಿದ್ದಾರೆ. ಪೊಲೀಸರ ಈ ನಡೆಯನ್ನು ಖಂಡಿಸಿ ಸಾಕಷ್ಟು ಜನ ಕಾಮೆಂಟ್ ಮಾಡಿದ್ದಾರೆ. ಜೊತೆಗೆ ಇಂತಹ ಪೊಲೀಸರ ವಿರುದ್ಧ ಕ್ರಮಕ್ಕೂ ಒತ್ತಾಯಿಸಿದ್ದಾರೆ.
I don't know the time of the incident 112 car number shows it's from Bengaluru but it is inhuman to reject to taking severely injured person to the hospital in 112 ..@BlrCityPolice Will you endorse this ? #Accident pic.twitter.com/kjzA2yP3FX
— ಕಾಫಿ ಕುಡ್ಕ (Coffee Kudka) (@raajcar) July 18, 2024
ವಿಡಿಯೋದಲ್ಲಿ ಏನಿದೆ?
ವಿಡಿಯೋದಲ್ಲಿ ಆರಂಭದಲ್ಲಿ ರಸ್ತೆ ಮೇಲೆ ಬಿದ್ದಿರುವ ವ್ಯಕ್ತಿಯನ್ನು ತೋರಿಸಲಾಗುತ್ತದೆ. ಪೊಲೀಸರನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯುತ್ತಾ ವಿಡಿಯೋ ಮಾಡುತ್ತಿರುವ ವ್ಯಕ್ತಿ ಪೊಲೀಸರನ್ನು ಪ್ರಶ್ನೆ ಮಾಡುತ್ತಾರೆ. ಪೊಲೀಸರನ್ನು ಪ್ರಶ್ನೆ ಮಾಡುವುದು ದೃಶ್ಯದಲ್ಲಿ ಕೇಳಿ ಬರುತ್ತದೆ. 'ಸರ್.. ನಿಮ್ಮ ಕಾರು ಇದಿಯಲ್ಲಾ.... ಅದರಲ್ಲೇ ಅಪಘಾತಕ್ಕೆ ಒಳಗಾದ ವ್ಯಕ್ತಿಯನ್ನು ಕರೆದುಕೊಂಡು ಹೋಗಿ... ಕಳ್ಳರನ್ನ ಸುಳ್ಳರನ್ನ ನಿಮ್ಮನ್ನ ಮಾತ್ರ ಕರೆದುಕೊಂಡು ಹೋಗೋಕೆ 112 ವಾಹನ ಇರೋದಾ? ಈ ವ್ಯಕ್ತಿ ಪ್ರಾಣ ಹೋದರೆ ಅವರನ್ನು ನಂಬಿಕೊಂಡವರನ್ನು ನೀವು ನೋಡಿಕೊಳ್ಳುತ್ತೀರಾ ಸರ್...? ನಿಮ್ಮ ವಾಹನದಲ್ಲಿ (112) ಕರೆದುಕೊಂಡು ಹೋಗಿ ಸರ್.... ನಿಮ್ಮ ವಾಹನ ಇದ್ದರು ತಡ ಯಾಕ್ ಮಾಡ್ತಾ ಇದಿರಾ ಸರ್?'' ಎಂದು ವಿಡಿಯೋ ಮಾಡುವ ವ್ಯಕ್ತಿ ಪೊಲೀಸರಿಗೆ ಪ್ರಶ್ನೆ ಮಾಡುತ್ತಾರೆ.

ಆಗ ಪೊಲೀಸರು, ''ಇರಪಾ.... ಯಾವುದೂ ಅಂಬ್ಯುಲೆನ್ಸ್ ಬರ್ತಾಯಿಲ್ಲ ನಾವೇನ್ ಮಾಡೋಣಾ. ಯಾರೂ ಕೂಡ ಕಾರ್ ನಿಲ್ಲಿಸುತ್ತಿಲ್ಲ. ಅದ್ರಲ್ಲಿ (112) ಕರೆದುಕೊಂಡು ಹೋಗೋಕೆ ಆಗಲ್ಲ'' ಎಂದು ಉಡಾಫೆ ಮಾತನಾಡುವುದು ಕಂಡುಬಂದಿದೆ. ತಮ್ಮ ಬಳಿ ಕಾರು ಇದ್ದರೂ ಕೂಡ ಕಿಂಚಿತ್ತು ದಯೆ ಇಲ್ಲದೆ ಪೊಲೀಸರು ನಡೆದುಕೊಂಡಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ. ಜೊತೆಗೆ ಪೊಲೀಸ್ ವಾಹನ ಸಂಖ್ಯೆ ಕೂಡ ವಿಡಿಯೋದಲ್ಲಿ ಸೆರೆ ಹಿಡಿಯಲಾಗಿದೆ. KA02G4671 ಪೊಲೀಸ್ ವಾಹನದ ನಂಬರ್ ವಿಡಿಯೋದಲ್ಲಿ ಸೆರೆಯಾಗಿದೆ. ಒಬ್ಬ ವ್ಯಕ್ತಿ ಪ್ರಾಣವನ್ನೂ ಲೆಕ್ಕಿಸದೆ ಪೊಲೀಸರು ದರ್ಪತೋರಿದ್ದಾರೆ.
ಮಾನವೀಯತೆ ಮರೆತ ಪೊಲೀಸರು!
ಕೊನೆಗೆ ಅಪಘಾತಕ್ಕೊಳಗಾದ ವ್ಯಕ್ತಿಯನ್ನು ವಿಡಿಯೋ ಮಾಡುವ ವ್ಯಕ್ತಿಯೇ ನನ್ನ ಕಾರಿನಲ್ಲಿ ನಾನೇ ಆಸ್ಪತ್ರೆಗೆ ಕರೆದುಕೊಂಡು ಹೋಗ್ತೀನಿ ಸರ್... ಆ ವ್ಯಕ್ತಿಯನ್ನು ಎತ್ತಲಾದರೂ ಸಹಾಯ ಮಾಡಿ ಅಂತ ಕೇಳಿಕೊಂಡಿದ್ದಾರೆ. ಕೊನೆಗೆ ಅಪಘಾತಕ್ಕೊಳಗಾದ ವ್ಯಕ್ತಿಯನ್ನ ವಿಡಿಯೋ ಮಾಡುತ್ತಿರುವ ವ್ಯಕ್ತಿಯೇ ತಮ್ಮ ಕಾರಿನಲ್ಲಿ ಕೂರಿಸಿಕೊಂಡು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.

ಪೊಲೀಸರ ಈ ನಡೆಯನ್ನು ಸಾರ್ವಜನಿಕರು ಖಂಡಿಸಿದ್ದಾರೆ. ವ್ಯಕ್ತಿ ಪ್ರಾಣಕ್ಕಿಂತ ಮಿಗಿಲಾಗಿದ್ದು ಯಾವುದೂ ಇಲ್ಲ. ಆ ವ್ಯಕ್ತಿಯ ಪ್ರಾಣವನ್ನು ಪೊಲೀಸರು ಉಳಿಸಲು ತಮ್ಮ ವಾಹನವನ್ನೇ ಬಳಸಬಹುದಿತ್ತು. ಬೇರೆ ವಾಹನಕ್ಕಾಗಿ ಕಾದಿದ್ದು ಎಷ್ಟು ಸರಿ? ಪೊಲೀಸರು ಮತ್ತೊಬ್ಬರಿಗೆ ಬುದ್ಧಿ ಹೇಳುತ್ತಾರೆ. ಅವರೇ ಹೀಗೆ ಮಾಡಿದೆ ಹೇಗೆ ಎಂದು ಜನ ಪ್ರಶ್ನೆ ಮಾಡುತ್ತಿದ್ದಾರೆ. ಅಲ್ಲದೆ ಈ ದೃಶ್ಯದಲ್ಲಿ ಕಂಡು ಬಂದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯ ಮಾಡಲಾಗುತ್ತಿದೆ.
112 ಇರುವುದೇಕೆ?
ಒಂದೇ ಭಾರತ ಒಂದೇ ತುರ್ತು ಕರೆ ಸಂಖ್ಯೆ 112 ಅನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದೆ. ಈ ಹಿಂದೆ ತುರ್ತು ಸಮಯದಲ್ಲಿ ಪೊಲೀಸ್ ಇಲಾಖೆ, ಅಗ್ನಿಶಾಮಕ ಮತ್ತು ಆಂಬ್ಯುಲೆನ್ಸ್ ಸೇವೆಗೆ ವಿವಿಧ ಬೇರೆ ಬೇರೆ ನಂಬರ್‌ಗೆ ಕರೆ ಮಾಡಬೇಕಿತ್ತು. ಇದರಿಂದ ಸಾರ್ವಜನಿಕರು ಸಹ ಗೊಂದಲಕ್ಕೆ ಒಳಗಾಗುತ್ತಿದ್ದರು. ಆದರೀಗ ಎಲ್ಲಾ ಇಲಾಖೆಗಳಿಗೆ ಒಂದೇ ತುರ್ತು ಕರೆ ಸಂಖ್ಯೆ 112 ಆಗಿ ಬದಲಾಯಿಸಲಾಗಿದೆ.
ತುರ್ತು ಸೇವೆಗಳನ್ನು ಪಡೆಯಲು ಈ ಹಿಂದೆ ವ್ಯಕ್ತಿ ಆಂಬುಲೆನ್ಸ್, ಅಗ್ನಿಶಾಮಕ ಮತ್ತು ಪೊಲೀಸ್ ಇಲಾಖೆಗೆ ಬೇರೆ ಬೇರೆ ನಂಬರ್‌ಗೆ ಕರೆ ಮಾಡಬೇಕಿತ್ತು. ಈ ಬಗ್ಗೆ ಸಾರ್ವಜನಿಕರಲ್ಲಿ ಸಾಕಷ್ಟು ಗೊಂದಲ ಇತ್ತು. ಈ ಗೊಂದಲಗಳಿಗೆ ಪರಿಹಾರ ಕಂಡುಹಿಡಿಯುವ ಉದ್ದೇಶದಿಂದ ಕೇಂದ್ರ ಸರ್ಕಾರ ಒಂದೇ ಭಾರತ ಒಂದೇ ತುರ್ತು ಕರೆ 112 ಜಾರಿ ಮಾಡಿದೆ.
ತುರ್ತು ಸಮಯದಲ್ಲಿ ತೊಂದರೆಗೊಳಗಾದ ವ್ಯಕ್ತಿಯನ್ನು ಮೊದಲು ಸಂಪರ್ಕಿಸುವುದು ಪೊಲೀಸ್ ಸಿಬ್ಬಂದಿ. ಅಪಘಾತ ಇರಲಿ, ಅಪರಾಧವಾಗಿರಲಿ ಮತ್ತು ವಿಪತ್ತು ಆಗಿರಲಿ ಆ ಸ್ಥಳಕ್ಕೆ ಮೊದಲು ತಲುಪುದು ಪೊಲೀಸ್ ಇಲಾಖೆ. ತೊಂದರೆಗೊಳಗಾದ ವ್ಯಕ್ತಿಗೆ ತಕ್ಷಣಕ್ಕೆ ಬೇಕಾದ ನೆರವು ನೀಡಿ ಆತನ ರಕ್ಷಣೆ ಮಾಡುವುದು ಪೊಲೀಸರ ಕರ್ತವ್ಯ ಕೂಡ ಹೌದು... ಆದರೆ ಈ ವಿಡಿಯೋದಲ್ಲಿ ಎಲ್ಲವೂ ಉಲ್ಟಾಪಲ್ಟ. ಪೊಲೀಸರು ತಮ್ಮ ವಾಹನವಿದ್ದರೂ ಬೇರೆ ವಾಹನಕ್ಕಾಗಿ ಕಾಯುವ ಮೂಲಕ ಕಾಲ ಹರಣ ಮಾಡಿದ್ದಾರೆ. ಇದು ನಿಜಕ್ಕೂ ವಿಪರ್ಯಾಸ.
ಪೊಲೀಸರ ವಿರುದ್ಧ ಕ್ರಮಕ್ಕೆ ಒತ್ತಾಯ
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು ಪೊಲೀಸರ ನಡೆಯನ್ನು ಖಂಡಿಸಿ ಜನ ಕಾಮೆಂಟ್ ಮಾಡುತ್ತಿದ್ದಾರೆ. ಸಾರ್ವಜನಿಕರ ಸೇವೆಗಾಗಿ ಕೊಟ್ಟ ವಾಹನವನ್ನು ಪೊಲೀಸರು ತಮ್ಮ ಸ್ವಂತ: ವಾಹನದಂತೆ ಬಳಸಿಕೊಳ್ಳುತ್ತಿದ್ದಾರೆ. ರಸ್ತೆಯಲ್ಲಿ ಅಪಘಾತಕ್ಕೊಳಗಾಗಿ ಬಿದ್ದ ವ್ಯಕ್ತಿಯನ್ನು ಕಂಡರೆ ಎಂತವರಿಗೂ ಕರುಣೆ ಬರುತ್ತದೆ. ಹೀಗಿರುವಾಗ ಪೊಲೀಸರು ಮನುಷ್ಯತ್ವವನ್ನೇ ಮರೆತು ಅನುಕಂಪವಿಲ್ಲದೆ ವರ್ತಿಸಿದ್ದಾರೆ. ಈ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಲೇಬೇಕು ಎಂದು ಜನ ಒತ್ತಾಯಿಸುತ್ತಿದ್ದಾರೆ.
-
April 10 Horoscope: 12 ರಾಶಿಗಳಿಗೆ ಇಂದು ಆರೋಗ್ಯ, ಹಣಕಾಸು ಮತ್ತು ಪ್ರೇಮದಲ್ಲಿ ಮಿಶ್ರ ಫಲ -
ಬೆಂಗಳೂರು ನಾಯಂಡಳ್ಳಿಯಲ್ಲಿ ಮನೆಯ ಮೊದಲ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಕಂದಮ್ಮ -
SSLC Hindi: ಅಂಕ ಬದಲು ಗ್ರೇಡಿಂಗ್ ವಿರೋಧಿಸಿ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ 1 ಲಕ್ಷ ರೂ. ದಂಡ: ಕರವೇ ಹೇಳಿದ್ದೇನು -
Bengaluru: ಬೆಂಗಳೂರು ನಗರದಲ್ಲಿ ಸ್ವಿಗ್ಗಿ, ಜೊಮ್ಯಾಟೋ ಡೆಲಿವರಿ ಬಾಯ್ಸ್ಗೆ ಸಂಕಷ್ಟ, ಅಮಾನವೀಯ ಲಿಫ್ಟ್ ಸಂಸ್ಕೃತಿ -
ಚಿಕ್ಕಮಗಳೂರಲ್ಲಿ ನಾಪತ್ತೆಯಾಗಿದ್ದ ಕೇರಳದ ಬಾಲಕಿ ಶ್ರಿನಂದಾ ಸಾವು: 2 ಸಾವಿರ ಅಡಿ ಪ್ರಪಾತದಲ್ಲಿ ಶವ ಪತ್ತೆ -
IPL 2026: ಗಿಲ್ ಮತ್ತು ಬಟ್ಲರ್ ಸ್ಫೋಟಕ ಬ್ಯಾಟಿಂಗ್, ಎಲ್ಎಸ್ಜಿ ಮಣಿಸಿದ ಗುಜರಾತ್ ಟೈಟಾನ್ಸ್ -
Copra: ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಮತ್ತೆ ದಾಖಲೆ ಬೆಲೆಗೆ ಮಾರಾಟವಾದ ಕೊಬ್ಬರಿ: ನಿರ್ಮಾಣವಾಯ್ತು ಹೊಸ ಇತಿಹಾಸ -
Mona Lisa: ಮಹಾಕುಂಭ ಮೇಳದ ಫೇಮಸ್ ಮೊನಾಲಿಸಾ ಪತಿಗೆ ಕಾನೂನು ಸಂಕಷ್ಟ: ಫರ್ಮಾನ್ ಖಾನ್ ಮೇಲೆ ಪೋಕ್ಸೋ ಪ್ರಕರಣ -
2nd PUC: ಬೆಂಗಳೂರು - ಪಿಯುಸಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ 260 ವಿದ್ಯಾರ್ಥಿಗಳಿಗೆ 35,000 ರೂ. -
RBI New Rule: ಇನ್ಮುಂದೆ ಆನ್ಲೈನ್ ವಹಿವಾಟಿನಲ್ಲಿ ದೊಡ್ಡ ಬದಲಾವಣೆ: 10,000 ರೂ. ಹಣ ವರ್ಗಾವಣೆಗೂ ಹೊಸ ನಿಯಮ -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
Gold Rate April 10: ಚಿನ್ನ - ಬೆಳ್ಳಿ ಬೆಲೆಯಲ್ಲಿ ಅಚ್ಚರಿಯ ಬೆಳವಣಿಗೆ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ










Click it and Unblock the Notifications