ಚರ್ಚ್‌ಸ್ಟ್ರೀಟ್‌ನಲ್ಲಿ ದೋಣಿ ಸಾಗಲಿ..ಮುಂದೆ ಹೋಗಲಿ...
ಬೆಂಗಳೂರು, ಆ. 01: ಬೆಂಗಳೂರಿನ ಚರ್ಚ್ ಸ್ಟ್ರೀಟ್ ರಸ್ತೆಯಲ್ಲಿ ದೋಣಿಗಳು ಸಂಚರಿಸುತ್ತಿವೆ, ಅದೂ ಚರಂಡಿ ನೀಡಿನಲ್ಲಿ! ಆಶ್ಚರ್ಯವಾಗುತ್ತಿದೆಯಾ, ಈ ವರದಿಯನ್ನು ಓದಿ.....
ಹೌದು... ಮೊಸಳೆ ಬಿಟ್ಟು ಬಿಬಿಎಂಪಿಯನ್ನು ದಂಗಾಗಿಸಿದ್ದ ಕಲಾವಿದ ಬಾದಲ್ ನಂಜುಂಡಸ್ವಾಮಿ ಮತ್ತೆ ಮರಳಿದ್ದಾರೆ. ಸುಲ್ತಾನ್ ಪಾಳ್ಯದ ರಸ್ತೆಯಲ್ಲಿ ಮೊಸಳೆ ಇಟ್ಟು ಮೌನ ಪ್ರತಿಭಟನೆ ನಡೆಸಿದ್ದ ನಂಜುಂಜಸ್ವಾಮಿ ಈ ಬಾರಿ ಬಣ್ಣ ಬಣ್ಣದ ಕಾಗದದ ದೋಣಿಗಳನ್ನು ತೇಲಿಬಿಟ್ಟಿದ್ದಾರೆ.[ಸುಲ್ತಾನ್ ಪಾಳ್ಯ ರಸ್ತೆಯಲ್ಲಿ ಈಜಾಡಿದ ಮೊಸಳೆ!]

ಚರ್ಚ್ ಸ್ಟ್ರೀಟ್ ನ ರಸ್ತೆಗಳಲ್ಲಿ ದೋಣಿಗಳು ತೆರಳುತ್ತಿವೆ. ಕಳೆದ ಕೆಲ ದಿನಗಳಿಂದ ರಸ್ತೆ ಮೇಲೆ ಹರಿಯುತ್ತಿರುವ ಚರಂಡಿ ನೀರಿನಲ್ಲಿಯೇ ಬಣ್ಣ ಬಣ್ಣದ ದೊಣಿಗಳನ್ನು ಬಿಟ್ಟು ಇಲಾಖೆಗಳ ನಿರ್ಲಜ್ಜತನಕ್ಕೆ ಕನ್ನಡಿ ಹಿಡಿದಿದ್ದಾರೆ. [ಬೆಂಗಳೂರು ರಸ್ತೆಗಳಲ್ಲಿರುವ ಗುಂಡಿಗಳ ಲೆಕ್ಕ ನೋಡಿ]
ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ನಂಜುಂಡಸ್ವಾಮಿ ದೋಣಿ ಬಿಡುತ್ತಿರುವ ಚಿತ್ರವನ್ನು ಹಾಕಲಾಗಿದೆ. ಮೊಸಳೆ ಪ್ರತಿಕೃತಿ ಮಾಡಿ ನಂತರ ಎಚ್ಚೆತ್ತುಕೊಂಡ ಬಿಬಿಎಂಪಿ ಸುಲ್ತಾನ್ ಪಾಳ್ಯದ ರಸ್ತೆಯನ್ನು ಸರಿ ಮಾಡಿತ್ತು. ಈ ಬಾರಿ ನಂಜುಂಡಸ್ವಾಮಿಯವರ ಆಕ್ರೋಶದ ಕಲೆಗೆ ಯಾವ ಫಲಿತಾಂಶ ಸಿಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
#Bengaluru Artist is back! He worked his magic on d overflowing drain on Church St - Colorful makeover of paper boats pic.twitter.com/QlJ0SsAjYZ
— Traffline Bengaluru (@TrafflineBLORE) August 1, 2015 











Click it and Unblock the Notifications