Breaking: ಬೆಂಗಳೂರು ಹೋಟೆಲ್ ತಿಂಡಿ-ತಿನಿಸು, ಟೀ-ಕಾಪಿ ಬೆಲೆ ಹೆಚ್ಚಳ ಶೀಘ್ರ: ಅಧ್ಯಕ್ಷರು
ಬೆಂಗಳೂರು, ಜೂನ್ 22: ಕರ್ನಾಟಕದಲ್ಲಿ ಕಾಪಿ ಪುಡಿ, ದಿನಸಿ, ತರಕಾರಿಗಳು ಸೇರಿದಂತೆ ದಿನನಿತ್ಯ ಬಳಸುವ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗುತ್ತಿದೆ. ವಿದ್ಯುತ್ ಬಿಲ್ ಹೆಚ್ಚಾಗಿದೆ. ಇದು ಹೀಗೆ ಮುಂದುವರಿದಿದ್ದೇ ಆದಲ್ಲಿ ಬೆಂಗಳೂರಿನಲ್ಲಿ ಆದಷ್ಟು ಶೀಘ್ರವೇ ಟಿ-ಕಾಪಿ, ತಿಂಡಿ-ಆಹಾರ ಪದಾರ್ಥಗಳು ಸಹ ಗಗನಕ್ಕೇರಲಿವೆ ಎಂದು ಬೃಹತ್ ಬೆಂಗಳೂರು ಹೋಟೆಲುಗಳ ಸಂಘದ (BBHA) ಅಧ್ಯಕ್ಷ ಪಿ.ಸಿ.ರಾವ್ ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಬದುಕು ದಿನೇ ದಿನೆ ದುಬಾರಿ ಆಗುತ್ತಿದೆ. ಇಂಧನ, ಗ್ಯಾಸ್ ಮತ್ತಿತರ ವಸ್ತುಗಳ ಬೆಲೆ ಏರಿಕೆಗಳ ಸಾಲಿನಲ್ಲಿ ದಿನಸಿ ವಸ್ತುಗಳು, ಕಾಪಿ ಪುಡಿ, ಜೊತೆಗೆ ಇದೀಗ ತರಕಾರಿಗಳು, ಮೊಟ್ಟೆ ಮತ್ತು ಮಾಂಸವು ಸೇರಿಕೊಂಡಿವೆ. ಇದರೊಂದಿಗೆ ವಿದ್ಯುತ್ ಬಿಲ್ ಮೊನ್ನೆಯಷ್ಟೇ ಏರಿಕೆ ಆಗಿದೆ.

ರಾಜ್ಯ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಬೆಲೆ ಏರಿಕೆಗಳ ಮೇಲೆ ಹತೋಟಿ ಸಾಧಿದಿದ್ದರೆ ಪರಿಸ್ಥಿತಿ ಬಿಗುಡಾಯಿಸುತ್ತದೆ. ಅಗತ್ಯ ವಸ್ತುಗಳು ಗಗನ ಕುಸುಮವಾಗುತ್ತವೆ. ಆಮೇಲೆ ಅನಿವಾರ್ಯವಾಗಿ ಹೋಟೆಲ್‌ಗಳಲ್ಲಿ ಊಟು ತಿಂಡಿ ಇನ್ನಿತರ ಆಹಾರ ಪದಾರ್ಥಗಳ ದರವು ಏರಿಕೆ ಮಾಡಬೇಕಾಗುತ್ತದೆ.
ಸರ್ಕಾರ ಬೆಲೆ ಏರಿಕೆ ವಿರುದ್ಧ ಸಮರ ಸಾರದಿದ್ದ ಆದಷ್ಟು ಶೀಘ್ರವೇ ಹೋಟೆಲ್‌ಗಳಲ್ಲಿನ ಆಹಾರ ದರ ಹೆಚ್ಚಾಗಲಿವೆ ಎಂದು ಪಿ.ಸಿ.ರಾವ್ ತಿಳಿಸಿದರು.
ಈಗಾಗಲೇ ವಿದ್ಯುತ್ ಬೆಲೆ ಏರಿಕೆ ಆಗಿದ್ದರಿಂದ ಉದ್ಯಮಿಗಳಿಗೆ, ಸಾರ್ವಜನಿಕರಿಗೆ ತೊಂದರೆ ಆಗಿದೆ. ದಿನಸಿ, ತರಕಾರಿ ದರ ಹೆಚ್ಚಾಗಿದೆ. ಇನ್ನು ಅಕ್ಕಿ ಬೆಲೆ ಮತ್ತು ಹಾಲಿನ ದರ ಸಹಿತ ಇನ್ನೇನು ಕೆಲವೇ ದಿನಗಳಲ್ಲಿ ಹೆಚ್ಚಾಗುವ ಮುನ್ಸೂಚನೆ ಇದೆ. ಇದನ್ನು ಹತೋಟಿಗೆ ತರಬೇಕು ಎಂದು ಅವರು ಆಗ್ರಹಿಸಿದರು.

ಕೊರೊನಾ ನಂತರ ಅಡುಗೆ ಎಣ್ಣೆ ದರ ಕಂಡು ಕೇಳರಿಯದಷ್ಟು ಮಟ್ಟಕ್ಕೆ ಹೆಚ್ಚಾಯಿತು. ಅದಾದ ಬಳಿಕ ಅನೇಕ ವಸ್ತುಗಳ ಬೆಲೆ ಹೆಚ್ಚಾದರೂ ಮೇಲಿಂದ ಮೇಲೆ ಸಭೆ ನಡೆಸುವ ಜೊತೆಗೆ ಬಿಬಿಎಚ್‌ಎ ಸರ್ಕಾರಕ್ಕೆ ಮನವಿ ಮಾಡಿತ್ತು. ಹೋರಾಟ ಎಚ್ಚರಿಕೆ ನೀಡಿತ್ತು.
ದರ ಏರಿಕೆಗೆ ಕಳವಳ: ಸೂಚನೆಗೂ ಮುನ್ನವೇ ಕೆಲವೆಡೆ ದರ ಏರಿಕೆ
ದಿಢೀರ್ ಹೋಟೆಲ್ ತಿಂಡಿ ತಿನಿಸು ದರ ಹೆಚ್ಚಿಸಿದರೆ, ಅದು ಆದಾಯದ ಮೇಲೆ, ಉದ್ಯಮದ ವಹಿವಾಟಿನ್ ಮೇಲೆ ದುಷ್ಪರಿಣಾಮ ಬೀರುತ್ತದೆ. ಜೊತೆಗೆ ಗ್ರಾಹಕರಿಗೂ ಹೊರೆಯಾಗುತ್ತದೆ ಎಂಬ ದೃಷ್ಟಿಯಿಂದ ಹೋಟೆಲ್ ಸಂಘ ಇದುವರೆಗೆ ಸಹಿಸಿಕೊಂಡಿತ್ತು ಬಂದಿದೆ. ಹೀಗಿದ್ದರೂ ಮತ್ತೆ ವಿದ್ಯುತ್ ಸೇರಿ ದಿನಸಿ ವಸ್ತು ಬೆಲೆ ಹೆಚ್ಚಾಗಿದ್ದಕ್ಕೆ ಹೋಟೆಲ್ ಉದ್ಯಮ ಕಳವಳ ವ್ಯಕ್ತಪಡಿಸಿದೆ.
ಬೆಂಗಳೂರಿನಲ್ಲಿ ಈಗಾಗಲೇ ಟೀ-ಕಾಪಿ ದರ 8-10ಕ್ಕೆ ಏರಿಕೆ ಆದರೆ, ವಿಜಯನಗರದ ಹೋಟೆಲ್ 'ನಮಸ್ಕಾರ್' 1 ಟೀ-ಕಾಪಿಗೆ 15 ರೂಪಾಯಿ ವಿಧಿಸಿದ್ದಾರೆ. ಪ್ಲೇಟ್ 2 ಇಡ್ಲಿ ಬೆಲೆ 30ಕ್ಕೆ ಏರಿಕೆ ಆಗಿದೆ. ಇದಲ್ಲದೆ ದೋಸೆ, ಕಾರಾಬಾತ್, ಊಟ, ರೈಸ್ ಐಟಂಗಳಲ್ಲಿ ಸಹ 5-10 ರೂಪಾಯಿ ದಿಢೀರ್ ಏರಿಕೆ ಆಗಿದೆ. ಇದು ಗ್ರಾಹಕರ ಮೆಲೆ ಹೊರೆಯಾಗಿ ಪರಿಣಮಿಸುತ್ತಿದೆ. ಅಲ್ಲದೇ ಹೋಟೆಲ್ ಸಂಘ ಅಧಿಕೃತವಾಗಿ ಹೇಳುವ ಮುನ್ನವೇ ಹೀಗೆ ದರ ಏರಿಕೆ ಮಾಡಿರುವ ಹೋಟೆಲ್ ವಿರುದ್ಧ ಕೆಲವು ಗ್ರಾಹಕರು ಅಸಮಾಧಾನ ಹೊರ ಹಾಕಿದ್ದಾರೆ.












Click it and Unblock the Notifications