ಬೆಂಗಳೂರು; ಬಸವನಗುಡಿ ಹೋಟಲ್‌ನಲ್ಲಿ ಬೆಂಕಿ
ಬೆಂಗಳೂರು, ಅಕ್ಟೋಬರ್ 19: ಉದ್ಯಾನ ನಗರಿ ಬೆಂಗಳೂರಿನ ನಗರದ ಹೋಟೆಲ್ ಒಂದರಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಘಟನೆಯಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ. ಅಗ್ನಿ ಶಾಮಕದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದಾರೆ.
ಸೋಮವಾರ ಬೆಳಗ್ಗೆ ಬಸವನಗುಡಿಯ ನೆಟ್ಟಕಲ್ಲಪ್ಪ ವೃತ್ತದ ಬಳಿ ಇರುವ ಪ್ರಸಿದ್ಧ ದಾವಣಗೆರೆ ಬೆಣ್ಣೆದೋಸೆ ಹೋಟೆಲ್ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಘಟನೆಗೆ ಕಾರಣ ತಿಳಿದು ಬಂದಿಲ್ಲ, ಯಾವುದೇ ಪ್ರಾಣಹಾನಿಯಾಗಿಲ್ಲ.

ಎಂದಿನಂತೆ ಬೆಳಗ್ಗೆ ವ್ಯಾಪಾರ ವಹಿವಾಟನ್ನು ಹೋಟೆಲ್‌ನಲ್ಲಿ ಆರಂಭಿಸಲಾಗಿತ್ತು. ಈ ಹೋಟೆಲ್ ಪಕ್ಕದಲ್ಲಿಯೇ ಮೈಸೂರು ಬ್ರಾಹ್ಮಿನ್ಸ್ ಕೆಫೆ ಎಂಬ ಹೋಟೆಲ್ ಕೆಲವು ದಿನಗಳ ಹಿಂದೆ ಆರಂಭವಾಗಿತ್ತು. ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ಹೊತ್ತಿರಬಹುದು ಎಂದು ಅಂದಾಜಿಸಲಾಗಿದೆ.
ದಶಕಗಳ ಕಾಲದಿಂದ ದಾವಣಗೆರೆ ಬೆಣ್ಣೆದೋಸೆ ಹೋಟೆಲ್ ನೆಟ್ಟಕಲ್ಲಪ್ಪ ವೃತ್ತದ ಬಳಿ ಕಾರ್ಯ ನಿರ್ವಹಣೆ ಮಾಡುತ್ತಿದೆ. ವಿವಿಧ ಪ್ರದೇಶಗಳ ಜನರು ದೋಸೆ ತಿನ್ನಲು ಇಲ್ಲಿಗೆ ಆಗಮಿಸುತ್ತಿದ್ದರು.
ಬೆಂಗಳೂರು; ಬಸವನಗುಡಿ ಹೋಟಲ್‌ನಲ್ಲಿ ಬೆಂಕಿ
— oneindiakannada (@OneindiaKannada) October 19, 2020
ಸಂಪೂರ್ಣ ಮಾಹಿತಿ:https://t.co/B3ONmkBpDN#Bengaluru #Fire #Netkallappacircle #Basavanagudi pic.twitter.com/qGSQqljxQx
ಬೆಂಕಿ ಹೊತ್ತಿಕೊಳ್ಳುವಾಗ ಹಲವು ಜನರು ದೋಸೆ ಸವಿಯುತ್ತಿದ್ದರು. ಬೆಂಕಿ ಹೊತ್ತಿಕೊಂಡಿದ್ದು ಗಮನಕ್ಕೆ ಬಂದ ಕೂಡಲೇ ದೂರ ಹೋದರು. ಕಟ್ಟಡದ ಪಕ್ಕದಲ್ಲಿಯೇ ಐಸಿಐಸಿಐ ಬ್ಯಾಂಕ್ ಎಟಿಎಂ ಎಂದಿದೆ.












Click it and Unblock the Notifications