ಬೆಂಗಳೂರಿನಲ್ಲಿ ಅಮೆರಿಕ ದೂತಾವಾಸದ ವಾಣಿಜ್ಯ ಸಮ್ಮೇಳನ
ಬೆಂಗಳೂರು, ನವೆಂಬರ್ 05 : ಚೆನ್ನೈನಲ್ಲಿನ ಅಮೆರಿಕ ದೂತಾವಾಸವು ಅಟ್ಲಾಂಟಿಕ್ ಕೌನ್ಸಿಲ್ ಸೌತ್ ಏಷ್ಯಾ ಸೆಂಟರ್ ಸಹಯೋಗದಲ್ಲಿ "ಅಮೆರಿಕ-ಭಾರತದ ನಡುವಿನ ವಾಣಿಜ್ಯ ಅವಕಾಶಗಳ ಹುಡುಕಾಟ" ವಾಣಿಜ್ಯ ಸಮ್ಮೇಳನವನ್ನು ಬೆಂಗಳೂರಿನಲ್ಲಿ ಆಯೋಜಿಸಿದೆ.
ಈ ಸಮ್ಮೇಳನವು ನವೆಂಬರ್ 7 ಮತ್ತು 8ರಂದು ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ನಡೆಯಲಿದೆ.
"ಉಭಯದೇಶಗಳ ನಡುವಿನ ವಾಣಿಜ್ಯ ಸಂಬಂಧ ಇನ್ನಷ್ಟು ಹೆಚ್ಚಿದೆ. ಪ್ರಸಕ್ತ ವರ್ಷ $114 ಬಿಲಿಯನ್ ಡಾಲರ್‌ಗೂ ಅಧಿಕ ವಹಿವಾಟು ನಡೆದಿದೆ. ಆ ಮೂಲಕ ದ್ವಿಮುಖ ಹೂಡಿಕೆ $40 ಬಿಲಿಯನ್ ಡಾಲರ್‌ಗೆ ತಲುಪಿದೆ" ಎಂದು ಯು.ಎಸ್. ಕಾನ್ಸಲ್ ಜನರಲ್ ರಾಬರ್ಟ್ ಬರ್ಜಸ್ ಹೇಳಿದರು.

"ಅಮೆರಿಕವು ವಿಶ್ವದ ಯಾವುದೇ ದೇಶಗಳಿಗಿಂತ ಹೆಚ್ಚು ಭಾರತೀಯ ವಸ್ತು ಮತ್ತು ಸೇವೆಗಳನ್ನು ಪಡೆಯುತ್ತದೆ ಎಂದು ಹೇಳಲು ಹೆಮ್ಮೆಯಾಗುತ್ತದೆ. ಅಮೆರಿಕದ ಕಂಪನಿಗಳು ಭಾರತದಲ್ಲಿ ಅಮೋಘ ಅವಕಾಶಗಳನ್ನು ಕಾಣುತ್ತಿವೆ. ಅಮೆರಿಕದ ಉದ್ಯೋಗಗಳಿಗೆ ಒತ್ತಾಸೆ ನೀಡುವ ಹೂಡಿಕೆ ಮತ್ತು ವಾಣಿಜ್ಯ ವಹಿವಾಟಿಗೆ ತೆರೆದುಕೊಳ್ಳುವ ಭಾರತದ ಪ್ರಯತ್ನವನ್ನು ನಾವು ಬೆಂಬಲಿಸುತ್ತೇವೆ. ಈ ಸಮ್ಮೇಳನ ಮತ್ತು ಮುಂದಿನ ತಿಂಗಳು ಹೈದರಾಬಾದಿನಲ್ಲಿ ನಡೆಯಲಿರುವ ಜಾಗತಿಕ ವಾಣಿಜ್ಯೋದ್ಯಮ ಶೃಂಗಸಭೆಯಂತಹ ಉಪಕ್ರಮಗಳು ಅಮೆರಿಕ ಮತ್ತು ಭಾರತದ ನಡುವಿನ ವಾಣಿಜ್ಯ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಲಿವೆ." ಎಂದು ಅವರು ತಿಳಿಸಿದರು.
ಕಳೆದ ದಶಕಕ್ಕೆ ಹೋಲಿಸಿದರೆ ಅಮೆರಿಕ ಮತ್ತು ಭಾರತದ ನಡುವಿನ ದ್ವಿಪಕ್ಷೀಯ ವಹಿವಾಟು ಸುಮಾರು ಐದು ಪಟ್ಟು ಹೆಚ್ಚಿದೆ. ಇನ್ನೂ ಹೆಚ್ಚಲು ಅಗಾಧ ಅವಕಾಶಗಳಿವೆ. "ಅಮೆರಿಕ-ಭಾರತದ ವಾಣಿಜ್ಯ ಅವಕಾಶಗಳ ಹುಡುಕಾಟ" ಸಮ್ಮೇಳನದಲ್ಲಿ ಭಾರತ, ಅಮೆರಿಕ ಮತ್ತು ವಿವಿಧ ದೇಶಗಳ ಉದ್ಯಮಿಗಳು, ವಾಣಿಜ್ಯ ವಹಿವಾಟು ತಜ್ಞರು ಭಾಗವಹಿಸಲಿದ್ದಾರೆ. ಚಿಂತಕರು, ನೀತಿ ನಿರೂಪಕರು ಉದ್ಯಮದ ಸಹಭಾಗಿಗಳ ನಡುವಿನ ಸಂವಾದಕ್ಕೆ ಈ ಸಮ್ಮೇಳನ ವೇದಿಕೆ ಒದಗಿಸಲಿದೆ.
ಸುಮರು 100ಕ್ಕೂ ಹೆಚ್ಚು ಮಂದಿ ಪ್ರತಿನಿಧಿಗಳು ಅಮೆರಿಕ ಮತ್ತು ಭಾರತದ ನಡುವಿನ ಆರ್ಥಿಕ ಸಹಭಾಗಿತ್ವ, ಬೆಳವಣಿಗೆ ಕುಂಠಿತಗೊಳಿಸುವ ಎಡರು ತೊಡರುಗಳು ಮತ್ತು ಅವುಗಳ ನಿವಾರಣೆಗೆ ಮಾರ್ಗಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಯಾವುದೇ ತೊಡಕಿಲ್ಲದೆ ಉದ್ಯಮ ನಿರ್ವಹಣೆ; ರಕ್ಷಣಾ ವಲಯದಲ್ಲಿ ಸಹಕಾರದ ಹೆಚ್ಚಳ; ಇಂಧನ ವಲಯದಲ್ಲಿನ ಸಹಕಾರದ ಕುರಿತಂತೆ ಇಲ್ಲಿ ಚರ್ಚೆ ನಡೆಯಲಿದೆ.
ವಿಶ್ವಾದ್ಯಂತ ಇರುವ ಉದಯೋನ್ಮುಖ ಉದ್ಯಮಿಗಳು, ಹೂಡಿಕೆದಾರರು ಮತ್ತು ಉದ್ಯಮ ಮುಖಂಡರು ಒಂದೆಡೆ ಸೇರಲಿರುವ ಜಾಗತಿಕ ವಾಣಿಜ್ಯೋದ್ಯಮ ಶೃಂಗಸಭೆಗೆ ಈ ಸಮ್ಮೇಳನ ಮುನ್ನುಡಿಯಾಗಲಿದೆ. ಹೈದರಾಬಾದ್‌ನಲ್ಲಿ ನವೆಂಬರ್ 28-30, 2017ರಂದು ನಡೆಯಲಿರುವ ಜಿಇಎಸ್ 2017 ಶೃಂಗಸಭೆಯ ಆತಿಥ್ಯವನ್ನು ಅಮೆರಿಕ ಮತ್ತು ಭಾರತ ಸರಕಾರಗಳು ಜಂಟಿಯಾಗಿ ವಹಿಸಲಿವೆ.
-
Karnataka Weather: ಬೆಂಗಳೂರು ಸೇರಿದಂತೆ ರಾಜ್ಯದ 17 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
ವಲಸೆ ಕಾರ್ಮಿಕರಿಂದಾಗಿ ಉದ್ಯೋಗ ನಷ್ಟವಾಗುತ್ತಿರುವ ಬಗ್ಗೆ ಅಧಿಕೃತ ದೂರು ಸಲ್ಲಿಕೆಯಾಗಿಲ್ಲ: ಕಾರ್ಮಿಕ ಇಲಾಖೆ ಸ್ಪಷ್ಟನೆ -
ಯುಗಾದಿ, ರಂಜಾನ್ ಹಬ್ಬಕ್ಕೆ 2000 ವಿಶೇಷ ಬಸ್: ಮುಂಗಡ ಟಿಕೆಟ್ ಗೆ ರಿಯಾಯ್ತಿ ಘೋಷಿಸಿದ KSRTC -
Gold Rate Today: ಮತ್ತೆ ಏರಿಕೆ ಕಂಡ ಚಿನ್ನದ ದರ: ಇಂದು 10 ಗ್ರಾಂ ಬಂಗಾರದ ಬೆಲೆ 1,58,620 ರೂಪಾಯಿ -
Viral Video: 'ಓಂಕಾರ' ಚಿತ್ರದ ಬೀಡಿ ಜಲೈಲೆ ಹಾಡಿಗೆ ಸಖತ್ ಸ್ಟೆಪ್ಸ್ ಹಾಕಿದ ಬ್ರೆಜಿಲ್ ಬೆಡಗಿಯರು -
Odisha Hospital Fire Accident: ಒಡಿಶಾ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ: ಹತ್ತು ರೋಗಿಗಳು ಸಾವು -
Karnataka Weather: ಕರ್ನಾಟಕದ ಈ 9 ಜಿಲ್ಲೆಗಳಲ್ಲಿ ಮಾರ್ಚ್ 21ರವರೆಗೆ ಮಳೆ ಸಾಧ್ಯತೆ: ಹವಾಮಾನ ಇಲಾಖೆ -
SSLC ಪರೀಕ್ಷೆ 2026: ವೇಳಾಪಟ್ಟಿ, ಸಮಯ, ಡ್ರೆಸ್ಕೋಡ್ ಹಾಗೂ ಪ್ರಮುಖ ಮಾರ್ಗಸೂಚಿಗಳ ಮಾಹಿತಿ ಇಲ್ಲಿದೆ -
Horoscope March 16; ಈ ರಾಶಿಯವರಿಗೆ ಶುಭ ಸುದ್ದಿ ಬರಬಹುದು -
Bengaluru Rent: ಬೆಂಗಳೂರು ಬಾಡಿಗೆ ಮನೆ ಸಮಸ್ಯೆ: 10 ತಿಂಗಳ ಮುಂಗಡ ಹಣ,ಮಾಲೀಕರ ಕಿರಿಕಿರಿ; 2026ರ ಹೊಸ ಬಾಡಿಗೆ ನಿಯಮವೇನು -
ಪಿಯು ಮೌಲ್ಯಮಾಪನ ಬಹಿಷ್ಕಾರಕ್ಕೆ ಮುಂದಾದ ಉಪನ್ಯಾಸಕರು: ಫಲಿತಾಂಶ ವಿಳಂಬದ ಆತಂಕದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳು -
Anil Kumble: ನಟ ಶಾರುಖ್ ಖಾನ್ ಮಾಲೀಕತ್ವದ ಕೆಕೆಆರ್ ತಂಡ ದಾರಿತಪ್ಪಿದ ಬಗ್ಗೆ ಅನಿಲ್ ಕುಂಬ್ಳೆ ಮಹತ್ವದ ಮಾಹಿತಿ












Click it and Unblock the Notifications