Bengaluru bandh: ಪ್ರತಿಭಟನೆ ಮಾಡಲಿ, ಬೇಡಿಕೆ ಈಡೇರಿಸಲು ಸಾಧ್ಯವಿಲ್ಲ ಎಂದ ಸಿಎಂ ಸಿದ್ದರಾಮಯ್ಯ
ಮೈಸೂರು, ಸೆಪ್ಟೆಂಬರ್, 11: ಬೆಂಗಳೂರಿನಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟಗಳು ಸರ್ಕಾರದ ವಿರುದ್ಧ ಸಮರ ಸಾರಿವೆ.ಈ ಬಗ್ಗೆ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ ಅವರು, ಬೆಂಗಳೂರಿನಲ್ಲಿ ಪ್ರತಿಭಟನೆ ಮಾಡಲಿ, ಬೇಡಿಕೆ ಈಡೇರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಖಾಸಗಿ ವಾಹನ ಮಾಲೀಕ ಚಾಲಕರಿಂದ ಬೆಂಗಳೂರು ಬಂದ್ ವಿಚಾರದ ಬಗ್ಗೆ ಮೈಸೂರಿನಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಪ್ರತಿಭಟನಾಕಾರರು ಈಡೇರಿಸುವಂತೆ ಬೇಡಿಕೆ ಕೇಳಿದರೆ ಮಾಡಬಹುದು. ಆದರೆ ಈಡೇರಿಸಲಾಗದ ಬೇಡಿಕೆ ಇಟ್ಟರೆ ಹೇಗೆ? ಎಂದು ಪ್ರಶ್ನಿಸಿದರು.
ಮೈಸೂರು ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಮಹಿಳೆಯರಿಗೆ ಅನುಕೂಲ ಆಗಲು ಶಕ್ತಿ ಯೋಜನೆ ತಂದಿದ್ದೇವೆ. ಇದರಿಂದ ಖಾಸಗಿ ಬಸ್‌ಗಳಿಗೆ ಅವರು ಬರುತ್ತಿಲ್ಲ ಎನ್ನುತ್ತಾರೆ. ಆದ್ದರಿಂದ ಅವರಿಗೆ ನಷ್ಟ ಆಗುತ್ತಿದೆ ಎನ್ನುವುದು ಅವರ ವಾದ. ನಷ್ಟ ಆಗುವುದು ಬಿಡುವುದು ಬೇರೆ. ನಷ್ಟ ತುಂಬಿಕೊಡಿ ಅಂದ್ರೆ ಆಗುತ್ತಾ? ಅದು ಸಾಧ್ಯವಾಗದ ಮಾತು ಎಂದರು.
ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಮಾಡಲು ಎಲ್ಲರಿಗೂ ಅವಕಾಶ ಇದೆ. ಅದನ್ನು ಹತ್ತಿಕ್ಕಲು ಯಾರಿಂದಲೂ ಸಾಧ್ಯವಿಲ್ಲ. ಶಾಂತಿಯುತವಾಗಿ ಪ್ರತಿಭಟನೆ ಮಾಡಲಿ ಎಂದರು.
ಇನ್ನು ಮುಂದಿನ ಕ್ಯಾಬಿನೆಟ್‌ನಲ್ಲಿ ಬರದ ಘೋಷಣೆ ಮಾಡುತ್ತೇವೆ. ಸದ್ಯಕ್ಕೆ 61 ತಾಲೂಕುಗಳು ಪಟ್ಟಿಯಾಗಿದೆ. ಇನ್ನೂ 136 ತಾಲ್ಲೂಕುಗಳ ಬರ ಅಧ್ಯಯನ ನಡೆಯುತ್ತಿದೆ. ಅದರ ವರದಿಯೂ ಸೇರಿಸಿ ತೀರ್ಮಾನ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ತಮಿಳುನಾಡಿಗೆ ನೀರು ಬಿಡುವ ವಿಚಾರದ ಬಗ್ಗೆ ಮಾತನಾಡಿದ ಅವರು, ನಾವು ಖುಷಿಯಿಂದ ನೀರು ಬಿಡುತ್ತಿಲ್ಲ.
ಪ್ರಾಧಿಕಾರದ ಆದೇಶ ಇರುವ ಕಾರಣ ಅನಿವಾರ್ಯವಾಗಿ ನೀರು ಬಿಡುತ್ತಿದ್ದೇವೆ. ತಮಿಳುನಾಡು ವಿನಾಕಾರಣ ಕ್ಯಾತೆ ತೆಗೆದಿದೆ. ಸೆಪ್ಟೆಂಬರ್ 21ರಂದು ಕೋರ್ಟ್‌ನಲ್ಲಿ ಮತ್ತೆ ನಮ್ಮ ಸಂಕಷ್ಟ ವಿವರಿಸುತ್ತೇವೆ ಎಂದರು.
ಕಾವೇರಿ ವಿವಾದದ ವಿಚಾರದಲ್ಲಿ ಬಿಜೆಪಿ ನಾಯಕರು ರಾಜಕಾರಣ ಮಾಡಲ್ಲ ಅಂತಾ ಹೇಳಿ ಈಗ ರಾಜಕಾರಣ ಮಾಡಲು ಹೊರಟಿದ್ದಾರೆ. ಪ್ರಧಾನಿ ಬಳಿಗೆ ನಿಯೋಗ ಹೋಗಲು ಸಿದ್ದವಾಗಿದ್ದೆವೆ. ನಮಗೂ ಪ್ರಧಾನಿ ಭೇಟಿಗೆ ದಿನಾಂಕ ಸಿಗುತ್ತಿಲ್ಲ. ಬಿಜೆಪಿಯವರಾದ್ರೂ ಹೋಗಿ ಕೇಳಲಿ ಅಂದರೆ ಅವ್ರು ಕೇಳುತ್ತಿಲ್ಲ. ಇಲ್ಲಿ ಕುಳಿತು ಹೋರಾಟದ ಕತೆ ಹೇಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.












Click it and Unblock the Notifications