Bengaluru Bandh: 7 ದಿಕ್ಕಿನಿಂದ ನಗರಕ್ಕೆ ರ‍್ಯಾಲಿ ಎಂಟ್ರಿ, ಸಿಟಿ ಸ್ಥಬ್ಧ ಮಾಡಲು ಸಕಲ ರೀತಿಯಲ್ಲಿ ಸಜ್ಜು

ಬೆಂಗಳೂರು, ಸೆ 11: ಸರ್ಕಾರದ ವಿರುದ್ಧ ತಿರುಗಿ ಬಿದ್ದಿರುವ ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟ ನಗರ ಸ್ಥಬ್ಧ ಮಾಡಲು ಸಕಲ ತಯಾರಿ ಮಾಡಿಕೊಂಡಿದೆ. ಒಂದಲ್ಲ ಎರಡಲ್ಲ ನಗರದ 7 ಮಾರ್ಗಗಳ ಮೂಲಕ ಸಿಟಿಗೆ ಎಂಟ್ರಿ ಆಗಲು ಪ್ಲಾನ್ ರೂಪಿಸಿ ಕೊಂಡಿದೆ. ಸುಮಾರು 10 ಗಂಟೆ ಅಷ್ಟು ಹೊತ್ತಿಗೆ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಬಳಿ ಇಂದ ಬೃಹತ್ ರ‍್ಯಾಲಿ ಸಾಗಲು ಸಕಲ ತಯಾರಿ ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟ ಮಾಡಿ ಕೊಂಡಿದೆ.

ನೆಲಮಂಗಲ, ಕೆಂಗೇರಿ, ವೈಟ್ ಫೀಲ್ಡ್ , ಕೆ.ಆರ್. ಪುರ, ಆನೇಕಲ್ ಭಾಗದಿಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸರ್ಕಲ್ ಗೆ ಸಾಕಷ್ಟು ಸಂಖ್ಯೆಯಲ್ಲಿ ಆಟೋ ಚಾಲಕರ ಎಂಟ್ರಿ ಆಗಲಿದೆ. ಈಗಾಗಲೇ ಖಾಸಗಿ ಸಾರಿಗೆ ಸಂಘಟನೆಗಳಿಂದ ಸದಸ್ಯರಿಗೆ ರೂಟ್ ಮ್ಯಾಪ್ ತಲುಪಿದೆ. ಸಿಟಿ ಸ್ಥಬ್ಧವಾಗಲು ನಗರದ ಯಾವ್ಯಾವ ದಿಕ್ಕಿನಿಂದ ಖಾಸಗಿ ಸಾರಿಗೆ ಸಂಘಟನೆ ಎಂಟ್ರಿಯಾಗುತ್ತೆ ಎನ್ನುವ ಮಾಹಿತಿ ಇಲ್ಲಿದೆ.

Bengaluru Bandh Called By Various Organization, 7 Rallies Reaching City From Various Locations

ಮೊದಲನೇ ಮಾರ್ಗವಾಗಿ ಪೀಣ್ಯ ಇಂಡಸ್ಟ್ರಿಯಲ್ ಮೆಟ್ರೋದಿಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸರ್ಕಲ್ ಗೆ ಎಂಟ್ರಿ ಆಗುತ್ತಾರೆ. ಪೀಣ್ಯ ಎಸ್ಆರ್ ಎಸ್ ಸಿಗ್ನಲ್ ಇಂದ ಗೊರಗುಂಟೆಪಾಳ್ಯ, ಯಶವಂತಪುರ ರೈಲ್ವೆ ನಿಲ್ದಾಣ-ಒರಾಯನ್ ಮಾಲ್-ರಾಜಾಜಿನಗರ 1 ಬ್ಲಾಕ್ ಸಿಗ್ನಲ್-ನವರಂಗ್ ಥಿಯೇಟರ್-ಡಾ.ರಾಜಕುಮಾರ್ ರಸ್ತೆ-ಸುಜಾತಾ ಥಿಯೇಟರ್-ಓಕಳಿಪುರ-ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸರ್ಕಲ್ ಮೂಲಕ ರ‍್ಯಾಲಿ ಸೇರಿಕೊಳ್ಳಲಿದೆ.

ಎರಡನೇ ಮಾರ್ಗ - ಯಲಹಂಕ ಪೊಲೀಸ್ ಸ್ಟೇಷನ್ ಇಂದ ಎರಡನೇ ಮಾರ್ಗ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸರ್ಕಲ್ ಗೆ ಎಂಟ್ರಿ ಆಗಲಿದೆ. ಯಲಹಂಕ ಪೊಲೀಸ್ ಸ್ಟೇಷನ್ ಇಂದ ಹೊರಡುವ ರ‍್ಯಾಲಿ ಬ್ಯಾಟರಾಯನಪುರದತ್ತ ಸಾಗುತ್ತೆ. ಬಳಿಕ ಕೊಡಿಗೇಹಳ್ಳಿ ಗೇಟ್-ಹೆಬ್ಬಾಳ-ಸಿಬಿಐ-ಮೇಕ್ರಿ ಸರ್ಕಲ್-ಕಾವೇರಿ ಥಿಯೇಟರ್-ಚಾಲುಕ್ಯ ಸರ್ಕಲ್-ಮೈಸೂರ್ ಬ್ಯಾಂಕ್ ಸರ್ಕಲ್ ಮುಖಾಂತರ
-ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸರ್ಕಲ್ ಬಳಿ ರ‍್ಯಾಲಿ ಸೇರಿಕೊಳ್ಳಲಿದೆ.

Bengaluru Bandh Called By Various Organization, 7 Rallies Reaching City From Various Locations

ಮೂರನೇ ಮಾರ್ಗವಾಗಿ ವೈಟ್ ಫೀಲ್ಡ್ ಮಯೂರ ಬೇಕರಿ ಸರ್ಕಲ್ ಟು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರ‍್ಯಾಲಿ ಎಂಟ್ರಿ ಆಗುತ್ತೆ. ವೈಟ್‌ಫೀಲ್ಡ್ ಮಯೂರ ಬೇಕರಿ ಸರ್ಕಲ್ ಇಂದ ಹೊರಟು ಕುಂದನಹಳ್ಳಿ ಗೇಟ್ ತಲುಪುತ್ತದೆ. ಬಳಿಕ -ಮಾರತಹಳ್ಳಿ-ಹೆಚ್ಎಎಲ್-ದೊಮ್ಮಲೂರು-ಹಡ್ಸನ್ ಸರ್ಕಲ್-ಕಾರ್ಪೊರೇಷನ್ ಸರ್ಕಲ್-ಮೈಸೂರ್ ಬ್ಯಾಂಕ್ ಸರ್ಕಲ್, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸರ್ಕಲ್ ಗೆ ರ‍್ಯಾಲಿ ಎಂಟ್ರಿ ಆಗುತ್ತೆ.

ನಾಲ್ಕನೇ ಮಾರ್ಗವಾಗಿ ಕೆ.ಆರ್. ಪುರಂ ಐಟಿಐ ಗೇಟ್ ಇಂದ ರ‍್ಯಾಲಿ ಹೊರಡಲಿದೆ. ಕೆ.ಆರ್. ಪುರಂ ಐಟಿಐ ಗೇಟ್ ಟು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸರ್ಕಲ್ ಗೆ ಎಂಟ್ರಿ ಆಗುತ್ತೆ. ಬಳಿಕ -ಟಿನ್ ಫ್ಯಾಕ್ಟರಿ-ಇಂದಿರಾನಗರ-ಹಲಸೂರು-ಟೆನಿಟಿ ಸರ್ಕಲ್-ಗರುಡ ಮಾಲ್-ಶೋಲೆ ಸರ್ಕಲ್-ಹಡ್ಸನ್ ಸರ್ಕಲ್-ಕಾರ್ಪೊರೇಷನ್ ಸರ್ಕಲ್-ಮೈಸೂರ್ ಬ್ಯಾಂಕ್ ಸರ್ಕಲ್ ಇಂದ -ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸರ್ಕಲ್ ಗೆ ರ‍್ಯಾಲಿ ಸಾಗುತ್ತೆ.

ಐದನೇ ಮಾರ್ಗವಾಗಿ ಆನೇಕಲ್ ಇಂದ ಹೊರಡಲಿರುವ ರ‍್ಯಾಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸರ್ಕಲ್ ನತ್ತ ಸಾಗುತ್ತೆ. ಆನೇಕಲ್-ಚಂದಾಪುರ-ಅತ್ತಿಬೆಲೆ-ಎಲೆಕ್ಟ್ರಾನಿಕ್ ಸಿಟಿ-ಕೂಡ್ಲು ಗೇಟ್
-ಬೊಮ್ಮನಹಳ್ಳಿ-ಸಿಲ್ಕ್ ಬೋರ್ಡ್-ಮಡಿವಾಳ-ಕೋರಮಂಗಲ-ಆಡುಗೋಡಿ-ಶೋಲೆ ಸರ್ಕಲ್-ಹಡ್ಸನ್ ಸರ್ಕಲ್-ಕಾರ್ಪೊರೇಷನ್ ಸರ್ಕಲ್-ಮೈಸೂರ್ ಬ್ಯಾಂಕ್ ಸರ್ಕಲ್ - ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸರ್ಕಲ್ ಗೆ ಎಂಟ್ರಿ ಆಗುತ್ತೆ.

ಆರನೇ ಮಾರ್ಗವಾಗಿ ಜಯನಗರ ಶಾಲಿನಿ ಗ್ರೌಂಡ್ ಇಂದ ರ‍್ಯಾಲಿ ಹೊರಡಲಿದೆ. ಜಯನಗರ ಶಾಲಿನಿ ಗ್ರೌಂಡ್ ಇಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸರ್ಕಲಿಗೆ ಹೋಗುವ ಮಾರ್ಗದಲ್ಲಿ ಸಾಗುತ್ತೆ. ಜಯನಗರ ಶಾಲಿನಿ ಗ್ರೌಂಡ್- ಆರ್ ವಿ ಮೆಟ್ರೋ ನಿಲ್ದಾಣ- ಸೌತ್ ಎಂಡ್ ಸರ್ಕಲ್ - ಜೆಸಿ ರಸ್ತೆ- ಟೌನ್ ಹಾಲ್- ಕಾರ್ಪೊರೇಷನ್- ಮೈಸೂರ್ ಬ್ಯಾಂಕ್ ಸರ್ಕಲ್- ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕಡೆಗೆ ರ‍್ಯಾಲಿ ಸಾಗಿ ಬರುತ್ತೆ.

ಏಳನೇ ಮಾರ್ಗವಾಗಿ ರಾಜರಾಜೇಶ್ವರಿ ಆರ್ಚ್ ಇಂದ ರ‍್ಯಾಲಿ ಹೊರಡಲಿದ್ದು- ರಾಜ ರಾಜೇಶ್ವರಿ ನಗರ ಟು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೂಟ್ ಗೆ ತಲುಪಲಿದೆ. ರಾಜರಾಜೇಶ್ವರಿ ನಗರ ಗೇಟ್
-ನಾಯಂಡಹಳ್ಳಿ-ಮೈಸೂರು ರಸ್ತೆ-ಚಾಮರಾಜಪೇಟೆ-ಗೂಡ್ ಶೆಡ್ ರೋಡ್-ಮೆಜೆಸ್ಟಿಕ್ ರೈಲ್ವೆ ನಿಲ್ದಾಣ-ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸರ್ಕಲ್ ಮಾರ್ಗದಲ್ಲಿ ರ‍್ಯಾಲಿ ಸಾಗಿ ಬರುತ್ತೆ.

ಒಟ್ಟು 7 ದಿಕ್ಕಿನಿಂದ ನಗರಕ್ಕೆ ಖಾಸಗಿ ಸಾರಿಗೆ ಚಾಲಕರ ಒಕ್ಕೂಟದ ಸದಸ್ಯರು ಎಂಟ್ರಿ ಆಗಲಿದ್ದು ಸಿಟಿ ಸ್ಥಬ್ಧ ಮಾಡಲು ಸಕಲ ರೀತಿಯಲ್ಲಿ ಸಜ್ಜಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+