BBMP Elections: ಸಿಎಂ, ಡಿಸಿಎಂ ಕೊಟ್ಟ ಸೂಚನೆ ಏನು?, ರಾಮಲಿಂಗಾ ರೆಡ್ಡಿ ಮಹತ್ವದ ಹೇಳಿಕೆ
ಬೆಂಗಳೂರು, ಆಗಸ್ಟ್, 04: ಬಿಬಿಎಂಪಿ ಚುನವಾಣೆ ಬಗ್ಗೆ ಸಚಿವ ರಾಮಲಿಂಗಾರೆಡ್ಡಿಯವರು ಇಂದು ಮಹತ್ವದ ಹೇಳಿಕೆ ಮೂಲಕ ಬೆಂಗಳೂರು ಮಹಾನಗರ ಜನತೆಗೆ ಗುಡ್ ನ್ಯೂಸ್ ನೀಡಿದ್ದಾರೆ.
ಯಾವುದೇ ಸರ್ಕಾರ ಅಧಿಕಾರಕ್ಕೆ ಬರಲಿ ಸಿಟಿ ಜನರು ಕೇಳೋ ಪ್ರಶ್ನೆ ಒಂದೇ. ಬ್ರಹತ್ ಬೆಂಗಳೂರು ಮಹಾನಗರ ಪಾಲಿಕೆ ಎಲೆಕ್ಷನ್ ಯಾವಾಗ? ಬೆಂಗಳೂರು ವ್ಯಾಪ್ತಿಯಲ್ಲಿ ಕಾರ್ಪೊರೇಟರ್ ಇದ್ದರೂ ಅನ್ನೋದೆ ದಿನ ಕಳೆದ ಹಾಗೇ ಮರೆತು ಹೋಗುವಂತಾಗಿದೆ. ಪ್ರತೀ ವಾರ್ಡ್ ಸಮಸ್ಯೆ ಹೊತ್ತು ಹಡ್ಸನ್ ಸರ್ಕಲ್‌ನಲ್ಲಿರುವ ಬಿಬಿಎಂಪಿ ಮುಖ್ಯ ಕಚೇರಿಗೆ ಬಂದು ಆಯುಕ್ತರ ಭೇಟಿ ಮಾಡೋಕೆ ಆಗುತ್ತಾ ಅಂತೆಲ್ಲಾ ಕಿಡಿ ಕಾರುತ್ತಿದ್ದರು. ಕೊನೆಗೂ ಸಚಿವ ರಾಮಲಿಂಗಾರೆಡ್ಡಿ ಜನ ಖುಷಿಪಡುವ ಸುದ್ದಿಯೊಂದನ್ನು ಕೊಟ್ಟಿದ್ದಾರೆ.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಪೂರ್ವದಲ್ಲಿ ನಾವು ಆಡಳಿತ ಚುಕ್ಕಾಣಿ ಹಿಡಿದರೆ ಬಿಬಿಎಂಪಿ ಚುನಾವಣೆಯನ್ನು ನಡೆಸೇ ನಡೆಸುತ್ತೇವೆ ಅಂತಾ ಪಟ್ಟುಹಿಡಿದು ಹೇಳಿದ್ದರು. ಆದರೆ ಅಧಿಕಾರಕ್ಕೆ ಬಂದು ಇಷ್ಟು ಸಮಯ ಆದರೂ ಈ ಬಗ್ಗೆ ಯಾವ ಬೆಳವಣಿಗೆಯೂ ಕಾಣಿಸುತ್ತಾ ಇಲ್ಲ. ಆದರೆ ಸಚಿವ ರಾಮಲಿಂಗಾರೆಡ್ಡಿ ಮಾತ್ರ ಎಲೆಕ್ಷನ್ ಮಾಡುತ್ತೇವೆ ಅಂತಾ ಸುಳಿವು ನೀಡಿ ಕುತೂಹಲ ಹುಟ್ಟುಹಾಕಿದ್ದಾರೆ.
ಇದು ಬರೀ ಭರವಸೆಯಾ ಅಥವಾ ನಿಜಕ್ಕೂ ಬಿಬಿಎಂಪಿ ಎಲೆಕ್ಷನ್ ನಡೆಯುತ್ತಾ ಅನ್ನೋದೆ ಪ್ರಶ್ನೆಯಾಗಿದೆ. ಈ ಬಗ್ಗೆ ಸಚಿವರು ಮಾತನಾಡಿದ್ದು, ಬಿಬಿಎಂಪಿ ಎಲೆಕ್ಷನ್ ಆಗಲು ತಯಾರಿ ಮಾಡಿಕೊಂಡಂತೆ ಇದೆ. ಡಿಸಿಎಂ ಹಾಗೂ ಸಿಎಂ ಸೂಚನೆ ಮೇರೆಗೆ ತಯಾರಿ ಮಾಡಿಕೊಂಡಿದ್ದೇವೆ.
ಕಳೆದ 3 ವರ್ಷಗಳಿಂದ ಕೂಡ ಬಿಬಿಎಂಪಿ ಎಲೆಕ್ಷನ್ ಮಾಡಬಹುದು ಅನ್ನುವ ಹುಸಿ ನಿರೀಕ್ಷೆಯಲ್ಲಿ ಸಿಟಿ ಮಂದಿ ಇದ್ದರು. ಆದರೆ ಬಿಜೆಪಿ ವಾರ್ಡ್ ಪುನರ್ ವಿಂಗಡಣೆ ಹೆಸರಲ್ಲಿ 243 ವಾರ್ಡ್ ವಿಸ್ತರಣೆ ಮಾಡಿತ್ತು. ಬಿಜೆಪಿ ಸರ್ಕಾರ ತನಗೆ ಪ್ರಭಾವ ಇರುವ ಕಡೆ ರಾಜಕೀಯ ಲಾಭಕ್ಕಾಗಿ ವಾರ್ಡ್ ವಿಂಗಡನೆ ಮಾಡಿದೆ ಅಂತಾ ಹಲವು ಮಾಜಿ ಕಾರ್ಪೊರೇಟರ್‌ಗಳು ಕಿಡಿಕಾರಿದ್ದರು. ಕೊನೆಗೂ ಈಗ ಎಲೆಕ್ಷನ್ ನಡೆಸಬಹುದು ಅಂತಾ ಕೋರ್ಟ್‌ನಿಂದ ಗ್ರೀನ್ ಸಿಗ್ನಲ್ ಬಂದಿದೆ. ಆದರೂ ಲೋಕಸಭೆಯ ಪೂರ್ವದಲ್ಲಿ ಎಲೆಕ್ಷನ್ ಮಾಡುವುದು ಡೌಟು ಅನ್ನುವ ಅಭಿಪ್ರಾಯಗಳು ವ್ಯಕ್ತವಾಗುತ್ತುವೆ
ವಾರ್ಡ್ ಪುನರ್ ವಿಂಗಡಣೆಯ ಮರು ಪರಿಶೀಲನಾ ಸಮಿತಿ ಅಧ್ಯಕ್ಷ ಆಗಿರುವ ರಾಮಲಿಂಗಾರೆಡ್ಡಿ ಮಾತ್ರ ಡಿಸೆಂಬರ್‌ನಲ್ಲಿ ಬಿಬಿಎಂಪಿ ಎಲೆಕ್ಷನ್ ನಡೆಯುತ್ತದೆ. ಕಾಂಗ್ರೆಸ್ ಇನ್ಸೈಡ್ ಮೀಟಿಂಗ್‌ನಲ್ಲಿ ಸಿಎಂ ಹಾಗೂ ಡಿಸಿಎಂ ತಯಾರಿ ಮಾಡಿಕೊಳ್ಳಲು ಸೂಚಿಸಿದ್ದಾರೆ ಅಂತಾ ಕಡ್ಡಿ ತುಂಡು ಮಾಡಿದ ಹಾಗೇ ಹೇಳಿದ್ದಾರೆ
ಕೊನೇ ಪಕ್ಷ ಈ ಬಾರಿಯಾದರೂ ಬಿಬಿಎಂಪಿ ಎಲೆಕ್ಷನ್ ನಡೆಯಲಿ. ಜನರ ಸಮಸ್ಯೆ ಕೇಳಲು ವಾರ್ಡ್‌ಗೆ ಒಬ್ಬ ಕಾರ್ಪೊರೇಟರ್ ಆಯ್ಕೆ ಆಗಲಿ ಬೆಂಗಳೂರಿಗೆ ಒಬ್ಬ ಮೇಯರ್ ಬರಲಿ ಅನ್ನೋದೆ ನಮ್ಮ ಆಶಯವಾಗಿದೆ.












Click it and Unblock the Notifications