ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸಭೆಯಲ್ಲಿ ಅಧಿಕಾರಿಗಳ ನಡೆಗೆ ಬೊಮ್ಮಾಯಿ ಗರಂ
ಬೆಂಗಳೂರು, ಆಗಸ್ಟ್ 14: ತಮಿಳುನಾಡಿನ ಕುರುವೈ ಬೆಳೆಗೆ ನೀಡಲಾಗಿದ್ದ ಮಿತಿಗಿಂತಲೂ ಅಧಿಕವಾಗಿ ನಾಲ್ಕು ಪಟ್ಟು ಹೆಚ್ಚು ಬೆಳೆಯನ್ನು ರೈತರು ಬೆಳೆದಿದ್ದಾರೆ. ಅದಕ್ಕಾಗಿ ಕಾವೇರಿ ಜಲವಿವಾದ ನ್ಯಾಯಮಂಡಳಿ (CWDT) ಸೂಚಿಸಿದ ನೀರಿಗಿಂತ ಅಧಿಕನೀರು ಬಳಕೆ ಗಿದೆ. ಹೀಗಿದ್ದರು ಸಹಿತ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಸಭೆಯಲ್ಲಿ ನಮ್ಮ ಅಧಿಕಾರಿಗಳು ಸರಿಯಾಗಿ ಪ್ರತಿಪಾದಿಸಿಲ್ಲ ಎಂದು ಬಸವರಾಜ ಬೊಮ್ಮಾಯಿ ಕಿಡಿ ಕಾರಿದರು.
ಸೋಮವಾರ ಸಂಜೆ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕಾವೇರಿ ಜಲವಿವಾದ ನ್ಯಾಯಮಂಡಳಿ (CWDT) ನಿಯಮವನ್ನು ತಮಿಳುನಾಡು ಉಲ್ಲಂಘಿಸಿದೆ. ಈ ಕುರಿತು ನಡೆದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಸಭೆ ಸಭೆಯಲ್ಲಿ ಕರ್ನಾಟಕದ ಅಧಿಕಾರಿಗಳು ಪ್ರಶ್ನೆಯನ್ನು ಮಾಡಿಲ್ಲ. ರಾಜ್ಯದಿಂದ ಹೆಚ್ಚಿನ ನೀರು ಬಿಡಲು ಆಗುವುದಿಲ್ಲ ಎಂದು ಹೇಳಿಲ್ಲ ಎಂದರು.

ರಾಜ್ಯ ಸರ್ಕಾರ ಡ್ಯಾಂ ನೀರನ್ನು ನಮ್ಮ ರೈತರಿಗೂ ಕೊಟ್ಟಿಲ್ಲ. ಇದಕ್ಕಾಗಿ ನಾನು ಪತ್ರ ಬರೆದು ಎಚ್ಚರಿಸಿದ್ದೇನೆ. ತಮಿಳುನಾಡು ಸುಪ್ರೀಂಕೋರ್ಟ್‌ಗೆ ಹೋಗುತ್ತೇನೆ ಎಂದಿದೆ. ಈ ಸಮಯದಲ್ಲಿ ಸರಿಯಾಗಿ ವಾದ ಮಾಡಬೇಕು ಎಂದು ಕೇಳಿದ್ದೇನೆ, ಇದನ್ನು ಮುಖ್ಯಮಂತ್ರಿಗಳು ತಿಳಿದುಕೊಳ್ಳುತ್ತಾರೆ ಎಂದು ಭಾವಿಸುತ್ತೇನೆ ಎಂದು ಪ್ರತಿಕ್ರಿಯಿಸಿದರು.
ಗುತ್ತಿಗೆದಾರರು ಮೇಲೆ ಒತ್ತಡ: ಬೊಮ್ಮಾಯಿ
ಅಕ್ರಮ ಬಗ್ಗೆ ಗುತ್ತಿಗೆದಾರರೇ ಆಕ್ರೋಶದಲ್ಲಿ ಮಾತನಾಡಿದವರು, ಇದೀಗ ಅವರೇ ಹಿಂತೆಗೆಯುತ್ತಾರೆ ಎಂದರೆ ಇದರ ಹಿಂದೆ ಯಾವ ಶಕ್ತಿಗಳು ಒತ್ತಡ ಹೇರುತ್ತಿವೆ ಎನ್ನುವುದು ಸ್ಪಷ್ಟವಾಗಿದೆ. ಈ ಹಿಂದೆ ನಮ್ಮ ಸರ್ಕಾರದ 650 ಕೋಟಿ ಬಿಡುಗಡೆ ಮಾಡಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪ್ರಕರಣಗಳ ತನಿಖೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನೀವು ಎಷ್ಟು ದಿನ ತನಿಖೆ ಮಾಡುತ್ತೀರ? ತನಿಖೆಯಲ್ಲಿ ಎಷ್ಟು ತಪ್ಪು ಸಿಕ್ಕಿದೆ ಎಂದು ತಿಳಿಸಿ. ತನಿಖೆಯಲ್ಲಿ ಪಾರದರ್ಶಕತೆ ಬರುವುದು ಬಹಳ ಮುಖ್ಯವಾಗಿದೆ. ಅಂತಹ ಪಾರದರ್ಶಕತೆಯನ್ನು ಭ್ರಷ್ಟಾಚಾರ ಪ್ರಕರಣಗಳ ತನಿಖೆಯಲ್ಲಿ ತರಲು ಸರ್ಕಾರ ಸಿದ್ಧವಿಲ್ಲ ಎಂದು ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಅಧಿಕಾರದ ಆಸೆಗೆ ತುಷ್ಟಿಕರಣ ರಾಜಕೀಯ
ಕಾಂಗ್ರೆಸ್ ಅಧಿಕಾರದ ಆಸೆಗೆ ಈಗಲೂ ತುಷ್ಟಿಕರಣ ರಾಜಕಾರಣ ಮಾಡುತ್ತಿದೆ. ಬೇರೆ ದೇಶಗಳಿಗೆ ಹೋಗಿ ಭಾರತದಲ್ಲಿ ಅಲ್ಪ ಸಂಖ್ಯಾತರು ಸುರಕ್ಷಿತ ಇಲ್ಲ ಅಂತ ಹೇಳುತ್ತಾರೆ. ಭಾರತದಲ್ಲಿ ಅಲ್ಪ ಸಂಖ್ಯಾತರು ಅತಿ ಹೆಚ್ಚು ಸುರಕ್ಷಿತವಾಗಿದ್ದಾರೆ ಎಂದರು.
ವಿಶ್ವದ ಇತಿಹಾಸದಲ್ಲಿ ಸ್ವಾತಂತ್ರ್ಯ ಪಡೆಯುವ ಸಂದರ್ಭದಲ್ಲಿ ಭಾರತದಂತ ಕೆಟ್ಟ ಸಂದರ್ಭ ಯಾವ ದೇಶಕ್ಕೂ ಬಂದಿಲ್ಲ. ಪರಕೀಯರ ಆಡಳಿತದಿಂದ ಸ್ವಾತಂತ್ರ್ಯ ಬಂದಾಗ ದೇಶ ಅಲ್ಲೊಲ ಕಲ್ಲೊಲ ಆಗಿರುವ ಇತಿಹಾಸ ಭಾರತಕ್ಕೆ ಮಾತ್ರ ಇದೆ.
ಇಷ್ಟೆಲ್ಲಾ ಆದರೂ ಸತ್ಯ ಹೇಳುವ ವ್ಯವಸ್ಥೆ ಬರಲಿಲ್ಲ. ಈ ದೇಶ ಆಳುವ ಕಾಂಗ್ರೆಸ್ ನವರು ಅದನ್ನು ಮರೆ ಮಾಚಿದರು ಎಂದು ಬೊಮ್ಮಾಯಿ ಅಭಿಪ್ರಾಯ ಪಟ್ಟರು.
ದೆಹಲಿಯಲ್ಲಿ ನಿರಾಶ್ರಿತರ ಕ್ಯಾಂಪ್ ಗಳು ಈಗಲೂ ಇವೆ. ಅವರು ಅನುಭವಿಸಿರುವ ಯಾತನೆ ಕೇಳಲು ಆಗುವುದಿಲ್ಲ. ಹೃದಯ ಕಿವುಚುತ್ತದೆ. ಇಂತಹ ಹೇಯ ಕೃತ್ಯ ನಮ್ಮ ದೇಶದಲ್ಲಿ ಆಗಿದಿಯಾ ಎಂದು ನೋಡಿದರೆ ನಮಗೆ ನಾಚಿಕೆಯಾಗುತ್ತದೆ.
ಒಂದು ಕಡೆ ಅಹಿಂಸೆಯ ಹೋರಾಟ ನಡೆಯುತ್ತದೆ. ಇದರಲ್ಲಿ ಲಕ್ಷಗಟ್ಟಲೇ ಅನಾಮಧೇಯ ಸ್ವಾತಂತ್ರ್ಯ ಸೇನಾನಿಗಳು ಪ್ರಾಣ ಕಳೆದುಕೊಂಡಿದ್ದಾರೆ. ಅಂಗವಿಕಲರಾಗಿದ್ದಾರೆ, ಮನೆ ಮಠ ಕಳೆದುಕೊಂಡಿದ್ದಾರೆ. ಭಾರತೀಯರಿಗೆ ದೇಶಾಭಿಮಾನ ಕಲಿಸಲು ಯಾವುದೇ ಪಕ್ಷ ಬೇಕಿಲ್ಲ. ಕಾಂಗ್ರೆಸ್ ಹುಟ್ಟುವ ಮೊದಲೇ ದೇಶದಲ್ಲಿ ಸ್ವಾತಂತ್ರ್ಯ ಹೋರಾಟ ಆರಂಭವಾಗಿದೆ ಎಂದು ಅವರು ಕಾಂಗ್ರೆಸ್‌ಗೆ ಟಾಂಗ್ ನೀಡಿದರು.












Click it and Unblock the Notifications