ಬ್ಲ್ಯಾಕ್‌ಮೇಲ್ ಮಾಡಿದ ಬಿಎಂಟಿಸಿ ಕಂಡಕ್ಟರ್ ವಶಕ್ಕೆ

ಉತ್ತರ ಪ್ರದೇಶ ಮೂಲದ ವೇದಪ್ರಕಾಶ್ ಎಂಬವರು ದೂರು ನೀಡಿದ ಹಿನ್ನಲೆಯಲ್ಲಿ ಉಪ್ಪಾರಪೇಟೆ ಪೊಲೀಸರು ಬಸ್ ನಿರ್ವಾಹಕ ಶೇಖರಪ್ಪ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ.
ಏನಿದು ಘಟನೆ? ಶುಕ್ರವಾರ ರಾತ್ರಿ ವೇದಪ್ರಕಾಶ್ ತಮ್ಮ ಇಬ್ಬರು ಸ್ನೇಹಿತರ ಜತೆ ರಾತ್ರಿ ಸರ್ಜಾಪುರ ಕಡೆಯಿಂದ ಮೆಜೆಸ್ಟಿಕ್‌ಗೆ ಬರಲು ‘342 ಎಫ್' ಮಾರ್ಗ ಸಂಖ್ಯೆಯ ಬಸ್ ಹತ್ತಿದ್ದಾರೆ. ಈ ವೇಳೆಗೆ ಇವರು ಟಿಕೆಟ್ ಖರೀದಿಸಿರಲಿಲ್ಲ ಎನ್ನಲಾಗಿದೆ.
ಮೆಜೆಸ್ಟಿಕ್ ಹತ್ತಿರ ಬಸ್ಸು ಬರುತ್ತಿದ್ದಂತೆ ಬಸ್‌ನಲ್ಲಿ ಯುವಕರು ಬಿಟ್ಟರೆ ಬೇರೆ ಪ್ರಯಾಣಿಕರು ಯಾರು ಇರಲಿಲ್ಲ. ನಿಲ್ದಾಣ ತಲುಪಿದ ಕೂಡಲೇ ಬಸ್ ಕಂಡಕ್ಟರ್ ಶೇಖರಪ್ಪ ಇವರಲ್ಲಿ ಟಿಕೆಟ್ ತೆದುಕೊಳ್ಳದ ಕಾರಣ ಪೊಲೀಸ್ ಠಾಣೆಗೆ ಕರೆದೊಯ್ಯುದಾಗಿ ಹೇಳಿದ್ದಾನೆ. ಅಲ್ಲದೇ ಹಣ ನೀಡಿದರೆ ಬಿಡುವುದಾಗಿ ಬ್ಲ್ಯಾಕ್‌ಮೇಲ್ ಮಾಡಿದ್ದ. ಬ್ಲ್ಯಾಕ್‌ಮೇಲ್‌ಗೆ ಹೆದರಿ ಯುವಕರು ತಮ್ಮಲ್ಲಿದ್ದ 17 ಸಾವಿರ ರೂ. ಶೇಖರಪ್ಪನಿಗೆ ನೀಡಿದ್ದಾರೆ.
ಹಣ ನೀಡಿದ ಬಳಿಕ ಯುವಕರು ಉಪ್ಪಾರ ಪೇಟೆ ಪೊಲೀಸ್ ಠಾಣೆಯಲ್ಲಿ ನಿರ್ವಾಹನ ವಿರುದ್ಧ ದೂರು ನೀಡಿದ್ದಾರೆ. ಈ ಹಿನ್ನಲೆಯಲ್ಲಿ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.












Click it and Unblock the Notifications