Actor Darshan Home Meals: ನಟ ದರ್ಶನ್ ಮನೆಯೂಟದ ಅರ್ಜಿ ಮತ್ತೆ ವಾಪಾಸ್
Actor Darshan Home Food: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ & ಗ್ಯಾಂಗ್ ಜೈಲು ಪಾಲಾಗಿದ್ದಾರೆ. ಇನ್ನು ಜೈಲಿನಲ್ಲಿರುವ ನಟ ದರ್ಶನ್ ಮನೆ ಊಟಕ್ಕೆ ಅನುಮತಿ ನೀಡುವಂತೆ ಕೋರಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಈ ಅರ್ಜಿಯನ್ನು ಇಂದು (ಜುಲೈ 29) ಮತ್ತೆ ವಜಾ ಮಾಡಿದೆ.
ನಟ ದರ್ಶನ್ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೊಲೆ ಪ್ರಕರಣದಲ್ಲಿ ಇದ್ದಾರೆ. ತಮ್ಮ ಪರ ವಕೀಲರ ಮೂಲಕ ಜೈಲು ಊಟ ಬೇಡ, ಮನೆಯೂಟಕ್ಕೆ ಅವಕಾಶ ಮಾಡಿಕೊಡುವಂತೆ ಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ಈ ಅರ್ಜಿಯನ್ನು ವಿಚಾರಣೆ ನಡೆಸಿದ್ದಂತ ಕೋರ್ಟ್ ಮನೆ ಊಟಕ್ಕೆ ಅನುಮತಿಸುವುದಕ್ಕೆ ನಿರಾಕರಿಸಿ, ಅರ್ಜಿ ವಜಾಗೊಳಿಸಿತ್ತು.

ಈ ಹಿನ್ನಲೆ ಮತ್ತೆ ಮೇಲ್ಮನವಿಯನ್ನು ಕೋರ್ಟ್‌ಗೆ ಸಲ್ಲಿಕೆ ಮಾಡಲಾಗಿತ್ತು. ಆದರೆ ಇಂದು (ಜುಲೈ 29) ತಾಂತ್ರಿಕ ಕಾರಣದಿಂದಾಗಿ ನಟ ದರ್ಶನ್ ಪರ ವಕೀಲ ಅರುಣ್ ಅವರು ಮನೆಯೂಟ ಕೋರಿ ಸಲ್ಲಿಸಲಾಗಿದ್ದಂತಹ ಅರ್ಜಿಯನ್ನು ವಾಪಾಸ್ ಪಡೆದಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಪುಂಗಿದ ಸಿದ್ಧರೂಢ: ಚಿತ್ರದುರ್ಗ ಮೂಲದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ & ಗ್ಯಾಂಗ್ ಜೈಲು ಸೇರಿದ್ದು, ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿ ಮಹತ್ವದ ಸಾಕ್ಷ್ಯಗಳ ಸಂಗ್ರಹಕ್ಕೆ ಮುಂದಾಗಿದ್ದಾರೆ. ಮತ್ತೊಂದೆಡೆ ದರ್ಶನ್‌ನ್ನು ಹೊರತರಲು ಪತ್ನಿ ವಿಜಯಲಕ್ಷ್ಮಿ & ಕುಟುಂಬಸ್ಥರು ಹರಸಾಹಸ ಪಡುತ್ತಿದ್ದಾರೆ. ಇನ್ನು ಇದೆಲ್ಲದರ ನಡುವೆ ನಟ ದರ್ಶನ್ ಅವರನ್ನು ಭೇಟಿಯಾಗಿದ್ದೆ ಎಂದು ಹೇಳಿದ್ದ ತುರವನೂರು ಸಿದ್ಧರೂಢನ ಸ್ಫೋಟಕ ಮಾಹಿತಿಯೊಂದು ಬಟಾ ಬಯಲಾಗಿದೆ.
ರೇಣುಕಸ್ವಾಮಿ ಕೊಲೆ ಆರೋಪದಲ್ಲಿ ಪರಪ್ಪನ ಅಗ್ರಹಾರ ಜೈಲುಪಾಲಾಗಿರುವ ನಟ ದರ್ಶನ್‌ನನ್ನು ಭೇಟಿಯಾಗಿ ಅವರ ಬಳಿ ಮಾತುಕತೆ ನಡೆಸಿದ್ದೆ. ಈ ವೇಳೆ ದರ್ಶನ್ ಅವರು ತುಂಬಾ ಪಶ್ಚತಾಪ ಪಡುತ್ತಿದ್ದಾರೆ ಎಂದು ಸನ್ನಡತೆಯ ಮೇಲೆ ಜೈಲಿನಿಂದ ಹೊರಬಂದ ಚಿತ್ರದುರ್ಗ ಜಿಲ್ಲೆಯ ತುರುವನೂರಿನ ಸಿದ್ಧರೂಢ ಎಂಬುವವರು ಇತ್ತೀಚೆಗಷ್ಟೇ ಹೇಳಿದ್ದರು. ಆದರೆ ಇದೀಗ ದರ್ಶನ್ ಅವರನ್ನು ಸಿದ್ಧರೂಢ ಭೇಟಿ ಮಾಡಿಯೇ ಇಲ್ಲ ಎಂದು ಕಾರಾಗೃಹ ಇಲಾಖೆಗೆ ಜೈಲಾಧಿಕಾರಿಗಳು ವರದಿ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಅಲ್ಲದೆ ಮತ್ತೊಂದೆಡೆ ಇದೀಗ ದರ್ಶನ್ ಭೇಟಿ ಮಾಡಿ ಬಂದಿದ್ದೇನೆ ಎಂದು ಸಿದ್ಧರೂಢ ಹೇಳಿರುವ ಮಾತು ಏನಾದರೂ ಸುಳ್ಳಾದರೆ ಅವರಿಗೆ ಪೊಲೀಸರು ನೋಟಿಸ್ ನೀಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಸನ್ನಡತೆ ಆಧಾರಮ ಮೇಲೆ ಜೈಲಿನಿಂದ ಹೊರಗಡೆ ಬಂದ ಬಳಿಕ ಸಿದ್ದರೂಢ ಮಾಧ್ಯಮದವರ ಮುಂದೆ ಈ ಬಗ್ಗೆ ಹೇಳಿ ನೀಡಿದ್ದರು. ಬಳಿಕ ಈ ಬಗ್ಗೆ ಜೈಲಾಧಿಕಾರಿಗಳು ಚರ್ಚೆ ನಡೆಸಿದ್ದು, ಇದೀಗ ಅಸಲಿ ಸತ್ಯವನ್ನು ಬಿಚ್ಚಿಟ್ಟಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಇದನ್ನು ಗಮನಿಸಿದರೆ, ಸುಮ್ಮನೆ ಇರಲಾರದೇ ಇರುವೆ ಬಿಟ್ಟುಕೊಂಡರು ಎನ್ನುವ ಪರಿಸ್ಥಿತಿ ತುರುವನೂರು ಮೂಲದ ಸಿದ್ಧರೂಢನಿಗೆ ಬಂದೊದಗಿದೆ. ಸಿದ್ಧರೂಢ ದರ್ಶನ್ ಭೇಟಿ ಬಗ್ಗೆ ಕಾರಾಗೃಹ ಇಲಾಖೆಯಿಂದ ಬಳ್ಳಾರಿ ಮತ್ತು ಸೆಂಟ್ರಲ್ ಜೈಲಾಧಿಕಾರಿಗಳ ಬಳಿ ಕಾರಾಗೃಹ ಇಲಾಖೆ ವರದು ಕೇಳಿದ್ದು, ಎರಡೂ ಕಡೆ ಜೈಲಾಧಿಕಾರಿಗಳಿಗೆ ಮಾಹಿತಿ ನೀಡುವಂತೆ ನೋಟೀಸ್ ನೀಡಲಾಗಿತ್ತು. ಇದೀಗ ನೋಟೀಸ್ ಉತ್ತರ ಸಿಕ್ಕಿದ್ದು, ಕಾರಾಗೃಹ ಇಲಾಖೆಗೆ ದರ್ಶನ್ ಭೇಟಿಗೆ ಸಿದ್ದರೂಢನನ್ನು ಬಿಟ್ಟೇ ಇಲ್ಲ ಎಂದು ವರದಿ ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಸಿದ್ಧರೂಢ ಹೇಳಿದ್ದೇನು?: ಕೊಲೆ ಪ್ರಕರಣದಲ್ಲಿ ಚಿತ್ರದುರ್ಗ, ಬಳ್ಳಾರಿ ಹಾಗೂ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ಆರೋಪಿ ಸಿದ್ಧರೂಢ ಎಂಬುವವರು ಸನ್ನಡತೆಯ ಆಧಾರದ ಮೇಲೆ ಬಿಡುಗೊಂಡಿದ್ದರು. ಬಳಿಕ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಭೇಟಿ ಬಗ್ಗೆ ಮಾಧ್ಯಮದವರರೊಂದಿಗೆ ಮಾಹಿತಿ ಬಿಚ್ಚಿಟ್ಟಿದ್ದರು.
"ಸರ್ ನನ್ನ ಹೆಸರು ತುರುವನೂರು ಸಿದ್ದಾರೂಢ. ನಾನು ರೈತ ಕುಟುಂಬದಿಂದ ಬಂದಿದ್ದೇನೆ. ನಮ್ಮ ತಂದೆ ಗುತ್ತಿಗೆದಾರರಾಗಿದ್ದರು. ಕಾಮಗಾರಿ ಮಾಡುವ ಸಂದರ್ಭದಲ್ಲಿ ಇಂಜಿನಿಯರ್ ಒಬ್ಬರು ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಇದರ ಬಗ್ಗೆ ನನ್ನ ತಂದೆ ಹಾಗೂ ಇಂಜಿನಿಯರ್ ನಡುವೆ ಜಗಳವಾಗುತ್ತದೆ. ಈ ಗಲಾಟೆ ಯಾಕೆ ಆಯ್ತು ಅಂತ ಇದುವರೆಗೂ ಗೊತ್ತಿಲ್ಲ. ಇಂಜಿನಿಯರ್ ಅವರು ನನ್ನ ತಂದೆಗೆ ಹೊಡೆಯುತ್ತಾರೆ. ತಂದೆಗೆ ಹೊಡೆದಾಗ ಮಕ್ಕಳಿಗೆ ಸಾಮಾನ್ಯವಾಗಿದೆ ಕೋಪ ಬರುತ್ತದೆ. ಆದ್ದರಿಂದ ದುಡುಕಿ ನಿರ್ಧಾರ ತೆಗೆದುಕೊಂಡುಬಿಟ್ಟೆ," ಎಂದಿದ್ದರು.












Click it and Unblock the Notifications